Varun Dhawan: ʼಬಾರ್ಡರ್-2ʼ ಚಿತ್ರದಲ್ಲಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಧನ ಪಾತ್ರದಲ್ಲಿ ನಟ ವರುಣ್ ಧವಣ್?
ʼಬಾರ್ಡರ್ 2ʼ ಚಿತ್ರದಲ್ಲಿ ಬಾಲಿವುಡ್ ನಟ ವರುಣ್ ಧವನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ವರುಣ್ ಧವನ್ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪರಾಕ್ರಮ ಮೆರೆದ ಮೇಜರ್ ಹೋಷಿ ಯಾರ್ ಸಿಂಗ್ ದಹಿಯಾ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Varun Dhawan To Play THIS Param Vir Chakra Awardee In Border 2


ನಟ ವರುಣ್ ಧವನ್ ಸಿನಿಮಾ ರಂಗವನ್ನು ಪ್ರವೇಶಿಸಿದ್ದು, ನಟನಾಗಿ ಅಲ್ಲ, ಬದಲಾಗಿ ʼಮೈ ನೇಮ್ ಈಸ್ ಖಾನ್ʼ ಚಿತ್ರದ ಸಹಾಯಕ ನಿರ್ದೇಶಕರಾಗಿ. ಅಸಿಸ್ಟಂಟ್ ಡೈರಕ್ಟರ್ ಆಗಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ʼಸ್ಟೂಡೆಂಟ್ ಆಫ್ ದಿ ಇಯರ್ʼ ಸಿನಿಮಾದಲ್ಲಿ ನಟಿಸುವ ಮೂಲಕ ಜನಪ್ರಿಯರಾದರು. ಸದ್ಯ ನಟ ವರುಣ್ ʼಬಾರ್ಡರ್ 2ʼ ಚಿತ್ರದ ಮೂಲಕ ಮಿಂಚಲು ಸಜ್ಜಾಗಿದ್ದಾರೆ.

ನಟ ವರುಣ್ ಧವನ್ ಸನ್ನಿ ಡಿಯೋಲ್ ಜತೆಗೆ ಬಹು ನಿರೀಕ್ಷಿತ ʼಬಾರ್ಡರ್ 2ʼ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವು 1997ರ 'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾಗಿದೆ. ಮೊದಲ ಭಾಗದಲ್ಲಿ ಸನ್ನಿ ಡಿಯೋಲ್ ಜತೆ ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ಅಕ್ಷಯ್ ಖನ್ನಾ, ಸುದೇಶ್ ಬೆರ್ರಿ ಮತ್ತು ಪುನೀತ್ ಇಸ್ಸಾರ್, ಕುಲಭೂಷಣ್ ಖರ ಬಂದಾ, ಟಬು, ರಾಖಿ, ಪೂಜಾ ಭಟ್ ಮತ್ತು ಶರ್ಬಾನಿ ಮುಖರ್ಜಿ ನಟಿಸಿದ್ದರು. ಲೋಂಗೆ ವಾಲ ಕದನದ ಘಟನೆಗಳ ಕುರಿತಾದ ಈ ಚಿತ್ರವು 90ರ ದಶಕದಲ್ಲಿ ಬ್ಲಾಕ್ಬಸ್ಟರ್ ಹಿಟ್ ಗಳಿಸಿತ್ತು.

ವರುಣ್ ಧವನ್ ಪ್ರಸ್ತುತ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ʼಹೈ ಜವಾನಿ ತೋ ಇಷ್ಕ್ ಹೋನಾ ಹೈʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ʼಬಾರ್ಡರ್ 2ʼ ಸಿನಿಮಾದಲ್ಲಿ ವರುಣ್ ದವನ್ ಮೇಜರ್ ಹೋಶಿಯಾರ್ ಸಿಂಗ್ ದಹಿಯಾ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.

ಮೇಜರ್ ಹೋಶಿಯಾರ್ ಸಿಂಗ್ 1976ರಲ್ಲಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದು ಕೊಂಡಿದ್ದರು. 1971ರ ಇಂಡೋ-ಪಾಕ್ ಯುದ್ಧದ ನಂತರ ಕರ್ನಲ್ ಆಗಿ ಬಡ್ತಿ ಪಡೆದ ದಹಿಯಾ ಅವರ ಪಾತ್ರವನ್ನು ವರುಣ್ ನಿರ್ವಹಿಸಲಿದ್ದಾರೆ. ಬ್ರಿಟಿಷರ ಆಳ್ವಿಕೆ ಇದ್ದಾಗ ಭಾರತದಲ್ಲಿ ಯುದ್ಧದ ಸಂದರ್ಭದಲ್ಲಿ ಸರ್ವೋತ್ತಮ ಶೌರ್ಯವನ್ನು ಪ್ರದರ್ಶಿಸಿದ ಯೋಧರಿಗೆ ಗೌರವವಾರ್ಥವಾಗಿ ಪ್ರಶಸ್ತಿ ನೀಡಲಾಗುತ್ತಿತ್ತು. ಮೇಜರ್ ಹೋಷಿಯಾರ್ ಅವರು ಈ ಪ್ರಶಸ್ತಿ ಪಡೆದುಕೊಂಡಿದ್ದರು. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದು ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರ ಪ್ರಶಸ್ತಿ ಕೂಡ ಇವರು ಪಡೆದಿದ್ದರು.

ವರುಣ್ ಧವನ್ ಈ ಪಾತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ʼಬಾರ್ಡರ್ 2ʼ ಅನ್ನು ಕಳೆದ ವರ್ಷ ಜೂನ್ನಲ್ಲಿ ಘೋಷಿಸಲಾಗಿದ್ದು, ತಾರಾಗಣದಲ್ಲಿ ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಕೂಡ ನಟಿಸಲಿದ್ದಾರೆ. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರವು ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಜೆಪಿ ದತ್ತ ಮತ್ತು ನಿಧಿ ದತ್ತ ಅವರನ್ನೊಳಗೊಂಡ ಪವರ್ಹೌಸ್ ನಿರ್ಮಾಣ ತಂಡದಿಂದ ತಯಾರಾಗುತ್ತಿದೆ. ʼಬಾರ್ಡರ್ 2ʼ 2026ರ ಜನವರಿ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.