ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Osteoporosis: ವಯಸ್ಕರಲ್ಲಿ ಆಸ್ಟಿಯೊಪೊರೋಸಿಸ್, ಮೂಳೆ ಅರೋಗ್ಯ ಬಗ್ಗೆ ಜಾಗೃತಿ

ಬೆಂಗಳೂರು ವರ್ತೂರು ರಸ್ತೆಯ ಮಣಿಪಾಲ್ ಆಸ್ಪತ್ರೆಯು ವಯಸ್ಕರಲ್ಲಿ ಮೂಳೆ ಆರೋಗ್ಯ ರಕ್ಷಣೆ ಹಾಗೂ ರೋಬೋಟಿಕ್ ಕೀಲು ಬದಲಿ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳ ಪರಿವರ್ತನಾತ್ಮಕ ಪಾತ್ರದ ಕುರಿತು ಸಂವಾದಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಏ. 28ರಂದು ಆಸ್ಪತ್ರೆ ಆಯೋಜಿಸಿದ್ದ ನಿಮ್ಮ ವೈದ್ಯರನ್ನು ತಿಳಿದುಕೊಳ್ಳಿ ಕಾರ್ಯಕ್ರಮದಲ್ಲಿ ಪ್ರಮುಖ ತಜ್ಞರು ಮೂಳೆ ಅರೋಗ್ಯ ಮತ್ತು ಕೀಲು ನೋವಿನ ಚಿಕಿತ್ಸೆ ಬಗ್ಗೆ ಅಮೂಲ್ಯವಾದ ಮಾಹಿತಿ ಹಂಚಿಕೊಂಡರು.

ಬೆಂಗಳೂರು ವರ್ತೂರು ರಸ್ತೆಯ ಮಣಿಪಾಲ ಆಸ್ಪತ್ರೆಯಿಂದ ಜಾಗೃತಿ

osteoporosis and bone health in adults

Profile Pushpa Kumari Apr 28, 2025 7:30 PM

ಬೆಂಗಳೂರು: ವರ್ತೂರು ರಸ್ತೆಯ ಮಣಿಪಾಲ್ ಆಸ್ಪತ್ರೆಯು ಇತ್ತೀಚೆಗೆ ವಯಸ್ಕರಲ್ಲಿ ಮೂಳೆ ಆರೋಗ್ಯ ರಕ್ಷಣೆ ಹಾಗೂ ರೋಬೋಟಿಕ್ ಕೀಲು ಬದಲಿ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳ ಪರಿವರ್ತನಾತ್ಮಕ ಪಾತ್ರದ ಕುರಿತು ಸಂವಾದಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜೀವಿತಾವಧಿ ಹೆಚ್ಚಾದಂತೆ ಮತ್ತು ಜೀವನಶೈಲಿ ಬದಲಾದಂತೆ, ಆಸ್ಟಿಯೊಪೊರೋಸಿಸ್ (osteoporosis) ಡಿಜೆನೆರೇಟಿವ್ ಡಿಸ್ಕ್ (ಬೆನ್ನುಮೂಳೆಯ ಸವಕಳಿ) ಕಾಯಿಲೆ ಮತ್ತು ದೀರ್ಘಕಾಲದ ಬೆನ್ನು ನೋವು ಮುಂತಾದ ಪರಿಸ್ಥಿತಿಗಳು ಭಾರತದಲ್ಲಿ ಹೆಚ್ಚುತ್ತಿವೆ. ಏಪ್ರಿಲ್‌ 28ರಂದು ಆಸ್ಪತ್ರೆ ಆಯೋಜಿಸಿದ್ದ "ನಿಮ್ಮ ವೈದ್ಯರನ್ನು ತಿಳಿದುಕೊಳ್ಳಿ" ಕಾರ್ಯಕ್ರಮದಲ್ಲಿ ಪ್ರಮುಖ ತಜ್ಞರು ಮೂಳೆ ಅರೋಗ್ಯ ಮತ್ತು ಕೀಲು ನೋವಿನ ಚಿಕಿತ್ಸೆ ಬಗ್ಗೆ ಅಮೂಲ್ಯವಾದ ಮಾಹಿತಿ ಹಂಚಿಕೊಂಡರು. ವೈದ್ಯರು ವಿವಿಧ ಕೀಲು ಮತ್ತು ಬೆನ್ನುಮೂಳೆಯ ಸಮಸ್ಯೆಗಳು, ಹಾಗೂ ಕೀಲು ಮತ್ತು ಬೆನ್ನು ಮೂಳೆಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಹೊಸ ಭರವಸೆಯನ್ನು ಮೂಡಿಸಿರುವ ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳಂತಹ ಸುಧಾರಿತ ಚಿಕಿತ್ಸಾ ಆಯ್ಕೆಗಳ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಆಸ್ಟಿಯೊಪೊರೋಸಿಸ್ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು. ಆಸ್ಟಿಯೊಪೊರೋಸಿಸ್ ಮೂಳೆ ಖನಿಜ ಸಾಂದ್ರತೆ (ಬೋನ್ ಡೆನ್ಸಿಟಿ) ಮತ್ತು ಮೂಳೆ ದ್ರವ್ಯರಾಶಿ (ಬೋನ್ ಮಿನರಲ್ಸ್) ಕಡಿಮೆಯಾದಾಗ ಅಥವಾ ಮೂಳೆಯ ಗುಣಮಟ್ಟ ಅಥವಾ ರಚನೆಯು ಬದಲಾದಾಗ ಉಂಟಾಗುವ ತೊಂದರೆಯಾಗಿದ್ದು, ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಅತಿ ಸರಳ ಆಘಾತದಿಂದಲೂ ಸಹ ಮೂಳೆಗಳ ಮುರಿತದ ಅಪಾಯ ಹೆಚ್ಚುತ್ತದೆ. 50 ವರ್ಷ ಅಥವಾ ಅಧಿಕ ವಯಸ್ಸಿನ ಮಹಿಳೆಯರಲ್ಲಿ ತಮ್ಮ ಮಿಕ್ಕಿರುವ ಜೀವಿತಾವಧಿಯಲ್ಲಿ, 40% ಆಸ್ಟಿಯೊಪೊರೋಸಿಸ್ ಸಂಬಂಧಿತ ಮೂಳೆ ಮುರಿತದ ಸಾಧ್ಯತೆಯ ಅಪಾಯವನ್ನು ಎದುರಿಸುತ್ತಾರೆ ಎಂದು ವೈದ್ಯಕೀಯ ಅಧ್ಯಯನಗಳು ಅಂದಾಜಿಸಿವೆ.

ವಯಸ್ಸು ಹೆಚ್ಚಾಗುವುದು, ಹಾರ್ಮೋನುಗಳ ಬದಲಾವಣೆಗಳು (ವಿಶೇಷವಾಗಿ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ), ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯ ಕೊರತೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಧೂಮಪಾನದಂತಹ ಜೀವನಶೈಲಿಯ ಆಯ್ಕೆಗಳು ಸೇರಿದಂತೆ ವಿವಿಧ ಅಂಶಗಳು ಆಸ್ಟಿಯೊಪೊರೋಸಿಸ್ ಹೆಚ್ಚಳಕ್ಕೆ ಕಾರಣವಾಗಬಹುದು.

ಹೆಚ್ಚಿನ ಸಂದರ್ಭದಲ್ಲಿ ಮೂಳೆ ಮುರಿತ ಸಂಭವಿಸುವವರೆಗೆ (ಸಾಮಾನ್ಯವಾಗಿ ಬೆನ್ನುಮೂಳೆ, ಸೊಂಟ ಮತ್ತು ಮಣಿಕಟ್ಟು) ಈ ಸ್ಥಿತಿಯು ಬೆಳಕಿಗೆ ಬರುವುದಿಲ್ಲ. ಇದರಿಂದಾಗಿ ಗಮನಾರ್ಹ ಅಂಗವೈಕಲ್ಯ ಮತ್ತು ಜೀವನದ ಗುಣಮಟ್ಟದಲ್ಲಿ ಕುಸಿತ ಕಂಡುಬರುತ್ತದೆ. ಇದರಿಂದಾಗಿ ಹಿರಿಯ ವಯಸ್ಕರಲ್ಲಿ ಈ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯ ಎನಿಸಿಕೊಂಡಿದೆ.

ಆಸ್ಟಿಯೊಪೊರೋಸಿಸ್ ಸಾಮಾನ್ಯವಾಗಿ ಗೋಚರವಲ್ಲದ ಲಕ್ಷಣಗಳನ್ನು ಹೊಂದಿರುತ್ತದೆ. ಕ್ರಮೇಣ ಎತ್ತರ ಕಡಿಮೆಯಾಗುವುದು, ಬೆನ್ನುಮೂಳೆಯ ವಿರೂಪಗಳು, ವಿವರಿಸಲಾಗದ ಬೆನ್ನು ನೋವು ಮುಂದುವರಿದ ಹಂತಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ ಎಂದು ಮಣಿಪಾಲ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಮತ್ತು ರೊಬೊಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸೆ- ಸೀನಿಯರ್ ಕನ್ಸಲ್ಟೆಂಟ್ ಡಾ. ಯೋಗೀಶ್ವರ್ ಎ.ವಿ. ಹೇಳಿದರು. ವಯಸ್ಸಾಗುವಿಕೆಯ ಅನಿವಾರ್ಯ ಭಾಗ ವಲ್ಲದಿದ್ದರೂ, ಆರಂಭಿಕ ಪತ್ತೆಯ ಮೂಲಕ ಆಸ್ಟಿಯೊಪೊರೋಸಿಸ್ ಅನ್ನು ಪರಿಣಾಮಕಾರಿ ಯಾಗಿ ತಡೆಗಟ್ಟಬಹುದು ಮತ್ತು ಚಿಕಿತ್ಸೆ ನೀಡಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಯೋಗೀಶ್ವರ್ ಎ.ವಿ., "ಜನಸಾಮಾನ್ಯರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜ್ಞಾನವನ್ನು ಸಬಲೀಕರಣಗೊಳಿಸುವುದು ಬಹಳ ಮುಖ್ಯ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಜೀವನಶೈಲಿಯ ಮಾರ್ಪಾಡುಗಳ ಮೂಲಕ ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಹಸ್ತಕ್ಷೇಪದ ಮೂಲಕ ಪೂರ್ವಭಾವಿಯಾಗಿ ನಿರ್ವಹಿಸುವ ಮೂಲಕ ಆಸ್ಟಿಯೊ ಪೊರೋಸಿಸ್ ಅನ್ನು ಮತ್ತು ಮೂಳೆ ಮುರಿತಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಆಸ್ಟಿಯೊಪೊರೋಸಿಸ್ ಚಿಕಿತ್ಸೆಯ ಮುಖ್ಯ ಗುರಿಯೆಂದರೆ ಮೂಳೆ ಮುರಿತಗಳನ್ನು ಮುಂಚಿತವಾಗಿ ತಡೆಗಟ್ಟುವುದು. ಔಷಧಿಗಳು ಮತ್ತು ಜೀವನಶೈಲಿಯ ಬದಲಾವಣೆಗಳು ಆಸ್ಟಿಯೊಪೊರೋಸಿಸ್ ಅನ್ನು ನಿರ್ವಹಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ. ಆಸ್ಟಿಯೊಪೊರೋಸಿಸ್ ಅಪಾಯಕಾರಿ ಅಂಶಗಳನ್ನು ಹೊಂದಿರುವ ಯುವತಿಯರಿಗೆ, ಅವರು ಗರ್ಭಧಾರಣೆಯನ್ನು ಯೋಜಿಸುತ್ತಿದ್ದರೆ ಅವರ ಔಷಧಿ ಆಯ್ಕೆಗಳನ್ನು ನಾವು ಎಚ್ಚರಿಕೆಯಿಂದ ಪರಿಗಣಿಸುತ್ತೇವೆ ಏಕೆಂದರೆ ಗರ್ಭಿಣಿಯರು ಅಥವಾ ಹಾಲುಣಿಸುವ ಮಹಿಳೆಯರಲ್ಲಿ ಅವುಗಳನ್ನು ಬಳಸಲು ಶಿಫಾರಸು ಮಾಡಲು ಲಭ್ಯವಿರುವ ಡೇಟಾದ ಕೊರತೆಯಿದೆ" ಎಂದರು.

ಇದನ್ನು ಓದಿ: Health Tips: ಅವಸರದಲ್ಲಿ ಊಟ ಮಾಡುತ್ತೀರಾ? ಇದನ್ನು ತಪ್ಪದೆ ಓದಿ!

ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯ ಸೇವನೆ, ತೂಕ ಇಳಿಸುವ ವ್ಯಾಯಾಮಗಳು, ಧೂಮಪಾನ ವನ್ನು ತ್ಯಜಿಸುವುದು, ಮದ್ಯಪಾನವನ್ನು ಮಿತಿಗೊಳಿಸುವುದು ಸೇರಿದಂತೆ ಆರೋಗ್ಯಕರ ಜೀವನಶೈಲಿಯ ಆಯ್ಕೆಗಳನ್ನು ಅಳವಡಿಸಿಕೊಳ್ಳುವುದು ಸೇರಿ ಆಸ್ಟಿಯೊಪೊರೋಸಿಸ್ ಅನ್ನು ನಿರ್ವಹಿಸುವುದು ಮತ್ತು ತಡೆಗಟ್ಟುವ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. ಆಸ್ಟಿಯೊಪೊರೋಸಿಸ್ ಇರುವ ವ್ಯಕ್ತಿಗಳು ಬೀಳುವುದನ್ನು ತಡೆ ಗಟ್ಟುವ ತಂತ್ರಗಳಾದ ವಾಕಿಂಗ್ ಏಡ್‌ಗಳ ಬಳಕೆ, ಮನೆಯಲ್ಲಿ ಅಪಾಯಗಳ ನಿರ್ಮೂಲನೆ ಬಗ್ಗೆಯೂ ಚರ್ಚಿಸಲಾಯಿತು.