Viral News: 50ರೂ. ರಾಖಿ ಮಿಸ್ಸಿಂಗ್; ಕೊರಿಯರ್ ಕಂಪನಿ ವಿರುದ್ಧ ಕೇಸ್ ಮಾಡಿ 7,000ರೂ. ಗೆದ್ದ ನಾರಿ!
ಮಧ್ಯಪ್ರದೇಶದ ಸಾಗರ್‌ನಲ್ಲಿ ಕೊರಿಯರ್ ಕಂಪನಿಯೊಂದು ತನ್ನ ಸಹೋದರನಿಗೆ ಕಳುಹಿಸಿದ ರಾಖಿಯನ್ನು ತಲುಪಿಸದ ಕಾರಣ ಮಹಿಳೆಯೊಬ್ಬಳು ಕೊರಿಯರ್ ಕಂಪನಿಯ ವಿರುದ್ಧ ಕೇಸ್ ಹಾಕಿ 19 ತಿಂಗಳುಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾಳೆ. ಈ ಸುದ್ದಿ ವೈರಲ್(Viral News) ಆಗಿದ್ದು, ಜನರು ಆಕೆಯ ದಿಟ್ಟ ನಡೆಯನ್ನು ಮೆಚ್ಚಿಕೊಂಡಿದ್ದಾರೆ.


ಭೋಪಾಲ್: ಸಹೋದರ ಸಹೋದರಿಯ ನಡುವಿನ ಬಾಂಧವ್ಯ ತುಂಬಾನೇ ಅಮೂಲ್ಯವಾದದ್ದು. ಇನ್ನೂ ರಕ್ಷಾಬಂಧನವೆಂದರೆ ಸಹೋದರ-ಸಹೋದರಿಯರಿಗೆ ತುಂಬಾ ವಿಶೇಷವಾದದ್ದು. ತನ್ನ ಸಹೋದರ ಎಷ್ಟೇ ದೂರದಲ್ಲಿದ್ದರೂ ಆತನಿಗೊಂದು ರಾಖಿ ಕಳುಹಿಸಿಕೊಡುವುದನ್ನು ಅಕ್ಕ/ತಂಗಿಯರು ಮರೆಯುವುದಿಲ್ಲ! ಈ ರಾಖಿ(Rakhi) ಎನ್ನುವುದು ಒಂದು ಎಮೋಷನ್ಸ್! ಇದೀಗ ಈ ರಾಖಿ ವಿಚಾರಕ್ಕೆ ಮಧ್ಯಪ್ರದೇಶದ ಸಾಗರ್‌ನಲ್ಲಿ ನಡೆದ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ತನ್ನ ಸಹೋದರನಿಗಾಗಿ ಕಳುಹಿಸಿದ ರಾಖಿಯನ್ನು ಕೊರಿಯರ್ ಕಂಪನಿಯೊಂದು ಅವನಿಗೆ ತಲುಪಿಸದ ಯುವತಿಯೊಬ್ಬಳು ಕೊರಿಯರ್ ಕಂಪನಿಯ ವಿರುದ್ಧ ಕೇಸ್ ಹಾಕಿ 19 ತಿಂಗಳುಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದಾಳೆ. ಕೊನೆಗೂ ಆಕೆಗೆ ನ್ಯಾಯ ಸಿಕ್ಕಿದ್ದು, ಆಕೆಯ ಪರಿಶ್ರಮ ಮತ್ತು ಸಹೋದರನ ಮೇಲಿನ ಪ್ರೀತಿ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ನರ್ಯಾವಲ್ಲಿಯ ಶಕುನ್‌ಬಾಯಿ ಠಾಕೂರ್ ರಕ್ಷಾಬಂಧನಕ್ಕೆ ಮುಂಚಿತವಾಗಿ ರಾಜಸ್ಥಾನದಲ್ಲಿರುವ ತನ್ನ ಸಹೋದರ ನಟರಾಜ್ ಗುಜ್ರಾನಿಯಾಗೆ ಮಧುರ್ ಕೊರಿಯರ್ ಮೂಲಕ ರಾಖಿಯನ್ನು ಕಳುಹಿಸಿದ್ದಳಂತೆ. ಕೊರಿಯರ್ ಕಂಪನಿ ರಾಖಿ ಕಳುಹಿಸಿ ಕೊಡಲು 50 ರೂ.ಗಳನ್ನು ಅವಳಿಂದ ತೆಗೆದುಕೊಂಡಿದ್ದು ಅಲ್ಲದೇ,ರಕ್ಷಾಬಂಧನಕ್ಕೆ ಮುಂಚಿತವಾಗಿ ರಾಖಿಯನ್ನು ಕೊರಿಯರ್ ಮಾಡುವ ಭರವಸೆ ಕೂಡ ನೀಡಿತ್ತಂತೆ. ಆದರೆ ರಾಖಿ ಮಾತ್ರ ಆತನಿಗೆ ತಲುಪಲಿಲ್ಲವಂತೆ. ಈ ಬಗ್ಗೆ ಆಕೆ ಪದೇ ಪದೇ ದೂರು ನೀಡಿದ್ದರೂ ಪಾರ್ಸೆಲ್ ಬಗ್ಗೆ ಸುಳಿವೇ ಇಲ್ಲ ಮತ್ತು ಅದನ್ನು ಹಿಂತಿರುಗಿಸಲಿಲ್ಲವಂತೆ. ಹಾಗಾಗಿ ಮಹಿಳೆ ಕೊರಿಯರ್ ಕಂಪನಿಯ ವಿರುದ್ಧ ಕೇಸ್ ಹಾಕಿದ್ದಾಳೆ.
ನ್ಯಾಯಾಲಯವು ಕೊರಿಯರ್ ಕಂಪನಿಗೆ ಕೊರಿಯರ್ ಶುಲ್ಕ ಮರುಪಾವತಿಯಾಗಿ 50 ರೂ., ಸೇವಾ ಕೊರತೆಗೆ ರೂ. 5,000 (ವಾರ್ಷಿಕ ಬಡ್ಡಿದರ 6%), ಮೊಕದ್ದಮೆ ವೆಚ್ಚವಾಗಿ 2,000 ರೂ., ಒಟ್ಟು 7,050 ರೂ. ಪರಿಹಾರವನ್ನು ಎರಡು ತಿಂಗಳೊಳಗೆ ಪಾವತಿಸಬೇಕು ಎಂದು ಆದೇಶಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಮಲಗಿದ್ದ ವ್ಯಕ್ತಿಯ ಮೈ ಮೇಲೆ ಹರಿದ ದೈತ್ಯ ಕಾಳಿಂಗ ಸರ್ಪ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ಈ ಪ್ರಕರಣ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮಹಿಳೆ ತನ್ನ ಸಹೋದರನ ಪರವಾಗಿ ನಿಂತಿದ್ದಕ್ಕಾಗಿ ಹೊಗಳಿದ್ದಾರೆ. ಕೇವಲ 50 ರೂಪಾಯಿ ಪಾರ್ಸೆಲ್‍ಗಾಗಿ ಕೋರ್ಟ್ ಮೆಟ್ಟಿಲೇರಿದ ಸಹೋದರಿ ತನ್ನ ಸಹೋದರನಿಗೆ ಎಂದಿಗೂ ಕಷ್ಟಬಾರದಂತೆ ನೋಡಿಕೊಳ್ಳುತ್ತಾಳೆ ಎಂದು ಜನರು ಹೇಳಿದ್ದಾರೆ.