Shocking News: 20 ದಿನದ ಮಗುವನ್ನು ಸಾಲ ತೀರಿಸಲು ಮಾರಾಟ ಮಾಡಿದ ದಂಪತಿ
Shocking News: ಸದ್ಯ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ದಂಪತಿ ನಾಪತ್ತೆಯಾಗಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಮಗು ಖರೀದಿಸಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ದಾಂಡೇಲಿ: ರಾಜ್ಯದಲ್ಲಿ ಮತ್ತೊಂದು ಶಾಕಿಂಗ್ ಘಟನೆ (Shocking new) ಬೆಳಕಿಗೆ ಬಂದಿದ್ದು, ಸಾಲ ತೀರಿಸಲು ತಂದೆಯೇ 20 ದಿನದ ಮಗುವನ್ನು 3 ಲಕ್ಷ ರೂ.ಗೆ ಮಾರಾಟ (baby sale) ಮಾಡಿರುವ ಘಟನೆ ಉತ್ತರ ಕನ್ನಡ (Uttara kannada) ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಆನಗೋಳದ ನೂರ್ ಅಹಮದ್ ಅಬ್ದುಲ್ ಮಜೀದ್ ನಾಯ್ಕ, ಎಸ್.ವಿ.ರೋಡ್‌ನ ಚಾಲಕ ಕಿಶನ್ ಶ್ರೀಕಾಂತ ಐರೇಕರ್ ಬಂಧಿತರು.
ಹಳೇ ದಾಂಡೇಲಿ ಸಾಮಿಲ್ ರೋಡ್ ಮಾಹಿನ್ ವಸೀಂ ಎಂಬಾಕೆ ಜೂ.17 ರಂದು ಗಂಡು ಮಗುವಿಗೆ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ, ಮಗುವನ್ನು ಜು.8ರಂದು ಆನಗೋಳದ ನೂರ್ ಅಹಮದ್ ಎಂಬವರಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಸದ್ಯ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ದಂಪತಿ ನಾಪತ್ತೆಯಾಗಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಮಗು ಖರೀದಿಸಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Double Murder Case: ಹೊಳೆನರಸೀಪುರದಲ್ಲಿ ತಂದೆ, ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ ಪಾಪಿ