ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ಚಿಕ್ಕಬಳ್ಳಾಪುರಕ್ಕೆ ಅತ್ಯುತ್ತಮ ಪ್ರದರ್ಶನ ಜಿಲ್ಲೆ ಪ್ರಶಸ್ತಿ: ದೆಹಲಿಯ ಕಾರ್ಯಕ್ರಮದಲ್ಲಿ ಪ್ರಶಂಸಾ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರಕ್ಕೆ ಅತ್ಯುತ್ತಮ ಪ್ರದರ್ಶನ ಜಿಲ್ಲೆ ಪ್ರಶಸ್ತಿ

ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಸಮುದಾಯದ ಸಬಲೀಕರಣಕ್ಕೆ ರೂಪಿಸಿರುವ ಆದಿ ಕರ್ಮಯೋಗಿ ಅಭಿಯಾನ ಮತ್ತು ಧರ್ತಿ ಆಬ ಜನ ಭಾಗೀದರಿ ಅಭಿಯಾನಗಳಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರಿದೆ

Deepavali at Chikkaballapur: ದೀಪಾವಳಿ ಹಬ್ಬಕ್ಕೆ ಸಜ್ಜುಗೊಂಡ ಜಿಲ್ಲೆ : ಹಬ್ಬದ ಸಾಮಾನು ಖರೀದಿ ಜೋರು

ದೀಪಾವಳಿ ಹಬ್ಬಕ್ಕೆ ಸಜ್ಜುಗೊಂಡ ಜಿಲ್ಲೆ : ಹಬ್ಬದ ಸಾಮಾನು ಖರೀದಿ ಜೋರು

ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಎಂಜಿರಸ್ತೆ,ಬಜಾರ್ ರಸ್ತೆ, ಬಿ.ಬಿ ರಸ್ತೆಗಳ ಇಕ್ಕೆಲಗಳಲ್ಲಿ ಅಡಿಕೆ, ನೋಮುದಾರ, ಬಾಳೆಕಂದು, ಎಲೆ-ಅಡಿಕೆ, ತೆಂಗಿನಕಾಯಿ ಹೂವು ಹಣ್ಣು ಕಾಯಿಗಳನ್ನು, ಮಣ್ಣಿನ ಹಣತೆಗಳನ್ನು ಕೊಳ್ಳಲು ಜನತೆ ಮುಂದಾಗಿದ್ದರು.ಸುಗಮ ಸಂಚಾರಕ್ಕಾಗಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

Ramesh Katti: ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಕೆ: ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಎಫ್‌ಐಆರ್‌

ವಾಲ್ಮೀಕಿ ಸಮಾಜದ ಬಗ್ಗೆ ಅವಾಚ್ಯ ಪದ; ರಮೇಶ್ ಕತ್ತಿ ವಿರುದ್ಧ ಎಫ್‌ಐಆರ್‌

Belagavi News: ಮಾಜಿ ಸಂಸದ ರಮೇಶ್ ಕತ್ತಿ ಅವರು ನಾಯಕ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಬಿ.ಕೆ ಮಾಡೆಲ್ ಶಾಲೆಯ ಆವರಣದಲ್ಲಿ ಅವರು ಅವಾಚ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

Caste census: ಜಾತಿ ಸಮೀಕ್ಷೆ ಅವಧಿ ಮತ್ತೆ ವಿಸ್ತರಿಸಿದ ಸರ್ಕಾರ; ಶಿಕ್ಷಕರ ಬದಲು ಇತರ ಇಲಾಖೆಗಳ ಸಿಬ್ಬಂದಿ ಬಳಕೆ

ಜಾತಿ ಸಮೀಕ್ಷೆ ಅವಧಿ ಅ.31ರವರೆಗೆ ವಿಸ್ತರಿಸಿದ ಸರ್ಕಾರ

Social and Educational Survey - 2025: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲ್ಲ ಎಂದು ಸಚಿವ ಶಿವರಾಜ್ ಎಸ್ ತಂಗಡಗಿ ಮಾಹಿತಿ ನೀಡಿದ್ದಾರೆ.

SPARSH Hospital: ಬೆಂಗಳೂರಿನಲ್ಲಿ ಸ್ಪರ್ಶ್‌ ಆಸ್ಪತ್ರೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ‌ ನಡಿಗೆ

ಬೆಂಗಳೂರಿನಲ್ಲಿ ಸ್ಪರ್ಶ್‌ ಆಸ್ಪತ್ರೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ‌ ನಡಿಗೆ

Breast cancer awareness: ಸ್ತನ ಕ್ಯಾನ್ಸರ್ ಜಾಗೃತಿ ಸಪ್ತಾಹದ ಅಂಗವಾಗಿ ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆ ಆವರಣದಲ್ಲಿ ಆರಂಭಗೊಂಡ ಜಾಥಾಗೆ ಚಿತ್ರ ನಟಿ ಪ್ರೇಮಾ ಚಾಲನೆ ನೀಡಿದರು. ಗುಲಾಬಿ ಬಣ್ಣದ ಧಿರಿಸು ತೊಟ್ಟ ಮಹಿಳೆಯರು, ವೈದ್ಯರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಗಳು ಸ್ತನ ಕ್ಯಾನ್ಸರ್ ಕುರಿತಾದ ಘೋಷವಾಕ್ಯಗಳ ಫಲಕ ಹಿಡಿದುಕೊಂಡು ಉತ್ತರ ಬೆಂಗಳೂರಿನ ಹೆಣ್ಣೂರು ಸುತ್ತ ಮುತ್ತ ಜಾಗೃತಿ ಮೂಡಿಸಿದರು.

Sedam News: ಸೇಡಂನಲ್ಲಿ ಪಥ ಸಂಚಲನಕ್ಕೆ ಮುಂದಾದ ಆರ್‌ಎಸ್‌ಎಸ್‌ ಗಣವೇಷಧಾರಿಗಳು ವಶಕ್ಕೆ

ಸೇಡಂನಲ್ಲಿ ಪಥ ಸಂಚಲನಕ್ಕೆ ಮುಂದಾದ ಆರ್‌ಎಸ್‌ಎಸ್‌ ಕಾರ್ಯಕರ್ತರು ವಶಕ್ಕೆ

RSS march in Sedam: ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭಾನುವಾರ ಸಂಜೆ 4ಕ್ಕೆ ಆರ್‌ಎಸ್‌ಎಸ್‌ ಪಥ ಸಂಚಲನ ನಿಗದಿಯಾಗಿತ್ತು. ಆದರೆ, ಪುರಸಭೆ ಅನುಮತಿ ನಿರಾಕರಿಸಿದೆ. ಕೊನೆ ಘಳಿಗೆಯಲ್ಲಿ ಹೀಗೆ ಮಾಡಿದರೆ ಆಗದು ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪಥ ಸಂಚಲನಕ್ಕೆ ಮುಂದಾಗಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Karnataka Weather: ಹವಾಮಾನ ವರದಿ; ರಾಜ್ಯದಲ್ಲಿ ಅ. 25ರವರೆಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ರಾಜ್ಯದಲ್ಲಿ ಅ. 25ರವರೆಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 21°C ಇರುವ ಸಾಧ್ಯತೆ ಇದೆ.

Chikkaballapur News: ನ.1ರ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು: ಅಪರ ಜಿಲ್ಲಾಧಿಕಾರಿ . ಡಾ. ಎನ್. ಭಾಸ್ಕರ್

ನ.1ರ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು

ನವೆಂಬರ್ 1 ರಂದು ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮವನ್ನು ನಗರದ ಸ‌ರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದೊಂದಿಗೆ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆಯಿಂದ ನಮ್ಮ ಭಾವನೆಗಳು ವಿಸ್ತರಿಸುತ್ತವೆ : ಸಂಸದ ಡಾ.ಕೆ.ಸುಧಾಕರ್ ಅಭಿಮತ

ರಾಷ್ಟ್ರೀಯ ಹಬ್ಬಗಳ ಆಚರಣೆಯಿಂದ ನಮ್ಮ ಭಾವನೆಗಳು ವಿಸ್ತರಿಸುತ್ತವೆ

ಓಣಂ ಆಚರಣೆಯು ನಮ್ಮ ಸಂತಸ ಹೆಚ್ಚಿಸಿ ಸಂಬಂಧಗಳನ್ನು ವಿಶಾಲಗೊಳಿಸಲಿ, ಹೃದಯ ಸ್ಪಂದನೆ ಯೊಂದಿಗೆ ಮಾನವೀಯತೆ ಮತ್ತು ಕಾರುಣ್ಯ ಟಿಸಿಲೊಡೆಯಲಿ. ಇಂತಹ ಹಬ್ಬಗಳನ್ನು ಎಲ್ಲ ಧರ್ಮ, ಜಾತಿ ಮತ್ತು ವರ್ಗಗಳ ಜನರು ಒಗ್ಗೂಡಿ ಆಚರಿಸಬೇಕು ಆಗ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ನಾವೆಲ್ಲರೂ ಭಾರತೀಯರು ಹಾಗೂ ವಿಶ್ವಮಾನವರೆಂಬ ಭಾವನೆ ಮೂಡಲು ಪ್ರೇರಣೆಯಾಗುತ್ತದೆ

DK Shivakumar: ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಬೆಳೆದವರು ಟೀಕೆ, ಟ್ವೀಟ್ ಮಾಡುತ್ತಿದ್ದಾರೆ: ಡಿಸಿಎಂ ಡಿಕೆಶಿ ಕಿಡಿ

ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಬೆಳೆದವರು ಟೀಕೆ, ಟ್ವೀಟ್ ಮಾಡುತ್ತಿದ್ದಾರೆ

Bengaluru News: ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಪ್ರಸ್ತುತ ಹೇಗಿದ್ದೇವೆ ಎಂಬುದನ್ನು ಮರೆತು ಟ್ವೀಟ್ ಮಾಡುತ್ತಿದ್ದಾರೆ. ನಾವು ನಮ್ಮ ಮೂಲವನ್ನು ಮರೆಯಬಾರದು, ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Cylinder Explosion: ಬಾಗಲಕೋಟೆಯಲ್ಲಿ ಸಿಲಿಂಡರ್‌ ಸ್ಫೋಟ; 8 ಮಂದಿಗೆ ಗಂಭೀರ ಗಾಯ, 7 ಬೈಕ್‌ ಸುಟ್ಟು ಕರಕಲು

ಬಾಗಲಕೋಟೆಯಲ್ಲಿ ಸಿಲಿಂಡರ್‌ ಸ್ಫೋಟವಾಗಿ 8 ಮಂದಿಗೆ ಗಾಯ

Bagalkot News: ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್​ ಬಳಿ ಅವಘಡ ನಡೆದಿದೆ. ಭಾನುವಾರ ಮುಂಜಾನೆ ಮನೆಯೊಂದರಲ್ಲಿ ಸಿಲಿಂಡರ್​​ ಸ್ಫೋಟಗೊಂಡಿದೆ. ಘಟನೆಯಲ್ಲಿ ಒಟ್ಟು 8 ಜನರಿಗೆ ಗಂಭೀರ ಗಾಯಗಳಾಗಿದ್ದು, ಏಳು ಬೈಕ್‌ ಸುಟ್ಟು ಕರಕಲಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RSS march in Chittapur: ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ನಿರಾಕರಣೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ; ಹೊಸ ಅರ್ಜಿ ಸಲ್ಲಿಸಲು ಸೂಚನೆ

ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ನಿರಾಕರಣೆ ಆದೇಶಕ್ಕೆ ತಡೆ

Chittapur News: ನ್ಯಾಯಾಲಯದ ಸೂಚನೆಯನ್ನು ಅನುಸರಿಸಿ, ಆರ್.ಎಸ್.ಎಸ್ ಪರ ಅರ್ಜಿದಾರರು ಪಥಸಂಚಲನವನ್ನು ನವೆಂಬರ್ 2 ರಂದು ಚಿತ್ತಾಪುರದಲ್ಲಿ ನಡೆಸಲು ಸಮ್ಮತಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 24ರಂದು ಮಧ್ಯಾಹ್ನ 2:30ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

Bomb Threat: ವಿಮಾನದಲ್ಲಿ ಬಾಂಬ್‌ ಇದೆ... ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌!

ಹುಸಿ ಬಾಂಬ್‌ ಕರೆ... ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್‌!

Bomb Threat to plane: ವಿಮಾನದಲ್ಲಿ ಬಾಂಬ್ ಇದೆ ಎಂದು ಬರೆದು ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿರುವ ಘಟನೆ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ 6E4814 ವಿಮಾನದಲ್ಲಿ 168 ಪ್ರಯಾಣಿಕರಿದ್ದರು.

RSS procession: ನ.2ರಂದು ‘RSS’ ಪಥಸಂಚಲನಕ್ಕೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್

ಚಿತ್ತಾಪುರದಲ್ಲಿ ನ.2ರಂದು ‘RSS’ ಪಥಸಂಚಲನ!

RSS procession in Chittapur: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಹೈಕೋರ್ಟ್ ಎರಡು ಸಂಘಟನೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಸೂಚನೆ ನೀಡಿತು ನವೆಂಬರ್ 2ರಂದು ಆರ್ ಎಸ್ ಎಸ್ ಪಥ ಸಂಚಲನ ನಡೆಸಲು ಅರ್ಜಿದಾರರು ಒಪ್ಪಿಗೆ ನೀಡಿದ್ದಾರೆ.

RSS procession: ಪ್ರಿಯಾಂಕ್‌ ಖರ್ಗೆ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಬ್ರೇಕ್‌; ಮಹತ್ವದ ಆದೇಶ

ಪ್ರಿಯಾಂಕ್‌ ಖರ್ಗೆ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಬ್ರೇಕ್‌

RSS procession in Chittapur:100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ ತಾಲೂಕು ಆಡಳಿತವನ್ನು ಕೇಳಿತ್ತು. ಅನುಮತಿ ಕೇಳಿದ ನಂತರ ತಾಲೂಕು ತಹಶೀಲ್ದಾರ ನಾಗಯ್ಯ 12 ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗೆ ಆರ್‌ಎಸ್‌ಎಸ್‌ ಉತ್ತರ ನೀಡಿದ್ದರೂ ಮಧ್ಯರಾತ್ರಿ 11 ಗಂಟೆಯವರೆಗೂ ಅನುಮತಿ ಸಿಕ್ಕಿಲ್ಲ.

Deepavali Fashion 2025: ದೀಪಾವಳಿ ಫೆಸ್ಟೀವ್ ಸೀಸನ್ ಲೆಹೆಂಗಾಗೆ ಸಿಕ್ತು ಲೋಕಲ್ ಟಚ್

ದೀಪಾವಳಿ ಫೆಸ್ಟೀವ್ ಸೀಸನ್ ಲೆಹೆಂಗಾಗೆ ಸಿಕ್ತು ಲೋಕಲ್ ಟಚ್

Deepavali Fashion: ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಪಕ್ಕಾ ಸೌತ್ ಇಂಡಿಯನ್ ಲುಕ್ ನೀಡುವ ವೈವಿಧ್ಯಮಯ ಲೆಹೆಂಗಾಗಳು ಆಗಮಿಸಿವೆ. ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಇಲ್ಲಿ ತಿಳಿಸಿದ್ದಾರೆ.‌ ಈ ಕುರಿತ ವರದಿ ಇಲ್ಲಿದೆ.

Diwali festival: ಪಟಾಕಿ ಸಿಡಿಸೋ ಮುನ್ನ ಈ ರೂಲ್ಸ್‌ ಗೊತ್ತಿರಲಿ... ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ

ಪಟಾಕಿ ಸಿಡಿಸಲು ಸರ್ಕಾರದಿಂದ ಮಾರ್ಗಸೂಚಿ

Diwali festival Guidelines: ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಮತ್ತು ಪ್ರಾಣಿ-ಪಕ್ಷಿಗಳ ಕಲರವಕ್ಕೆ ಘಾಸಿ ಉಂಟುಮಾಡುತ್ತಿದೆ. ಹೀಗಾಗಿ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

Karnataka Weather: ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಇಂದು ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ° C ಮತ್ತು 21 ° C ಆಗಿರಬಹುದು.

Chikkaballapur News: ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಸಕ್ರಿಯ ಪಾತ್ರ ವಹಿಸಬೇಕಾದ್ದು ಅತ್ಯಗತ್ಯ: ಸದ್ಗುರು ಶ್ರೀ ಮಧುಸೂದನ ಸಾಯಿ

ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಸಕ್ರಿಯ ಪಾತ್ರ ವಹಿಸಬೇಕಾದ್ದು ಅತ್ಯಗತ್ಯ

ಶಿಕ್ಷಣ ವ್ಯವಸ್ಥೆಗೆ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ಆಧಾರ ಸ್ತಂಭಗಳು. ಇಲ್ಲಿಯವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮಾತ್ರವೇ ಸಂಯೋಜಿಸಲಾಗುತ್ತಿತ್ತು. ನಮ್ಮಲ್ಲಿ ಪೋಷಕರು ಸಹ ಈ ವ್ಯವಸ್ಥೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎನ್ನುವ ಚಿಂತನೆ ಇತ್ತು. ಅದೇ ರೀತಿ ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಿದೆವು

Chikkaballapur News: ಜೈನ್ ಆಸ್ಪತ್ರೆಯ ಉಚಿತ ಡಯಾಲಿಸಿಸ್ ಸೇವೆ ಸಮಾಜಕ್ಕೆ ಮಾದರಿ: ಕೆ.ವಿ.ನವೀನ್‌ ಕಿರಣ್

ಜೈನ್ ಆಸ್ಪತ್ರೆಯ ಉಚಿತ ಡಯಾಲಿಸಿಸ್ ಸೇವೆ ಸಮಾಜಕ್ಕೆ ಮಾದರಿ

ಚಿಕ್ಕಬಳ್ಳಾಪುರದ ಜಿಲ್ಲೆಯ ಜನತೆ ಆರೋಗ್ಯ ಸುಧಾರಣೆಗಾಗಿ ಇಲ್ಲಿಂದ ಬೆಂಗಳೂರಿಗೆ ಹೋಗಬೇಕಾ ಗಿತ್ತು. ಕಳೆದ ಮೂರು ವರ್ಷಗಳಿಂದ ಈ ಅವಲಂಬನೆಯನ್ನು ತಪ್ಪಿಸಿರುವ ಜೈನ್‌ಮಿಷನ್ ಆಸ್ಪತ್ರೆಯು ಗ್ರಾಮೀಣ ಜನರ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ.ಒಬ್ಬ ವ್ಯಕ್ತಿಗೆ ಒಮ್ಮೆಗೆ ಡಯಾಲಿಸಿಸ್ ಮಾಡಿಸ ಬೇಕಾದರೆ ಕನಿಷ್ಟ ೧ ಸಾವಿರ ರೂಪಾಯಿ ಖರ್ಚು ಮಾಡಬೇಕಿದೆ.

Gauribidanur News: ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ ಗಣೇಶ್

ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು

ಹಿಂದೆ ಅಡಿಗೆ ಮನೆಗೆ ಮಾತ್ರ ಸೀಮಿತವಾದ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿ ದ್ದಾರೆ. ಅವರನ್ನು ಪ್ರೋತ್ಸಾಹಿಸುವ ಹೊಣಗಾರಿಕೆ ಪೋಷಕರ ಮೇಲಿದೆ ಎಂದರು. ಬಾಲ್ಯ ವಿವಾಹ ಗಳನ್ನು ಮಾಡಬೇಡಿ.ಹೆಣ್ಣು ಮಕ್ಕಳಿಗಾಗಿ ನ್ಯಾಯಾಲಯದ ಆವರಣದಲ್ಲಿ ಉಚಿತ ನ್ಯಾಯ ಸಲಹೆ ನೀಡುವ ಅವಕಾಶಗಳನ್ನು ಸರ್ಕಾರ ಒದಿಗಿಸಿದೆ.

Karnataka TET 2025: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ; ಪರೀಕ್ಷೆ ಯಾವಾಗ?

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ; ಪರೀಕ್ಷೆ ಯಾವಾಗ?

KAR TET: ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ (NCTE) 1 ರಿಂದ 8ನೇ ತರಗತಿಗಳ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿದೆ. ಅದರಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTE ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ.) ಉತ್ತೀರ್ಣರಾಗಿರಬೇಕು.

MLA K.H. Puttaswamy Gowda: ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿ : ಶಾಸಕ ಪುಟ್ಟಸ್ವಾಮಿಗೌಡ ಸಲಹೆ

ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿ

ನಗರದ ಜನಸಂದಣಿ ಪ್ರದೇಶದಲ್ಲಿ ಭವ್ಯವಾದ ಕಟ್ಟಡದಲ್ಲಿ ವಿಶಾಲ್‌ಮಾರ್ಟ್ನವರು ತಮ್ಮ ಮಳಿಗೆ ಯನ್ನು ಪ್ರಾರಂಭಿಸಿರುವುದು ಸಂತೋಷ ತಂದಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉಡುಗೆ ತೊಡುಗೆ, ಗೃಹೋಪಯೋಗಿ ವಸ್ತುಗಳು ಹಾಗೂ ದಿನಬಳಕೆಯ ವಸ್ತು ಗಳನ್ನು ನೀಡುತ್ತಿರುವುದು ಕಂಪನಿಗೆ ಗ್ರಾಹಕರ ಬಗ್ಗೆ ಇರುವ ಕಾಳಜಿ ಹಾಗೂ ನಂಬಿಕೆಯನ್ನು ತೋರಿಸುತ್ತದೆ

Adichunchanagiri Sri : ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು : ಶ್ರೀ ಮಂಗಳನಾಥಸ್ವಾಮೀಜಿ

ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು

ಆಧುನಿಕತೆಯ ಅಂಧಾನುಕರಣೆಗೆ ಸಿಕ್ಕಿ ನಶಿಸಿಹೋಗುತ್ತಿರುವ ಈ ನೆಲದ ಭಾಷೆ ಸಂಸ್ಕೃತಿ ಮತ್ತು ಸಾಂಪ್ರದಾಯದ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಈ ವಿಚಾರದಲ್ಲಿ ಬಿಜಿಎಸ್ ಶಾಲೆ ಒಂದೆಜ್ಜೆ ಮುಂದಿದ್ದು ಗ್ರಾಮೀಣ ಆಟಗಳನ್ನು ಕೂಡ ಮಕ್ಕಳಿಗೆ ಪರಿಚಯಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಏಕೆಂದರೆ ಸಾಂಪ್ರದಾಯಿಕ ಆಟಗಳ ಪರಿಚಯವಾಗುವುದರಿಂದ ಮಕ್ಕಳಲ್ಲಿ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ

Loading...