ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gauribidanur News: ದೇವಸ್ಥಾನದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧವಿದೆ: ಪ್ರವಚನಕಾರ ಶ್ರೀ ಶ್ರೀ ಮಾಂಕಾಲ ಹರಿ ಶರ್ಮ

ದೇವಸ್ಥಾನದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧವಿದೆ

ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ, ಶ್ರೀಮರಿಗಮ್ಮ ಹಾಗೂ ಸೊಲ್ಲಾ ಪುರಮ್ಮ ಗ್ರಾಮ ದೇವತೆಗಳಿಗೆ ಮತ್ತು ದೇವಸ್ಥಾನಕ್ಕೆ ಹೆಚ್ಚಿನ ಶಕ್ತಿ ಇದ್ದು, ಭಕ್ತಾದಿಗಳ ಇಷ್ಟಾರ್ಥ ಗಳನ್ನು ನೆರವೇರಿಸುವಂತಹ ಶಕ್ತಿಯನ್ನು ಹೊಂದಿವೆ, ಈ ದೇವಸ್ಥಾನದ ಬಗೆ ನನಗೆ ಭಾವನಾತ್ಮಕ ಸಂಬಂಧವಿದೆ ಎಂದು ಪ್ರವಚನ ಕಾರರಾದ ಶ್ರೀ ಶ್ರೀ ಮಾಂಕಾಲ ಹರಿ ಶರ್ಮ ತಿಳಿಸಿದರು

Chikkaballapur News: ಎಳ್ಳಷ್ಟು ಸಹಾಯವಾದರೂ ಬೆಟ್ಟದಷ್ಟು ಕೃತಜ್ಞತೆಯ ಗುಣ ಬೆಳೆಸಿಕೊಳ್ಳಬೇಕು: ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ

ಎಳ್ಳಷ್ಟು ಸಹಾಯವಾದರೂ ಬೆಟ್ಟದಷ್ಟು ಕೃತಜ್ಞತೆಯ ಗುಣ ಬೆಳೆಸಿಕೊಳ್ಳಬೇಕು

ಒಂದು ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಒಟ್ಟು ಫಲಿತಾಂಶವನ್ನು ಅಗಲಗುರ್ಕಿ ಬಿಜಿಎಸ್ ಶಾಲೆಯ ಮಕ್ಕಳು ಪಡೆದಿದ್ದಾರೆ. 620 ಅಂಕಗಳನ್ನು 16 ಮಕ್ಕಳು ಪಡೆದಿದ್ದಾರೆ. ಇದು ತಾಲೂಕಿನ ಹೆಮ್ಮೆ ಮಾತ್ರ ವಲ್ಲ ಜಿಲ್ಲೆಯ ಹಿರಿಮೆಯಾಗಿದೆ.ಅಜ್ಞಾನದಿಂದ ಜ್ಞಾನದ ಕಡೆಗೆ ಭಯದಿಂದ ನಿರ್ಭಯದ ಕಡೆ ಮುನ್ನಡೆಸುವವರೇ ಗುರುಗಳಾಗುತ್ತಾರೆ. ಎಂದಿಗೂ ಮಕ್ಕಳನ್ನು ನಿರುತ್ಸಾಹಿಗಳನ್ನಾಗಿ ಮಾಡಬೇಡಿ

BESCOM privatization: ವಿದ್ಯುತ್ ಖಾಸಗೀಕರಣವಾದಲ್ಲಿ ಸಾಮಾಜಿಕ ನ್ಯಾಯ ಅರಣ್ಯರೋಧವಾಗಲಿದೆ: AEE ವೇಣುಗೋಪಾಲ್ ಎಚ್ಚರಿಕೆ

ವಿದ್ಯುತ್ ಖಾಸಗೀಕರಣವಾದಲ್ಲಿ ಸಾಮಾಜಿಕ ನ್ಯಾಯ ಅರಣ್ಯರೋಧವಾಗಲಿದೆ

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1902ರಲ್ಲಿ ಶಿವನಸಮುದ್ರ ದಲ್ಲಿ ವಿದ್ಯುತ್ ಕಂಡು ಹಿಡಿದಗಿನಿಂದ ಮೊದಲಾಗಿ ಇಲ್ಲಿಯವರೆಗೆ ಬೆಸ್ಕಾಂ ನೌಕರರು ಈ ಕ್ಷೇತ್ರ ದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಜನಸಂಖ್ಯೆ ಬೆಳೆದಂತೆ ನಾಗರೀಕರ ಬೇಡಿಕೆಗಳನ್ನು ಆದ್ಯತಾನುಸಾರ ಶಿರಸಾ ವಹಿಸಿ ಮಾಡಿಕೊಂಡು ಬರಲಾಗುತ್ತಿದೆ. ಇಂತಹ ಬಲಿಷ್ಠ ಕ್ಷೇತ್ರವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ

Chalavadi Narayanaswamy: ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ; ದೇವೇಗೌಡರ ಬಗ್ಗೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಯ ಮಾವು ಬೆಳೆಗಾರರು ಬೆಳೆ ನಷ್ಟ, ಬೆಲೆ ಕುಸಿತ ಹಾಗೂ ಮಾರುಕಟ್ಟೆ ಸಮಸ್ಯೆ ಗಳಿಂದ ಸಂಕಷ್ಟದಲ್ಲಿದ್ದಾರೆ. ರೈತರು ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗದೆ ಆತಂಕದಲ್ಲಿದ್ದರೂ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರಚಾರದಲ್ಲೇ ತೊಡಗಿಕೊಂಡಿದೆ.

Bengalore North University: ಶಿಕ್ಷಣದ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ದೇವರಾಜ್ ಕೆ.ಆರ್.

ಶಿಕ್ಷಣದ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿತು, ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಆತ್ಮವಿಶ್ವಾಸ, ಪರಿಶ್ರಮ ಮತ್ತು ಗುರಿಯತ್ತದ ಬದ್ಧತೆಯೇ ವಿದ್ಯಾರ್ಥಿಗಳನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುವ ಮೂಲಮಂತ್ರಗಳಾಗಿವೆ

ಕೇಂದ್ರದಿಂದ ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ಪೂರೈಕೆ; ರಾಜ್ಯ ಸರ್ಕಾರವೇ ಸರಿ ವಿತರಿಸಿಲ್ಲ ಎಂದ ಜೋಶಿ

ಕೇಂದ್ರದಿಂದ ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ಪೂರೈಕೆ: ಜೋಶಿ

Pralhad Joshi: ಮುಂಗಾರು ಹಂಗಾಮಿಗೂ ಮುನ್ನವೇ ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರವನ್ನು ಪೂರೈಸಲಾಗಿದೆ. ಮುಂಗಡ ದಾಸ್ತಾನಿಗೆ ಅನುವಾಗುವಂತೆ ಜನವರಿ-ಮಾರ್ಚ್ ಅವಧಿಯಲ್ಲೇ ಅಗತ್ಯಕ್ಕಿಂತ ಹೆಚ್ಚುವರಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಎಸ್ ಅನ್ನು ನೀಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Chalavadi Narayanaswamy: ಅವನೊಬ್ಬ ಬಫೂನ್, ಜೋಕರ್ ತರ ಆಡ್ತಿದ್ದಾನೆ": ಹೆಸರು ಹೇಳದೆ ಪ್ರದೀಪ್ ಈಶ್ವರ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ!*

ಅವನೊಬ್ಬ ಬಫೂನ್, ಜೋಕರ್ ತರ ಆಡ್ತಿದ್ದಾನೆ"

ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ ರವರ ನಿವಾಸಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಅವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಎಲ್ಲೂ ಪ್ರಸ್ತಾಪಿಸದೆ, ಅವರ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ

Corruption Free Karnataka: ಅಧಿಕಾರಿಗಳು ಲಂಚ ಕೇಳುವಂತಿಲ್ಲ; ಕಮಿಷನ್‌ 0 ಪರ್ಸೆಂಟೇಜ್‌ಗೆ ತರುತ್ತೇವೆ ಎಂದ ಸಿಎಂ ಡಿಕೆಶಿ

ಯಾವುದೇ ಅಧಿಕಾರಿಗಳು ಲಂಚ ಕೇಳುವಂತಿಲ್ಲ: ಸಿಎಂ ಎಚ್ಚರಿಕೆ

CM DK Shivakumar Meeting: ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ, ಡಿಎಫ್ಒ ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ 7 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

Chief Justice Vibhubakru: ಪರಿಸರ ಸಂರಕ್ಷಣೆ ಸಮುದಾಯದ ಅಸ್ತಿತ್ವಕ್ಕೆ ಅತ್ಯಾವಶ್ಯಕ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅಭಿಮತ

ಪರಿಸರ ಸಂರಕ್ಷಣೆ ಸಮುದಾಯದ ಅಸ್ತಿತ್ವಕ್ಕೆ ಅತ್ಯಾವಶ್ಯಕ

ಪರಿಸರ ಸಂರಕ್ಷಣೆಯು ಕೇವಲ ಇಂದಿನ ಮಹತ್ವಕಾಂಕ್ಷಿ ಅಪೇಕ್ಷೆಯಾಗಿರದೆ ಅದು ಸಮಾಜದ ಹಾಗೂ ಸಮುದಾಯದ ಅಸ್ತಿತ್ವಕ್ಕೆ  ಮೂಲಭೂತ ಅವಶ್ಯಕತೆಯಾಗಿದೆಯೆಂದು ಹೇಳಿದರು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಇತರ ಎಲ್ಲಾ ಸಮಾಜಮುಖಿ ಸಂಸ್ಥೆಗಳೊಂದಿಗೆ ಈ ಕಾರ್ಯಕ್ರಮ] ಹಮ್ಮಿಕೊಂಡಿದ್ದು ಈ ಸಮಾಜಮುಖಿ ಕಾರ್ಯಕ್ರಮವನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುವುದಾಗಿ ತಿಳಿಸಿದರು

Legislative Council member Keshav Prasad: ಮೋದಿ ಸರ್ಕಾರದ 12 ವರ್ಷದ ಸಾಧನೆ ದೇಶದ ಅಭಿವೃದ್ಧಿಗೆ ದಿಕ್ಸೂಚಿ: ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಬಣ್ಣನೆ

ಮೋದಿ ಸರ್ಕಾರದ 12 ವರ್ಷದ ಸಾಧನೆ ದೇಶದ ಅಭಿವೃದ್ಧಿಗೆ ದಿಕ್ಸೂಚಿ

2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್" ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದೆ. ಅಷ್ಟೇ ಅಲ್ಲದೆ, ದೇಶದ ಮೊದಲ ಪ್ರಧಾನಿ ನೆಹರೂ ಅವರ ಹೆಸರಿನಲ್ಲಿದ್ದ ದೀರ್ಘಕಾಲದ ಪ್ರಧಾನಿ ದಾಖಲೆಯನ್ನು ಮುರಿದು ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಿರುವ ಸಂಭ್ರಮವನ್ನು ನಾವು ದೇಶವಾಸಿಗಳಿಗೆ ತಿಳಿಸಲು ಹೆಮ್ಮೆಯಿದೆ

Chikkaballapur News: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.15ರಂದು ಬೃಹತ್ ಕಾಲ್ನಡಿಗೆ ಜಾಥಾ: ಕೆ.ಸಿ.ರಾಜಕಾಂತ್ ಹೇಳಿಕೆ

ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.15ರಂದು ಬೃಹತ್ ಕಾಲ್ನಡಿಗೆ ಜಾಥಾ

ಸಿಂಗಾಟಕದಿರೇನಹಳ್ಳಿಯ ಹಳೆಯ ಸರ್ವೇ ನಂ.67 ಹಾಗೂ ಹೊಸ ಸರ್ವೇ ನಂ.81, 82, 83, 84, 85 ಮತ್ತು 86ರಲ್ಲಿ ಸಾಗುವಳಿ ಚೀಟಿ, ಪಹಣಿ ಮ್ಯುಟೇಷನ್, ಸರ್ವೆ ಸ್ಕೆಚ್ ಹಾಗೂ ಇತರೆ ದಾಖಲೆಗಳನ್ನು ಹೊಂದಿರುವ ಬಡ ರೈತರು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ದೌರ್ಜನ್ಯದಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುತ್ತಿಲ್ಲ

Chikkaballapur News: ಮೋದಿ ಸರ್ಕಾರದ ಸಾಧನೆ ಜನಜನಿತವಾಗಲಿ; ಜಿಲ್ಲೆಯ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ದೊರೆಯಲಿ: ಸೀಕಲ್ ರಾಮಚಂದ್ರಗೌಡ

ಮೋದಿ ಸರ್ಕಾರದ ಸಾಧನೆ ಜನಜನಿತವಾಗಲಿ

ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದ ವಿರುದ್ಧವೇ ಬಿಜೆಪಿ ಜನ್ಮ ತಾಳಿದ್ದು, ಇಂದು ದೇಶದ ಶೇ.75 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಬೆಂಬಲಿತ ಸರ್ಕಾರಗಳು ಆಡಳಿತ ನಡೆಸುತ್ತಿವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮಾದರಿಯನ್ನು ದೇಶಕ್ಕೆ ನೀಡಿದ್ದು, ಈಗ ಮೋದಿ ಮಾದರಿಯ ಆಡಳಿತವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ

Guarantee schemes: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಸಬೇಕು: ಸಿಎಂ ಸೂಚನೆ

ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಕೆ ಕಡ್ಡಾಯ: ಸಿಎಂ

ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆಯೇ ಇಲ್ಲವೇ ಎಂದು ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಎಲ್ಲಾ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸಬೇಕಾಗಿದೆ. ನಾವು ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಯಾರನ್ನೂ ತೆಗೆದುಹಾಕುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

Doddaballapur News: ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ಸಾವು

ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ಸಾವು

ದೊಡ್ಡಬಳ್ಳಾಪುರದಲ್ಲಿ ದುರ್ಘಟನೆ ನಡೆದಿದೆ. ಶನಿವಾರ ಸಂಜೆ ಮಕ್ಕಳು ಕೃಷಿ ಹೊಂಡದ ಪಕ್ಕದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಕೃಷಿ ಹೊಂಡಕ್ಕೆ ಆಯತಪ್ಪಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಕೃಷಿ ಹೊಂಡಕ್ಕೆ ಸೂಕ್ತ ರೀತಿಯಲ್ಲಿ ಬೇಲಿ ನಿರ್ಮಿಸದ ಕಾರಣ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ನೆಹರು ಮೊದಲ ಪ್ರಧಾನಿ ನಿಜ, ಆದ್ರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ

ನೆಹರು ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಆಗಿರಲಿಲ್ಲ: ಛಲವಾದಿ

Chalavadi Narayanaswamy: ಪ್ರಧಾನಿ ಮೋದಿ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ದೀರ್ಘಕಾಲ ಆಳಿದ ದಾಖಲೆ ಹೊಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್‍ನವರು ಗೌರವಿಸುವುದನ್ನು ಕಲಿಯಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

Bengaluru Rains: ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ

ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ; ಹಲವೆಡೆ ಟ್ರಾಫಿಕ್ ಜಾಮ್‌

ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29° ಸೆ. ಮತ್ತು 20° ಸೆ. ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Mandya News: ಮಂಡ್ಯದಲ್ಲಿ ಘೋರ ಘಟನೆ; ನೀರಿನ ಸಂಪ್‌ಗೆ ಬಿದ್ದು 2 ವರ್ಷದ ಮಗು ಸಾವು

ಮಂಡ್ಯದಲ್ಲಿ ಘೋರ ಘಟನೆ; ನೀರಿನ ಸಂಪ್‌ಗೆ ಬಿದ್ದು 2 ವರ್ಷದ ಮಗು ಸಾವು

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗು ಸಂಪ್‌ಗೆ ಬಿದ್ದು ಮೃತಪಟ್ಟಿದೆ. ಗ್ರಾಮದ ಹರೀಶ್ ಮತ್ತು ಸುಷ್ಮಾ ದಂಪತಿ ಪುತ್ರ ಮೃತಪಟ್ಟಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

PES University: ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಸಹಯೋಗಕ್ಕೆ ಇ-ಗವ್ ಗ್ಲೋಬಲ್ ಜತೆ ಪಿಇಎಸ್ ವಿಶ್ವವಿದ್ಯಾಲಯ ಒಪ್ಪಂದ

ಇ-ಗವ್ ಗ್ಲೋಬಲ್ ಜತೆ ಪಿಇಎಸ್ ವಿಶ್ವವಿದ್ಯಾಲಯ ಒಪ್ಪಂದ

PES University: ಪಿಇಎಸ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ನಾವೀನ್ಯತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಸಂಶೋಧನೆ, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯಲ್ಲಿ ಸಹಯೋಗಕ್ಕಾಗಿ ಫೈವ್ ಥ್ರೆಡ್ಸ್ ಫೌಂಡೇಶನ್, ಇ-ಗವ್ ಗ್ಲೋಬಲ್ ಜತೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಕೆಲಸಕ್ಕಲ್ಲ, ಮಾವಿನ ಹಣ್ಣಿನ ರುಚಿ ಸವಿಯಲು ಸಂಜೆ 4 ಗಂಟೆಗೆ ಆಫೀಸ್‌ಗೆ ಎಂಟ್ರಿ ಕೊಟ್ಟ ಉದ್ಯೋಗಿ

ಮ್ಯಾಂಗೋ ಫೆಸ್ಟಿವಲ್‌ಗಾಗಿ 4 ಗಂಟೆಗೆ ಕಚೇರಿಗೆ ಆಗಮಿಸಿದ ಗೂಗಲ್ ಉದ್ಯೋಗಿ

Viral Video: ಗೂಗಲ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮ್ಯಾಂಗೋ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಉದ್ಯೋಗಿಯೊಬ್ಬರು ಸಂಜೆ 4 ಗಂಟೆಗೆ ಕಚೇರಿಗೆ ಧಾವಿಸಿದ್ದಾರೆ. ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯೂ ಮಾವಿನ ಹಣ್ಣಿನ ಹಬ್ಬ ಆಯೋಜಿಸಲಾಗಿತ್ತು. ಉದ್ಯೋಗಿಯೊಬ್ಬರು ಈ ಉತ್ಸವದಲ್ಲಿ ಭಾಗವಹಿಸಲು ತಮ್ಮ ಕಚೇರಿಗೆ ಸಂಜೆ ಭೇಟಿ ನೀಡಿದ್ದಾರೆ.

Smrti Academy: ಸ್ಮೃತಿ ಅಕಾಡೆಮಿ ಮಕ್ಕಳಿಗೆ ಸ್ಫೂರ್ತಿ ತುಂಬಿದ ಸಂಗಮೇಶ್‌ ಉಪಾಸೆ

ಸ್ಮೃತಿ ಅಕಾಡೆಮಿ ಮಕ್ಕಳಿಗೆ ಸ್ಫೂರ್ತಿ ತುಂಬಿದ ಸಂಗಮೇಶ್‌ ಉಪಾಸೆ

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಹುಸ್ಕೂರ್‌ನಲ್ಲಿರುವ ಸ್ಮೃತಿ ಅಕಾಡೆಮಿ ಶಾಲೆಯಲ್ಲಿ ಶನಿವಾರ ನಡೆದ, ʼಸ್ಮೃತಿ ಕನೆಕ್ಟ್‌ ವಿತ್‌ ಅಚೀವರ್ಸ್‌ʼ ಕಾರ್ಯಕ್ರಮದಲ್ಲಿ ಕೆಎಎಸ್‌ ಅಧಿಕಾರಿ ಸಂಗಮೇಶ್‌ ಉಪಾಸೆ ಅವರು ಮಾತನಾಡಿದ್ದು, ಯಾವುದೇ ರಂಗದಲ್ಲಾದರೂ, ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

Pravasi Prapancha: ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ

ರ‍್ಯಾಡಿಸನ್ ಬ್ಲೂ ಏಟ್ರಿಯಾ: 3 ದಶಕಗಳ ಆತಿಥ್ಯ ಪರಂಪರೆ

Radisson Blu Atria: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಹೊಟೇಲ್‌ಗಳು ಕೇವಲ ಕಟ್ಟಡಗಳಲ್ಲ. ಅವು ಈ ನಗರದ ಬೆಳವಣಿಗೆಯ ಕಥೆಯ ಭಾಗವಾಗಿವೆ. ಕೆಲವು ಹೊಟೇಲ್‌ಗಳು ಕೇವಲ ಅತಿಥಿಗಳಿಗೆ ಆಹಾರ ಮತ್ತು ಕೊಠಡಿಗಳನ್ನು ನೀಡುವ ಸರಳ ಆತಿಥ್ಯ ತಾಣಗಳಲ್ಲ, ಅವು ಒಂದು ತಲೆಮಾರಿನ ನೆನಪುಗಳನ್ನು ಸಂಗ್ರಹಿಸಿಟ್ಟಿರುವ ಮ್ಯೂಸಿಯಂಗಳಂತೆ, ಇತಿಹಾಸದ ಕೊಂಡಿಯಂತೆ ನಗರದೊಂದಿಗೆ ಬೆಸೆದುಕೊಂಡಿರುತ್ತವೆ. ಬೆಂಗಳೂರಿನ ಹೃದಯ ಭಾಗದ ಪ್ಯಾಲೇಸ್ ರಸ್ತೆಯಲ್ಲಿರುವ ರ‍್ಯಾಡಿಸನ್ ಬ್ಲೂ ಏಟ್ರಿಯಾ ಅಂಥ ಅಪರೂಪದ ಪಂಚತಾರಾ ಹೊಟೇಲ್ ಗಳಲ್ಲೊಂದು.

Bengaluru Accident: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ; ಶಾಲಾ ಬಸ್‌ ಹರಿದು ಮಗಳ ಕಣ್ಣೆದುರೇ ತಾಯಿ ಸಾವು!

ಬೆಂಗಳೂರಿನಲ್ಲಿ ಶಾಲಾ ಬಸ್‌ ಹರಿದು ಮಹಿಳೆ ಸಾವು

ಬೆಂಗಳೂರಿನಲ್ಲಿ ಮಾರತ್ತಹಳ್ಳಿಯಿಂದ ಸಿದ್ದಾಪುರ ಕಡೆಗೆ ತಾಯಿ ಹಾಗೂ ಮಗಳು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ರಸ್ತೆ ಗುಂಡಿಯಿಂದ ಸ್ಕೂಟರ್ ಸ್ಕಿಡ್ ಆಗಿದ್ದರಿಂದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆ ಬಂದ ಶಾಲಾ ಬಸ್‌ ಹರಿದು ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Kapu MLA Gurme Suresh Shetty: ಬಡತನದ ಬೇಗೆಯಿಂದ ವಿಧಾನಸೌಧದ ಮೆಟ್ಟಿಲವರೆಗೆ: ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಗುರ್ಮೆ ಸುರೇಶ್ ಶೆಟ್ಟಿ ಅವರ ಆರಂಭಿಕ ಜೀವನ ಕಷ್ಟದಾಯಕವಾಗಿತ್ತು. ಊರಿನಲ್ಲೊಂದು ಸಣ್ಣ ಹುಲ್ಲಿನ ಮನೆ. ಮನೆಯಲ್ಲಿ ನಾಲ್ಕು ಜನ ಅಕ್ಕ-ತಂಗಿಯರು ಹಾಗೂ ತಾಯಿ. ತಂದೆಯ ನೆರಳಿಲ್ಲದ ಆ ಕುಟುಂಬಕ್ಕೆ ಇವರೇ ದೊಡ್ಡ ಮಗ. ಕಾಲೇಜಿಗೆ ಸೇರಲು ಕೇವಲ 130 ರುಪಾಯಿ ಫೀಸ್ ಕಟ್ಟಲಾ ಗದೆ, ಕೇವಲ ಒಂದು ಜತೆ ಬಟ್ಟೆಯನ್ನು ಕೈಯಲ್ಲಿ ಹಿಡಿದು ಬದುಕನ್ನು ಹುಡುಕುತ್ತಾ ದೂರದ ಬಳ್ಳಾರಿಗೆ ರೈಲು ಹತ್ತಿದವರು ಸುರೇಶ್ ಶೆಟ್ಟಿ.

ಮತ್ತೆ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ; ಏರ್ಪೋರ್ಟ್‌ ರೋಡ್‌ನಲ್ಲಿ ಡ್ರಾಫ್ಟಿಂಗ್‌

ಮತ್ತೆ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ; ತನಿಖೆ ಶುರು

ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮತ್ತೆ ಸುದ್ದಿಯಾಗಿದ್ದಾರೆ. ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ರನ್-ವೇ) ರಸ್ತೆಯಲ್ಲಿ ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ ಎನ್ನಲಾಗಿದೆ.

Loading...