ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs RR: ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಕಾರಣ; ರಿಯಾನ್‌ ಪರಾಗ್‌

ರಾಜಸ್ಥಾನ್‌ ತಂಡ ಆಡಿದ 9 ಪಂದ್ಯಗಳಲ್ಲಿ ಕೇವಲ 2 ಗೆಲುವು ಮತ್ತು 7 ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ. ಈ ಎಲ್ಲ ಪಂದ್ಯಗಳನ್ನು ಗೆದ್ದರೆ ತಂಡದ ಒಟ್ಟಾರೆ ಅಂಕ 14 ಆಗಲಿದೆ. ಒಂದೊಮ್ಮೆ 5 ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ತಂಡ ಲೀಗ್‌ ಹಂತದಲ್ಲೇ ಹೊರಬೀಳಲಿದೆ.

ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಕಾರಣ; ರಿಯಾನ್‌ ಪರಾಗ್‌

Profile Abhilash BC Apr 25, 2025 9:51 AM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಪ್ರಮುಖ ಕಾರಣ ಎಂದು ರಾಜಸ್ಥಾನ್‌ ರಾಯಲ್ಸ್‌ ನಾಯಕ ರಿಯಾನ್‌ ಪರಾಗ್‌ ದೂರಿದ್ದಾರೆ. ಗುರುವಾರ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್‌ ಉತ್ತಮ ಆರಂಭದ ಹೊರತಾಗಿಯೂ 11 ರನ್‌ ಸೋಲು ಕಂಡಿತ್ತು. ಸೋಲಿನೊಂದಿಗೆ ತಂಡದ ಪ್ಲೇ ಆಫ್‌ ಹಾದಿ ಕೂಡ ದುರ್ಗಮಗೊಂಡಿದೆ.

ಪಂದ್ಯದ ಸೋಲಿನ ಬಳಿಕ ಮಾತನಾಡಿದ ಪರಾಗ್‌, 'ನಾವು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆವು. ಈ ಪಿಚ್​ನಲ್ಲಿ 210 ರಿಂದ 215 ರನ್‌ ಕಲೆಹಾಕಬಹುದು ಎಂದು ನಾವು ಭಾವಿಸಿದ್ದೇವು. ಆದರೆ ನಾವು ಆರ್‌ಸಿಬಿಯನ್ನು 205 ರನ್​​ಗಳಿಗೆ ಕಟ್ಟಿಹಾಕಿದೆವು. ಪಂದ್ಯದ ಮೊದಲಾರ್ಧದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಆದರೆ ಆ ನಂತರ ನಮ್ಮ ಬ್ಯಾಟಿಂಗ್‌ ಹಳಿತಪ್ಪಿತು. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ವಿಶೇಷವಾಗಿ ಸ್ಪಿನ್ ಬೌಲರ್‌ಗಳ ವಿರುದ್ಧ, ನಾವು ಆಕ್ರಮಣಶೀಲತೆಯನ್ನು ತೋರಿಸಲಿಲ್ಲ. ಇದು ಸೋಲಿಗೆ ಕಾರಣವಾಯಿತು' ಎಂದರು.

ಸಂದೀಪ್‌ ಶರ್ಮ ಅವರು ತಂಡದ ಸತತ ಸೋಲಿಗೆ ಸಂಜು ಸ್ಯಾಮ್ಸನ್‌ ಅಲಭ್ಯತೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸಂದೀಪ್‌, "ಖಂಡಿತವಾಗಿಯೂ ಸಂಜು ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರು ಬಹಳ ಅನುಭವಿ ನಾಯಕ ಮತ್ತು ಆಟಗಾರ. ಒಬ್ಬ ಬ್ಯಾಟ್ಸ್‌ಮನ್ ಆಗಿ, ಅವರು ತುಂಬಾ ಬುದ್ಧಿವಂತರು. ಅವರು ಮೊದಲ ಮೂರು ಪಂದ್ಯಗಳಿಗೆ ನಾಯಕತ್ವ ವಹಿಸಲಿಲ್ಲ. ಅದರ ನಂತರ ಅವರು ಮತ್ತೆ ತಂಡಕ್ಕೆ ಬಂದರೂ ಗಾಯಕ್ಕೆ ಒಳಗಾದರು. ಇದೆಲ್ಲವೂ ತಂಡಕ್ಕೆ ನಷ್ಟವನ್ನುಂಟುಮಾಡಿದೆ. ತಂಡದ ಕಳಪೆ ಕ್ಷೇತ್ರ ರಕ್ಷಣೆ ಮತ್ತು ಬ್ಯಾಟಿಂಗ್‌ ವೈಫಲ್ಯ ಕೂಡ ಸೋಲಿಗೆ ಕಾರಣ' ಎಂದರು.

ಇದನ್ನೂ ಓದಿ IPL 2025: 7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ರಾಜಸ್ಥಾನ್‌ ತಂಡ ಆಡಿದ 9 ಪಂದ್ಯಗಳಲ್ಲಿ ಕೇವಲ 2 ಗೆಲುವು ಮತ್ತು 7 ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ. ಈ ಎಲ್ಲ ಪಂದ್ಯಗಳನ್ನು ಗೆದ್ದರೆ ತಂಡದ ಒಟ್ಟಾರೆ ಅಂಕ 14 ಆಗಲಿದೆ. ಒಂದೊಮ್ಮೆ 5 ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ತಂಡ ಲೀಗ್‌ ಹಂತದಲ್ಲೇ ಹೊರಬೀಳಲಿದೆ.