ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Janardhana Reddy: ಅಪರಾಧಿ ಜನಾರ್ದನ ರೆಡ್ಡಿ ಶಾಸಕ ಸ್ಥಾನ ರದ್ದಾಗುತ್ತಾ? ನಿಯಮ ಹೇಳೋದೇನು?

ಅಪರಾಧಿ ಜನಾರ್ದನ ರೆಡ್ಡಿ ಶಾಸಕ ಸ್ಥಾನ ರದ್ದಾಗುತ್ತಾ?

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್‌ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕಣದಲ್ಲಿ ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗಾದರೆ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನ ರದ್ದಾಗುತ್ತಾ? ಈ ಕುರಿತಾದ ನಿಯಮ ಏನು ಹೇಳುತ್ತದೆ? ಇಲ್ಲಿದೆ ವಿವರ.

Janardhan Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿ ಅಪರಾಧಿ; ಏನಿದು ಪ್ರಕರಣ?

ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿ ಅಪರಾಧಿ; ಏನಿದು ಪ್ರಕರಣ?

ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಜತೆಗೆ 7 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಹಾಗಾದರೆ ಏನಿದು ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣ? ಇಲ್ಲಿದೆ ವಿವರ.

Janardhana Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ಕೋರ್ಟ್‌ ಮಹತ್ವದ ತೀರ್ಪು

ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿ ಅಪರಾಧಿ

MLA Janardhana Reddy: ಗಂಗಾವತಿ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದ ತೀರ್ಪು ಹೊರಬದ್ದಿದೆ. ಸಿಬಿಐ ವಿಶೇಷ ಕೋರ್ಟ್‌ ತೀರ್ಪು ಪ್ರಕಟಿಸಿದ್ದು, ಜನಾರ್ದನ ರೆಡ್ಡಿ ಅಪರಾಧಿ ಎಂದು ಘೋಷಿಸಿದೆ. ಹೀಗಾಗಿ ಮತ್ತೆ ಜನಾರ್ದನಾ ರೆಡ್ಡಿ ಜೈಲು ಪಾಲಾಗುವ ಸಾಧ್ಯತೆ ಇದೆ.

Dinesh Gundu Rao: ಸುಹಾಸ್‌ನನ್ನು‌ ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗೇಕೆ ರೌಡಿ ಪಟ್ಟಿಗೆ ಸೇರಿಸಿದ್ದರು? ದಿನೇಶ್ ಗುಂಡೂರಾವ್

ಕರಾವಳಿಯ ಜನ ಬಿಜೆಪಿಯ ಹುನ್ನಾರ ಅರಿಯಬೇಕಿದೆ: ದಿನೇಶ್ ಗುಂಡೂರಾವ್

Dinesh Gundu Rao: ಕರಾವಳಿಯನ್ನು ಕೋಮು‌ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಇವರು‌ ಅಧಿಕಾರದಲ್ಲಿದ್ದಾಗ ಕ್ರಿಮಿನಲ್‌ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್‌ಗಳನ್ನು‌ ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ‌ ಮಾಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಎಂದು ಹೇಳಿದ್ದಾರೆ.

ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಇನ್ನಿಲ್ಲ

ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಇನ್ನಿಲ್ಲ

ಸಾಹಿತ್ಯದಲ್ಲೂ ಕೈಯಾಡಿಸಿದ್ದ ಇವರು ಹಲವಾರು ಪತ್ತೇದಾರಿ ಮತ್ತಿತರ ಕಾದಂಬರಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಇವರ ಜೀವನ ಸಾಧನೆಯ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಪುಸ್ತಕ ಪ್ರಕಟವಾಗಿತ್ತು. ವಿಶ್ವವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದ್ದರು.

Mock Drill: ನಾಳೆ ಸಂಜೆ 4 ಗಂಟೆಗೆ ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್

ನಾಳೆ ಸಂಜೆ 4 ಗಂಟೆಗೆ ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್

ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 7ರಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್‌ (mock drill) ನಡೆಸಲಾಗುತ್ತದೆ ಎನ್ನುವ ಮಾಹಿತಿಯನ್ನೂ ನೀಡಿದೆ. ಕರ್ನಾಟಕದ ಎರಡು ಜಿಲ್ಲೆ ಹಾಗೂ ಕೈಗಾ ಅಣುಸ್ಥಾವರ ಇರುವ ಕಾರವಾರ ತಾಲೂಕಿನಲ್ಲಿ ನಾಳೆ ಮಾಕ್‌ ಡ್ರಿಲ್‌ ನಡೆಯಲಿದೆ. ಆ ಮೂಲಕ ಯುದ್ಧದ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ಮಾಕ್‌ ಡ್ರಿಲ್‌ ನಡೆಯಲಿದೆ.

Suhas Shetty Murder Case: ಹಿಂದುತ್ವ ಕಾರ್ಯಕರ್ತ ಸುಹಾಸ್‌ ಶೆಟ್ಟಿ ವಿರುದ್ಧ ರೌಡಿ ಶೀಟ್‌ ಓಪನ್‌ ಮಾಡಿದ್ದು ಬಿಜೆಪಿ ಸರಕಾರ!

ಸುಹಾಸ್‌ ಶೆಟ್ಟಿ ವಿರುದ್ಧ ರೌಡಿ ಶೀಟ್‌ ಓಪನ್‌ ಮಾಡಿದ್ದು ಬಿಜೆಪಿ ಸರಕಾರ!

Suhas Shetty Murder Case: ಸಚಿವ ದಿನೇಶ್‌ ಗುಂಡೂರಾವ್‌ ಬಹಿರಂಗಡಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೊಲೀಸ್‌ ಠಾಣೆಯ ದಾಖಲೆಗಳಲ್ಲಿ, ಸುಹಾಸ್‌ ಶೆಟ್ಟಿ ಮೇಲಿರುವ ಹಲವಾರು ಗೂಂಡಾಗಿರಿ ಪ್ರಕರಣಗಳು ಬಯಲಾಗಿವೆ. 2020ರಲ್ಲಿ ಈತನ ಮೇಲೆ ಬಜಪೆ ಠಾಣೆಯಲ್ಲಿ ರೌಡಿ ಶೀಟ್‌ ತೆರೆಯಲಾಗಿತ್ತು.

Gold Price Today: ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ; ಗ್ರಾಹಕರಿಗೆ ಫುಲ್‌ ಶಾಕ್‌!

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 6th May 2025:ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 250ರೂ. ಏರಿಕೆ ಕಂಡಿದ್ದು, 9,025 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 273 ರೂ. ಏರಿಕೆ ಕಂಡಿದ್ದು, ನೀವು 9,846 ರೂ. ಪಾವತಿಸಬೇಕು. 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,200 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,250 ರೂ. ಮತ್ತು 100 ಗ್ರಾಂಗೆ 9,02,500 ರೂ. ನೀಡಬೇಕಾಗುತ್ತದೆ.

Road Accident: ಕಾರಿಗೆ ಲಾರಿ ಡಿಕ್ಕಿಯಾಗಿ ಸಾಗರದ ಐವರು ಸ್ಥಳದಲ್ಲೇ ದುರ್ಮರಣ

ಕಾರಿಗೆ ಲಾರಿ ಡಿಕ್ಕಿಯಾಗಿ ಸಾಗರದ ಐವರು ಸ್ಥಳದಲ್ಲೇ ದುರ್ಮರಣ

ಹುಬ್ಬಳ್ಳಿ (hubballi news) ತಾಲೂಕಿನ ಕಿರೇಸೂರು ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಲಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾದ (Road accident) ಕಾರು ಅಪ್ಪಚ್ಚಿಯಾಗಿದೆ. ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರದವರು ಎಂದು ತಿಳಿದುಬಂದಿದೆ.

Murder Case: ತಂದೆಯ ಕೊಲೆಗೆ 16 ವರ್ಷ ಬಳಿಕ ಸೇಡು ತೀರಿಸಿಕೊಂಡ ಮಗ; ಮಾವನ ಕಗ್ಗೊಲೆ

ತಂದೆಯ ಕೊಲೆಗೆ 16 ವರ್ಷ ಬಳಿಕ ಸೇಡು ತೀರಿಸಿಕೊಂಡ ಮಗ; ಮಾವನ ಕಗ್ಗೊಲೆ

ಆರೋಪಿ ಫಹಾದ್‌ ಚಿಕ್ಕವನಿದ್ದಾಗ ಆತನ ತಂದೆ ಅನ್ವರ್ ಪಾಷಾ ಎಂಬಾತನನ್ನು ಸಿರಾಜ್ ಕೊಚ್ಚಿ ಕೊಲೆ (Murder case) ಮಾಡಿದ್ದ. ಕಣ್ಣೆದುರೇ ನಡೆದ ತಂದೆಯ ಕಗ್ಗೊಲೆಯನ್ನು ಕಂಡಿದ್ದ ಫಹಾದ್‌ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದ. 16 ವರ್ಷಗಳ ನಂತರ ಸೇಡು ತೀರಿಸಿಕೊಳ್ಳುವ ಸಮಯ ಫಹಾದ್‌ಗೆ ಬಂದಿದೆ.

Beer Price Hike: ಡಿಯರ್‌ ಬಿಯರ್‌ ಪ್ರೇಮಿಗಳೇ, ಇದು ಕಿಕ್‌ ಇಳಿಯೋ ಸುದ್ದಿ!

ಡಿಯರ್‌ ಬಿಯರ್‌ ಪ್ರೇಮಿಗಳೇ, ಇದು ಕಿಕ್‌ ಇಳಿಯೋ ಸುದ್ದಿ!

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ಬೆಲೆ ಇನ್ನೂ ಕಡಿಮೆ ಇದೆ. ಪ್ರೀಮಿಯಂ ಬ್ರಾಂಡ್‌ಗಳ ಬೆಲೆಯನ್ನು ಏರಿಕೆ ಮಾಡಿಲ್ಲ, ಕೇವಲ ಬಿಯರ್‌ನ ಬೆಲೆಯನ್ನು (beer price hike) ಮಾತ್ರ ಸ್ವಲ್ಪ ಹೆಚ್ಚಿಸಲಾಗಿದೆ ಎಂದು ಅಬಕಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ.

Food Adulteration: ಇಡ್ಲಿ, ಪನೀರ್‌, ಪಾನಿಪುರಿ ಬಳಿಕ ಜಿಲೇಬಿ, ಶರಬತ್‌ ಸರದಿ! ಇದೂ ಸುರಕ್ಷಿತವಲ್ಲ!

ಇಡ್ಲಿ, ಪಾನಿಪುರಿ ಬಳಿಕ ಜಿಲೇಬಿ, ಶರಬತ್‌ ಸರದಿ! ಇದೂ ಸುರಕ್ಷಿತವಲ್ಲ!

ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಹಾರ ಗುಣಮಟ್ಟ ಇಲಾಖೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾದರಿ ಸಂಗ್ರಹಣೆಗೆ (food adulteration) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಜಿಲೇಬಿ ಮತ್ತು ಶರಬತ್‌ನ ತಲಾ 5 ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಲಾಗಿದೆ.

Janivara Row: ನೀಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿಯ ಜನಿವಾರ ತೆಗೆಸಿದ ಸಿಬ್ಬಂದಿ ಬಂಧನ

ನೀಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿಯ ಜನಿವಾರ ತೆಗೆಸಿದ ಸಿಬ್ಬಂದಿ ಬಂಧನ

ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ (Janivara Row) ಸಿಬ್ಬಂದಿ ವಿರುದ್ಧ ಭಾನುವಾರ ತಡರಾತ್ರಿ ಪ್ರಕರಣ ದಾಖಲಾಗಿದೆ ಎಂದು ಶರಣಪ್ಪ ಅವರು ಹೇಳಿದ್ದಾರೆ. ಬಂಧಿತ ಆರೋಪಿಗಳನ್ನು ಶರಣಗೌಡ ಮತ್ತು ಗಣೇಶ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ

SSLC Result: ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್‌ ಮಾರ್ಕ್ಸ್‌ ಬದಲಾವಣೆ!

ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್‌ ಮಾರ್ಕ್ಸ್‌ ಬದಲಾವಣೆ

SSLC Result: ಪಾಸಿಂಗ್‌ ಮಾರ್ಕ್ಸ್‌ ಬದಲಾಯಿಸಿದರೆ, ಇತರ ರಾಜ್ಯ ಶೈಕ್ಷಣಿಕ ಮಂಡಳಿಗಳು, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಕೇಂದ್ರೀಯ ವಿದ್ಯಾಲಯ (ಕೆವಿ) ನಂತಹ ಕೇಂದ್ರೀಯ ಮಂಡಳಿಗಳೊಂದಿಗೆ ಅದು ಹೊಂದಿಕೆಯಾಗುತ್ತದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಉತ್ತೀರ್ಣ ಅಂಕಗಳು 33 ಆಗಿವೆ.

Murder Case: ಗೆಳತಿ ವಿಚಾರದಲ್ಲಿ ತಗಾದೆ: ಗೆಳೆಯನನ್ನು ಕೊಂದು ಶವದ ಮುಂದೆ ಡ್ಯಾನ್ಸ್‌

ಗೆಳತಿ ವಿಚಾರದಲ್ಲಿ ತಗಾದೆ: ಗೆಳೆಯನನ್ನು ಕೊಂದು ಶವದ ಮುಂದೆ ಡ್ಯಾನ್ಸ್‌

ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕಾರ್ತಿಕ್, ಪ್ರವೀಣ್‌ನನ್ನು ಕೊಲೆ ಮಾಡುವ ಧಮಕಿ ಹಾಕಿದ್ದ. ಕಾರ್ತಿಕ್ ತನ್ನನ್ನು ಕೊಲೆ ಮಾಡುತ್ತಾನೆ ಎನ್ನುವ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕಾರ್ತಿಕನನ್ನೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಮಹಿಳೆಯೊಬ್ಬಳ ಸಂಗದ ವಿಷಯ ಕೂಡ ಸೇರಿಕೊಂಡಿದೆ.

Murder Case: ದಾವಣಗೆರೆಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಂದ ದುಷ್ಕರ್ಮಿಗಳು

ದಾವಣಗೆರೆಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಂದ ದುಷ್ಕರ್ಮಿಗಳು

ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ತಂಡ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರ ಮುಂಭಾಗ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಬೀಳಿಸಿ ರೌಡಿ ಶೀಟರ್‌ ಸಂತೋಷ್‌ ಕುಮಾರ್‌ನನ್ನು ಕೊಚ್ಚಿ ಹತ್ಯೆಗೈದು (Murder Case) ಪರಾರಿಯಾಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

“ಮಿಷನ್ 2035” ಮೂಲಕ ಥಲಸ್ಸೇಮಿಯಾ ಮುಕ್ತ ರಾಷ್ಟ್ರಗೊಳಿಸುವ ಗುರಿ: ನಟ ಜಾಕಿ ಶ್ರಾಫ್ ಥಲಸ್ಸೆಮಿಯಾ ಜಾಗೃತಿ ರಾಯಭಾರಿಯಾಗಿ ನಿಯುಕ್ತಿ

ನಟ ಜಾಕಿ ಶ್ರಾಫ್ ಥಲಸ್ಸೆಮಿಯಾ ಜಾಗೃತಿ ರಾಯಭಾರಿಯಾಗಿ ನಿಯುಕ್ತಿ

ಥಲಸ್ಸೇಮಿಯಾ ತಡೆಗಟ್ಟಬಹುದಾದ ಅನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಭಾರತದಲ್ಲಿ ಪ್ರತಿ ವರ್ಷ 10 ರಿಂದ 15 ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿ ಸುವ ಮೂಲಕ, ಆರಂಭಿಕ ಸ್ಕ್ರೀನಿಂಗ್ ಮತ್ತು ಆನುವಂಶಿಕ ಸಮಾಲೋಚನೆಯನ್ನು ಉತ್ತೇಜಿಸ ಲಾಗು ತ್ತದೆ. ಚಿಕಿತ್ಸೆಯ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ಪ್ರವೇಶವನ್ನು ಸುಧಾರಿಸುವ ಜೊತೆಗೆ, ಹೊಸ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ

MB Patil: ತುಮಕೂರಿನಲ್ಲಿ ಕ್ರಿಕೆಟ್ ಮೈದಾನ: 41ಎಕರೆ ಸ್ವಾಧೀನ ಪತ್ರ ಹಸ್ತಾಂತರಿಸಿದ ಎಂ.ಬಿ.ಪಾಟೀಲ್‌

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಎಂ.ಬಿ.ಪಾಟೀಲ್‌

ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಐಎಡಿಬಿ ಮೂಲಕ ಒದಗಿಸುವ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆ.ಎಸ್.ಸಿ.ಎ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು.

Sonu Nigam: ಸಾರಿ ಕರ್ನಾಟಕ; ಕನ್ನಡಿಗರ ಕ್ಷಮೆ ಕೋರಿದ ಗಾಯಕ ಸೋನು ನಿಗಮ್‌

ಕನ್ನಡಿಗರ ಕ್ಷಮೆ ಕೋರಿದ ಗಾಯಕ ಸೋನು ನಿಗಮ್‌

‘ʼಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼʼ ಎಂದು ಗಾಯಕ ಸೋನು ನಿಗಮ್‌ ಕ್ಷಮೆ ಕೋರಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್‌ ʼʼಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದುʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

CM Siddaramaiah: ಶುದ್ಧ ಕುಡಿಯುವ ನೀರಿಗೆ ಒಂದೇ ಒಂದು ಗ್ರಾಮದಲ್ಲಿ ಸಮಸ್ಯೆ ಆಗಬಾರದು: ಸಿಎಂ ಸೂಚನೆ

ಶುದ್ಧ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು: ಸಿಎಂ

ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

PES University: ಪಿಇಎಸ್‌ ವಿವಿ-ಎಚ್‌ಸಿಎಲ್‌ ಟೆಕ್‌ ನಡುವೆ ಶೈಕ್ಷಣಿಕ, ಸಂಶೋಧನೆ, ಉದ್ಯಮ ಆಧಾರಿತ ಕೌಶಲ್ಯ ಬಲಪಡಿಸಲು ಒಪ್ಪಂದ

ಪಿಇಎಸ್‌ ವಿವಿ, ಎಚ್‌ಸಿಎಲ್‌ ಟೆಕ್‌ ನಡುವೆ ಒಪ್ಪಂದ

ಪಿಇಎಸ್‌ ವಿಶ್ವವಿದ್ಯಾಲಯ ಮತ್ತು ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿ ಎಚ್‌ಸಿಎಲ್‌ ಟೆಕ್‌ ಜತೆ ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮ ಆಧಾರಿತ ಕೌಶಲ್ಯಗಳನ್ನು ಬಲಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ಪಿಇಎಸ್‌ ವಿದ್ಯಾರ್ಥಿಗಳು ಮತ್ತು ಎಚ್‌ಸಿಎಲ್‌ ಟೆಕ್‌ ಉದ್ಯೋಗಿಗಳಿಗೆ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳು, ಅತಿಥಿ ಉಪನ್ಯಾಸಗಳು ಮತ್ತು ಉದ್ಯಮ ತಜ್ಞರ ನೇತೃತ್ವದ ಕಾರ್ಯಾಗಾರವನ್ನು ಒಳಗೊಂಡಿದೆ.

Chaser Movie: ಸುಮಂತ್ ಶೈಲೇಂದ್ರ ಅಭಿನಯದ ‘ಚೇಸರ್’ ಚಿತ್ರದ ಹಾಡುಗಳು ಮೇ 9ಕ್ಕೆ ಬಿಡುಗಡೆ

ಸುಮಂತ್ ಶೈಲೇಂದ್ರ ಅಭಿನಯದ ‘ಚೇಸರ್’ ಚಿತ್ರದ ಹಾಡುಗಳು ಮೇ 9ಕ್ಕೆ ಬಿಡುಗಡೆ

ಸ್ಯಾಂಡಲ್‌ವುಡ್‌ ನಟ ಸುಮಂತ್ ಶೈಲೇಂದ್ರ - ರಕ್ಷಾ ಮೆನನ್‌ ನಟನೆಯ, ಅರ್ಜುನ್ ಜನ್ಯ ಸಂಗೀತ ನೀಡಿರುವ ʼಚೇಸರ್ʼ ಚಿತ್ರದ ಹಾಡುಗಳ ಅನಾವರಣ ಸಮಾರಂಭ ಮೇ 9ರ ಸಂಜೆ 7.30ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

CM Siddaramaiah: 176 ತರಬೇತುದಾರರ ನೇಮಕಾತಿಗೆ ಸೂಚಿಸಿ 1 ವರ್ಷವಾದರೂ ನೇಮಕಾತಿ ಆಗಿಲ್ಲ; ತರಾಟೆಗೆ ತೆಗೆದುಕೊಂಡ ಸಿಎಂ

ಕಂಬಳಕ್ಕೆ ಗ್ರಾಮೀಣ ಕ್ರೀಡೆಯ ಮಾನ್ಯತೆ ನೀಡಲು ಚಿಂತನೆ

ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರವಾದರೂ ಪ್ರಗತಿ ಕಂಡು ಬರುತ್ತಿಲ್ಲ. ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಇದನ್ನು ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಗದಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

Road Accident: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಮೂವರ ಸಾವು: ಮಾಜಿ ಶಾಸಕನ ಪುತ್ರನಿಗೆ ಗಂಭೀರ ಗಾಯ

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಮೂವರ ಸಾವು:

Belagavi News: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದ ಬೈಲಹೊಂಗಲ-ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.