ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಕರುಣೆಯಿಲ್ಲದ ಬುದ್ಧಿವಂತಿಕೆ ಸಮಾಜಕ್ಕೆ ಅಪಾಯಕಾರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಕರುಣೆಯಿಲ್ಲದ ಬುದ್ಧಿವಂತಿಕೆ ಸಮಾಜಕ್ಕೆ ಅಪಾಯ: ಮಧುಸೂದನ ಸಾಯಿ

Sadguru Sri Madhusudan Sai: ವಿದ್ಯಾಸಂಸ್ಥೆಗಳ ಮೂಲಕ ಚಾರಿತ್ರ್ಯದ ಶಕ್ತಿ ಇರುವ ದೈವೀ ಪುರುಷರನ್ನು ನಾವು ರೂಪಿಸಬೇಕು. ಶಿಕ್ಷಣ ಸುಧಾರಿಸಬೇಕಾದರೆ ಉತ್ತಮ ಶಿಕ್ಷಕರು ಬೇಕು. ಉತ್ತಮ ಶಿಕ್ಷಕರು ರೂಪುಗೊಳ್ಳಲು ಪೂರಕವಾದ ಸಂದರ್ಭ ಸಮಾಜದಲ್ಲಿ ನಿರ್ಮಾಣವಾಗಬೇಕು. ಶಿಕ್ಷಕರಿಗೆ ಉತ್ತಮ ಸಂಬಳ, ಗೌರವ ಸಿಗಬೇಕು. ಮಕ್ಕಳ ಪಾಲಿಗೆ ಶಿಕ್ಷಕರು ತಂದೆ-ತಾಯಿ ಮತ್ತು ಗುರುವೂ ಆಗಿರುತ್ತಾರೆ” ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.

ಶಿಶಿಲ-ಭೈರಾಪುರ ರಸ್ತೆ ಕಾಮಗಾರಿ: ಜಂಟಿ ಸ್ಥಳ ಪರಿಶೀಲನೆಗೆ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸೂಚನೆ

ಶಿಶಿಲ-ಭೈರಾಪುರ ರಸ್ತೆ ಕಾಮಗಾರಿ ಜಂಟಿ ಸ್ಥಳ ಪರಿಶೀಲನೆಗೆ ಸೂಚನೆ

Shishila-Byrapura road: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ನಡುವೆ ರಸ್ತೆ ಕಾಮಗಾರಿಗೆ ಸಂಬಂಧಿಸಿ ಜಂಟಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಸೂಚಿಸಿದೆ.

ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ: ರುದ್ರಪ್ಪ ಲಮಾಣಿ

ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ: ರುದ್ರಪ್ಪ ಲಮಾಣಿ

Haveri News: ಹಾವೇರಿ ಜಿಲ್ಲೆಯ ಆರು ಮಂದಿ ಶಾಸಕರು ಒಂದೇ ಕುಟುಂಬದ ಸದಸ್ಯರಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ವಿಶ್ವಾಸ ಮತ್ತು ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ರಾಜ್ಯದ ನೂತನ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

Madhugiri News: ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಕೆ.ಎನ್. ರಾಜಣ್ಣ

ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಕೆ.ಎನ್. ರಾಜಣ್ಣ

Madhugiri News: ಮಧುಗಿರಿ ತಾಲೂಕಿನ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವರು ಹಾಗೂ ಶಾಸಕ ಕೆ.ಎನ್. ರಾಜಣ್ಣ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುವ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Shravana Special 2026: ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ರೆಡಿಮೇಡ್‌ ವರಮಹಾಲಕ್ಷ್ಮೀಯರು

ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ರೆಡಿಮೇಡ್‌ ವರಮಹಾಲಕ್ಷ್ಮೀಯರು

Shravana Special 2026: ಮುಂಬರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ನಾನಾ ಬಗೆಯ ರೆಡಿಮೇಡ್‌ ವರಮಹಾಲಕ್ಷ್ಮೀಯ ಉತ್ಸವ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಬಾರಿ ಯಾವ್ಯಾವ ಬಗೆಯವು ಬಂದಿವೆ? ಈ ಬಗ್ಗೆ ಇಲ್ಲಿದೆ ವರದಿ.

'ನಾನೇಕೆ ರಾಜೀನಾಮೆ ಕೊಡಲಿ? ಜನರೇ ನನ್ನನ್ನು ಗೆಲ್ಲಿಸಿದ್ದಾರೆ': ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸುಬ್ಬಾರೆಡ್ಡಿ ಬೇಸರ; 'ಹೈಕಮಾಂಡ್ ಕೈಬಿಟ್ಟಿದೆ' ಆರೋಪ

'ನಾನೇಕೆ ರಾಜೀನಾಮೆ ಕೊಡಲಿ? ಜನರೇ ನನ್ನನ್ನು ಗೆಲ್ಲಿಸಿದ್ದಾರೆ'

ಸಚಿವ ಸ್ಥಾನ ಕೈತಪ್ಪಲು ಹೈಕಮಾಂಡ್ ಕಾರಣ ಎಂಬ ಮಾಹಿತಿ ನನಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Chief Minister D K Shivkumar) ಅವರು ನನಗೆ ಸಚಿವ ಸ್ಥಾನ ನೀಡಲು ಪ್ರಯತ್ನಿಸಿದ್ದರು. ಆದರೆ ಅಂತಿಮ ನಿರ್ಧಾರ ಬೇರೆ ರೀತಿಯಾಯಿತು ಎಂದು ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ನಾಲ್ವರು ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ: ಉಸ್ತುವಾರಿ ಸಚಿವ; ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಸಂದೇಶ

ಸಂಪುಟ ವಿಸ್ತರಣೆ ಹೈಕಮಾಂಡ್ ತೀರ್ಮಾನ; ಎಲ್ಲರೂ ಅದಕ್ಕೆ ಬದ್ಧ: ಬೈರತಿ ಸುರೇಶ್

ಜಿಲ್ಲೆಯ ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ರೈತರ ಹಿತಾಸಕ್ತಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕ್ರಮಗಳನ್ನು ವೈಜ್ಞಾ ನಿಕ ನೆಲೆಗಟ್ಟಿನಲ್ಲಿ ಕೈಗೊಳ್ಳಲಾಗುತ್ತಿದೆ

ಪ್ರತಿ ಕ್ಷೇತ್ರಕ್ಕೆ 1 ಕೋಟಿ ಬಿಡುಗಡೆ; ಬೆಳೆ ಹಾನಿ ಪ್ರದೇಶಗಳಿಗೆ ತ್ವರಿತ ವರದಿ ಸಲ್ಲಿಸಲು ಸಚಿವ ಬಿ.ಎಸ್. ಸುರೇಶ್ ಸೂಚನೆ

ಎಂಟೂ ತಾಲೂಕುಗಳಲ್ಲಿ ತೀವ್ರ ಬರ: ಕುಡಿಯುವ ನೀರು, ರೈತರ ರಕ್ಷಣೆಗೆ ಕ್ರಮ

ಕಳೆದ ಮಾರ್ಚ್ನಿಂದ ಈವರೆಗೆ ಆಗಬೇಕಿದ್ದ ಮಳೆಯ ಪೈಕಿ ಕೇವಲ ಶೇ.4.5ರಷ್ಟು ಮಾತ್ರ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಈ ವೇಳೆಗೆ 1.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಳ್ಳಬೇಕಿದ್ದರೆ, ಕೇವಲ 5650 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ನಿರ್ಲಕ್ಷ್ಯದ ಆರೋಪ; ಸರ್ಕಾರದ ವಿರುದ್ಧ ಸೀಕಲ್ ರಾಮಚಂದ್ರಗೌಡ ವಾಗ್ದಾಳಿ

ಕೆ.ಎಂ. ಸುರೇಶ್ ಗೆಲುವಿಗೆ ಬಿಜೆಪಿ ರಣಕಹಳೆ

ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಂ. ಸುರೇಶ್ ಅವರು ಪಕ್ಷದ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದಾರೆ. ಕಳೆದ ಮೂರು ದಶಕ ಗಳಿಂದ ಪಕ್ಷ ಸಂಘಟನೆಗೆ ಸೇವೆ ಸಲ್ಲಿಸಿರುವ ಅವರು ಯುವ ಮೋರ್ಚಾದಿಂದ ಆರಂಭಿಸಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ

MLA K H Puttaswamy Gowda: ಅಭಿವೃದ್ಧಿ ಮೆಚ್ಚಿ ಕೆಎಚ್‌ಪಿ ಬಣಕ್ಕೆ ಮುಖಂಡರ ಸೇರ್ಪಡೆ: ಶಾಸಕ ಪುಟ್ಟಸ್ವಾಮಿಗೌಡ

ಅಭಿವೃದ್ಧಿ ಮೆಚ್ಚಿ ಕೆಎಚ್‌ಪಿ ಬಣಕ್ಕೆ ಮುಖಂಡರ ಸೇರ್ಪಡೆ

ಕಳೆದ ಮೂರೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದ ಪ್ರೇರಿತ ರಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರು ತಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ತಿಳಿಸಿದರು. ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಜನ್ಮಭೂಮಿಯ ಅಭಿವೃದ್ಧಿಗೆ ಸರ್ಕಾರದಿಂದ ಬಹುಕೋಟಿ ರೂಪಾಯಿ ಅನುದಾನ ತಂದು ಮೂಲಸೌಕರ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ

MLA S N Subbareddy: ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ; ಪ್ರತಿಭಟನೆ ವೇಳೆ ಯುವ ಮುಖಂಡನ ಆತ್ಮಹತ್ಯೆ ಯತ್ನ ವಿಫಲ

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಗುಡಿಬಂಡೆ ಬಂದ್ ಯಶಸ್ವಿ

ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿ ದರು. ಇದೇ ವೇಳೆ ಯುವ ಕಾಂಗ್ರೆಸ್ ಮುಖಂಡ ಅಂಬರೀಶ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ತಡೆದು ಪರಿಸ್ಥಿತಿ ನಿಯಂತ್ರಿಸಿ ದರು.

Bengaluru Accident: ನೆಲಮಂಗಲ ಬಳಿ ಮಹೀಂದ್ರಾ ಥಾರ್ ಪಲ್ಟಿಯಾಗಿ ಇಬ್ಬರ ದುರ್ಮರಣ, ಮೂವರಿಗೆ ಗಂಭೀರ ಗಾಯ

ನೆಲಮಂಗಲ ಬಳಿ ಮಹೀಂದ್ರಾ ಥಾರ್ ಪಲ್ಟಿಯಾಗಿ ಇಬ್ಬರ ದುರ್ಮರಣ

Bengaluru Accident: ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ಬಳಿ ಭೀಕರ ಅಪಘಾತ ನಡೆದಿದೆ. ಸ್ನೇಹಿತನ ಹುಟ್ಟುಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಥಾರ್‌ ಜೀಪ್‌ ಗದ್ದೆಗೆ ಬಿದ್ದು, ದುರಂತ ಸಂಭವಿಸಿದೆ.

Cabinet Expansion: ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ವಿಜಯೇಂದ್ರ ಆರೋಪ

ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ: ವಿಜಯೇಂದ್ರ ಆರೋಪ

ಮಾಜಿ ಸಚಿವ ತಿಮ್ಮಾಪುರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ನೀಡಿದವರಿಗೆ ಹಾಗೂ ಪ್ರಭಾವ ಹೊಂದಿದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ದಲಿತ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ

ದಲಿತ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ

ಸಮಾಧಿ ಅಗೆಯಲು ನಿರಾಕರಿಸಿದ ದಲಿತ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಖಾಪುರ ಎಸ್.ಎಚ್.ಗ್ರಾಮದಲ್ಲಿ ನಡೆದಿದೆ. ಕುಣಿ (ಸಮಾಧಿ) ಅಗೆಯಲು ನಿರಾಕರಿಸಿದ ದಲಿತ ಕುಟುಂಬ ದವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಸವರ್ಣೀಯರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Yadgir Breaking: ಯಾದಗಿರಿ: ಬಾಡಿಯಾಳ–ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ

ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ

ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಅದರ ಪರಿಣಾಮ ಐವರು ಕಾರ್ಮಿಕರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಬ್ಬಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ; ಚಿಕ್ಕಬಳ್ಳಾಪುರ ಬಂದ್‌ಗೆ ಕೈ ಕಾರ್ಯಕರ್ತರ ಕರೆ

ಚಿಕ್ಕಬಳ್ಳಾಪುರ ಬಂದ್‌ಗೆ ಕೈ ಕಾರ್ಯಕರ್ತರ ಕರೆ; ಕಾರಣವೇನು?

ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗಿ ಅಧೀಕಾರ ಸ್ವೀಕರಿಸಿದ ಬಳಿಕ ಬರೋಬ್ಬರಿ 2 ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ಆತಂಕರಿಕವಾಗಿ ಅಸಮಾಧಾನ ಬುಗಿಲೆದಿದ್ದು, 20 ಶಾಸಕರು ಈಗಾಗಲೇ ಸಚಿವ ಸ್ಥಾನ ಮಿಸ್‌ ಆಗಿರುವ ಹಿನ್ನಲೆ ನೇರವಾಗಿ ಪಕ್ಷದ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಪ್ರಚೋದನಕಾರಿ ದ್ವೇಷ ಭಾಷಣ; ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಜೈಲು ಶಿಕ್ಷೆ

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಜೈಲು ಶಿಕ್ಷೆ!

Riyaz Parangipete: 11 ವರ್ಷಗಳ ಹಳೆಯ ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.

Chinthamani News: ಕನಂಪಲ್ಲಿಯಲ್ಲಿ ಅಕ್ರಮ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು, ಓರ್ವ ಗ್ರಾಹಕ ಬಂಧನ

ಕನಂಪಲ್ಲಿಯಲ್ಲಿ ಅಕ್ರಮ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು

ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಅಪರಾಧ ದಳದ ಕೆಂಚಾರಹಳ್ಳಿ ಪಿಎಸ್‌ಐ ಶ್ಯಾಮಲಾ ಹಾಗೂ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವರಾಜ್ ಎಸ್. ನೇತೃತ್ವದ ತಂಡ ಕನಂಪಲ್ಲಿಯಿಂದ ಕಲ್ಲಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿತು. ಪರಿಶೀಲನೆ ವೇಳೆ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದ್ದು, ದಂಧೆ ನಡೆಸುತ್ತಿದ್ದ 55 ವರ್ಷದ ಮನೆ ಮಾಲಕಿ, 32 ವರ್ಷದ ಮತ್ತೊಬ್ಬ ಮಹಿಳೆ ಹಾಗೂ ಆಶ್ರಯ ಬಡಾವಣೆ ನಿವಾಸಿ ಗ್ರಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ರಸಪ್ರಶ್ನೆ ಸ್ಪರ್ಧೆ: ಟಿಸಿಎಸ್ ಇನ್‌ಕ್ವಿಜಿಟಿವ್ 2026 ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ವಿಜೇತರು

ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ ಟಿಸಿಎಸ್

ಬೆಂಗಳೂರಿನ ಹೊಸ ಆವಿಷ್ಕಾರ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಉತ್ಸಾಹ ಪ್ರದರ್ಶಿಸಿದ ವಿದ್ಯಾರ್ಥಿಗಳು, ತಮ್ಮ ಅತ್ಯುತ್ತಮ ತಂಡದ ಕೆಲಸ ಹಾಗೂ ಚುರುಕಾದ ಜ್ಞಾನದ ಮೂಲಕ ಸೆಮಿಫೈನಲ್ಸ್‌ ನಲ್ಲಿ ಭಾಹವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಇಲ್ಲಿ ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿಜೇತ ತಂಡಗಳೊಂದಿಗೆ ಸ್ಪರ್ಧಿಸಲಿದ್ದಾರೆ.

Gubbi News: ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು

ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ

ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಉತ್ತಮ ವ್ಯಕ್ತಿತ್ವ, ಸಂಸ್ಕಾರ ಮತ್ತು ಸಮಾಜ ಮುಖಿ ಬದುಕಿನ ಅಡಿಪಾಯವಾಗಿದೆ. ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು

Bengaluru News: ಬಸ್ ಹತ್ತಲು ಬಂದ ಭಿಕ್ಷುಕನನ್ನು ಕಾಲಿನಿಂದ ಒದ್ದು ಬೀಳಿಸಿದ್ದ ಕಂಡಕ್ಟರ್‌ ಅಮಾನತು

ಭಿಕ್ಷುಕನನ್ನು ಕಾಲಿನಿಂದ ಒದ್ದಿದ್ದ ಬಿಎಂಟಿಸಿ ಕಂಡಕ್ಟರ್‌ ಸಸ್ಪೆಂಡ್‌

BMTC Conductor suspended: ​ನೆಲಮಂಗಲ ಟೋಲ್ ಬಳಿ ಬಸ್ ಹತ್ತಲು ಬಂದ ವ್ಯಕ್ತಿಗೆ ನಿರ್ವಾಹಕ ಕಾಲಿನಿಂದ ಒದ್ದು ಬೀಳಿಸಿದ ದೃಶ್ಯ ಬೈಕ್ ಸವಾರರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಿರ್ವಾಹಕನ ವಿರುದ್ಧ ಬಿಎಂಟಿಸಿ ಶಿಸ್ತುಕ್ರಮ ಕೈಗೊಂಡಿದೆ.

Gubbi News: ಕಂದಾಯ ಇಲಾಖೆ ವಿರುದ್ಧ ರೈತರು ದಿಢೀರ್ ಪ್ರತಿಭಟನೆ

ಕಂದಾಯ ಇಲಾಖೆ ವಿರುದ್ಧ ರೈತರು ದಿಢೀರ್ ಪ್ರತಿಭಟನೆ

ದಲಿತ ಮುಖಂಡ ಅದಲಗೆರೆ ಈಶ್ವರಯ್ಯ  ಮಾತನಾಡಿ, ಸುಮಾರು ಎರಡು ತಲೆ ಮಾರುಗಳಿಂದ ರೈತರು ಜಮೀನಿನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನು ದುರಾಸ್ತಿ ಮಾಡುವ ಸಂದರ್ಭದಲ್ಲಿ ಒಂದೊಂದು ಜಮೀನಿನಲ್ಲೂ ಹತ್ತು ಕುಂಟೆ ,ಇಪ್ಪತ್ತು ಕುಂಟೆ ಜಮೀನು ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದ್ದು. ಕೂಡಲೇ ದಂಡಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಯನ್ನು ಬಗೆಹರಿಸಕೊಡಬೇಕು ಎಂದರು.

SIR: ಎಸ್‌ಐಆರ್‌ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಆಗ್ರಹ

ಎಸ್‌ಐಆರ್‌ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಆಗ್ರಹ

ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಎಸ್‌ಐಆರ್‌ ಪ್ರಕ್ರಿಯೆ ಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕು. ಮತದಾನದ ಹಕ್ಕು ಸಂವಿಧಾನಬದ್ಧ ಹಕ್ಕಾಗಿದ್ದು, ಆಡಳಿತಾ ತ್ಮಕ ಲೋಪಗಳಿಂದ ಯಾರಿಗೂ ಅನ್ಯಾಯವಾಗದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು

Ruthutare scheme: ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ; ನಟಿ ರಮ್ಯಾ ರಾಯಭಾರಿ

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ ಜಾರಿ; ನಟಿ ರಮ್ಯಾ ರಾಯಭಾರಿ

ಮಹಿಳೆಯರಿಗಾಗಿ ವಿಶೇಷ ಆರೋಗ್ಯ ನೀತಿ ರೂಪಿಸಲಾಗುತ್ತಿದ್ದು, ʻಋತುತಾರೆʼ ಅಥವಾ ʻಋತುಬಂಧʼ ಎಂಬ ಹೆಸರಿನ ಯೋಜನೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

Loading...