ಬಸವಕಲ್ಯಾಣದಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
Bidar News: ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ವೇಳೆ ಭೀಕರ ಅವಘಡ ಸಂಭವಿಸಿದೆ. ರಥ ಎಳೆಯುವ ವೇಳೆ ಆಯಾ ತಪ್ಪಿ ಚಕ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಧನರಾಜ ಚಾಕೂರೆ (65) ಮೃತಪಟ್ಟಿದ್ದಾರೆ.
ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ಗಳ ಮೂಲಕ ಪ್ರಯಾಣಿಸುವವರು, ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಆಲ್- ಇನ್- ಒನ್ ಡಿಜಿಟಲ್ ಪ್ಲಾಟ್ ಫಾರ್ಮ್ ಆದ 'ಪಲ್ಸ್' ಆಪ್ ಅನ್ನು ಸೇರಿದರೆ, ಅವರಿಗೆ ಉಚಿತವಾಗಿ ತಂಪಾದ ಕೋಕಾ-ಕೋಲಾ ನೀಡಲಾಗುತ್ತದೆ. ಇದನ್ನು ಇದಕ್ಕಾಗಿಯೇ ಮೀಸ ಲಾದ 'ಕೋಕ್ ಜೋನ್' ನಲ್ಲಿ ಪಡೆದುಕೊಳ್ಳಬಹುದು.
Priyank Kharge: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಟ್ರೋಲ್ ಮಾಡಿದ ಬಿಜೆಪಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ತಿರುಗೇಟು ನೀಡಲು ಮುಂದಾಗಿದ್ದರು. ಆದರೆ ಇದೀಗ ಅವರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ʼʼನಿಮ್ಮ ವೈಫಲ್ಯಕ್ಕೆ ವಿದ್ಯಾರ್ಥಿಗಳನ್ನು ಎಳೆದು ತರಬೇಡಿʼʼ ಎಂದಿದ್ದಾರೆ.
2013ರಲ್ಲಿ ಅಮೆಜಾನ್.ಇನ್ ಪ್ರಾರಂಭವಾದ ದಿನದಿಂದಲೂ ನಾವು ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲವನ್ನು ನಿರ್ಮಿಸಿದ್ದು ದೇಶದ ಪ್ರತಿ ಸೇವೆ ಒದಗಿಸಬಲ್ಲ ಪಿನ್ ಕೋಡ್ ಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಈ ಜಾಲದ ಕೇಂದ್ರದಲ್ಲಿ ನಮ್ಮ ಜನರಿದ್ದಾರೆ ಮತ್ತು ನಾವು ಸುರಕ್ಷತೆ, ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯದ ಮಾನದಂಡ ವಿಸ್ತರಿಸಲು ಬದ್ಧರಾಗಿದ್ದೇವೆ
ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್ (ತಡೆಗಟ್ಟುವ ತಳಿವಿಜ್ಞಾನ ಚಿಕಿತ್ಸಾಲಯ) ಸುಧಾರಿತ ಆನುವಂಶಿಕ ಪರೀಕ್ಷೆ, ತಜ್ಞರ ಸಮಾಲೋಚನೆ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇದು ವ್ಯಕ್ತಿಗಳು ತಮ್ಮ ಆನುವಂಶಿಕ ಗುಣಲಕ್ಷಣಗಳ ಆಧಾರದ ಮೇಲೆ ಆರೋಗ್ಯ ರಕ್ಷಣೆಯ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ಯುವಕನೋರ್ವ ಶೇರ್ ಮಾರ್ಕೇಟ್ ನಲ್ಲಿ ಹಣ ಕಳೆದುಕೊಂಡ ಆಘಾತದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿದ್ಧಾಪುರದ ಹರ್ಷವರ್ಧನ್ (22)ನೇಣಿಗೆ ಶರಣಾದ ಯುವಕ. ಸಿದ್ದಾಪುರದ ಮನೆಯಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡ ಯುವಕ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಜಿ ಮಾಧುರ್ಯ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲೇ ಅಲ್ಲದೆ ಸಾಂಸ್ಕೃ ತಿಕ ಕ್ಷೇತ್ರದಲ್ಲಿಯೂ ಪ್ರತಿಭಾವಂತಳಾಗಿದ್ದು, ಉತ್ತಮ *ನೃತ್ಯಗಾತಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಅಕ್ಷರ ಜೋಡಣೆ, ಪ್ರಬಂಧ ರಚನೆ, ಕಥೆ ಹಾಗೂ ಕವನ ರಚನೆಯಲ್ಲಿ ವಿಶಿಷ್ಟ ಸಾಮರ್ಥ್ಯ ತೋರಿದ್ದಾರೆ.
Govind Karjol: ಮೇ 9ರಂದು ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 26ರ ಬೆಳಗ್ಗೆ 10 ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
HD Kumaraswamy: ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ನಿಮ್ಮ ತಲೆಯ ಮೇಲೆ ಹೊರೆ ಹೊರೆಸಿ 2,000 ರುಪಾಯಿ ಗ್ಯಾರಂಟಿ ಕೊಡುತ್ತಿದೆ. ದಿನ ಬೆಳಗ್ಗೆ ಬೆಲೆ ಏರಿಕೆ ಮಾಡಿ ತೆರಿಗೆ ಏರಿಸಿದರೆ 2,000 ರುಪಾಯಿ ಏನು ಬಂತು? ನಾನಾದರೆ 5,000 ರುಪಾಯಿ ಕೊಡುತ್ತಿದ್ದೆ. ನಿಮಗೆ ಗ್ಯಾರಂಟಿ ಬೇಕಾದರೆ ನಾನೇ 5,000 ರುಪಾಯಿ ಕೊಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
SSLC Result 2026: 2025-26ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 7 ಮಂದಿ 625 ಅಂಕಕ್ಕೆ 625 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಪೈಕಿ ಚಿಕ್ಕಮಗಳೂರು ನಗರದ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆ ʼವಿಶ್ವವಾಣಿ ಟಿವಿʼ ಪ್ರತಿನಿಧಿ ಶಿವಪ್ರಸಾದ್ ಬೋಳಂತೂರು ಜತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾಳೆ.
Karnataka SSLC Result 2026: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ದೇವೇಂದರ್ ಎಂಬುವರ ಪುತ್ರಿ ಹಿತಾಶ್ರೀ ಡಿ. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ಮಧುಗಿರಿ ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
Sirsi News: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆ ವೇಳೆ ನಡೆದ ಎಡವಟ್ಟಿನಿಂದ ಅಂಧ ವಿದ್ಯಾರ್ಥಿನಿಯೊಬ್ಬಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಶಿರಸಿ ನಗರದ ಯೂನಿಯನ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ಆರು ವಿಷಯಗಳನ್ನೂ ಬರೆದಿದ್ದರೂ, ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ನಮೂದಿಲಾಗಿದೆ.
Karnataka SSLC Result: ಈ ವರ್ಷ ರಾಜ್ಯದ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದರಲ್ಲಿ ಬೆಳಗಾವಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ಕೂಡ ಸೇರಿದ್ದಾಳೆ. ಈಕೆ 625ಕ್ಕೆ 625 ಅಂಕ ಪಡೆದು ಸರ್ಕಾರಿ ಶಾಲೆಯಲ್ಲಿ ಓದಿಯೂ ಟಾಪರ್ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಮಗಳನ್ನು ಅದೇ ಶಾಲೆಯಲ್ಲಿ ಓದಿಸಿ ಮಾದರಿ ಎನಿಸಿಕೊಂಡಿದ್ದಾರೆ.
What After SSLC? ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ಬರೋಬ್ಬರಿ ಶೇಕಡಾ 94.10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್ ಆಯ್ಕೆ ಮಾಡುತ್ತಾರೆ ಎನ್ನುವುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾರೆ ಅವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಸಮಗ್ರ ವಿವರ.
ರಾಜ್ಯಾದ್ಯಂತ ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮೂಗುತಿ ಧರಿಸಿ ಬಂದ ವಿದ್ಯಾರ್ಥಿನಿಯರ ಮೂಗಿಗೆ ಭದ್ರತಾ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ್ದಾರೆ.
SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.
Haveri News: ಎಸ್ಎಸ್ಎಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಹಾವೇರಿ ಜಿಲ್ಲೆಗೆ ವಿದ್ಯಾರ್ಥಿನಿ ನಿವೇದಿತಾ ಅಜ್ಜಮ್ಮನವರ 625ಕ್ಕೆ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ನಿವೇದಿತಾ ಪರಶುರಾಮ ಅಜ್ಜಮ್ಮನವರ 625ರಲ್ಲಿ 623 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ತನ್ನ ಚೊಚ್ಚಲ ಯೋಜನೆಯಾದ ಪುಷ್ಕಲಂ ಹೆರಿಟೇಜ್ ಮೂಲಕ, ಕಂಪನಿಯು ಬೆಂಗಳೂರಿನ ಪೂರ್ವ ಭಾಗದಲ್ಲಿ ವಾಸ್ತು ಆಧಾರಿತ ವಸತಿ ಅಭಿವೃದ್ಧಿಯನ್ನು ಪರಿಚಯಿಸುತ್ತಿದೆ. ಇದು ಬಳಕೆದಾರರ ಅನುಕೂಲತೆ, ಮುಕ್ತ ಅವಕಾಶ ಮತ್ತು ಸಮುದಾ ಯಕ್ಕೆ ಸಮಾನ ಒತ್ತು ನೀಡುತ್ತದೆ. 2.64 ಎಕರೆ ಪ್ರದೇಶದಲ್ಲಿ ಹರಡಿರುವ ಈ ಯೋಜನೆಯ ಎರಡು ಗೋಪುರಗಳಲ್ಲಿ 296 ಮನೆಗಳಿವೆ. ಇದನ್ನು ಸ್ಥಳಾವಕಾಶ, ಬೆಳಕು ಮತ್ತು ದೀರ್ಘಕಾಲೀನ ವಾಸಯೋಗ್ಯತೆಗೆ ಆದ್ಯತೆ ನೀಡುವ ಕಡಿಮೆ-ದಟ್ಟಣೆಯ ಪರಿಸರವಾಗಿ ವಿನ್ಯಾಸಗೊಳಿಸಲಾಗಿದೆ.
1,300 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಸ್ಟುಡಿಯೋವನ್ನು ಒಂದು 'ತನ್ಮಯಗೊಳಿಸುವ ಅನುಭವ ಕೇಂದ್ರ'ವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಗ್ರಾಹಕರು ಮಾಡ್ಯುಲರ್ ಕಿಚನ್ಗಳು, ವಾರ್ಡ್ ರೋಬ್ಗಳು ಮತ್ತು ಸಂಪೂರ್ಣ ಮನೆಯ ವಿನ್ಯಾಸಗಳನ್ನು ವೀಕ್ಷಿಸಿ ಆರಿಸಿಕೊಳ್ಳಬಹುದು. ವಿನ್ಯಾಸ ಮತ್ತು ಅನುಷ್ಠಾನಕ್ಕೆ ಒಂದೇ ಸೂರಿನಡಿ ಪರಿಹಾರ ನೀಡುವ ಹೋಮ್ಲೇನ್, ಮನೆಮಾಲೀಕರಿಗೆ ಯೋಜನೆಯಿಂದ ವಿತರಣೆಯವರೆಗೆ ಸುಗಮವಾಗಿ ಸಾಗಲು ಸಹಾಯ ಮಾಡುತ್ತದೆ.
Injured Student Success story: ಶೈಕ್ಷಣಿಕ ಜೀವನದ ಭವಿಷ್ಯ ನಿರ್ಧರಿಸುವ ಮಹತ್ವದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಆಂಬ್ಯುಲೆನ್ಸ್ನಲ್ಲಿ ಬಂದು, ಸ್ಟ್ರೆಚರ್ನಲ್ಲಿ ಮಲಗಿಯೇ ಪರೀಕ್ಷೆ ಬರೆದ ಕೋಲಾರದ ವಿದ್ಯಾರ್ಥಿನಿ ಕುಸುಮಾ ಉತ್ತಮ ಅಂಕ ಪಡೆದಿದ್ದು, ರಾಜ್ಯಕ್ಕೆ ಮಾದರಿಯಾಗಿದ್ದಾಳೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಾವು ಬರೆದ ಉತ್ತರಗಳಿಗೆ ಮೌಲ್ಯಮಾಪಕರು ಎಷ್ಟು ಅಂಕ ನೀಡಿದ್ದಾರೆ ಮತ್ತು ಯಾವುದೇ ಉತ್ತರ ಮೌಲ್ಯ ಮಾಪನವಾಗದೆ ಉಳಿದಿದೆಯೇ ಎಂದು ತಿಳಿಯಲು ಸ್ಕ್ಯಾನ್ ಪ್ರತಿ ಪಡೆಯಬಹುದು. ಸ್ಕ್ಯಾನ್ ಪ್ರತಿಯನ್ನು ಪಡೆದು ಪರಿಶೀಲಿಸಿದ ನಂತರ, ವಿದ್ಯಾರ್ಥಿಗೆ ತನ್ನ ಅಂಕಗಳು ಹೆಚ್ಚಾಗುವ ಭರವಸೆ ಇದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.