ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸಹನಟಿಯ ಜೊತೆ ಅರೆಬೆತ್ತಲೆಯಾಗಿ ಬೆಡ್‌ರೂಂನಲ್ಲಿ ಸಿಕ್ಕಿಬಿದ್ದ ಖ್ಯಾತ ನಟ; ಖಾಸಗಿ ಫೋಟೋಸ್‌ ಲೀಕ್‌!

ದಕ್ಷಿಣ ಕೊರಿಯಾದ ನಟ ಪಾರ್ಕ್ ಜುನ್ ಹ್ವಿ, ಬೇರ್: ದಿ ಮ್ಯೂಸಿಕಲ್‌ನ ಸಹನಟಿ ವೂ ಜಿನ್ ಯುಂಗ್ ಜೊತೆಗಿರುವ ಖಾಸಗಿ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿವೆ. ಈತ ನಿಶ್ಚಿತಾರ್ಥ ಮಾಡಿಕೊಂಡ ವಧುವಿಗೆ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಅವರಿಬ್ಬರನ್ನು ಬೇರ್: ದಿ ಮ್ಯೂಸಿಕಲ್‍ನಿಂದ ತೆಗೆದುಹಾಕಲಾಗಿದೆ.

ಸಹನಟಿಯ ಜೊತೆ ಅರೆಬೆತ್ತಲೆಯಾಗಿ ಸಿಕ್ಕಿ ಬಿದ್ದ ಖ್ಯಾತ ನಟ!

Profile pavithra Jun 6, 2025 3:59 PM

ಸೌಲ್: ಇತ್ತೀಚೆಗೆ ದಕ್ಷಿಣ ಕೊರಿಯಾದ ನಟ ಪಾರ್ಕ್ ಜುನ್ ಹ್ವಿಯ ಖಾಸಗಿ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪಾರ್ಕ್‌ ತನ್ನ ಸಹನಟಿ ವೂ ಜಿನ್ ಯುಂಗ್ ಪಕ್ಕದಲ್ಲಿ ಹಾಸಿಗೆಯಲ್ಲಿ ಅರೆಬೆತ್ತಲೆಯಾಗಿ ಕುಳಿತಿರುವುದು ಕಂಡುಬಂದಿದೆ. ಹೀಗಾಗಿ ಆತ ನಿಶ್ಚಿತಾರ್ಥ ಮಾಡಿಕೊಂಡ ವಧುವಿಗೆ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ಪಾರ್ಕ್‌ ಮತ್ತು ಬೇರ್: ದಿ ಮ್ಯೂಸಿಕಲ್‌ನ ಸಹನಟಿ ನಡುವಿನ ಖಾಸಗಿ ಚಾಟ್ ಸ್ಕ್ರೀನ್‌ಶಾಟ್‌ಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌(Viral News) ಆಗಿವೆ.ಇದರಿಂದ ಅವರಿಬ್ಬರನ್ನು ಬೇರ್: ದಿ ಮ್ಯೂಸಿಕಲ್‍ ಪ್ರಾಜೆಕ್ಟ್‌ನಿಂದ ಕೈ ಬಿಡಲಾಗಿದೆಯಂತೆ.

ವೈರಲ್‌ ಆದ ಫೋಟೊಗಳನ್ನು ನೋಡಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. "ಫೋಟೋಗಳನ್ನು ನೋಡಿದರೆ, ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಫೋಟೋಗಳನ್ನು ತೆಗೆದುಕೊಂಡು ಪೋಸ್ಟ್ ಮಾಡಿದಂತೆ ಕಾಣುತ್ತಿದೆ" ಎಂದು ನೆಟ್ಟಿಗರಲ್ಲಿ ಒಬ್ಬರು ಬರೆದಿದ್ದಾರೆ. "ಮೊದಲ ಫೋಟೋ ನೋಡಿದ್ರೆ ಖಂಡಿತವಾಗಿಯೂ ಮೋಸ ಮಾಡುವ ದೃಶ್ಯದಂತೆ ಕಾಣುತ್ತದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

ವಿವಾದದ ನಂತರ, ಪಾರ್ಕ್ ಜುನ್ ಹ್ವಿ ಯನ್ನು ಬೇರ್: ದಿ ಮ್ಯೂಸಿಕಲ್ ಮತ್ತು ನಿಜಿನ್ಸ್ಕಿಯಿಂದ ತೆಗೆದುಹಾಕಲಾಗಿದೆ. ಹಾಗೂ ವೂ ಜಿನ್ ಯಂಗ್ ಅವಳನ್ನು ಕೂಡ ಬೇರ್: ದಿ ಮ್ಯೂಸಿಕಲ್‌ನಿಂದ ಹೊರಹೋಗಲು ಹೇಳಲಾಗಿದೆಯಂತೆ.

ಈ ಸುದ್ದಿಯನ್ನೂ ಓದಿ:Viral Video: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದಾಗ ಎಂಟ್ರಿ ಕೊಟ್ಟೇ ಬಿಟ್ಟ ಗಂಡ! ಆಮೇಲೆ ನಡೆದಿದ್ದೇ ಬೇರೆ

2016 ರಲ್ಲಿ ‘ಸೀಕ್ರೆಟ್ಲಿ’, ‘ಗ್ರೇಟ್ಲಿ’ ಚಿತ್ರದ ಮೂಲಕ ಜುನ್ ಹ್ವಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರಂತೆ. ಇದಾದ ಬಳಿಕ ‘ದಿ ಗಾಡೆಸ್ ಈಸ್ ವಾಚಿಂಗ್’ ಮತ್ತು ‘ಸೋನಾಟಾ ಆಫ್ ಎ ಫ್ಲೇಮ್’ ಗಳಲ್ಲಿ ತಮ್ಮ ನಟನೆಯ ಛಾಪು ಒತ್ತಿದ್ದಾನೆ. ಈ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ಪಾರ್ಕ್ ತನ್ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ. ಇಲ್ಲಿಯವರೆಗೆ, ಈ ಪ್ರಕರಣದ ಬಗ್ಗೆ ಪಾರ್ಕ್ ಹಾಗೂ ಅವನ ಸಹನಟಿ ಯಾವುದೇ ಹೇಳಿಕೆ ನೀಡಲಿಲ್ಲವಂತೆ.