ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಬೆತ್ತಲು ಮಾಡಿದ್ದಾರೆ, ಇಬ್ಬರು ಸಚಿವರ ವಜಾ ಮಾಡಿ: ಪ್ರತಿಪಕ್ಷ ನಾಯಕ ಆಗ್ರಹ

ಕೆಆರ್‌ಐಡಿಎಲ್ ಲಂಚ ಪ್ರಕರಣ: ಸಿಬಿಐ ತನಿಖೆ ಮಾಡಿ: ಅಶೋಕ್

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು ಕೂಡ ರೌಡಿಗಳಾಗಿದ್ದಾರೆ. ಅಂದರೆ ಈ ಸರಕಾರ ಕಮಿಶನ್ ಆಡಳಿತ ಮಾಡುತ್ತಿದೆ. 100 ರು. ಬಿಡುಗಡೆಯಾದರೆ 30 ರು.ಗಳಷ್ಟು ಕೆಲಸ ಮಾತ್ರ ಆಗುತ್ತದೆ. ಉಳಿದ ಶೇ.70ರಷ್ಟು ಕಮಿಷನ್‌ಗೆ ಹೋಗುತ್ತದೆ. ನಾವು ಆರೋಪ ಮಾಡಿದಾಗ ದಾಖಲೆ ಕೊಡಲು ಕೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಕಮಿಷನ್ ಬಗ್ಗೆ ಹೇಳಿದ್ದಾರೆ.

ಬರದ ನಡುವೆ ಬಿಜೆಪಿ ಯಾತ್ರೆಗೆ ಜನಸಾಗರ

ಬರದ ನಡುವೆ ಬಿಜೆಪಿ ಯಾತ್ರೆಗೆ ಜನಸಾಗರ

ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಆರಂಭಿಸಿರುವ ಪಾದಯಾತ್ರೆಗೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ನಾಯಕರೊಂದಿಗೆ ಎರಡನೇ ದಿನ ಸಾವಿರಾರು ಮಂದಿ ಹೆಜ್ಜೆ ಹಾಕಿದರು. ರಾಯಚೂರಿನ ಲಿಂಗಸೂಗೂರಿನಿಂದ ಬಳ್ಳಾರಿಯವರೆಗೆ ನಡೆಯುತ್ತಿರುವ ಪಾದಯಾತ್ರೆಯ 2ನೇ ದಿನವಾದ ಬುಧವಾರ 22 ಕಿ.ಮೀ. ದೂರ ನಡೆಯಲಾಯಿತು.

ಕಮಲ ಯಾತ್ರೆಗೆ ಕೈ ಧಗಧಗ: ಜನ ಆಕ್ರೋಶ ಯಾತ್ರೆಗೆ ಸಿದ್ದತೆ

ಕಮಲ ಯಾತ್ರೆಗೆ ಕೈ ಧಗಧಗ: ಜನ ಆಕ್ರೋಶ ಯಾತ್ರೆಗೆ ಸಿದ್ದತೆ

ಎರಡು ದಿನ ಪಾದಯಾತ್ರೆ ಪೂರೈಸಿರುವ ಬಿಜೆಪಿಗೆ ಸಡ್ಡು ಹೊಡೆದು ಜನಾಂದೋಲನ ಆಕ್ರೋಶ ಯಾತ್ರೆ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಿದ್ದು, ಇದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಬಿಜೆಪಿಯ ಈ ಪಾದಯಾತ್ರೆಗೆ ಕೌಂಟರ್ ಕೊಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರಾವಣದಲ್ಲೂ ಹೂವಿಗೆ ಬೆಲೆ ಇಲ್ಲ: ತೋಟದಲ್ಲೇ ಅರಳಿ, ತೋಟದಲ್ಲೇ ಕಮರುತ್ತಿವೆ ರೈತರ ಕನಸುಗಳು

ಶ್ರಾವಣದಲ್ಲೂ ಹೂವಿಗೆ ಬೆಲೆ ಇಲ್ಲ

ರಾಜ್ಯದಲ್ಲೇ ಪ್ರಮುಖ ಹೂವಿನ ಮಾರುಕಟ್ಟೆ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಪುಷ್ಪಕೃಷಿಯನ್ನು ಅವಲಂಬಿಸಿದ್ದಾರೆ. ನೀರಾವರಿ ಕೊರತೆ ಹಾಗೂ ಬರದ ನಡುವೆಯೂ ದಿನನಿತ್ಯದ ಆದಾಯದ ನಿರೀಕ್ಷೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಹೂವಿನ ಕೃಷಿಯತ್ತ ಮುಖ ಮಾಡಿದ್ದಾರೆ. ಆದರೆ ಇದೀಗ ಮಾರುಕಟ್ಟೆ ದರ ಕುಸಿತವೇ ಅವರ ಬದುಕಿಗೆ ದೊಡ್ಡ ಹೊಡೆತ ನೀಡಿದೆ.

ದೇಶಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶ ಸೃಷ್ಟಿಸಿದ ಅಮೆಜಾನ್ ಇಂಡಿಯಾ

ದೇಶಾದ್ಯಂತ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶ ಸೃಷ್ಟಿ

ಅಮೆಜಾನ್ ಇಂಡಿಯಾ ಸಂಸ್ಥೆಯು ಮುಂಬರುವ ದೀಪಾವಳಿ ಹಾಗೂ ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳ ಸುಸಂದರ್ಭದಲ್ಲಿ ತನ್ನ ಇ-ಕಾಮರ್ಸ್ ಜಾಲದ ಮೂಲಕ ಭಾರತದಾದ್ಯಂತ ಸುಗಮ ಸೇವೆ ಗಳನ್ನು ಒದಗಿಸಲು ಸನ್ನದ್ಧವಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ದಾದ್ಯಂತ ತನ್ನ ಪ್ರಮುಖ ಕಾರ್ಯ ನಿರ್ವಹಣಾ ಕೇಂದ್ರಗಳು ಹಾಗೂ ಕ್ವಿಕ್ ಕಾಮರ್ಸ್ ಜಾಲ ದಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದಾಗಿ ಘೋಷಣೆ ಮಾಡಿದೆ.

Fall in pomegranate prices: ದಾಳಿಂಬೆ ಬೆಲೆ ಕುಸಿತಕ್ಕೆ ಕಡಿವಾಣ: ಕೇಂದ್ರದ ತುರ್ತು ಮಧ್ಯಸ್ಥಿಕೆಗೆ ಸುಧಾಕರ್ ಆಗ್ರಹ

ರೈತರ ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಿ; ಕೇಂದ್ರ ಸಚಿವರಿಗೆ ಪತ್ರ

ಜಿಲ್ಲೆಯಲ್ಲಿ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು, ಸಾವಿರಾರು ರೈತ ಕುಟುಂಬಗಳು ಈ ಬೆಳೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿವೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಇಳುವರಿ ಬಂದಿದ್ದರೂ, ಕಳೆದ ವರ್ಷ ಕೆ.ಜಿ.ಗೆ ಸುಮಾರು 180 ರೂಪಾಯಿ ಇದ್ದ ದಾಳಿಂಬೆ ಬೆಲೆ ಇದೀಗ 100ರಿಂದ 120 ರೂಪಾಯಿಗೆ ಕುಸಿದಿದೆ.

Bengaluru Accident: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; ಪತ್ನಿ ಕಣ್ಣೆದುರೇ ನವ ವಿವಾಹಿತ ದುರ್ಮರಣ!

ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; ಪತ್ನಿ ಕಣ್ಣೆದುರೇ ನವ ವಿವಾಹಿತ ದುರ್ಮರಣ!

ಬೆಂಗಳೂರಿನ ಹೊರಬಲಯದ ನೆಲಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬಸ್‌ ಡಿಕ್ಕಿಯ ರಭಸಕ್ಕೆ ಬೈಕ್‌ನಿಂದ ಸವಾರ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಬಸ್ ಹರಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನೆಲಮಂಗಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Gauribidanur News: ಸ್ವಯಂ ತೆರವುಗೊಳಿಸದಿದ್ದರೆ ಮುನ್ಸೂಚನೆ ಇಲ್ಲದೆ ನಗರಸಭೆಯಿಂದ ಕಾರ್ಯಾಚರಣೆ: ಪೌರಾಯುಕ್ತ ರಮೇಶ್

ಸ್ವಯಂ ತೆರವುಗೊಳಿಸದಿದ್ದರೆ ಮುನ್ಸೂಚನೆ ಇಲ್ಲದೆ ಕಾರ್ಯಾಚರಣೆ

ನಗರದ ಬಿಎಚ್ ರಸ್ತೆ, ಎಂಜಿ ರಸ್ತೆ, ಬಜಾರ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಹಾಗೂ ವೃತ್ತಗಳ ಪಾದ ಚಾರಿ ಮಾರ್ಗಗಳನ್ನು ಅಂಗಡಿ ವರ್ತಕರು ನಾಮಫಲಕ, ಸರಕು ಸಾಮಗ್ರಿ ಇಟ್ಟು ಒತ್ತುವರಿ ಮಾಡಿ ಕೊಂಡಿದ್ದಾರೆ. ಕೆಲವೆಡೆ ಶಾಶ್ವತ ಹಾಗೂ ತಾತ್ಕಾಲಿಕ ನಿರ್ಮಾಣಗಳನ್ನೂ ಮಾಡಲಾಗಿದೆ. ಇವುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

Eco-friendly Ganesha: ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ ನೀಡಿ: ತಹಶೀಲ್ದಾರ್ ಗಗನ ಸಿಂಧು

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ ನೀಡಿ: ತಹಶೀಲ್ದಾರ್ ಗಗನ ಸಿಂಧು

ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಧ್ವನಿವರ್ಧಕ, ಮೆರವಣಿಗೆ ಹಾಗೂ ವಿಸರ್ಜನೆಗೆ ಸಂಬಂಧಿಸಿದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸಿ ಪಿಒಪಿ ಮೂರ್ತಿಗಳ ಮಾರಾಟ, ಖರೀದಿ ಅಥವಾ ಪ್ರತಿಷ್ಠಾಪನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನರಸಿಂಹನ ಅವತಾರದಲ್ಲಿ 22 ಅಡಿ ಗಣೇಶ; ಬೈಪಾಸ್ ಗಣೇಶೋತ್ಸವಕ್ಕೆ ಭರದ ಸಿದ್ಧತೆ

ಬೈಪಾಸ್ ಗಣೇಶೋತ್ಸವಕ್ಕೆ ಭರದ ಸಿದ್ಧತೆ

ಬೈಪಾಸ್ ಗಣೇಶೋತ್ಸವ ಗೆಳೆಯರ ಬಳಗದಿಂದ ಕಳೆದ 23 ವರ್ಷಗಳಿಂದ ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಜಾಗೃತಿಯ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೂ ಆದ್ಯತೆ ನೀಡುತ್ತಿರುವ ಬಳಗ, ಪ್ರತಿ ವರ್ಷವೂ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆ: ಆನ್‌ಲೈನ್ ಪೇಮೆಂಟ್ ಮಾಡಿಸಿ ಬೆಂಗಳೂರು ಯುವಕನಿಗೆ ಕೈಕೊಟ್ಟ ʼಬೆಳದಿಂಗಳ ಬಾಲೆʼ

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆಗೆ ಒಳಗಾದ ಬೆಂಗಳೂರು ಯುವಕ

Viral News: ಬೆಂಗಳೂರಿನ ಯುವಕನೊಬ್ಬ ಡೇಟಿಂಗ್ ಆ್ಯಪ್ ಬಳಸಲು ಹೋಗಿ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಆತ ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಹನ ಮಾಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಮಕ್ಕಳಾಗಿಲ್ಲವೆಂದು ಪತ್ನಿಗೆ ಕಿರುಕುಳ; ಮತ್ತೊಂದು ನಿಶ್ಚಿತಾರ್ಥ ಆರೋಪ: ಪತಿ ವಿರುದ್ಧ ಪತ್ನಿಯಿಂದ ದೂರು; ‘ನಾನು ಮೋಸ ಮಾಡಿಲ್ಲ’ ಎಂದು ಮಸ್ತಾನ್ ಸ್ಪಷ್ಟನೆ

‘ನಾನು ಮೋಸ ಮಾಡಿಲ್ಲ’ ಎಂದು ಮಸ್ತಾನ್ ಸ್ಪಷ್ಟನೆ

ತಾಲೂಕಿನ ಗಂಗಿರೆಡ್ಡಿಪಾಳ್ಯದ ಸುಲ್ತಾನಾ (25), ಕೊಂಡ್ಲಿಗಾನಹಳ್ಳಿ ಗ್ರಾಮದ ಮಸ್ತಾನ್ (26) ಅವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಮಕ್ಕಳಾಗದ ಕಾರಣವನ್ನು ಮುಂದಿಟ್ಟುಕೊಂಡು ಪತಿ ನಿರಂತರವಾಗಿ ಅವಮಾನಿಸಿ ಕಿರುಕುಳ ನೀಡುತ್ತಿದ್ದರು ಎಂದು ಸುಲ್ತಾನಾ ದೂರಿನಲ್ಲಿ ಆರೋಪಿಸಿದ್ದಾರೆ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ವಿವಿಧ ಚಿಕಿತ್ಸೆಯನ್ನೂ ಪಡೆದಿದ್ದರು ಎನ್ನಲಾಗಿದೆ.

Pawan Kalyan Birthday Celebration: ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ: ಬಲಿಜ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮ; ಮಕ್ಕಳಿಗೆ ಊಟದ ವ್ಯವಸ್ಥೆ

ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ

ಜನಸೇನಾ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಹಲವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ಮಾನವೀಯ ಅಂತಃಕರಣ ಹೊಂದಿರುವ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲಿ

2047ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿಸುವುದೇ ಮೋದಿ ಸರ್ಕಾರದ ಗುರಿ: ವೇಣುಗೋಪಾಲ್

2047ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿಸುವುದೇ ಮೋದಿ ಸರ್ಕಾರದ ಗುರಿ

ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವಲ್ಲಿ ಮತದಾನದ ಹಕ್ಕು ಪ್ರಮುಖವಾಗಿದ್ದು, ಪ್ರತಿ ಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ದೊರೆಯುವಂತೆ ನೋಡಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಪಾರದರ್ಶಕವಾಗಿ ಪರಿಶೀಲಿಸಿ ಸರಿಪಡಿಸುವ ಕಾರ್ಯಕ್ಕೆ ಕಾರ್ಯಕರ್ತರು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

Chinthamani News: ಮಡಿವಾಳ ಸಮುದಾಯವನ್ನು ಎಸ್‌ಸಿಗೆ ಸೇರಿಸಲು ಒತ್ತಾಯ: ಸೆ.9ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ

18 ರಾಜ್ಯಗಳಲ್ಲಿ ಸಿಕ್ಕಿರುವ ಎಸ್‌ಸಿ ಸ್ಥಾನಮಾನ ಕರ್ನಾಟಕದಲ್ಲೇಕಿಲ್ಲ?

ದೇಶದ 18 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ-ಧೋಬಿ ಸಮುದಾಯಕ್ಕೆ ಈಗಾಗಲೇ ಪರಿಶಿಷ್ಟ ಜಾತಿ ಸ್ಥಾನಮಾನ ದೊರೆತಿದೆ. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ

Chinthamani News: ಜಮೀನು ಮಂಜೂರಾಗದೆ ನೊಂದ ಮಾಜಿ ಸೈನಿಕನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಜೆ.ಕೆ. ಕೃಷ್ಣಾರೆಡ್ಡಿ

ಜಮೀನು ಮಂಜೂರಾಗದೆ ನೊಂದ ಮಾಜಿ ಸೈನಿಕನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ

ಸರ್ಕಾರಿ ಜಮೀನು ಮಂಜೂರಾಗದ ಹಿನ್ನೆಲೆಯಲ್ಲಿ ನೊಂದ ಮಾಜಿ ಸೈನಿಕ ಶಿವಾ ನಂದರೆಡ್ಡಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಪಿಯುಸಿ ವಿದ್ಯಾರ್ಥಿನಿ ಸಾವು: ಪ್ರಕರಣ ದಾಖಲು

ಪಿಯುಸಿ ವಿದ್ಯಾರ್ಥಿನಿ ಸಾವು: ಪ್ರಕರಣ ದಾಖಲು

ಮೃತ ಶ್ರೇಯಾ ಅವರು ರಾಮಕೃಷ್ಣ ಹಾಗೂ ನಾಗರತ್ನಮ್ಮ ದಂಪತಿಯ ಕಿರಿಯ ಪುತ್ರಿಯಾಗಿದ್ದು, ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಕಾಲೇಜಿನಿಂದ ಚಿಕ್ಕಬಳ್ಳಾಪುರಕ್ಕೆ ಮರಳಿದ್ದರು ಎನ್ನಲಾಗಿದೆ. ಪೋಷಕರು ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದುಬಂದಿದೆ.

Senior Actor Dr Srinath: ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಅತ್ಯಂತ ಅಗತ್ಯ: ನಟ ಶ್ರೀನಾಥ್

ಎಪಿಎಸ್ ಪಿಯು ಕಾಲೇಜು ನಲ್ಲಿ ಪ್ರತಿಭಾ ದಿನಾಚರಣೆ

ಎಪಿಎಸ್ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸದಾ ಬೆಂಬಲವಾಗಿ ನಿಂತಿತ್ತು. ಇದರ ಪರಿಣಾಮ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ, ಸಿ. ಅಶ್ವತ್ಥ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಬೆಳಗಲು ಸಾಧ್ಯ ವಾಯಿತು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅತ್ಯಂತ ಅಗತ್ಯ ಎಂದರು.

ದೇವರಿಗೆ ಸಮಾನನಾಗಿದ್ದ ಮನುಷ್ಯನ ಪತನ ಶುರುವಾಗಿದ್ದೇ ಊಟದಿಂದ!: ರಾಘವೇಶ್ವರ ಭಾರತೀ ಶ್ರೀ

ಮನುಷ್ಯನ ಪತನ ಶುರುವಾಗಿದ್ದೇ ಊಟದಿಂದ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಎಲ್ಲಿ ತಪ್ಪಿದ್ದೇವೋ ಅಲ್ಲೇ ಸರಿಪಡಿಸಿಕೊಳ್ಳಬೇಕು ಎಂಬಂತೆ, ಅಂದಿನ ನಮ್ಮ ಪೂರ್ವಜರ ತಪ್ಪನ್ನು ಇಂದು ನಾವು ಸರಿಪಡಿಸಿಕೊಳ್ಳಬೇಕು. ಅಂದು ನಮ್ಮ ಪೂರ್ವಜರ ಅಧಃಪತನ ಊಟದ ವಿಷಯದಿಂದಲೇ ಆರಂಭವಾಯಿತು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ; ಆರೋಗ್ಯ ಸಚಿವರಿಂದ ಕಾರ್ಯಕ್ರಮಕ್ಕೆ ಚಾಲನೆ

ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ

ದೇಶದ ಮೃತ ಅಂಗಾಂಗ ದಾನ ಪ್ರಮಾಣವು ಪ್ರತಿ ದಶಲಕ್ಷ ಜನಸಂಖ್ಯೆಗೆ 1 ದಾನಿಗಿಂತ ಕಡಿಮೆಯಿದ್ದು, ಸ್ಪೇನ್’ನಲ್ಲಿ ಇದು ಪ್ರತಿ ದಶಲಕ್ಷಕ್ಕೆ 48ಕ್ಕಿಂತ ಹೆಚ್ಚಿದೆ. 2025ರಲ್ಲಿ ಭಾರತವು 20,138 ಕಸಿ ಶಸ್ತ್ರಚಿಕಿತ್ಸೆ ಗಳೊಂದಿಗೆ ಒಂದು ಮೈಲಿಗಲ್ಲನ್ನು ದಾಖಲಿಸಿದರೂ, ಅವುಗಳಲ್ಲಿ ಸುಮಾರು 82% ಜೀವಂತ ದಾನಿಗಳನ್ನು ಅವಲಂಬಿಸಿದ್ದವು, ಮತ್ತು ಮಾರ್ಚ್ 2026ರ ಹೊತ್ತಿಗೆ 89,000ಕ್ಕೂ ಹೆಚ್ಚು ರೋಗಿಗಳು ಕಸಿ ನಿರೀಕ್ಷಣಾ ಪಟ್ಟಿಯಲ್ಲಿ ಉಳಿದಿದ್ದಾರೆ, ಈ ಸಂಖ್ಯೆ ಲಭ್ಯವಿರುವ ಅಂಗಾಂಗಗಳಿಗಿಂತ ಬಹಳಷ್ಟು ಮುಂದಿದೆ.

Tumkur News: ಧರ್ಮಸ್ಥಳ ಯೋಜನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ

ಧರ್ಮಸ್ಥಳ ಯೋಜನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ

SKDRDP Tumkur: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಮಲ್ಲಸಂದ್ರ ಡೈರಿ ಆವರಣದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಜರುಗಿತು. ಈ ಕುರಿತ ವಿವರ ಇಲ್ಲಿದೆ.

Belagavi Blood Donation Camps: ನಾಳೆ ಬೆಳಗಾವಿ ಜಿಲ್ಲೆಯ 22 ಸ್ಥಳಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ; ಜಿಪಂನಿಂದ ಆಯೋಜನೆ

ನಾಳೆ ಬೆಳಗಾವಿ ಜಿಲ್ಲೆಯ 22 ಸ್ಥಳಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Belagavi News: ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಒಟ್ಟು 22 ಸ್ಥಳಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು ಆಯೋಜಿಸಲಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ನೀತಿ ಆಯೋಗದ ಉಪಾಧ್ಯಕ್ಷರ ಜತೆ ಸಿಎಂ ಡಿಕೆಶಿ ಸಭೆ; ರಾಜ್ಯದ ಪಾಲಿನ ಅನುದಾನ ಹಂಚಿಕೆಗೆ ಮನವಿ

ನೀತಿ ಆಯೋಗದ ಉಪಾಧ್ಯಕ್ಷರ ಜತೆ ಸಿಎಂ ಡಿ.ಕೆ. ಶಿವಕುಮಾರ್‌ ಮಹತ್ವದ ಸಭೆ

CM DK Shivakumar: ನೀತಿ ಆಯೋಗದ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಲಾಹಿರಿ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಭೆ ನಡೆಸಿ, ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್‌, ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಈ ಹಿಂದೆ ಘೋಷಿಸಿದ್ದ ಅನುದಾನ ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನ ಹಂಚಿಕೆಯ ಪಾಲನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಫೆಬ್ರವರಿ 8ರಿಂದ 12ರವರೆಗೆ ಬೆಂಗಳೂರಿನಲ್ಲಿ 16ನೇ ಏರೋ ಇಂಡಿಯಾ ಶೋ; ನಾಳೆಯಿಂದ ವಸ್ತು ಪ್ರದರ್ಶನ ಸ್ಥಳದ ಆನ್‌ಲೈನ್ ನೋಂದಣಿ

ಫೆಬ್ರವರಿ 8ರಿಂದ 12ರವರೆಗೆ ಬೆಂಗಳೂರಿನಲ್ಲಿ 16ನೇ ಏರೋ ಇಂಡಿಯಾ ಶೋ

Aero India: ಏಷ್ಯಾದ ಅತಿದೊಡ್ಡ ವಿಮಾನ ಪ್ರದರ್ಶನ ಹಾಗೂ ವಿಶ್ವದ ಅತ್ಯಂತ ಪ್ರಮುಖ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ಏರೋ ಇಂಡಿಯಾದ 16ನೇ ಆವೃತ್ತಿ ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ 2027ರ ಫೆಬ್ರವರಿ 8ರಿಂದ 12ರವರೆಗೆ ನಡೆಯಲಿದೆ.

Loading...