ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಒಣಗುತ್ತಿರುವ ಬೆಳೆ, ಅನ್ನದಾತ ಕಂಗಾಲು

ಒಣಗುತ್ತಿರುವ ಬೆಳೆ, ಅನ್ನದಾತ ಕಂಗಾಲು

ಭೂಮಿಯನ್ನು ಹಸನುಗೊಳಿಸಿ, ಸಾಲ-ಸೋಲ ಮಾಡಿ ಬೀಜ-ಗೊಬ್ಬರ ಹಾಕಿ ಬಿತ್ತನೆ ಮಾಡಿದ ಕೃಷಿಕರು ಈಗ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್ ಆರಂಭದಲ್ಲಿ ಬಿದ್ದ ಅಲ್ಪ-ಸ್ವಲ್ಪ ಮಳೆಯನ್ನು ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ, ಹತ್ತಿ ಇತ್ಯಾದಿ ಬೀಜ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದರು.

ಕನಸಿನ ಮನೆಗೆ ಎಂ.ಬಿ.ಪಾಟೀಲ್ ಹೆಸರಿಟ್ಟ ರೈತ

ಕನಸಿನ ಮನೆಗೆ ಎಂ.ಬಿ.ಪಾಟೀಲ್ ಹೆಸರಿಟ್ಟ ರೈತ

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಮಲ್ಲಯ್ಯ, ಬಸಯ್ಯ ಹಾಗೂ ಚಂದ್ರವ್ವ ಎಂಬ 30ಕ್ಕೂ ಹೆಚ್ಚು ಜನ ಇರುವ ಅವಿಭಕ್ತ ಕುಟುಂಬವು ವಿಜಯಪುರದ ರಾಜಕುಮಾರ್ ಬಡಾವಣೆಯಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸ್ವಂತ ಮನೆಗೆ ಸಚಿವ ಎಂ.ಬಿ.ಪಾಟೀಲರ ಹೆಸರನ್ನು ಇಡುವ ಮೂಲಕ ತಮ್ಮ ಭೂಮಿಗೆ ನೀರುಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಡೀಲ್‌ ಮಾಡ್ಕೊಂಡರೆ ಜೋಕೆ, ಪೊಲೀಸರಿಗೆ ಡಿಕೆ ಎಚ್ಚರಿಕೆ

ಡೀಲ್‌ ಮಾಡ್ಕೊಂಡರೆ ಜೋಕೆ, ಪೊಲೀಸರಿಗೆ ಡಿಕೆ ಎಚ್ಚರಿಕೆ

ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಈ ಇಬ್ಬರಿಂದ ನಮ್ಮ ರಾಜ್ಯ ಹಾಗೂ ದೇಶ ನೆಮ್ಮದಿ ಯಾಗಿ ಬದುಕಲು ಸಾಧ್ಯವಾಗುತ್ತಿದೆ. ಸಾಧನೆ ಸಾಮರ್ಥ್ಯಕ್ಕಿಂತ ನಿಮ್ಮ ಗುರಿ ನಿರ್ಧಾರ ಮಾಡಿದಾಗ ಜಯ ನಿಮ್ಮದಾಗಲಿದೆ ಎಂದರು. ನಮ್ಮ ಪೊಲೀಸ್ ಇಲಾಖೆಗೆ ದೇಶದ ದಕ್ಷ ಇಲಾಖೆ ಎಂದು ಹೆಸರು ಪಡೆದಿದೆ. ಪೊಲೀಸ್ ಸಿಬ್ಬಂದಿಗಳ ಪರಿಶ್ರಮ, ನಿಷ್ಠೆ, ಕಾರ್ಯಕ್ಷಮತೆಯಿಂದ ಈ ಹೆಸರು ಬಂದಿದೆ.

ಅಕ್ಟೋಬರ್‌ʼನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಈಶ್ವರ್ ಖಂಡ್ರೆ

ಅಕ್ಟೋಬರ್‌ʼನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಈಶ್ವರ್ ಖಂಡ್ರೆ

ರಾಜ್ಯದ ಬಹುತೇಕ ಗ್ರಾಮ ಪಂಚಾಯತ್‌ಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಕೆಲವು ಪಂಚಾಯತ್‌ಗಳ ಮೇಲ್ದರ್ಜೆಯಿಂದಾಗಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕಾಗಿದೆ. ಜುಲೈ, ಆಗಸ್ಟ್ ನಲ್ಲಿ ಈ ಪ್ರಕ್ರಿಯೆ ಮುಗಿಸಿ, ಮೀಸಲು ನಿರ್ಧರಿಸಿ, ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗುವುದು. ಚುನಾವಣಾ ಆಯೋಗ 45 ದಿನಗ ಳಲ್ಲಿ ಚುನಾವಣೆ ನಡೆಸುತ್ತದೆ

ಜಮೀರ್‌ʼಗೆ ʼಲೋಕಾʼ ಸಂಕಷ್ಟ

ಜಮೀರ್‌ʼಗೆ ʼಲೋಕಾʼ ಸಂಕಷ್ಟ

ಜಮೀರ್ ವಾರ್ಷಿಕ ಆದಾಯಕ್ಕಿಂತ ಸುಮಾರು 25 ಕೋಟಿ ರು. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಗಳಿಸಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ರಾಜ್ಯ ಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ (ಅಭಿಯೋಜನೆ)ಗೆ ಅನುಮತಿ ನೀಡಿದರೆ, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಜಮೀರ್ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಈ ಪ್ರಕರಣ ಈಗ ರಾಜ್ಯಪಾಲರ ಅಂಗಳಕ್ಕೆ ಬಂದಿದೆ ಎಂದು ರಾಜ್ಯ ಗೃಹ ಇಲಾಖೆಯ ಮೂಲಗಳು ತಿಳಿಸಿವೆ

ಮತ್ತೆ ದುರ್ಬಲಗೊಂಡ ಮುಂಗಾರು; ದಕ್ಷಿಣ ಕನ್ನಡ, ಉಡುಪಿ ಕೊಡಗಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ದಕ್ಷಿಣ ಕನ್ನಡ, ಉಡುಪಿ ಕೊಡಗಿಗೆ ಯೆಲ್ಲೋ ಅಲರ್ಟ್‌ ಘೋಷಣೆ

Karnataka Weather: ಜೂನ್‌ನಲ್ಲಿ ದುರ್ಬಲಗೊಂಡಿದ್ದ ಮುಂಗಾರು ಜುಲೈನಲ್ಲಿ ಆರ್ಭಟಿಸಿತ್ತು, ಆದರೆ ಇದೀಗ ಮತ್ತ ರಾಜ್ಯಾದ್ಯಂತ ಮುಂಗಾರು ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಭಾಗದಲ್ಲಿ ಕಳೆದ ವಾರವರೆಲ್ಲ ಭಾರಿ ಗಾಳಿ-ಮಳೆ ಆಗುತ್ತಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ.

Byrathi Suresh conducts reality check on BMTC bus: ಬಿಎಂಟಿಸಿಯಲ್ಲಿ ಸಂಚರಿಸಿ ಬೈರತಿ ಸುರೇಶ್ ರಿಯಾಲಿಟಿ ಚೆಕ್: ಮಾಸ್ಕ್ ಧರಿಸಿ ಬಸ್ ಸಂಚಾರ ವ್ಯವಸ್ಥೆಯ ಅವಲೋಕನ

ಬಿಎಂಟಿಸಿಯಲ್ಲಿ ಸಂಚರಿಸಿ ಬೈರತಿ ಸುರೇಶ್ ರಿಯಾಲಿಟಿ ಚೆಕ್

ಮಾಸ್ಕ್ ಹಾಕಿ ಪ್ರಯಾಣ ಮಾಡಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡ ಕ್ಟರ್ ಗೆ ಆಗಲೀ ಇವರು ಸಚಿವರು ಎಂಬುದು ಗಮನಕ್ಕೆ ಬರಲಿಲ್ಲ. ಪ್ರತಿಯೊಂದು ಬಸ್ ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕ ರೊಂದಿಗೆ ಬಸ್ ಸಂಚಾರದ ಬಗ್ಗೆ ವಿಚಾರಿಸಿ ದರು.

ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯಲು ಪ್ರಜಾಸೇವೆ ಇಲಾಖೆ: ಸಿಎಂ

ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯಲು ಪ್ರಜಾಸೇವೆ ಇಲಾಖೆ: ಸಿಎಂ

CM DK Shivakumar: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ನಮ್ಮಭಿಮಾನದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್‌, ನನ್ನ ಹಾಗೂ ಪರಮೇಶ್ವರ್ ಅವರ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೀರಿ. ಅದರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಸಮಿತಿಯ ವರದಿ ಬಂದ ಮೇಲೆ ಕ್ಯಾಬಿನೆಟ್ ಅಲ್ಲಿ ಚರ್ಚೆ ನಡೆಸಿ ನಂತರ ನಿಮ್ಮ ಜತೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ 40 ದಿನದಿಂದ ಕಾಣೆ; ಡಿಕೆಶಿ ಹುಡುಕುತ್ತಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಲೇವಡಿ

ರಾಹುಲ್‌ ಗಾಂಧಿ 40 ದಿನದಿಂದ ಕಾಣೆ: ಪ್ರಲ್ಹಾದ್‌ ಜೋಶಿ

Pralhad Joshi: ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ 40 ದಿನ ಕಳೆದರೂ ಪೂರ್ಣ ಸಚಿವ ಸಂಪುಟ ರಚನೆ ಮಾಡಲಾಗಿಲ್ಲ. ರಾಹುಲ್‌ ಗಾಂಧಿಗಾಗಿ ಕಾಯುತ್ತಿದ್ದಾರೆ. ಆದರೆ, ಅವರು ನೋಡಿದರೆ ಕಾಣೆಯಾಗಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ ಮಾಡಿದ್ದಾರೆ.

Indi News: ಜು.13-14ರವರೆಗೆ ಶ್ರೀಮಾತಾ ದುರ್ಗಾದೇವಿಯ ಜಾತ್ರೆ ಅದ್ದೂರಿ ಆಚರಣೆ

ಜು.13-14ರವರೆಗೆ ಶ್ರೀಮಾತಾ ದುರ್ಗಾದೇವಿಯ ಜಾತ್ರೆ ಅದ್ದೂರಿ ಆಚರಣೆ

ನವಮಿ ಮಂಗಲ ಕಾರ್ಯಾಲಯದ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜು.13ರಂದು ರಾತ್ರಿ ಮರಾಠಿ ಕಲಾಪತ್ರ ಕೋಲ್ಹಾಪೂರ ಇವರಿಂದ ಮನಂರಜಾ ಕಾರ್ಯ ಕ್ರಮ ಮತ್ತು ಜು.14 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀದುರ್ಗಾಮಾತೆಗೆ ಮಹಾ ಮಂಗಳಾರತಿ , ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಧ್ಯಪ್ರದೇಶ, ರಾಜಸ್ಥಾನ, ಅಂತರಾಷ್ಟ್ರೀಯ ಕಲಾವಿದ ರಿಂದ ಹಾಗೂ ಕರ್ನಾಟಕ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗುವವು,

S. Janaki: ನಾಳೆ ಸಂಜೆ ಮೈಸೂರಿನಲ್ಲಿ ಎಸ್‌. ಜಾನಕಿ ಅಂತ್ಯಸಂಸ್ಕಾರ; ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ನಾಳೆ ಸಂಜೆ ಮೈಸೂರಿನಲ್ಲಿ ಎಸ್‌. ಜಾನಕಿ ಅಂತ್ಯಸಂಸ್ಕಾರ

S Janaki's funeral: ತಮ್ಮ ಅಂತ್ಯಸಂಸ್ಕಾರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನಡೆಯಬೇಕು ಎಂಬುದು ಸ್ವತಃ ಎಸ್. ಜಾನಕಿ ಅವರ ಆಸೆಯಾಗಿತ್ತು. ಅವರ ಆ ಇಚ್ಛೆಯಂತೆಯೇ ಅವರ ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ.

ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ: ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ

ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಆಯುರ್ವೇದದ ಪ್ರಕಾರ ಮನುಷ್ಯನ ದೇಹವು ವಾತ, ಪಿತ್ತ ಮತ್ತು ಕಫ ಎಂಬ ಮೂರು ಮೂಲ ಧಾತುಗಳ ಮೇಲೆ ನಿಂತಿದೆ

Chinthamani News: ವಯೋನಿವೃತ್ತ ವೆಂಕಟಚಲಪತಿ ಎನ್.ದಂಪತಿಗೆ ಗಣ್ಯರಿಂದ ಆತ್ಮೀಯ ಸನ್ಮಾನ

ಮೂರು ದಶಕಗಳ ಸಾರ್ಥಕ ಸೇವೆಗೆ ಗೌರವದ ವಿದಾಯ

1986ರಿಂದ 1992ರವರೆಗೆ ದಿನಸಿ ಅಂಗಡಿ ಹಾಗೂ ಕಡಲೆಕಾಯಿ ವ್ಯಾಪಾರ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅವರು, 1992ರ ಆಗಸ್ಟ್ 29ರಂದು ಶಿಡ್ಲಘಟ್ಟ ತಾಲೂಕಿನ ಕ್ಯಾಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದರು. 1998ರ ಜೂನ್ 22ರಂದು ಬುರುಡಗುಂಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸೇವೆ ಮುಂದು ವರಿಸಿದರು.

Chikkaballapur News: ದೇಶದ ಮೊದಲ ಅಂತಾರಾಷ್ಟ್ರೀಯ ಎಂಡೋಸ್ಕೋಪಿಕ್–ರೋಬೋಟಿಕ್ ಶಸ್ತ್ರಚಿಕಿತ್ಸಾ ಸಮ್ಮೇಳನಕ್ಕೆ ಚಾಲನೆ

ಪರೋಪಕಾರ ಸೇವೆಗೆ ಶ್ರೀ ಮಧುಸೂಧನ್ ಸಾಯಿ ಆಸ್ಪತ್ರೆ ಮಾದರಿ

ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಆಶ್ರಯದಲ್ಲಿ, ಮಣಿಪಾಲ್ ಆಸ್ಪತ್ರೆ ಹಾಗೂ ಎಸ್‌ಎಸ್ ಇನ್ನೋ ವೇಷನ್ಸ್ ಸಹಯೋಗದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾರತ, ಗ್ರೀಸ್, ಅಮೆರಿಕ, ಚೀನಾ, ಬ್ರೆಜಿಲ್, ಉಕ್ರೇನ್, ಜರ್ಮನಿ ಹಾಗೂ ವಿಯೆಟ್ನಾಂ ಸೇರಿದಂತೆ ಹಲವು ರಾಷ್ಟ್ರಗಳ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು

ಹಾಡು ನಿಲ್ಲಿಸಿದ ʻಕೋಗಿಲೆʼ; ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

Singer S. Janaki: ಖ್ಯಾತ ಗಾಯಕಿ ಎಸ್‌.ಜಾನಕಿ ಅವರು (88) ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಶನಿವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಇವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಸಿನಿರಸಿಕರನ್ನು ರಂಜಿಸಿದ್ದಾರೆ.

Actress Haripriya & Actor Vashishta Simha: 18ನೇ ಈಶ ಗ್ರಾಮೋತ್ಸವಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ಆರ್‌ಜೆ ಅಮಿತ್ ಚಾಲನೆ

ಈಶ ಗ್ರಾಮೋತ್ಸವದಲ್ಲಿ ಭಾಗಿ: ಶಾಲಾ ದಿನಗಳ ಸ್ಮರಿಸಿದ ನಟಿ ಹರಿಪ್ರಿಯಾ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈಶ ಗ್ರಾಮೋತ್ಸವವು ಅತ್ಯುತ್ತಮ ಉಪಕ್ರಮವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರೇ. ಎಲ್ಲ ತಂಡಗಳಿಗೂ ಶುಭವಾಗಲಿ ಎಂದು ಹರಿಪ್ರಿಯಾ ಹಾರೈಸಿದರು.

VAO Recruitment 2026: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನೇಮಕಾತಿ ಕುರಿತ ಮಾಹಿತಿ ಇಲ್ಲಿದೆ

572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

village administrative officer recruitment 2026: 572 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Pravasi Prapancha: ಧರೆಗಿಳಿದ ಸೀತಾರಾಮ; ರಾಮನಗರದ ಚನ್ನಮಾನಹಳ್ಳಿಯ ಶ್ರೀ ಸೀತಾರಾಮಚಂದ್ರ ದೇವಾಲಯ

ಗಮನ ಸೆಳೆವ ಚನ್ನಮಾನಹಳ್ಳಿಯ ಸೀತಾರಾಮಚಂದ್ರ ದೇವಾಲಯ

ರಾಮನಗರದ ಚನ್ನಮಾನಹಳ್ಳಿಯಲ್ಲಿ ನಿರ್ಮಿಸಲ್ಪಟ್ಟ ಈ ಶ್ರೀ ಸೀತಾರಾಮಚಂದ್ರ ದೇವಾಲಯವು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಂತ ಸುಂದರ ಹಾಗೂ ವೈಭವಯುತ ಕಲಾಕೃತಿಯಾಗಿ ಮೂಡಿಬರಲು ದೇಶದ ಹೆಸರಾಂತ ತಜ್ಞರು, ಅನುಭವಿ ಸ್ಥಪತಿಗಳು, ಶಿಲ್ಪಿಗಳು ಮತ್ತು ಚಿತ್ರಕಲಾವಿದರು ಶ್ರಮಿಸಿದ್ದಾರೆ. ತಮಿಳುನಾಡು ಸರಕಾರದ ಪ್ರಸಿದ್ಧ ಸ್ಥಪತಿಗಳಾದ, ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತಯ್ಯ ಸ್ಥಪತಿಗಳ ಉನ್ನತ ನೇತೃತ್ವದಲ್ಲಿ ಚನ್ನಮಾನಹಳ್ಳಿಯ ಈ ದೇವಾಲಯದ ಸಂಪೂರ್ಣ ವಿನ್ಯಾಸ ನೆರವೇರಿತು.

ಮಧುಗಿರಿ ರೈಲ್ವೆ ನಿಲ್ದಾಣ, ಸರಕು ಸಾಗಾಣಿಕೆ ವಿಭಾಗದ ಕಾಮಗಾರಿಗೆ ಸಚಿವ ವಿ. ಸೋಮಣ್ಣ, ಶಾಸಕ ಕೆ.ಎನ್. ರಾಜಣ್ಣ ಶಂಕುಸ್ಥಾಪನೆ

ಮಧುಗಿರಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ

Madhugiri News: ಮಧುಗಿರಿ ತಾಲೂಕಿನ ಜನತೆಯ ಬಹುಬೇಡಿಕೆಯಾಗಿದ್ದ ಮಹತ್ವಾಕಾಂಕ್ಷೆ ಯೋಜನೆ ತುಮಕೂರು-ರಾಯದುರ್ಗ ರೈಲ್ವೆ ಹೊಸ ಮಾರ್ಗದ ಮಧುಗಿರಿ ರೈಲ್ವೆ ನಿಲ್ದಾಣ ಹಾಗೂ ಸರಕು ಸಾಗಾಣಿಕೆ ವಿಭಾಗದ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಶಂಕುಸ್ಥಾಪನೆ ನೆರವೇರಿಸಿದರು.

ನಟ ಶಿವರಾಜ್ ಕುಮಾರ್ ಜನ್ಮದಿನಕ್ಕೆ ಶುಭ ಕೋರಿದ ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು

ನಟ ಶಿವರಾಜ್ ಕುಮಾರ್ ಜನ್ಮದಿನಕ್ಕೆ ಶುಭ ಕೋರಿದ ಸುಬ್ರಹ್ಮಣ್ಯ ಹೆಬ್ಬಾಗಿಲು

Shivarajkumar Birthday: ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಕನ್ನಡಿಗರ ಕಣ್ಮಣಿಯಾಗಿರುವ 'ಹ್ಯಾಟ್ರಿಕ್ ಹೀರೋ' ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮ ದಿನಾಚರಣೆಯ ಸಂಭ್ರಮಕ್ಕೆ ಶುಭ ಕೋರುತ್ತಾ, ಅವರೊಂದಿಗಿನ ಕಳೆದ ಒಂದು ದಶಕದ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Mangaluru News: ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ; ಮಂಗಳೂರಿನಲ್ಲಿ ಕಂಡಕ್ಟರ್‌ ಇರ್ಫಾನ್‌ ಅರೆಸ್ಟ್‌

ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ; ಕಂಡಕ್ಟರ್‌ ಅರೆಸ್ಟ್‌

ಬಸ್‌ನಲ್ಲಿ ವಿದ್ಯಾರ್ಥಿನಿಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ಮನೆ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್​​ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಶಿಕ್ಷಕಿಯರು ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ನಾಲ್ವರ ವಿರುದ್ಧ ಎಫ್‌ಐಆರ್‌

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ 8ನೇ ತರಗತಿಯ ಮಧುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಳು. ವಿದ್ಯಾರ್ಥಿನಿಗೆ ಶಾಲೆಯಲ್ಲಿ ಶಿಕ್ಷಕಿಯರು ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಕೇಸ್‌ ದಾಖಲಾಗಿದೆ.

375 ಕೋಟಿ ಮೌಲ್ಯದ ಮಾದಕ ವಸ್ತುಗಳ ವಶ; ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರ ತಂಡಕ್ಕೆ 10 ಲಕ್ಷ ನಗದು ಬಹುಮಾನ ಘೋಷಿಸಿದ ಸಿಎಂ

ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರ ತಂಡಕ್ಕೆ 10 ಲಕ್ಷ ನಗದು ಬಹುಮಾನ: ಸಿಎಂ

CM DK Shivakumar: ಡ್ರಗ್ಸ್ ಜಾಲವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಸರ್ಕಾರ 10 ಲಕ್ಷದ ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಶನಿವಾರ ನಡೆದ ರಾಜ್ಯದ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್‌ಗಳು ಹಾಗೂ 75 ಬೊಲೆರೋ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

Kambala at Mysuru Dasara: ಮೈಸೂರು ದಸರಾ ಉತ್ಸವದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದ ಎಚ್‌ಡಿಕೆ

ಮೈಸೂರು ದಸರಾದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದ ಎಚ್‌ಡಿಕೆ

ಕರಾವಳಿಯ ಕಂಬಳವನ್ನು ಮೈಸೂರು ದಸರಾದಲ್ಲಿ ಆಯೋಜನೆ ಮಾಡುವ ವಿಚಾರವಾಗಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ಸಂಸದ ಯದುವೀರ್‌ ಒಡೆಯರ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Loading...