ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಮುನ್ಸೂಚನೆ
ರಾಜ್ಯದ ಕೆಲವು ಭಾಗಗಳಲ್ಲಿ ಇಂದಿನಿಂದ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಸಂಜೆಯ ನಂತರ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಂಭವವಿದೆ. ಈಗಾಗಲೇ ನಗರದ ಹಲವೆಡೆ ಮೋಡ ಕವಿದ ವಾತಾವರಣವಿದೆ.
ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ಏರ್ಲೈನ್ಸ್ ಸೇವೆ ಬಲು ಬೇಗ ಸ್ಥಗಿತಗೊಂಡಿದ್ದು ಯಾಕೆ? ಎಂಬುದಕ್ಕೆ ಇದುವರೆಗೂ ಸರಕಾರದಿಂದಲೂ ನಿಖರವಾದ ಉತ್ತರ ಬಂದಿಲ್ಲ. ಆದರೆ, ವಿಮಾನ ಕಂಪನಿ ಹೇಳುತ್ತಿರುವ ಕಾರಣಗಳನ್ನು ನಂಬುವಂತೆಯೇ ಇಲ್ಲ. ತಿಂಗಳಿಗೆ ನೂರಾರು ಜನರಿಗೆ ಸೇವೆ ಒದಗಿಸುತ್ತಿದ್ದ ವಿಮಾನ ನಿಂತು ಹೋಗಿರುವುದು ಶಿವಮೊಗ್ಗದ ಜನರಿಗೆ ಬೇಸರ ತಂದಿದೆ.
ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ, ಎರಡೂ ಉಪ ಚುನಾವಣೆಗಳ ಪೈಕಿ ಬಾಗಲಕೋಟೆ ಉಪಚುನಾವಣೆಯಲ್ಲಿ ಲಭಿಸಿರುವ ಗೆಲುವಿಗೆ ಕೈ ಪಕ್ಷಕ್ಕೆ ಕೊಂಚ ಸಮಾಧಾನವಾದರೂ ಇದೆ. ಆದರೆ ದಾವಣಗೆರೆ ವಿಚಾರದಲ್ಲಿ ತೀರಾ ಬೇಸರ ಇರುವುದು ವ್ಯಕ್ತವಾಗಿದೆ. ಅಂದರೆ ಉಪಚುನಾವಣೆ ಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಭಾಗಶಃ ಜಯ ಸಾಧಿಸಿದ್ದು, ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಪಕ್ಷವನ್ನು ಸೋಲಿನ ದವಡೆಯಿಂದ ತಪ್ಪಿಸಿದ ರಕ್ಷಕರು ಎನಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿ ಕೊಳ್ಳಬೇಕು ಎಂದು ಹೇಳಿದರು. ನೀರಿನ ಟ್ಯಾಂಕ್ಗಳ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಸಮಸ್ಯೆ ಇರುವ ಪ್ರದೇಶಗಳಲ್ಲಿ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡುವುದಕ್ಕೂ ಆದ್ಯತೆ ನೀಡಬೇಕು
ಬಿಜೆಪಿ ಪಕ್ಷದ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿದ ಜನತೆ ಇಂದು ಬಿಜೆಪಿ ಪಕ್ಷದತ್ತ ವಾಲುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಇಡೀ ದೇಶದ ಜನತೆ ಮೋದಿಯವರ ಪರ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯ ಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಂತಿ ಮಾತನಾಡಿ ಆರ್ಥಿಕ ಚಟು ವಟಿಕೆಯ ಮೂಲಕ ಆರಂಭವಾದ ಶ್ರೀ ಕ್ಷೇತ್ರ ಸಂಸ್ಥೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿದೆ. ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನ, ಬಡವರಿಗೆ ಮಾಸಾಶನ, ವಸತಿ ಯೋಜನೆ ಜೊತೆಗೆ ಮಹಿಳಾ ಸಬಲೀಕರಣ ನಡೆಸುವ ಮೂಲಕ ಮನೆಮಾತಾದ ಸಂಸ್ಥೆ ಪುರಾತನ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಗುರುತಿಸಿಕೊಂಡಿದೆ
ಭಕ್ತರ ದಂಡು "ಉಧೋ ಉಧೋ" ಎಂದು ಜಯಘೋಷ ಎಲ್ಲೆಡೆ ಮೊಳಗಿತ್ತು. ಜೋಗತಿಯರು "ಗ್ರಾಮ ದೇವತೆ ನಿನ್ ಹಾಲಕ್ ಉಧೋ" ಎಂದು ಜೋಗ ಹಾಕಿದರು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಜಾತ್ರೆಯಲ್ಲಿ ಭಾಗಿಯಾದರು. ನಗರದ ಮನೆಮನೆಗಳಿಗೂ ಬಣ್ಣ ಹಚ್ಚಿ, ತಳಿರು ತೋರಣ ಕಟ್ಟಿ ರಸ್ತೆಯಲ್ಲಿ ರಂಗೋಲಿ ಬಿಡಿಸಿ ದೀಪಾಲಂಕಾರ ಅಳವಡಿಸಿ ಶೃಂಗರಿಸ ಲಾಗಿತ್ತು
ಬಿಜೆಪಿ ಯುವ ಮುಖಂಡರಾದ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಮಹೇಶ್ ಬೈ ಮಾತನಾಡಿ ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿರುವುದು ಹೆಮ್ಮೆಯ ವಿಷಯ.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಗೆ ಈ ಫಲಿ ತಾಂಶವೇ ಸಾಕ್ಷಿಯಾಗಿದೆ.ಇದು ಬರೀ ಚುನಾವಣಾ ಗೆಲುವಲ್ಲ,ಭಾರತದ ಅಖಂಡತೆಯ ವಿಜಯ ಎಂದು ಹರ್ಷ ವ್ಯಕ್ತಪಡಿಸಿದರು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣದ ನಮ್ಮ ಅಭ್ಯರ್ಥಿ ಉತ್ತಮವಾದ ಮತಗಳನ್ನು ಪಡೆದಿದ್ದಾರೆ. ನಮಗೆ ಈ ಬಾರಿ ಅದೃಷ್ಟ ಕೈ ಹಿಡಿಯಲಿಲ್ಲ. ಆದರೆ ಕಾಂಗ್ರೆಸ್ ಹಣದ ಹೊಳೆ ಹರಿಸಿದ ಬಗ್ಗೆ ನಾನೇನು ಮಾತಾಡೋದಿಲ್ಲ. ಅಭ್ಯರ್ಥಿ ಜತೆ ಅಕಾಂಕ್ಷಿಗಳು ಕೂಡ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸ್ಯಾಮ್ಸಂಗ್ನ ಮುಕ್ತ ಇನ್ನೋವೇಶನ್ ದೃಷ್ಟಿಕೋನದಲ್ಲಿ ಬೇರೂರಿರುವ SMA ಕಾರ್ಯಕ್ರಮವು, ಡೀಪ್-ಟೆಕ್ ಸ್ಟಾರ್ಟ್ಅಪ್ಗಳು ಮತ್ತು ಸ್ಯಾಮ್ಸಂಗ್ನ ಜಾಗತಿಕ ಮೊಬೈಲ್ ಪರಿಸರ ವ್ಯವಸ್ಥೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಇದು ವಿಶ್ವಾದ್ಯಂತ ಲಕ್ಷಾಂತರ ಸಾಧನಗಳಲ್ಲಿ ಅದ್ಭುತ ನಾವೀನ್ಯತೆಗಳನ್ನು ಸಕ್ರಿಯಗೊಳಿಸುತ್ತದೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 63,870 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತಾಗಿದೆ. ಆದರೆ, ಕಳೆದ ಬಾರಿ 1700 ಮಾತ್ರ ಮತ ಪಡೆದಿದ್ದ ಎಸ್ಡಿಪಿಐ ಅಭ್ಯರ್ಥಿ ಈ ಬಾರಿ ಬರೋಬ್ಬರಿ 18,975 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಗೊಳ್ಳಲು ಕಾರಣರಾಗಿದ್ದಾರೆ.
ಭಾರತದಲ್ಲಿ ರಿಫರ್ಬಿಶ್ಡ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆ ಈಗ ಬೆಲೆ ಆಧಾರಿತದಿಂದ ಮೌಲ್ಯ ಮತ್ತು ನಂಬಿಕೆ ಆಧಾರಿತವಾಗುತ್ತಿದೆ. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ವಿಶ್ವಾಸ ಇದ್ದರೆ ಗ್ರಾಹಕರು ಪ್ರೀಮಿ ಯಂ ಸಾಧನಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಕ್ಯಾಶಿಫೈ Select ಈ ಬದಲಾವಣೆಗೆ ನಮ್ಮ ಉತ್ತರವಾಗಿದೆ
BSY Abhimanotsava: ಸಾಮಾನ್ಯ ಕಾರ್ಯಕರ್ತನ ಹಂತದಿಂದ ರಾಜ್ಯದ ಅತ್ಯುನ್ನತ ಸ್ಥಾನಕ್ಕೇರಿದ ಬಿ.ಎಸ್.ಯಡಿಯೂರಪ್ಪ ಅವರ ಸಾರ್ವಜನಿಕ ಜೀವನಕ್ಕೆ ಈಗ ಸಾರ್ಥಕ 50 ವರ್ಷಗಳ ಸಂಭ್ರಮ. ಶಿಕಾರಿಪುರ ಅವರ ರಾಜಕೀಯ ಕರ್ಮಭೂಮಿಯಾದರೂ, ತುಮಕೂರು ಜಿಲ್ಲೆಯ ಕಲ್ಪತರು ನಾಡು ಚಿಕ್ಕನಾಯಕನಹಳ್ಳಿಯ ಮೇಲೆ ಅವರು ಹೊಂದಿರುವ ಮಮಕಾರ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ವೇಗ ಇತಿಹಾಸದ ಪುಟಗಳಲ್ಲಿ ಮೈಲುಗಲ್ಲಾಗಿ ಉಳಿದಿದೆ.
KEA Recruitment: ಏಪ್ರಿಲ್ 24ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ನಿಗದಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿತ್ತು. ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಲು ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕೆಇಎ ರದ್ದುಪಡಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳ ಎಂಬ ಮಹಿಳೆಯನ್ನು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿ ಇಡಲಾಗಿತ್ತು. ಕೊಲೆ ಮಾಡಿದ್ದ ಆರೋಪಿಯ ಮೃತದೇಹ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ಪತ್ತೆಯಾಗಿದ್ದು. ಮಹಿಳೆ ತನ್ನ ಗಂಡನನ್ನು ಬಿಟ್ಟು ಬಾರದ ಹಿನ್ನೆಲೆಯಲ್ಲಿ ಪ್ರಿಯಕರನೇ ಕೊಲೆ ಮಾಡಿದ್ದ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಊಟ, ತಿಂಡಿಗಾಗಿ ಹೊಟೇಲ್ ಅನ್ನೇ ನೆಚ್ಚಿಕೊಂಡಿದ್ದೀರಾ ? ಹಾಗಿದ್ದರೆ ಬೆಂಗಳೂರು ಹೊಟೇಲ್ ಗಳು ನಿಮಗೆ ಶಾಕ್ ಕೊಡುವುದು ಗ್ಯಾರಂಟಿ. ಬಹುತೇಕ ಎಲ್ಲಾ ಹೊಟೇಲ್ ಗಳಲ್ಲೂ ಚಹಾ, ಕಾಫಿ, ತಿಂಡಿ, ಊಟದ ಬೆಲೆಯನ್ನು ಹೆಚ್ಚಿಸಲಾಗಿದೆ. ಕನಿಷ್ಠ 5 ರೂ. ನಿಂದ 20 ರೂ. ವರೆಗೂ ದರ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.
2023ರಲ್ಲಿ ಮತ ತಿರುಚಿರುವುದು ನಡೆದಿದೆ ಎನ್ನುವುದಾದರೆ ಆ ವಿಚಾರವನ್ನು ಮರು ಎಣಿಕೆಗೆ ಆದೇಶಿಸಿದ ನ್ಯಾಯಾಲಯದ ಗಮನಕ್ಕೆ ತಂದು, ನಿರ್ದೇಶನ ಪಡೆದು ಮುಂದುವರಿಯಬೇಕಿತ್ತು. ದೂರಿನಲ್ಲಿ ಹಾಲಿ ಚುನಾವಣಾಧಿಕಾರಿ ಗೌರವ್ ಶೆಟ್ಟಿಯನ್ನು ಏಕೆ ಆರೋಪಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿರುವ ಕೋರ್ಟ್, ಶಾಸಕ ಜೀವರಾಜ್ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದೆ.