ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಪರೀಕ್ಷೆ ಆಯೋಜಿಸಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಪರೀಕ್ಷೆ ಆಯೋಜಿಸಿ

10ನೇ ತರಗತಿಯ ಪರೀಕ್ಷೆಗಳು ಇದೆ ತಿಂಗಳ 18 ರಿಂದ ಏಪ್ರಿಲ್ 2 ರವರೆಗೆ ಜಿಲ್ಲೆಯಲ್ಲಿನ 53 ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ನಿಗಾ ವ್ಯವಸ್ಥೆಯ ನಿಗಾದಡಿ ನಡೆಯುತ್ತವೆ. ರಾಜ್ಯ ಮಟ್ಟದ ಅಧಿಕಾರಿಗಳು ವೆಬ್ ಕಾಸ್ಟಿಂಗ್ ಆನ್ ಲೈನ್ ವ್ಯವಸ್ಥೆ ಮುಖಾಂತರವೇ ಮೇಲುಸ್ತುವಾರಿ ಮಾಡು ತ್ತಿರುತ್ತಾರೆ

Ramzan fast: ರಂಜಾನ್ ಉಪವಾಸ 21ನೇ ದಿನ ಇಫ್ತಿಯಾರ್ ಕೂಟ ಏರ್ಪಡಿಸಿ ಶುಭಾಶಯ ಕೋರಿದ ಜಯಕುಮಾರ್

ಇಫ್ತಿಯಾರ್ ಕೂಟ ಏರ್ಪಡಿಸಿ ಶುಭಾಶಯ ಕೋರಿದ ಜಯಕುಮಾರ್

ಭಾರತದ ಜೀವನಕ್ರಮದಲ್ಲಿಯೇ ಸಹೋದರತೆ, ಭ್ರಾತೃತ್ವ, ಸಹಿಷ್ಣುತೆ, ಧರ್ಮಜಾಗೃತಿ ಜೀವನ ಪಾಠವನ್ನು ಕಲಿಸಲಾಗಿದೆ.ಹೀಗಾಗಿಯೇ ನಮ್ಮ ಸಂವಿಧಾನದ ಹೃದಯವಾದ ಪೀಠಿಕೆಯಲ್ಲಿ ಭಾರತದ ಪ್ರೆಜೆಗಳಾದ ನಾವು ಭಾರತವನ್ನು ಒಂದು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದ ತಿಳಿಸಿದೆ

Lok Adalat: ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಮಾ.14ರಂದು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ: ನ್ಯಾ.ರೋಷನ್ ಷಾ

ಮಾ.14ರಂದು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ

ಅಪರಾಧಿಕ ರಾಜಿಯೋಗ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಸಂಬಂಧಿತ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನ ಪ್ರಕರಣಗಳು, ಗ್ರಾಹಕರ ವೇದಿಕೆ ಸಂಬಂಧಿತ ವ್ಯಾಜ್ಯಗಳು, ರಿಯಲ್ ಎಸ್ಟೇಟ್ ಪ್ರಕರಣಗಳು, ಸಾಲ ವಸೂಲಾತಿ, ಚೆಕ್ ಅಮಾ ನತ್ತು ಪ್ರಕರಣಗಳು, ಭೂಸ್ವಾಧೀನ, ವೇತನ ಭತ್ಯೆ ಹಾಗೂ ಪಿಂಚಣಿ ಪ್ರಕರಣಗಳು ಸೇರಿದಂತೆ ಸಾರ್ವಜನಿಕ ಉಪಯುಕ್ತ ಸೇವೆಗಳ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸ ಬಹುದು

Indefinite sit-in: ಹಣ ಕಳೆದುಕೊಂಡ ಗ್ರಾಹಕರಿಂದ ಅನಿರ್ದಿಷ್ಟ ಧರಣಿ

ಹಣ ಕಳೆದುಕೊಂಡ ಗ್ರಾಹಕರಿಂದ ಅನಿರ್ದಿಷ್ಟ ಧರಣಿ

ಮೂರು ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲಿಯವರೆಗೂ ಹಣ ಕಳೆದು ಕೊಂಡವರಿಗೆ ಪರಿಹಾರ ನೀಡಿಲ್ಲ, ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ ವಂಚನೆಯ ಕೃತ್ಯ ಎಸಗಿದ್ದಾಳೆ

ವಡ್ಡಗೆರೆ ದೇವಸ್ಥಾನದಲ್ಲಿ ಹೈಟೆಕ್‌ ಕಳ್ಳರ ಕೈಚಳಕ; ಕೋಟಿ ರುಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಕಳವು

ವಡ್ಡಗೆರೆ ದೇವಸ್ಥಾನದಿಂದ ಕೋಟಿ ರುಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಕಳವು

Tumakuru News: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯದ ಗರ್ಭಗುಡಿ ಸೇರಿ 4 ಬಾಗಿಲನ್ನು ಗ್ಯಾಸ್ ಕಟರ್‌ನಿಂದ ತುಂಡರಿಸಿ 1 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಜತೆ ಸಿಸಿಟಿವಿಯ ಡಿವಿಆರ್ ಅನ್ನು ಕಳ್ಳರು ಹೊತ್ತೊಯ್ದಿದ್ದಾರೆ.

40 ಲಕ್ಷ ಭಾರತೀಯರು ಬಳಸುತ್ತಿದ್ದಾರೆ ವಿವಾಹೇತರ ಡೇಟಿಂಗ್ ಆ್ಯಪ್; ಅಗ್ರ ಸ್ಥಾನದಲ್ಲಿರುವ ನಗರ ಯಾವುದು ಗೊತ್ತೇ?

ಅತೀ ಹೆಚ್ಚು ಡೇಟಿಂಗ್ ಆಪ್ ಬಳಸುತ್ತಿರುವ ಭಾರತದ ನಗರ ಯಾವುದು?

ದೇಶಾದ್ಯಂತ ಈಗ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ. ಇದಕ್ಕೆ ವೇದಿಕೆ ನಿರ್ಮಿಸಿಕೊಟ್ಟಿರುವುದು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್. ಸುಮಾರು 40 ಲಕ್ಷ ಭಾರತೀಯರು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದು, ಇದರಲ್ಲಿ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹುಡುಕಲು ಒಲವು ತೋರುತ್ತಿರುವುದು ಅದೇ ರೀತಿ ಮಹಿಳೆಯರು 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಹುಡುಕುತ್ತಿರುವುದನ್ನು ಅಂಕಿ ಅಂಶಗಳು ಬಹಿರಂಗ ಪಡಿಸಿವೆ.

Rohit Shetty: ಹಾರ್ಪಿಕ್‌ನಿಂದ ಹೊಸ 'ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್'ಗೆ ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ

ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್

ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರ ದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್‌ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ.

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ

ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್‌ ಆಸ್ಪತ್ರೆಯಲ್ಲಿ ಮೊದಲಿಗೆ ಈ ಲಸಿಕೆ ನೀಡುವು ದನ್ನು ಪ್ರಾರಂಭಿಸಲಾಗುತ್ತಿದ್ದು ಬಳಿಕ ಸ್ಪರ್ಶ್‌ ಸಮೂಹದ ಇತರೇ ಅಸ್ಪತ್ರೆಗಳಲ್ಲಿ (ಯಲಹಂಕ, ಬಾಣಸವಾಡಿ, ಸರ್ಜಾಪುರ, ಯಶವಂತಪುರ, ಆರ್‌.ಆರ್‌,ನಗರ) ಹಂತ ಹಂತವಾಗಿ ಈ ಸೌಲಭ್ಯ ಲಭ್ಯವಾಗಲಿದೆ.

ಇಂದಿರಾ ಕ್ಯಾಂಟೀನ್‌ ಅಡುಗೆ ಕೋಣೆಗೂ ವ್ಯಾಪಿಸಿದ ಇರಾನ್‌ ಯುದ್ಧ ತಾಪ: ವೆರೈಟಿ ಮೆನುಗೆ ಕತ್ತರಿ; ಮೊಸರನ್ನವೇ ಗತಿ

ಇಂದಿರಾ ಕ್ಯಾಂಟೀನ್‌, ಬಿಸಿಯೂಟಕ್ಕೂ ತಟ್ಟಿದ ಸಿಲಿಂಡರ್‌ ಕೊರತೆಯ ಎಫೆಕ್ಟ್‌

LPG Crisis: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್‌ಪಿಜಿ ಅಭಾವವು ಇದೀಗ ರಾಜ್ಯಕ್ಕೂ ತಟ್ಟಿದೆ. ಕೆಲವು ಹೋಟೆಲ್‌ಗಳು ಬಂದ್‌ ಆಗುವ ಭೀತಿ ಎದುರಿಸುತ್ತಿದ್ದರೆ, ಇನ್ನು ಕೆಲವು ಕಡೆ ವೆರೈಟಿ ಮೆನುಗೆ ಕತ್ತರಿ ಹಾಕಿ ಕೆಲವೇ ಕೆಲವು ಐಟಂಗಳನ್ನಷ್ಟೇ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌, ಶಾಲೆಗಳ ಮಧ್ಯಾಹ್ನ ಬಿಸಿಯೂಟ ಬಂದ್‌ ಆಗುವ ಆತಂಕ ಎದುರಿಸುತ್ತಿವೆ.

ACKO ಡ್ರೈವ್‌ ಸೇವಾ ಕೇಂದ್ರವು ದೇಶಾದ್ಯಂತ ಫ್ರಾಂಚೈಸಿ ವಿಸ್ತರಿಸುವುದಾಗಿ ಘೋಷಣೆ

ದೇಶಾದ್ಯಂತ ಫ್ರಾಂಚೈಸಿ ವಿಸ್ತರಿಸುವುದಾಗಿ ACKO ಡ್ರೈವ್‌ ಘೋಷಣೆ

ಬೆಂಗಳೂರಿನಲ್ಲಿ 1.23 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳು ಮತ್ತು 2024–25ನೇ ಹಣಕಾಸು ವರ್ಷದಲ್ಲಿ 7.22 ಲಕ್ಷ ವಾಹನಗಳು ಸೇರ್ಪಡೆಯಾಗಿವೆ. ನಗರವು ಸಂಘಟಿತ, ತಂತ್ರ ಜ್ಞಾನ-ನೇತೃತ್ವದ ಆಟೋ ಸೇವಾ ವ್ಯವಹಾರಗಳಿಗೆ ದೊಡ್ಡ ಮತ್ತು ಸ್ಥಿರವಾಗಿ ವಿಸ್ತರಿಸುತ್ತಿರುವ ನೆಲೆಯನ್ನು ನೀಡುತ್ತದೆ.

WHO: ಭಾರತದ ಮಕ್ಕಳಲ್ಲಿ ಉಂಟಾಗುವ ಸ್ಥೂಲಕಾಯತೆ ತಡೆಗಟ್ಟಲು ಡಬ್ಲ್ಯೂಎಚ್‌ಒ ಫೌಂಡೇಶನ್ ಮತ್ತು ನೋವೋ ನಾರ್ಡಿಸ್ಕ್ ಸಹಭಾಗಿತ್ವ

'ಡಬ್ಲ್ಯೂಎಚ್‌ಒ ಫೌಂಡೇಶನ್' -'ನೋವೋ ನಾರ್ಡಿಸ್ಕ್' ಸಂಸ್ಥೆಗಳ ಸಹಭಾಗಿತ್ವ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ಜಾಗತಿಕವಾಗಿ ಅಪೌಷ್ಟಿಕತೆಗಿಂತಲೂ, ಅತಿಯಾದ ತೂಕ ಮತ್ತು ಸ್ಥೂಲಕಾಯತೆ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿವೆ. ಇದು ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹ ಸೇರಿದಂತೆ ಹಲವಾರು ಸಾಂಕ್ರಾಮಿಕ ವಲ್ಲದ ರೋಗಗಳಿಗೆ ನೇರ ಸಂಬಂಧ ಹೊಂದಿದೆ.

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ರಿಲೀಫ್‌; ಜಾಮೀನು ಮಂಜೂರು

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಜಾಮೀನು ಮಂಜೂರು

MLA Dr. Chandru Lamani: ಗುತ್ತಿಗೆದಾರನಿಂದ 5 ಲಕ್ಷ ರುಪಾಯಿ ಲಂಚ‌ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ‌ ಡಾ. ಚಂದ್ರು ಲಮಾಣಿ ಅವರಿಗೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ ಎಂದ ವಿಜಯೇಂದ್ರ

ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ: ವಿಜಯೇಂದ್ರ

BY Vijayendra: ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ದಿಢೀರ್ ಯುದ್ಧದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಶಿಕ್ಷಕಿಯ ನಿರ್ಲಕ್ಷ್ಯ; ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ

ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ

Chikkamagaluru News: ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಘೋರ ನಡೆದಿದ್ದು, ಆಟವಾಡುತ್ತಿದ್ದ ವೇಳೆ ಮಗುವಿಗೆ ಕಬ್ಬಿಣದ ಜಾಲರಿ ತಂತಿ ತಗುಲಿ ಮರ್ಮಾಂಗಕ್ಕೆ ಗಾಯವಾಗಿದೆ. ಶಿಕ್ಷಕಿ ನಿರ್ಲಕ್ಷ್ಯ ತೋರಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಪೋಷಕರು ದೂರಿದ್ದಾರೆ.

Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

Laxmi Hebbalkar: ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯನ್ ಕೌನ್ಸುಲೇಟ್ ಜನರಲ್‌ ಕಚೇರಿಯ ಕೌನ್ಸಿಲ್‌ ಜನರಲ್ ಹಿಲರಿ ಮ್ಯಾಕ್ ಗೀಚಿ ಮತ್ತು ಉಪ ಕೌನ್ಸಿಲ್‌ ಹ್ಯಾರೀಟ್ ಅವರನ್ನೊಳಗೊಂಡ ನಿಯೋಗ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ‌ ಮಾತುಕತೆ ನಡೆಸಿತು.

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಸಚಿವ ಎಂ.ಬಿ. ಪಾಟೀಲ್‌ ಆಗ್ರಹ

ತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣ: ಎಂ.ಬಿ. ಪಾಟೀಲ್‌ ಗುಡುಗು

MB Patil: ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ಇನ್ನೂ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಮನಗಾಣಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಇನ್ನೆರಡು ತಿಂಗಳಲ್ಲಿ ಉದ್ಯೋಗಿನಿ‌ ಯೋಜನೆಯ ಸಹಾಯ ಧನ ಬಿಡುಗಡೆ; ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಘೋಷಣೆ

ಇನ್ನೆರಡು ತಿಂಗಳಲ್ಲಿ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಲಕ್ಷ್ಮಿ ಹೆಬ್ಬಾಳ್ಕರ್

Laxmi Hebbalkar: ಉದ್ಯೋಗಿ‌ನಿ ಯೋಜನೆಯ ಸಹಾಯಧನ ತಲುಪಲು ಬ್ಯಾಂಕ್‌ಗಳು ಕೂಡ ಸರಿಯಾಗಿ ಸಹಕರಿಸುತ್ತಿಲ್ಲ. ಶಾಸಕರು ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಸಿಬಿಲ್‌ ಸ್ಕೋರ್‌ ಆಧಾರದ ಮೇಲೆ ಬ್ಯಾಂಕ್‌ಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಿಳಂಬ ಮಾಡುತ್ತಿವೆ.‌ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ಸ್ ಕಮಿಟಿಯಲ್ಲಿ ಈ ಸಂಬಂಧ ಸಾಲ ಮಂಜೂರಾತಿಯನ್ನು ತುರ್ತಾಗಿ ಮಾಡುವಂತೆ ತಿಳಿಸಿದ್ದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ ಪಿಎಂ ಕುಸುಮ್ 2.0 ಯೋಜನೆ

ರೈತರಿಗೆ ಕೇಂದ್ರದಿಂದ ಗುಡ್‌ನ್ಯೂಸ್‌; ಕುಸುಮ್ 2.0 ಯೋಜನೆಗೆ ಸಿದ್ಧತೆ

Pralhad Joshi: PM ಕುಸುಮ್ 2.0 ಯೋಜನೆ ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿ ಸೃಷ್ಟಿಸುತ್ತದೆ. ಈ ಮೂಲಕ ಗ್ರಾಮೀಣ ಆರ್ಥಿಕತೆ ಉತ್ತೇಜನ ಮತ್ತು ರೈತರ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌; 90 ದಿನಗಳೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಎಂದ ಲಕ್ಷ್ಮಿ ಹೆಬ್ಬಾಳ್ಕರ್‌

90 ದಿನಗಳೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಹೆಬ್ಬಾಳ್ಕರ್‌

Laxmi Hebbalkar: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್‌ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಯ್ಕೆ ಸಮಿತಿ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Sharavathi Pumped Storage Project: ಶರಾವತಿ ಪಂಪ್ ಸ್ಟೋರೇಜ್‌ ಯೋಜನೆಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಶರಾವತಿ ಪಂಪ್ ಸ್ಟೋರೇಜ್‌ ಯೋಜನೆಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಶರಾವತಿ ಪಂಪ್ ಸ್ಟೋರೇಜ್‌ (Sharavathi Pumped Storage) ಜಲವಿದ್ಯುತ್‌ ಯೋಜನೆಯ ಕಾಮಗಾರಿಯನ್ನು ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಕರ್ನಾಟಕ ಹೈಕೋರ್ಟ್‌ (karnataka high court) ಮಂಗಳವಾರ ಮಧ್ಯಂತರ ತಡೆಯಾಜ್ಞೆ (interin stay) ನೀಡಿದೆ. ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಇನ್ನೂ ಸಿಕ್ಕಿಲ್ಲ.

ಪೊಲೀಸ್‌ ಇನ್‌ಸ್ಪೆಕ್ಟರ್‌ ವೇಷದಲ್ಲಿ ಬಂದು ನಗ- ನಗದು ದೋಚಿದವರು ಆರೆಸ್ಟ್‌

ಪೊಲೀಸ್‌ ಇನ್‌ಸ್ಪೆಕ್ಟರ್‌ ವೇಷದಲ್ಲಿ ಬಂದು ನಗ- ನಗದು ದೋಚಿದವರು ಆರೆಸ್ಟ್‌

ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಆರೋಪಿ ನಾಗೇಂದ್ರ ಎಂಬಾತ ಪಿಎಸ್‌ಐ ಸಮವಸ್ತ್ರ ಧರಿಸಿ ಅಧಿಕಾರಿಯಂತೆ ಮನೆಗೆ ನುಗ್ಗಿದ್ದ. ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದ ಈ ಗ್ಯಾಂಗ್, ಒಟ್ಟು 20 ಲಕ್ಷ ರೂಪಾಯಿ ನಗದು ಮತ್ತು 677 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿತ್ತು.

Voters List: ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ: ನಿಮ್ಮ ಹೆಸರು, ವಾರ್ಡ್‌ ಹುಡುಕಿ, ಆಕ್ಷೇಪ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ

ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ

ಮತದಾರರು ತಮ್ಮ ಹೆಸರು ಅಥವಾ ಮತದಾರರ ಚೀಟಿಯ ಎಪಿಕ್‌ ಸಂಖ್ಯೆಯೊಂದಿಗೆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಸರು ಬಿಟ್ಟು ಹೋಗಿದ್ದರೆ, ಸೇರ್ಪಡೆ ಆಗಿರದೇ ಇದ್ದರೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಲೋಪದೋಷಗಳಾಗಿದ್ದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದರೆ, ಮತ್ತೊಂದು ವಾರ್ಡ್‌ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದರೆ, ಮಾರ್ಚ್ 16ರೊಳಗೆ ಆಕ್ಷೇಪಣೆ ಸಲ್ಲಿಸಬೇಕು.

LPG Crisis: ಗ್ಯಾಸ್‌ ಸಿಲಿಂಡರ್‌ ಅಲಭ್ಯ, ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್‌

ಗ್ಯಾಸ್‌ ಸಿಲಿಂಡರ್‌ ಅಲಭ್ಯ, ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್‌

ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅಡುಗೆ ತಯಾರಿಸಲು ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಸಮಯಕ್ಕೆ ಸರಿಯಾಗಿ ಗ್ಯಾಸ್ ಲಭ್ಯವಾಗುತ್ತಿಲ್ಲ. ಸಿಲಿಂಡರ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಅನ್ನಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲು ದೇವಸ್ಥಾನದ ಮಂಡಳಿ ನಿರ್ಧರಿಸಿದೆ.

Adigas Yatra: ಅಡಿಗಾಸ್ ಯಾತ್ರಾದಿಂದ ಅಸ್ಸಾಂ- ಮೇಘಾಲಯ ಪ್ರವಾಸ: ಪ್ರಕೃತಿ ಪ್ರೇಮಿಗಳ ಬಹು ಬೇಡಿಕೆಯ ಟೂರ್

ಅಡಿಗಾಸ್ ಯಾತ್ರಾದಿಂದ ಅಸ್ಸಾಂ- ಮೇಘಾಲಯ ಪ್ರವಾಸ: ಪ್ರಕೃತಿಯಲ್ಲಿ ಒಂದಾಗಿ

ಅಡಿಗಾಸ್ ಯಾತ್ರಾ ಏ‌ರ್ಪಡಿಸುತ್ತಿರುವ ಅಸ್ಸಾಂ- ಮೇಘಾಲಯ ಪ್ರವಾಸ ಪ್ಯಾಕೇಜ್‌ಗಳು ಪ್ರಕೃತಿಪ್ರಿಯರ ಬಹು ಬೇಡಿಕೆಯ ಪ್ರವಾಸಗಳಲ್ಲಿ ಒಂದಾಗಿದೆ. ಎರಡೂ ರಾಜ್ಯಗಳು ನಿಸರ್ಗದ ಮಡಿಲಿನಲ್ಲಿರುವ, ಸುಂದರ ಗಿರಿಧಾಮ, ರಾಷ್ಟ್ರೀಯ ಉದ್ಯಾನವನ, ವನ್ಯಜೀವಿಗಳು, ಜಲಪಾತಗಳು ಇತ್ಯಾದಿಗಳನ್ನೊಳಗೊಂಡ ಚೆಲುವಿನ ನೆಲೆ. ಸುಂದರ ಅನುಭವ ನಿಮ್ಮದಾಗುವುದು ಖಾತ್ರಿ.

Loading...