ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: 7 ದಿನಗಳಿಂದ ಸೆನ್ಸೆಕ್ಸ್‌, ನಿಫ್ಟಿ ಜಿಗಿತ! ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ಏಳು ದಿನಗಳಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಚೇತರಿಸುತ್ತಿದೆ. ಇಂದು ಸೆನ್ಸೆಕ್ಸ್‌ 520 ಅಂಕ ಏರಿಕೆಯಾಗಿ 80,116ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 161 ಅಂಕ ಏರಿಕೆಯಾಗಿ 24,328ಕ್ಕೆ ಜಿಗಿಯಿತು. ಮುಖ್ಯವಾಗಿ ಐಟಿ, ಫಾರ್ಮಾ ಮತ್ತು ಆಟೊಮೊಬೈಲ್‌ ಷೇರುಗಳು ಚೇತರಿಸಿತು.

7 ದಿನಗಳಿಂದ ಸೆನ್ಸೆಕ್ಸ್‌, ನಿಫ್ಟಿ ಜಿಗಿತ!

Profile Vishakha Bhat Apr 23, 2025 8:30 PM

ಕೇಶವಪ್ರಸಾದ.ಬಿ

ನವದೆಹಲಿ: ಕಳೆದ ಏಳು ದಿನಗಳಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಚೇತರಿಸುತ್ತಿದೆ. ಇಂದು (Stock market) ಸೆನ್ಸೆಕ್ಸ್‌ 520 ಅಂಕ ಏರಿಕೆಯಾಗಿ 80,116ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 161 ಅಂಕ ಏರಿಕೆಯಾಗಿ 24,328ಕ್ಕೆ ಜಿಗಿಯಿತು. ಮುಖ್ಯವಾಗಿ ಐಟಿ, ಫಾರ್ಮಾ ಮತ್ತು ಆಟೊಮೊಬೈಲ್‌ ಷೇರುಗಳು ಚೇತರಿಸಿತು. ಟೆಕ್‌ ಮಹೀಂದ್ರಾ ಷೇರು ದರ 5% ಏರಿದ್ರೆ, ಟಾಟಾ ಮೋಟಾರ್ಸ್‌ 4% ಹೆಚ್ಚಳ ದಾಖಲಿಸಿತು. ಬುಧವಾರ ಬೆಳಗ್ಗೆಯೇ ಸೂಚ್ಯಂಕಗಳು ಚೇತರಿಸಿತ್ತು.

ಷೇರು ಮಾರುಕಟ್ಟೆಯ ಚೇತರಿಕೆಗೆ ಕಾರಣವೇನು ?

ಅಮೆರಿಕ ಮತ್ತು ಚೀನಾ ನಡುವೆ ಸುಂಕ ಸಮರಕ್ಕೆ ಸಂಬಂಧಿಸಿ ಮಾತುಕತೆಯಾಗುವ ಸುಳಿವು ಸಿಕ್ಕಿದ್ದು, ಷೇರು ಮಾರುಕಟ್ಟೆ ಚೇತರಿಸುತ್ತಿದೆ. ಸಂಧಾನ ನಡೆದರೆ ಚೀನಾ ವಿರುದ್ಧದ ಪ್ರತಿ ಸುಂಕದಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ನೀಡಿರುವ ಹೇಳಿಕೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಿದೆ. ಜತೆಗೆ ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೊಮ್‌ ಪೊವೆಲ್‌ ಅವರನ್ನು ವಜಾಗೊಳಿಸುವ ಉದ್ದೇಶವೂ ತಮಗಿಲ್ಲ ಎಂದು ಟ್ರಂಪ್‌ ಹೇಳಿರುವುದು ಪ್ರಭಾವ ಬೀರಿದೆ. ಎಚ್‌ಸಿಎಲ್‌ ಟೆಕ್‌ನ ಉತ್ತಮ ತ್ರೈಮಾಸಿಕ ರಿಸಲ್ಟ್‌ ಕೂಡ ಸಕಾರಾತ್ಮಕವಾಗಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕೂಡ ಮತ್ತೆ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದು ಸೂಚ್ಯಂಕಗಳ ಚೇತರಿಕೆಗೆ ಮತ್ತೊಂದು ಪ್ರಬಲ ಕಾರಣವಾಗಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇವತ್ತು ಎಲ್ಲ 13 ಸೆಕ್ಟರ್‌ಗಳಲ್ಲಿಯೂ ಲಾಭ ದಾಖಲಾಯಿತು. ಐಟಿ ಇಂಡೆಕ್ಸ್‌ 2.24% ಏರಿತು.

ಇಂದಿನ ಹೈಲೈಟ್ಸ್‌ ಗಮನಿಸಿದರೆ

  • ಎಚ್‌ಸಿಎಲ್‌ ಟೆಕ್‌ ಷೇರು 6% ಏರಿಕೆ ದಾಖಲಿಸಿತು. ಇದರ ಜನವರಿ-ಮಾರ್ಚ್‌ ತ್ರೈಮಾಸಿಕ ಫಲಿತಾಂಶ ತೃಪ್ತಿಕರವಾಗಿತ್ತು.
  • ಸೈಂಟ್‌ ಡಿಎಲ್‌ ಎಂ ಕಂಪನಿಯ ಷೇರು ದರದಲ್ಲಿ 12% ಹೆಚ್ಚಳ ಆಯಿತು. ಇದರ ಕ್ಯೂ 4 ರಿಸಲ್ಟ್‌ನಲ್ಲಿ 36% ಏರಿಕೆ ಆಗಿರುವುದು ಪರಿಣಾಮ ಬೀರಿತು.
  • ಅಥೆರ್‌ ಎನರ್ಜಿಯ ಐಪಿಒ ನಿಗದಿಯಾಗಿರುವುದು ಕೂಡ ಪ್ರಭಾವ ಬೀರಿತು.
  • ಹ್ಯಾವೆಲ್ಸ್‌ ಷೇರಿನ ದರದಲ್ಲಿ ಮಾತ್ರ 5% ಇಳಿಕೆ ಆಯಿತು. ಡಿಮಾಂಡ್‌ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿರುವುದು ಇದಕ್ಕೆ ಕಾರಣವಾಗಿತ್ತು.

ಸೆನ್ಸೆಕ್ಸ್‌ ಇಂಡೆಕ್ಸ್‌ನಲ್ಲಿ ಇಂದು ಟಾಪ್‌ ಗೈನರ್ಸ್‌ ಮತ್ತು ಟಾಪ್‌ ಲಾಸರ್ಸ್‌ ಯಾರು?

Au Small Finance Bank Ltd. 665/- (8.42%)

Latent View Analytics Ltd. 424/- (8.23%)

HCL Technologies Ltd. 1594/- (7.71%)

Redington Ltd. 238/- (6.69%)

ಯಾರಿಗೆ ಹೆಚ್ಚು ನಷ್ಟವಾಯಿತು ?

Spandana Sphoorty Financial Ltd. 304/- (-5.96%)

Blue Star Ltd. 1935/- (-5.26%)

Foce India Ltd. 1360/- (-5.00%)

J B Chemicals & Pharmaceuticals Ltd. 1586/- (-4.21%)

ಈ ಸುದ್ದಿಯನ್ನೂ ಓದಿ: Stock Market: 25,000 ಅಂಕಗಳತ್ತ ನಿಫ್ಟಿ ಓಟ; ಲಾಭಕ್ಕೆ 91 ಷೇರುಗಳ ಲಿಸ್ಟ್ ಇಲ್ಲಿದೆ

ಹಾಗಾದ್ರೆ ಷೇರು ಮಾರುಕಟ್ಟೆಯ ಈ ಏರಿಕೆ ಮತ್ತೊಂದು ಕರೆಕ್ಷನ್‌ಗೆ ಕಾರಣವಾಗಲಿದೆಯೇ ಅಥವಾ ಸ್ಥಿರವಾಗಿ ಏಳಲಿದೆಯೇ? ಐಸಿಐಸಿಐ ಸೆಕ್ಯುರಿಟಸ್‌ನ ವಿನೋದ್‌ ಕಾರ್ಕಿ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ಸ್ಥಿರತೆಯೊಂದಿಗೆ ಬೆಳೆಯುತ್ತಿದೆ. ಅಮೆರಿಕ-ಭಾರತದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೂ ಸಿದ್ಧತೆ ನಡೆಯುತ್ತಿದೆ. ಆದ್ದರಿಂದ ಯಾವುದೇ ರಿಸೆಶನ್‌ ಆದ್ರೂ ತಡೆಯುವ ಶಕ್ತಿ ಭಾರತಕ್ಕಿದೆ. ಹೀಗಾಗಿ ಷೇರು ಮಾರುಕಟ್ಟೆಯ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರಬಹುದು ಎನ್ನುತ್ತಾರೆ ಅವರು.