ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushka Sharma: ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ತಂದೆಯನ್ನು ನೆನೆದು ಭಾವುಕ ಸ್ಟೋರಿ ಹಂಚಿಕೊಂಡ ನಟಿ ಅನುಷ್ಕಾ

ಭಾರತ-ಪಾಕಿಸ್ತಾನ ನಡುವೆ ದಿನೇ ದಿನೇ ಉದ್ವಿಗ್ನತೆ ಪರಿಸ್ಥಿತಿ ಹರಚ್ಚಾಗುತ್ತಿದ್ದು ದೇಶದ ಭದ್ರತೆಗಾಗಿ ಭಾರತೀಯ ಸಶಸ್ತ್ರ ಪಡೆಗಳು ಯಾವ ತ್ಯಾಗಕ್ಕೂ ಸಿದ್ಧವಾಗಿರುತ್ತಾರೆ. ಅಂತೆಯೇ ತನ್ನ ತಂದೆ ಕೂಡ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಬಗ್ಗೆ ನೆನೆದು ಯೋಧರ ಕುಟುಂಬಗಳು ದೇಶಕ್ಕಾಗಿ ಮಾಡಿದ ತ್ಯಾಗಗಳ ಕುರಿತು ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ..

ತಂದೆ ಬಗ್ಗೆ ಅನುಷ್ಕಾ ಶರ್ಮಾ ಭಾವುಕ ಪೋಸ್ಟ್‌!

Profile Pushpa Kumari May 11, 2025 5:06 PM

ನವದೆಹಲಿ: ಬಾಲಿವುಡ್ ಚತ್ರರಂಗದಲ್ಲಿ ಅನೇಕ ಹಿಟ್ ಸಿನಿಮಾದಲ್ಲಿ ನಟಿಸಿರುವ ನಟಿ ಅನುಷ್ಕಾ ಶರ್ಮಾ (Anushka Sharma) ಈಗ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿದ್ದಾರೆ. ನಟಿ ಅನುಷ್ಕಾ ಶರ್ಮಾ ಅವರು ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. ಪತಿ ವಿರಾಟ್ ಹಾಗೂ ಮುದ್ದು ಮಕ್ಕಳ ಜೊತೆಗಿನ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ಕೂಡ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ದೇಶ ಕಾಯುವ ಸೈನಿಕನ ಬಗ್ಗೆ ಹಾಕಿದ್ದ ವಿಶೇಷ ಪೋಸ್ಟ್ ಮೂಲಕ ಜನಮನ ಗೆದ್ದಿದ್ದಾರೆ. ಭಾರತ-ಪಾಕಿಸ್ತಾನ ನಡುವೆ ದಿನೇ ದಿನೇ ಉದ್ವಿಗ್ನತೆ ಪರಿಸ್ಥಿತಿ ಹೆಚ್ಚಾಗುತ್ತಿದ್ದು ದೇಶದ ಭದ್ರತೆಗಾಗಿ ಭಾರತೀಯ ಸಶಸ್ತ್ರ ಪಡೆಗಳು ಯಾವ ತ್ಯಾಗಕ್ಕೂ ಸಿದ್ಧವಾಗಿರುತ್ತಾರೆ. ಅಂತೆಯೇ ತನ್ನ ತಂದೆ ಕೂಡ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಬಗ್ಗೆ ನೆನೆದು ಯೋಧರ ಕುಟುಂಬಗಳು ದೇಶಕ್ಕಾಗಿ ಮಾಡಿದ ತ್ಯಾಗಗಳ ಕುರಿತು ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಟಿ ಅನುಷ್ಕಾ ಶರ್ಮಾ ಅವರು ನಿವೃತ್ತ ಕರ್ನಲ್ ಅಜಯ್ ಕುಮಾರ್ ಶರ್ಮಾ ಅವರ ಪುತ್ರಿ ಎಂಬುದು ಬಹುತೇಕರಿಗೆ ಗೊತ್ತಿಲ್ಲದ ಸಂಗತಿ. ಅನುಷ್ಕಾ ಶರ್ಮಾ ತಂದೆ ಕರ್ನಲ್ ಅಜಯ್ ಕುಮಾರ್ ಅವರು ಭಾರತೀಯ ಸೇನೆಗೆ ನೀಡಿದ್ದ ಕೊಡುಗೆ ಅಪಾರ. ಅವರು 1982 ರಿಂದ ಆಪರೇಷನ್ ಬ್ಲೂಸ್ಟಾರ್ ಮತ್ತು ಕಾರ್ಗಿಲ್ ಯುದ್ಧ ಸೇರಿದಂತೆ ಪ್ರತಿಯೊಂದು ಯುದ್ಧದಲ್ಲೂ ಸೇವೆ ಸಲ್ಲಿಸಿದ್ದಾರೆ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

2012ರಲ್ಲಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ನಟಿ ಅನುಷ್ಕಾ ಶರ್ಮಾ ತನ್ನ ತಂದೆ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ತನ್ನ ತಂದೆ ಪಾಕಿಸ್ತಾನದ ವಿರುದ್ಧ ಹೋರಾಡಿದಾಗ ಅನುಷ್ಕಾ ಶರ್ಮಾ ಅವರಿಗೆ ಕೇವಲ 11 ವರ್ಷ ವಯಸ್ಸು. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾನು ತುಂಬಾ ಚಿಕ್ಕವಳಾಗಿದ್ದೆ, ನನ್ನ ತಾಯಿ ದಿನವಿಡೀ ಯಾವಾಗಲೂ ಸುದ್ದಿ ಚಾನೆಲ್ ನೋಡಿ ಸಾವು ನೋವುಗಳನ್ನು ಘೋಷಿಸಿದಾಗ ಭಯಗೊಂಡು ವಿಚಲಿತವಾಗುತ್ತಿದ್ದರು. ನನ್ನ ತಾಯಿಯನ್ನು ನೋಡಲು ನನಗೆ ಭಯವಾಗುತ್ತಿತ್ತು. ನನ್ನ ತಂದೆ ಕರೆ ಮಾಡಿದಾಗ ಅವರು ಹೆಚ್ಚು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರು ಯುದ್ಧ ಮಾಡುತ್ತಿದ್ದಾರೆಂದು ಅರಿವಿಲ್ಲದೆ ನಾನು ನನ್ನ ಶಾಲೆ, ಗೆಳೆಯರು ಮತ್ತು ಇತರ ಎಲ್ಲದರ ಬಗ್ಗೆ ಮಾತನಾಡುತ್ತಲೇ ಇರುತ್ತಿದ್ದೆ. ನಾನು ನಟಿಯಾಗುವುದಕ್ಕಿಂತ ಹೆಚ್ಚಾಗಿ ಸೇನಾ ಅಧಿಕಾರಿಯ ಮಗಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಅವರು ತಮ್ಮ ಸಂದರ್ಶನದ ಸಂದರ್ಭದಲ್ಲಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಸ್ತುತ ಗಂಭೀರ ಕಲಹ ಏರ್ಪಡುತ್ತಿದೆ. ಮೇ 8 ರಂದು ಭಾರತ ಪಾಕಿಸ್ತಾನದ ಕ್ಷಿಪಣಿಗಳನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ನಟಿ ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ ನಲ್ಲಿ ವಿಶೇಷ ಕ್ಯಾಪ್ಶನ್ ನೀಡಿದ್ದಾರೆ. ನಮ್ಮ ಭಾರತೀಯ ಸಶಸ್ತ್ರ ಪಡೆಗಳು ಈ ಸಮಯದಲ್ಲಿ ನಮ್ಮನ್ನು ರಕ್ಷಿಸಿದ್ದಕ್ಕಾಗಿ ಅವರಿಗೆ ನಾವೆಲ್ಲರೂ ಶಾಶ್ವತವಾಗಿ ಕೃತಜ್ಞರಾಗಿರುತ್ತೇವೆ. ಅವರು ಮತ್ತು ಅವರ ಕುಟುಂಬಗಳು ಮಾಡಿದ ತ್ಯಾಗಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಜೈ ಹಿಂದ್ ಎಂದು ಬರೆದಿದ್ದಾರೆ.

ಇದನ್ನು ಓದಿ: Anushka Sharma: ತಮ್ಮ ಸೌಂದರ್ಯದ ರಹಸ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಅವರು ಮದುವೆಯಾದ ಬಳಿಕ ಬಾಲಿವುಡ್‌ನಿಂದ ದೂರ ಉಳಿದಿದ್ದಾರೆ. 2018 ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಝೀರೋ ಚಿತ್ರದಲ್ಲಿ ಕೊನೆದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾ ಶೂಟಿಂಗ್ ‌ ಮಾಡಿದ್ದರೂ, ಚಿತ್ರದ ಬಿಡುಗಡೆಯನ್ನು ಇನ್ನೂ ಘೋಷಿಸಲಾಗಿಲ್ಲ. ಮುಂದಿನ ದಿನದಲ್ಲಿ ಬಾಲಿವುಡ್ ನಟಿ ಅನುಷ್ಕಾ ಪುನಃ ವೃತ್ತಿ ಜೀವನ ಮುಂದುವರೆಸಬೇಕು ಎಂಬುದು ಅವರ ಅಭಿಮಾನಿಗಳ ಬಹುದೊಡ್ಡ ಮನದಾಸೆಯಾಗಿದೆ.