Viral Video: ಟಿಕೆಟ್ ವಿಚಾರಕ್ಕೆ ಮಹಿಳೆ-ಟಿಟಿಇ ನಡುವೆ ಭಾರಿ ಜಗಳ; ಕೊನೆಗೆ ಆಗಿದ್ದೇನು?
ರೈಲಿನಲ್ಲಿ ಮಹಿಳೆ ಮತ್ತು ಟಿಟಿಇ ನಡುವೆ ಟಿಕೆಟ್ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ನೆಟ್ಟಿಗರು ಟಿಟಿಇಯ ಕರ್ತವ್ಯಪ್ರಜ್ಞೆಯನ್ನು ಹೊಗಳಿದರೆ, ಇತರರು ಪ್ರಯಾಣಿಕರ ಹಕ್ಕುಗಳ ಬಗ್ಗೆ ಚರ್ಚಿಸಿದ್ದಾರೆ.


ಟಿಕೆಟ್ ವಿಚಾರಕ್ಕೆ ರೈಲಿನಲ್ಲಿ ಆಗಾಗ ಜಗಳಗಳು ಆಗುತ್ತಿರುತ್ತವೆ. ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಮಹಿಳೆ ಮತ್ತು ಟಿಟಿಇ ನಡುವೆ ಟಿಕೆಟ್ ವಿಚಾರಕ್ಕೆ ವಾಗ್ವಾದ ನಡೆದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. 2ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಟಿಟಿಇ ಪರಿಶೀಲಿಸಲು ಟಿಕೆಟ್ ಕೇಳಿದಾಗ ಆಕೆ 2ಎಸಿ ಟಿಕೆಟ್ ಬದಲು ಎಂಎಸ್‍ಟಿ ಪಾಸ್ ಅನ್ನು ತೋರಿಸಿದ್ದಾಳೆ. ಇದರಿಂದ ಗೊಂದಲ ಉಂಟಾಗಿ ಇವರಿಬ್ಬರ ನಡುವೆ ಜಗಳವಾಗಿದೆ.
ಎಂಎಸ್‍ಟಿಗಳು ಜನರಲ್ ಬೋಗಿಗಳು, ಪ್ಯಾಸೆಂಜರ್ ರೈಲುಗಳು ಮತ್ತು ಮೈನ್‍ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಎಲೆಕ್ಟ್ರಿಕ್ ರೈಲು) ಸೇವೆಗಳಿಗೆ ಮಾತ್ರ ಮಾನ್ಯವಾಗಿರುತ್ತವೆ ಹೊರತು ಸೂಪರ್‌ಫಾಸ್ಟ್ ರೈಲುಗಳಲ್ಲಿ 1ಎಸಿ, 2ಎಸಿ ಅಥವಾ 3ಎಸಿ ಬೋಗಿಗಳಿಗೆ ಅಲ್ಲ. 2ಎಸಿ ಬೋಗಿಯಲ್ಲಿ ಎಂಎಸ್‍ಟಿ ಪಾಸ್ ಅನ್ವಯವಾಗುವುದಿಲ್ಲ ಎಂದು ಟಿಟಿಇ ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ಉಂಟಾಗಿದೆ. ಯಾವುದೇ ಬೋಗಿಯಲ್ಲಿ ಬೇಕಾದರೂ ಪ್ರಯಾಣಿಸಬಹುದು ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದಾರೆ ಎಂದು ಮಹಿಳೆ ವಾದಿಸಿದ್ದಾಳೆ. ಆದರೆ ಟಿಟಿಇ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಟಿಟಿಇ ಸ್ಪಷ್ಟೀಕರಣಕ್ಕಾಗಿ ಹಿರಿಯ ಅಧಿಕಾರಿಗಳನ್ನು ಕರೆಸಿದ್ದಾನೆ.
ಟಿಟಿಇ ಹಾಗೂ ಮಹಿಳೆಯ ಜಗಳದ ವಿಡಿಯೊ ಇಲ್ಲಿದೆ ನೋಡಿ...
Kalesh b/w a TTE and Lady Passenger inside Indian Railways over some ticket issues (Full Context in the Clip) pic.twitter.com/9KjwJzqjst
— Ghar Ke Kalesh (@gharkekalesh) April 24, 2025
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 22,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ ಮತ್ತು ಇದು ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ನೆಟ್ಟಿಗರು ಟಿಟಿಇಯ ಕರ್ತವ್ಯಪ್ರಜ್ಞೆಯನ್ನು ಹೊಗಳಿದರೆ, ಇತರರು ಪ್ರಯಾಣಿಕರ ಹಕ್ಕುಗಳ ಬಗ್ಗೆ ಚರ್ಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್ ಮಾಡ್ತಿದ್ದ ಯುವತಿಗೆ ಈ ಕಿಡಿಗೇಡಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ರೈಲಿನಲ್ಲಿ ಟಿಟಿಇ ಹಾಗೂ ಪ್ರಯಾಣಿಕರ ನಡುವೆ ಜಗಳ ನಡೆಯುವುದು ಸರ್ವೇ ಸಾಮಾನ್ಯ. ಈ ಹಿಂದೆ ಅಮೃತಸರ ಮತ್ತು ಕತಿಹಾರ್ ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುವ 15708 ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲಿನೊಳಗೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕನೊಬ್ಬನನ್ನು ಬೆಲ್ಟ್‌ನಿಂದ ತೀವ್ರವಾಗಿ ಥಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಟಿಟಿಇ ಮತ್ತು ರೈಲು ಪರಿಚಾರಕ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದನ್ನು ಕಂಡು ಅನೇಕರು ಬೆಚ್ಚಿಬಿದ್ದಿದ್ದರು.