ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕ್ಯಾಬ್ ಬುಕ್‌ ಮಾಡಿದ ಮಹಿಳೆ ಡ್ರೈವರ್ ನೋಡಿ ಶಾಕ್‌ ಆಗಿದ್ದು ಯಾಕೆ....?

ಮಹಿಳೆಯೊಬ್ಬಳು ತಾನು ಬುಕ್ ಮಾಡಿದ್ದ ಕ್ಯಾಬ್ ಡ್ರೈವರ್ ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಟೀಂ ಲೀಡರ್ ಆಗಿದ್ದ ಎಂದು ತಿಳಿದು ಆಕೆ ಶಾಕ್ ಆಗಿದ್ದಾಳೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್(Viral Video) ಆಗಿದೆ.

ಟೀಂ ಲೀಡರೇ ಕ್ಯಾಬ್‌ ಡ್ರೈವರ್‌- ಮಹಿಳೆ ಫುಲ್‌ ಶಾಕ್‌! ಏನಿದು ಸ್ಟೋರಿ?

Profile pavithra May 27, 2025 3:17 PM

ಬೆಂಗಳೂರು: ಬೆಂಗಳೂರಿನ ಮಹಿಳೆಯೊಬ್ಬಳು ತನ್ನ ಉಬರ್‌(Uber) ಪ್ರಯಾಣದ ಅನಿರೀಕ್ಷಿತ ಘಟನೆಯೊಂದನ್ನು ಹಂಚಿಕೊಂಡಿದ್ದಾಳೆ.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಕೆ ಬುಕ್ ಮಾಡಿದ್ದ ಕ್ಯಾಬ್ ಡ್ರೈವರ್(Cab Driver) ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಟೀಂ ಲೀಡರ್ ಆಗಿದ್ದ ಎಂದು ತಿಳಿದಾಗ ಆಕೆ ಶಾಕ್ ಆಗಿದ್ದಾಳೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಮಹಿಳೆ ತನ್ನ ಸೋಶಿಯಲ್ ಮೀಡಿಯಾದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ತಾನು ಬುಕ್‌ ಮಾಡಿದ ಕ್ಯಾಬ್‌ ಡ್ರೈವರ್‌ ತನ್ನ ಸಹೋದ್ಯೋಗಿ ಎಂದು ಹೇಳಿದ್ದಾಳೆ. ಹಾಗೂ ಅವನ ಬಳಿ ಕ್ಯಾಬ್ ಓಡಿಸಲು ಕಾರಣ ಕೇಳಿದಾಗ, ಅವನು ಅದನ್ನು ಮೋಜಿಗಾಗಿ ಮತ್ತು ಬೇಸರವನ್ನು ಕಳೆಯಲು ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನಂತೆ.

ಈ ಪೋಸ್ಟ್ ಬೆಂಗಳೂರಿನ ಮಹಿಳೆಯೊಬ್ಬಳು ತನ್ನ ಉಬರ್‌(Uber) ಪ್ರಯಾಣದ ಅನಿರೀಕ್ಷಿತ ಘಟನೆಯೊಂದನ್ನು ಹಂಚಿಕೊಂಡಿದ್ದಾಳೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಕೆ ಬುಕ್ ಮಾಡಿದ್ದ ಕ್ಯಾಬ್ ಡ್ರೈವರ್(Cab Driver) ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಟೀಂ ಲೀಡರ್ ಆಗಿದ್ದ ಎಂದು ತಿಳಿದಾಗ ಆಕೆ ಶಾಕ್ ಆಗಿದ್ದಾಳೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಮಹಿಳೆ ತನ್ನ ಸೋಶಿಯಲ್ ಮೀಡಿಯಾದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ತಾನು ಬುಕ್‌ ಮಾಡಿದ ಕ್ಯಾಬ್‌ ಡ್ರೈವರ್‌ ತನ್ನ ಸಹೋದ್ಯೋಗಿ ಎಂದು ಹೇಳಿದ್ದಾಳೆ. ಹಾಗೂ ಅವನ ಬಳಿ ಕ್ಯಾಬ್ ಓಡಿಸಲು ಕಾರಣ ಕೇಳಿದಾಗ, ಅವನು ಅದನ್ನು ಮೋಜಿಗಾಗಿ ಮತ್ತು ಬೇಸರವನ್ನು ಕಳೆಯಲು ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನಂತೆ.



ಮತ್ತೊಬ್ಬರು, "ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ, ನಾವು ಮನೆಗೆ ಆಹ್ವಾನಿಸಿದ ಬಹುರಾಷ್ಟ್ರೀಯ ಕಂಪನಿಯೊಂದರ ಸಿಇಒ, ಹೋಟೆಲ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಇದನ್ನು ಕೇಳಿ ನಮಗೆ ಶಾಕ್‌ ಆಗಿತ್ತು! ಭಾರತದಲ್ಲಿಯೂ ಹೀಗೆಲ್ಲಾ ನಡೆಯುವುದು ದೊಡ್ಡ ವಿಷಯ. ಇದು ನಿಜವಾಗಿದ್ದರೆ, ಅವರು ಕಷ್ಟಪಟ್ಟು ಕೆಲಸ ಮಾಡುವವರಾಗಿದ್ದಾರೆ, ಖಂಡಿತ ಅವರು ಬದುಕಿನಲ್ಲಿ ಏನಾದ್ರೂ ಸಾಧಿಸುತ್ತಾರೆ. ಒಳ್ಳೆಯದಾಗಲಿ" ಎಂದಿದ್ದಾರೆ.

ಯಾರೂ ಇದನ್ನು ಮೋಜಿಗಾಗಿ ಮಾಡುವುದಿಲ್ಲ, ಬಹುಶಃ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿರಬಹುದು" ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ. "ಒಂದು ಕಂಪನಿಯ ಟೀ ಲೀಡರ್‌ಗೆ ಇಷ್ಟೊಂದು ಫ್ರೀ ಟೈಂ ಹೇಗೆ ಸಿಗುತ್ತದೆ?" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ತಾಂತ್ರಿಕ ದೋಷ; ಸಿಟ್ಟಾದ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?

ಜುಲೈ 2024ರಲ್ಲಿ, ಇದೇ ರೀತಿಯ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಪೋಸ್ಟ್‌ನಲ್ಲಿ 35 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ವಾರಾಂತ್ಯದಲ್ಲಿ ಒಂಟಿತನವನ್ನು ಹೋಗಲಾಡಿಸಲು ಆಟೋರಿಕ್ಷಾ ಓಡಿಸಿದ್ದಾನೆ. ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವ ವ್ಯಕ್ತಿ ಆಟೋ ರೀಕ್ಷಾ ಓಡಿಸುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದರು.