Stock Market: 25,000 ಅಂಕಗಳತ್ತ ನಿಫ್ಟಿ ಓಟ; ಲಾಭಕ್ಕೆ 91 ಷೇರುಗಳ ಲಿಸ್ಟ್ ಇಲ್ಲಿದೆ
ಭಾರತೀಯ ಷೇರು ಮಾರುಕಟ್ಟೆಯಲ್ಲಿ BSE ಸೂಚ್ಯಂಕ ಸೆನ್ಸೆಕ್ಸ್ ಮತ್ತು NSE ಸೂಚ್ಯಂಕ ನಿಫ್ಟಿ ಕಳೆದ ಕೆಲ ದಿನಗಳಿಂದ ಗಣನೀಯವಾಗಿ ಚೇತರಿಸುತ್ತಿವೆ. ಅಮರಿಕದ ಟಾರಿಫ್ ಸಂಘರ್ಷಕ್ಕೆ 90 ದಿನಗಳ ತಡೆ ಬಿದ್ದಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ. ICICI Securities ಪ್ರಕಾರ ನಿಫ್ಟಿ ಮುಂದಿನ 6 ತಿಂಗಳಿನಲ್ಲಿ 25,500 ಅಂಕಗಳ ಗಡಿಯನ್ನು ದಾಟಲಿದೆ


ಕೇಶವಪ್ರಸಾದ.ಬಿ
ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ (Stock Market) BSE ಸೂಚ್ಯಂಕ ಸೆನ್ಸೆಕ್ಸ್ ಮತ್ತು NSE ಸೂಚ್ಯಂಕ ನಿಫ್ಟಿ ಕಳೆದ ಕೆಲ ದಿನಗಳಿಂದ ಗಣನೀಯವಾಗಿ ಚೇತರಿಸುತ್ತಿವೆ. ಅಮರಿಕದ ಟಾರಿಫ್ ಸಂಘರ್ಷಕ್ಕೆ 90 ದಿನಗಳ ತಡೆ ಬಿದ್ದಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ. ICICI Securities ಪ್ರಕಾರ ನಿಫ್ಟಿ ಮುಂದಿನ 6 ತಿಂಗಳಿನಲ್ಲಿ 25,500 ಅಂಕಗಳ ಗಡಿಯನ್ನು ದಾಟಲಿದೆ. ಬ್ಯಾಂಕಿಂಗ್, ಪಿಎಸ್‌ಯು ಅಥವಾ ಸಾರ್ವಜನಿಕ ವಲಯ, ಲೋಹ, ಟೆಲಿಕಾಂ, ಫಾರ್ಮಾ ಮತ್ತು Consumption ವಲಯದ ಷೇರುಗಳು ಗಮನಾರ್ಹ ಲಾಭ ಗಳಿಸಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್ ತಿಳಿಸಿದೆ. ಜತೆಗೆ ಐಟಿ, ಕ್ಯಾಪಿಟಲ್ ಗೂಡ್ಸ್ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ವಾಲ್ಯುಯೇಶನ್ ಆಕರ್ಷಕವಾಗಿದೆ ಎಂದು ತಿಳಿಸಿದ್ದು, ಈ ಎಲ್ಲ ವಲಯಗಳಲ್ಲಿ ಒಟ್ಟು 91 ಷೇರುಗಳನ್ನು ಆಯ್ಕೆ ಮಾಡಿದೆ.
ಸ್ಟಾಕ್ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳು ಏರುಗತಿಯಲ್ಲಿ ಇರುವ ಸಂದರ್ಭದ ಯಾವ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಆಲೋಚನೆಯಲ್ಲಿ ಇರುವ ರಿಟೇಲ್ ಹೂಡಿಕೆದಾರರಿಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಈ ಲಿಸ್ಟ್ ಸಹಕಾರಿಯಾಗಬಹುದು.
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಹಣಕಾಸು, ಬ್ಯಾಂಕಿಂಗ್ ಸ್ಟಾಕ್ಸ್:
ಎಸ್‌ಬಿಐ (SBI)
ಎಚ್‌ಡಿಎಫ್‌ಸಿ ಬ್ಯಾಂಕ್
ಕೋಟಕ್ ಬ್ಯಾಂಕ್
ಬ್ಯಾಂಕ್ ಆಫ್ ಬರೋಡಾ
ಬಜಾಜ್ ಫೈನಾನ್ಸ್
ಚೋಳ ಫೈನಾನ್ಸ್
ಎಚ್‌ಡಿಎಫ್‌ಸಿ ಎಎಂಸಿ
ಎಸ್‌ಬಿಐ ಕಾರ್ಡ್ಸ್
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಪಿಎಸ್‌ಯು ಸ್ಟಾಕ್ಸ್:
ಎಚ್‌ಎಎಲ್ (HAL)
ಬಿಇಎಲ್ (BEL)
ಬಿಡಿಎಲ್ (BDL)
ಎಂಜಿನಿಯರ್ಸ್ ಇಂಡಿಯಾ
ಬ್ಯಾಂಕ್ ಆಫ್ ಇಂಡಿಯಾ
ಪಿಎಫ್‌ಸಿ (PFC)
ಜಿಐಪಿಸಿಎಲ್ (GIPL)
ಎಸ್‌ಎಐಎಲ್ (SAIL)
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ Capital Goods ಸ್ಟಾಕ್ಸ್:
ಎಲ್ &ಟಿ (L&T)
ಎಬಿಬಿ (ABB)
ಕೆಇಸಿ (KEC)
ಟಿಮ್‌ಕೆನ್
ವಟೆಕ್ ವಬಾಗ್
ಬೆಮೆಲ್
ಎಸಿಇ (ACE)
ಅಸ್ತ್ರ ಮೈಕ್ರೊವೇವ್
ವೋಲ್ಟಾ ಟೆಕ್ನೊ ಎಲೆಕ್ಟ್ರಿಕ್
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ತೈಲ, ಅನಿಲ, ಇಂಧನ ವಲಯದ ಸ್ಟಾಕ್ಸ್:
ರಿಲಯನ್ಸ್ ಇಂಡಸ್ಟ್ರೀಸ್
ಎಚ್‌ಪಿಸಿಎಲ್ (HPCL)
ಎನ್‌ಟಿಪಿಸಿ (NTPC)
ಟಾಟಾ ಪವರ್
ಜೆಎಸ್‌ಡಬ್ಲ್ಯು ಎನರ್ಜಿ
ಸಿಜಿ ಪವರ್
ಕೋಲ್ ಇಂಡಿಯಾ
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಆಟೊಮೊಬೈಲ್ಸ್ ಸ್ಟಾಕ್ಸ್:
ಮಹೀಂದ್ರಾ & ಮಹೀಂದ್ರಾ
ಟಾಟಾ ಮೋಟಾರ್ಸ್
ಐಷರ್ ಮೋಟಾರ್ಸ್
ಅಪೊಲೊ ಟೈರ್ಸ್
ಎಕ್ಸೈಡ್ ಇಂಡಸ್ಟ್ರೀಸ್
ಮಿಂಡಾ ಕಾರ್ಪ್
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಐಟಿ ಸ್ಟಾಕ್ಸ್:
ಟಿಸಿಎಸ್
ಟೆಕ್ ಮಹೀಂದ್ರಾ
LTI ಮೈಂಡ್ ಟ್ರೀ
ಪರ್ಸಿಸ್ಟೆಂಟ್ ಸಿಸ್ಟಮ್ಸ್
ನ್ಯೂಜೆನ್ ಸಾಫ್ಟ್‌ವೇರ್
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಕಂನ್ಸಮ್ಷನ್ /ರಿಟೇಲ್ ಸ್ಟಾಕ್ಸ್:
ಟೈಟನ್
ಇಂಡಿಯನ್ ಹೋಟೆಲ್ಸ್
ಅಂಬೆರ್
ಯುನೈಟೆಡ್ ಸ್ಪಿರಿಟ್ಸ್
ಹ್ಯವೆಲ್ಸ್ ಇಂಡಿಯಾ
ವಿ-ಗಾರ್ಡ್
ಟಾಟಾ ಕನ್‌ಸ್ಯೂಮರ್
ಮ್ಯಾರಿಕೊ ಇಂಡಿಯಾ
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಫಾರ್ಮಾ/ಕೆಮಿಕಲ್ಸ್ ಸ್ಟಾಕ್ಸ್:
ಸನ್ ಫಾರ್ಮಾ
ಅಜಂತಾ ಫಾರ್ಮಾ
ಡಿವೀಸ್ ಲ್ಯಾಬ್ಸ್
ಪಿರಮಲ್ ಫಾರ್ಮಾ
ಸಿಂಜಿನ್
ಅಪೊಲೊ ಹಾಸ್ಪಿಟಲ್ಸ್
ನವಿನ್ ಫ್ಲೋರಿನ್
ಎಸ್‌ಆರ್‌ಎಫ್ (SRF)
ಕೋರಮಂಡಲ್ ಫರ್ಟಿಲೈಸರ್ಸ್
ದೀಪಕ್ ಫರ್ಟಿಲೈಸರ್ಸ್
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ರಿಯಲ್ ಎಸ್ಟೇಟ್ ಸ್ಟಾಕ್ಸ್:
ಡಿಎಲ್‌ಎಫ್ (DLF)
ಗೋದ್ರೇಜ್ ಪ್ರಾಪರ್ಟೀಸ್
ಪ್ರೆಸ್ಟೀಜ್
ಮ್ಯಾಕ್ಸ್ ಎಸ್ಟೇಟ್
ಸೆಂಚುರಿ ಪ್ಲೇ ಬೋರ್ಡ್ಸ್
ಕಜಾರಿಯಾ ಸಿರಾಮಿಕ್ಸ್
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಇನ್‌ಫ್ರಾ, ಮೆಟಲ್ಸ್ ಸ್ಟಾಕ್ಸ್:
ಅಲ್ಟ್ರಾ ಟೆಕ್ ಸಿಮೆಂಟ್
ಜೆಕೆ ಲಕ್ಷ್ಮೀ
ರಾಮ್ಕೊ ಸಿಮೆಂಟ್
ದಾಲ್ಮಿಯಾ ಭಾರತ್
ಅದಾನಿ ಪೋರ್ಟ್ಸ್
ಕೆಎನ್‌ಆರ್ ಕನ್‌ಸ್ಟ್ರಕ್ಷನ್
ಜೆಎಸ್‌ಡಬ್ಲ್ಯು ಇನ್‌ಫ್ರಾ
ಎನ್‌ಸಿಸಿ (NCC)
JSW ಸ್ಟೀಲ್
ಟಾಟಾ ಸ್ಟೀಲ್
ಹಿಂಡಾಲ್ಕೊ
ಎಚ್‌ಇಜಿ (HEG)
ICICI Securities ಪ್ರಕಾರ ಈಗ ಹೂಡಿಕೆಗೆ ಆಯ್ಕೆ ಮಾಡಬಹುದಾದ ಇತರ ಸ್ಟಾಕ್ಸ್:
ಭಾರ್ತಿ ಏರ್‌ಟೆಲ್
ಕೆಪಿಆರ್ ಮಿಲ್ಸ್
ವಿಟಿಎಲ್
ಲೆಮೆನ್ ಟ್ರೀ ಹೋಟೆಲ್ಸ್
ಚಾಲೆಟ್ ಹೋಟೆಲ್ಸ್
ಏರೊಫ್ಲೆಕ್ಸ್
ಪಿಸಿಬಿಎಲ್ (PCBL)
ಪಿಎನ್‌ಬಿ ಹೌಸಿಂಗ್
ಇರ್ಕಾನ್ (IRCON)
ಹಿಕಾಲ್ HIKAL
ಸಿರ್ಮಾ (Syrma)
1 ಲಕ್ಷ ರೂ. ಗಡಿ ದಾಟಿದ ಚಿನ್ನ
ಇದೇ ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ ಸಮೀಪಿಸುತ್ತಿರುವಂತೆಯೇ ಬಂಗಾರದ ದರ ಪ್ರತಿ 10 ಗ್ರಾಮ್‌ಗೆ 1 ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ 3% ಜಿಎಸ್‌ಟಿ ಸೇರಿದೆ. ಬಂಗಾರದ ಪ್ರಿಯರಿಗೆಲ್ಲ ಇದು ಅತಿ ದೊಡ್ಡ ಆಘಾತ ತಂದಿದೆ. ಹಾಗಾದರೆ ಈಗಿನ ಬೆಲೆಯಲ್ಲಿ ಚಿನ್ನ ಖರೀದಿಸಬಹುದಾ?
ಟ್ರಂಪ್ ಟಾರಿಫ್ ಪರಿಣಾಮ ಉಂಟಾಗಿರುವ ಅನಿಶ್ಚಿತತೆಯ ಪರಿಣಾಮ ಬಂಗಾರದ ದರ ಏರಿಕೆಯಾಗಿದೆ. ದಿನೇ ದಿನೆ ಜ್ವರದ ಹಾಗೆ ಬಂಗಾರದ ದರ ಏರುತ್ತಿರುವುದರದಿಂದ, ಈ ಸಲ ಅಕ್ಷಯ ತೃತೀಯ ಸಂದರ್ಭ ಜ್ಯುವೆಲ್ಲರಿ ಮಳಿಗೆಗಳಲ್ಲಿ ಜನರ ಸಂದಣಿ ಇರುವ ಸಾಧ್ಯತೆ ಕಡಿಮೆಯಾಗಿದೆ.
ತಜ್ಞರ ಪ್ರಕಾರ ನಿಮ್ಮ ಹೂಡಿಕೆಯಲ್ಲಿ 10-15% ಹಣವನ್ನು ಮಾತ್ರ ಈಗ ಚಿನ್ನದಲ್ಲಿ ಹೂಡಿಕೆ ಮಾಡಬಹುದು. 30-40% ಲೆಕ್ಕದಲ್ಲಿ ಕೇವಲ ಚಿನ್ನದಲ್ಲಿ ಇನ್ವೆಸ್ಟ್ ಮಾಡೋದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಬಂಗಾರದ ದರ 1 ಲಕ್ಷದ ಗಡಿ ಮುಟ್ಟಿರುವ ಹಿನ್ನೆಲೆಯಲ್ಲಿ ಈ ವರ್ಷ ಭಾರತದ ಚಿನ್ನದ ಆಮದು 700ರಿಂದ 800 ಟನ್‌ಗೆ ಇಳಿಯಬಹುದು. ಕಳೆದ ವರ್ಷ 802 ಟನ್ ಬಂಗಾರ ಆಮದಾಗಿತ್ತು ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಅಂದರೆ ಚಿನ್ನಕ್ಕೆ ಬೇಡಿಕೆ ಸ್ವಲ್ಪ ಕಡಿಮೆಯಾಗಬಹುದು ಎಂದು ವಿವರಿಸಿದೆ.
ನೋಡಿ,ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನದ ಪ್ರಿಯರನ್ನು ಹೊಂದಿರುವ ದೇಶ ಭಾರತ. ಭಾರತೀಯರು ಪ್ರಾಚೀನ ಕಾಲದಿಂದಲೂ ಬಂಗಾರವನ್ನು ಆಪದ್ಧನ ಎಂದು ಕರೆದು ಗೌರವದ ಸ್ಥಾನವನ್ನು ನೀಡಿದವರು. ಪ್ರತಿ ಮನೆಯಲ್ಲೂ ಬಂಗಾರವನ್ನು ಇಷ್ಟಪಡುವವರು ಇಲ್ಲಿ ಸಿಗುತ್ತಾರೆ. ಹೆಣ್ಣು ಮಕ್ಕಳಿಗಂತೂ ಚಿನ್ನದ ಮೇಲಿನ ಪ್ರೀತಿ ಅಷ್ಟಿಷ್ಟಲ್ಲ. ಈಗ ಬಂಗಾರದಲ್ಲಿ ಹೂಡಿಕೆ ಕೂಡ ಉತ್ತಮ ಪರಿಕಲ್ಪನೆ ಎಂಬುದು ಸಾಬೀತಾಗಿದೆ. ಭಾರತೀಯರು ಬುದ್ಧಿವಂತ ಹೂಡಿಕೆದಾರರು ಎನ್ನುತ್ತಾರೆ ಉದ್ಯಮಿ, ಕೋಟಲ್ ಬ್ಯಾಂಕಿನ ಸ್ಥಾಪಕರಾದ ಬ್ಯಾಂಕರ್ ಉದಯ್ ಕೋಟಕ್.
ಎಕ್ಸ್ ಖಾತೆಯಲ್ಲಿ ಉದಯ್ ಕೋಟಕ್ ಒಂದು ಪೋಸ್ಟ್ ಮಾಡಿದ್ದಾರೆ.
The performance of gold over time highlights that the Indian housewife is the smartest fund manager in the world ಎಂದು ಭಾರತೀಯ ಗೃಹಿಣಿಯರನ್ನು ಹೊಗಳಿದ್ದಾರೆ. ಸರಕಾರಗಳು, ಸೆಂಟ್ರಲ್ ಬ್ಯಾಂಕ್ ಗಳು, ಇಕನಾಮಿಸ್ಟ್‌ಗಳು ಭಾರತದ ಗೃಹಿಣಿಯರಿಂದ ಹೂಡಿಕೆಯ ಒಂದು ಪಾಠವನ್ನು ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.
ಭಾರತದ ಬಹುಪಾಲು ಮನೆ ಮನೆಯಲ್ಲೂ ಚಿನ್ನವಿದೆ. ಮಾತ್ರವಲ್ಲದೆ, ದೇಶದ ದೇವಾಲಯಗಳಲ್ಲೂ ಬಂಗಾರವಿದೆ. ದೇಶದ ಆರ್ಥಿಕತೆಯಲ್ಲಿ ಚಿನ್ನದ ಪಾತ್ರವೂ ಅಮೋಘವಾಗಿದೆ. ಅಂದರೆ ಪ್ರಾಚೀನ ವೇದಗಳ ಕಾಲದಿಂದಲೂ ಇಲ್ಲಿನ ಸಂಸ್ಕ್ರತಿಯು ದೇಶದ ಅರ್ಥ ವ್ಯವಸ್ಥೆಯನ್ನೂ ಸಂರಕ್ಷಿಸಿದೆ. ಭಾರತದ ಸಂಸ್ಕೃತಿಯಲ್ಲಿ ಚಿನ್ನ ಅವಿಭಾಜ್ಯ ಅಂಶ. ಮನೆಯಲ್ಲಿ ಮದುವೆ ನಡೆಯುವುದಿದ್ದರೆ ಚಿನ್ನ ಬೇಕೇಬೇಕು. ಶುಭ ಸಮಾರಂಭಗಳಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನವಿದೆ. ಈಗಂತೂ ಅಕ್ಷಯತೃತೀಯದ ಸಂಭ್ರಮವನ್ನು ಗಮನಿಸಬಹುದು. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯ ಸಂದರ್ಭ ಸಂಪತ್ತಿನ ರಕ್ಷಣೆಗೆ ಬಂಗಾರ ಸೂಕ್ತ ಎಂಬುದನ್ನು ಇಡೀ ಜಗತ್ತು ಈಗ ಮನವರಿಕೆ ಮಾಡಿಕೊಳ್ಳುತ್ತಿದೆ.
ಈಗ ಸುದ್ದಿಯಲ್ಲಿರೊ ಷೇರುಗಳತ್ತ ನೋಡೋಣ.
ಮೊದಲಿಗೆ ಬಜಾಜ್ ಫೈನಾನ್ಸ್ ಷೇರು. ಕಳೆದ 6 ತಿಂಗಳಿನಲ್ಲಿ ಬಜಾಜ್ ಫೈನಾನ್ಸ್ ಷೇರಿನ ದರದಲ್ಲಿ ಬರೋಬ್ಬರಿ 39% ಏರಿಕೆಯಾಗಿದೆ. ಷೇರು ಮಾರುಕಟ್ಟೆ ಸೂಚ್ಯಂಕಗಳ ತೀವ್ರ ಕುಸಿತದ ಹೊರತಾಗಿಯೂ ಬಜಾಜ್ ಫೈನಾನ್ಸ್ ಷೇರು ಹೂಡಿಕೆದಾರರಿಗೆ ಲಾಭ ನೀಡಿದೆ.
2024ರ ಅಕ್ಟೋಬರ್ 22ಕ್ಕೆ ಬಜಾಜ್ ಫೈನಾನ್ಸ್ ಷೇರು ದರ : 6,677 ರುಪಾಯಿ.
2025ರ ಜನವರಿ 1ಕ್ಕೆ : 6935 ರುಪಾಯಿ.
2025ರ ಏಪ್ರಿಲ್ 22ಕ್ಕೆ : 9,309 ರುಪಾಯಿ.
ಅಂದರೆ 6 ತಿಂಗಳಿನಲ್ಲಿ 2,632 ರುಪಾಯಿ ಏರಿಕೆಯಾಗಿದೆ. 39% ಹೆಚ್ಚಳ ದಾಖಲಾಗಿದೆ.
ಈ ಹಿಂದೆ 1987ರಿಂದ 2010ರ ತನಕ ಬಜಾಜ್ ಆಟೊ ಫೈನಾನ್ಸ್ ಎಂದು ಕರೆಯುತ್ತಿದ್ದ ಸಂಸ್ಥೆಯು ಬಳಿಕ ಬಜಾಜ್ ಫೈನಾನ್ಸ್ ಲಿಮಿಟೆಡ್ ಆಗಿ ಮರು ನಾಮಕರಣಗೊಂಡಿತು. ಹಿರಿಯ ಉದ್ಯಮಿ ರಾಹುಲ್ ಬಜಾಜ್ ಸ್ಥಾಪಿಸಿದ್ದಈ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯು ಎಲ್ಲ ಬಗೆಯ ರಿಟೇಲ್, ಎಸ್‌ಎಂಇ ಸಾಲಗಳನ್ನು ವಿತರಿಸುತ್ತದೆ. ಬಜಾಜ್ ಫೈನಾನ್ಸ್ =ನ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 6 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ: Gold Price Hike: ಸ್ವರ್ಣ ಪ್ರಿಯರಿಗೆ ಮತ್ತೆ ಶಾಕ್; 1 ಲಕ್ಷ ರೂ. ತಲುಪಿದ ಚಿನ್ನದ ಬೆಲೆ!
2025-26ರ ಪ್ರಸಕ್ತ ಸಾಲಿನಲ್ಲಿ ಸಿಮೆಂಟ್ ದರದಲ್ಲಿ 2-4% ಏರಿಕೆ ಆಗುವ ನಿರೀಕ್ಷೆ ಇದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ. ಆದ್ದರಿಂದ ಮನೆ ಕಟ್ಟುವವರು, ಖರೀದಿಸುವವರು, ಮಾರಾಟ ಮಾಡುವವರು ಇದನ್ನು ಗಮನಿಸಬಹುದು. ಸಿಮೆಂಟ್‌ಗೆ ಬೇಡಿಕೆಯು 6.5%-7.5% ಏರಿಕೆಯಾಗುವ ನಿರೀಕ್ಷೆ ಇದ್ದು, ಇದರ ಪರಿಣಾಮ ದರ ಹೆಚ್ಚಳವಾಗಬಹುದು ಎಂದು ಕ್ರಿಸಿಲ್ ವರದಿ ತಿಳಿಸಿದೆ.