Garment Designers: ಅಪರೆಲ್ ವರ್ಲ್ಡ್‌ನಲ್ಲಿ ಗಾರ್ಮೆಂಟ್ಸ್ ಡಿಸೈನರ್‌ಗಳಿಗೆ ಹೆಚ್ಚಾದ ಆದ್ಯತೆ
Garment Designers: ಫ್ಯಾಷನ್ ಡಿಸೈನಿಂಗ್ ಕಲಿತು, ನಂತರ ನಮಗೆ ಹೆಸರು ಬೇಡ, ಲೈಮ್‌ಲೈಟ್ ಬೇಡ! ಉತ್ತಮ ಸಂಬಳ ಸಿಕ್ಕರೇ ಸಾಕು! ಎನ್ನುವ ಮನೋಭಾವ ಉಳ್ಳ ಫ್ಯಾಷನ್ ಡಿಸೈನರ್‌ಗಳು, ಸೀದಾ ಗಾರ್ಮೆಂಟ್ಸ್‌ನಲ್ಲಿ ನೌಕರಿ ಗಿಟ್ಟಿಸಬಹುದು. ಅದು ಹೇಗೆ? ಈ ಕುರಿತಂತೆ ಫ್ಯಾಷನ್ ಎಕ್ಸ್‌ಪರ್ಟ್ಸ್ ಒಂದಿಷ್ಟು ಸಲಹೆ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿ, ಹೆಸರು ಮಾಡುವುದು ಬೇಡ! ಉತ್ತಮ ಸಂಬಳದ ಕೆಲಸ ಸಾಕು ಎನ್ನುವವರು ಗಾರ್ಮೆಂಟ್ಸ್ ಕ್ಷೇತ್ರದ ಫ್ಯಾಷನ್ ಡಿಸೈನರ್‌ಗಳಾಗಬಹುದು (Garment Designers). ಕೈಯಲ್ಲಿ ಡಿಸೈನರ್ ಸರ್ಟಿಫಿಕೇಟ್ ಇದ್ದರೆ ಸಾಕು, ಗಾರ್ಮೆಂಟ್ಸ್‌ನಲ್ಲಿ ಸಾಕಷ್ಟು ಅವಕಾಶ ಸಿಗುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್. ಹೌದು. ಬ್ರಾಂಡ್‌ಗೆ ಕೆಲಸ ಮಾಡುವ ಮನೋಭಾವ ಉಳ್ಳವರಾದಲ್ಲಿ ಸೀದಾ ಗಾರ್ಮೆಂಟ್‌ಗಳಲ್ಲಿ ನೌಕರಿ ಗಿಟ್ಟಿಸಬಹುದು ಎನ್ನುತ್ತಾರೆ. ನೂರು ಜನರ ಮಧ್ಯೆ ಹೈಲೈಟಾಗಿ ಕಾಣಿಸಿಕೊಳ್ಳಲು ಸಂಕೋಚವಿರುವಂತಹ ಡಿಸೈನರ್‌ಗಳಿಗೆ ಗಾರ್ಮೆಂಟ್ಸ್ ಕ್ಷೇತ್ರ ಸ್ವಾಗತಿಸುತ್ತದೆ. ಯಾಕಂದ್ರೆ, ಇಲ್ಲಿ ಡಿಸೈನರ್‌ಗಳ ಪರ್ಸನಲ್ ಐಡೆಂಟಿಟಿಗಿಂತ ಕಂಪನಿ ಐಡೆಂಟಿಟಿ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಕೈ ತುಂಬಾ ಸಂಬಳ ಸ್ಕಿಕರೇ ಸಾಕು, ನಾನು ಓದಿದ್ದಕ್ಕೆ ಸಾರ್ಥಕ ಎಂದು ಸಾಮಾನ್ಯ ಮಟ್ಟದಲ್ಲಿ ಯೋಚಿಸುವ ಡಿಸೈನರ್‌ಗಳು ಬೆಚ್ಚಗೆ ಅಪರೆಲ್ ಇಂಡಸ್ಟ್ರಿ ಅಂದರೆ, ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಪ್ರವೇಶಾವಕಾಶ ಪಡೆಯಬಹುದು ಎನ್ನುತ್ತಾರೆ ಸೀನಿಯರ್ ಡಿಸೈನರ್ ರಜನಿ.

ಗಾರ್ಮೆಂಟ್ಸ್‌ನಲ್ಲಿ ಸಾಕಷ್ಟು ಅವಕಾಶಗಳ ಮಹಾಪೂರ
ಡಿಸೈನರ್‌ಗಳಿಗೆ ಗಾರ್ಮೆಂಟ್ಸ್‌ನಲ್ಲಿ ನಾನಾ ಬಗೆಯಲ್ಲಿ ಡಿಸೈನರ್‌ಗಳಿಗೆ ಕೆಲಸದ ಅವಕಾಶವುಂಟು. ಕ್ಯೂಸಿ/ಕ್ವಾಲಿಟಿ ಮ್ಯಾನೇಜರ್/ಡಿಸೈನಿಂಗ್ ಮ್ಯಾನೇಜರ್ ಎನ್ನಲಾಗುವ ಇಲ್ಲಿನ ಡಿಸೈನರ್‌ಗಳನ್ನು ಅನುಭವದ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. 3 ತಿಂಗಳು ಇಲ್ಲವೇ 6 ತಿಂಗಳ ಕ್ರಾಶ್ ಕೋರ್ಸ್ ಮಾಡಿದ್ದಲ್ಲಿ ಸ್ಯಾಂಪಲ್ ಡಿಸೈನರ್ ಹುದ್ದೆ ಇಲ್ಲಿ ಸಿಗುವುದು ಗ್ಯಾರಂಟಿ. ಆರಂಭದಲ್ಲಿ 20 ರಿಂದ 25 ಸಾವಿರ ರೂ.ಗಳು ಕೈ ಸೇರಬಹುದು. ಇನ್ನು ಪಕ್ಕಾ 3 ವರ್ಷದ ಡಿಸೈನಿಂಗ್ ಕೋರ್ಸ್ ಮುಗಿಸಿದ್ದಲ್ಲಿ, ಡಿಸೈನಿಂಗ್ ಇಲ್ಲವೇ ಕ್ವಾಲಿಟಿ ಮ್ಯಾನೇಜರ್ ಹುದ್ದೆ ಗಿಟ್ಟಿಸಬಹುದು. 40 ಸಾವಿರ ರೂ. ಸಂಬಳ ಪಾಕೆಟ್‌ಗಿಳಿಸಬಹುದು. ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಕ್ರಿಯಾಶೀಲತೆಗಿಂತ ಪಕ್ಕಾ ಬ್ರಾಂಡೆಡ್ ಡಿಸೈನ್ಸ್‌ಗೆ ಮಾತ್ರ ಆದ್ಯತೆ. ಕೆಲಸ ಯಾಂತ್ರಿಕವಾಗಿರುವುದರಿಂದ ರಿಸ್ಕ್ ಕಡಿಮೆ ಎನ್ನುತ್ತಾರೆ ಗಾರ್ಮೆಂಟ್ಸ್ ಡಿಸೈನರ್‌ವೊಬ್ಬರು.

ಗಾರ್ಮೆಂಟ್ಸ್ ಲೋಕ
ಇನ್ನು, ಬೆಂಗಳೂರಿನಲ್ಲಿರುವ ಸಾವಿರಾರು ಗಾರ್ಮೆಂಟ್‌ಗಳಲ್ಲಿ, ಹತ್ತಾರು ಸಾವಿರ ಟೆಕ್ಸ್‌ಟೈಲ್ ಡಿಸೈನರ್ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಮ್ಮೆ ಅನುಭವಗಿಟ್ಟಿಸಿದರೇ ಉತ್ತಮ ಹುದ್ದೆ ಪಡೆಯಲು ಸಾಧ್ಯ. ಕಟ್ಟಿಂಗ್ ಸ್ಟೈಲ್‌ನಿಂದಿಡಿದು ಒಂದು ಗಂಟೆಗೆ ಎಷ್ಟು ಉಡುಪುಗಳು ತಯಾರಾಗಬಹುದು? ಎಂಬುದನ್ನು ನಿರ್ಧರಿಸುವುದು ಇವರೇ. ಸೋ, ಗಾರ್ಮೆಂಟ್ಸ್ ಪ್ರೊಡಕ್ಷನ್‌ನ ಜಾದೂಗಾರರೂ ಇವರೇ ಎಂದರೂ ತಪ್ಪಿಲ್ಲ! ನಿಮ್ಮ ಡಿಸೈನರ್ ಸರ್ಟಿಫಿಕೇಟ್ ತೋರಿಸಿ ಗಾರ್ಮೆಂಟ್ಸ್‌ನಲ್ಲಿ ಅವಕಾಶ ಪಡೆಯಿರಿ. ಉದ್ಯಾನನಗರಿಯಲ್ಲಿ ಸದ್ಯ ಗಾರ್ಮೆಂಟ್ಸ್ ಉದ್ಯಮ ಯಾವ ಮಟ್ಟಿಗೆ ಬೆಳೆದಿದೆ ಎಂದರೇ, ಇಲ್ಲಿ ಜೂನಿಯರ್-ಸೀನಿಯರ್ ಡಿಸೈನರ್ಸ್ ಅಗತ್ಯ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ಸ್.

ಗಾರ್ಮೆಂಟ್ಸ್ ಡಿಸೈನರ್‌ಗಳಾಗುವವರಿಗೆ ಸಿಂಪಲ್ ಸಲಹೆ
- ಒರಿಜಿನಲ್ ಡಿಸೈನರ್ ಕೋರ್ಸ್‌ನ ಸರ್ಟಿಫಿಕೇಟ್ ನೀಡದಿರಿ.
- ಗಾರ್ಮೆಂಟ್ಸ್‌ಗೆ ಉತ್ತಮ ಹೆಸರು ಇದೆಯೇ ಎಂಬುದನ್ನು ತಿಳಿದುಕೊಳ್ಳಿ.
- ಗಾರ್ಮೆಂಟ್ಸ್‌ನಲ್ಲಿ ಯಾವ ಬಗೆಯ ಉತ್ಪನ್ನಗಳು ತಯಾರಾಗುತ್ತವೆ ಎಂಬುದು ಮುಖ್ಯ.
- ಕಾಂಟ್ರಕ್ಟ್ ಸಹಿ ಮಾಡುವ ಮುನ್ನ ಕಂಡಿಷನ್ಸ್ ಓದಿಕೊಳ್ಳಿ.
- ಡಿಸೈನರ್‌ಗಳಿಗೆ ಪ್ರಾಮುಖ್ಯತೆ ಇದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Royal Blue Colour Fashionwears: ಸೀಸನ್ ಫ್ಯಾಷನ್‌ವೇರ್‌ಗಳಲ್ಲಿ ರಾಯಲ್ ಬ್ಲ್ಯೂ ಕಲರ್ ಹಂಗಾಮ