ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur Crime: ಅಕ್ರಮ ಗ್ಯಾಸ್ ಫಿಲಿಂಗ್ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಶ್ರೀರಾಮೇಗೌಡ ಬಂಧನ

ನಗರದಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ  ಬಂದ ಖಚಿತ ಮಾಹಿತಿ ಮೇರೆಗೆ  ಸೆನ್ ಪೊಲೀಸಠಾಣೆಯ  ಪಿ ಎಸ್ ಐ ಶರತ್ ಮತ್ತು ಪಿಎಸ್‌ಐ ಪುನೀತ್ ನೇತೃತ್ವದಲ್ಲಿ ಎರಡು ತಂಡಗಳಿAದ ನಡೆಸಿದ ದಾಳಿಯಲ್ಲಿ ಕರವೇ ಪ್ರವೀಣ್‌ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಶ್ರೀರಾಮ್ ಆಲಿಯಾಸ್ ಶ್ರೀರಾಮೇಗೌಡ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳ ಸಂಗ್ರಹ ಮಾಡಿಕೊಂಡು ಅಕ್ರಮ ವಾಗಿ ಬೇರೆ ಬೇರೆ ಸಿಲಿಂಡರ್‌ಗಳಿಗೆ ತುಂಬಿ ಮಾರಾಟ ಮಾಡುತ್ತಿರುವುದು ಖಚಿತವಾಗಿರುವುದರಿಂದ ಮಾಲು ಸಮೇತ ಬಂಧಿಸಲಾಗಿದೆ

ಅಕ್ರಮ ಗ್ಯಾಸ್ ಫಿಲಿಂಗ್ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಶ್ರೀರಾಮೇಗೌಡ ಬಂಧನ

ಅಕ್ರಮ ಗ್ಯಾಸ್ ಫಿಲಿಂಗ್ ಮಾಡುತ್ತಿದ್ದ  ಕರವೇ ಯುವಸೇನೆ ಜಿಲ್ಲಾಧ್ಯಕ್ಷ ರಾಮೇಗೌಡನನ್ನು ಮಾಲು ಸಮೇತ ಬಂಧಿಸಿರುವ ಪೊಲೀಸರು.

Profile Ashok Nayak May 11, 2025 10:29 PM

ಚಿಕ್ಕಬಳ್ಳಾಪುರ : ಕನ್ನಡಪರ ಸಂಘಟನೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಸಿಲಿಂಡರ್ ರೀಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಶ್ರೀರಾಮ್ ಅಲಿ ಯಾಸ್ ಶ್ರೀರಾಮೇಗೌಡ ಎಂಬಾತನನ್ನು ಸೆನ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸಂಘಟನೆಗಳ ಪದಾಧಿಕಾರಿಗಳಾಗಿದ್ದುಕೊಂಡು ಕೆಲವು ಮುಖಂಡರು ಸಮಾಜ ಘಾತುಕ ಚಟು ವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ತಮ್ಮ ಸಂಘಟನೆಯ ಕಾರ್ಯಕರ್ತನನ್ನೆ ಮಟಾಷ್ ಮಾಡಿ ಜೈಲು ಸೇರಿದ ಬೆನ್ನಲ್ಲೆ ಮತ್ತೊಂದು ಸಂಘಟನೆಯ ಜಿಲ್ಲಾಧ್ಯಕ್ಷ ಅಕ್ರಮ ಗ್ಯಾಸ್ ಫಿಲ್ಲಿಂಗ್ ಕೇಸಲ್ಲಿ ಆರೆಸ್ಟ್ ಆಗಿದ್ದಾನೆ.

ನಗರದಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ  ಬಂದ ಖಚಿತ ಮಾಹಿತಿ ಮೇರೆಗೆ  ಸೆನ್ ಪೊಲೀಸಠಾಣೆಯ  ಪಿ ಎಸ್ ಐ ಶರತ್ ಮತ್ತು ಪಿಎಸ್‌ಐ ಪುನೀತ್ ನೇತೃತ್ವದಲ್ಲಿ ಎರಡು ತಂಡಗಳಿಂದ ನಡೆಸಿದ ದಾಳಿಯಲ್ಲಿ ಕರವೇ ಪ್ರವೀಣ್‌ಶೆಟ್ಟಿ ಬಣದ ಜಿಲ್ಲಾ ಧ್ಯಕ್ಷ ಶ್ರೀರಾಮ್ ಆಲಿಯಾಸ್ ಶ್ರೀರಾಮೇಗೌಡ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳ ಸಂಗ್ರಹ ಮಾಡಿಕೊಂಡು ಅಕ್ರಮವಾಗಿ ಬೇರೆ ಬೇರೆ ಸಿಲಿಂಡರ್‌ಗಳಿಗೆ ತುಂಬಿ ಮಾರಾಟ ಮಾಡುತ್ತಿರುವುದು ಖಚಿತವಾಗಿರುವುದರಿಂದ ಮಾಲು ಸಮೇತ ಬಂಧಿಸಲಾಗಿದೆ.

ಇದನ್ನೂ ಓದಿ: Madhya Pradesh Crime: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; ಸಮಾಧಿಯಿಂದ ಹೊರ ಬಂದ ಕೈ ಕಂಡು ಆತ್ಮಹತ್ಯೆ

ಮತ್ತೊರ್ವ ಗಗನ್ ಎನ್ನುವವನು ತಮ್ಮನಾಯಕನಹಳ್ಳಿ ತೋಟವೊಂದರಲ್ಲಿ ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಮಾಡಿಕೊಂಡು ಸಿಲಿಂಡರ್ ಮಾರಾಟ ಮಾಡುತಿದ್ದನ್ನು ಪತ್ತೆ ಮಾಡಿ ಮಾಲು ಸಮೇತ ಆತನನ್ನೂ ಕೂಡ ಬಂಧಿಸಲಾಗಿತ್ತು. ಇಬ್ಬರೂ ಸರ್ಕಾರಿ ನಿಯಮಗಳಿಗೆ ವಿರುದ್ದ ವಾಗಿ ಅಕ್ರಮವಾಗಿ ಗ್ಯಾಸ್ ರಿಫಿಲಿಂಗ್  ಮಾರಾಟ ಮಾಡುವ ದಂಧೆ ನಡೆಸುತಿದ್ದರು ಎಂದು ಪ್ರಕರಣದಲ್ಲಿ ನಮೂದು ಮಾಡಲಾಗಿದೆ.

ಅದರಂತೆ ವಿಚಾರಣೆ ನಡೆಸಿದ ಚಿಕ್ಕಬಳ್ಳಾಪುರ ನಗರ  ಪೊಲೀಸರು ಶನಿವಾರ ಶ್ರೀರಾಮ್ ಆಲಿ ಯಾಸ್ ಶ್ರೀರಾಮೇಗೌಡ ಎನ್ನುವವರನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆಗೊಳಿಸಿದ್ದರೆ,  ಗಗನ್ ನನ್ನ ಜೈಲಿಗೆ ಕಳಿಸಿದ್ದಾರೆ. ಅರೆಷ್ಟ್ ಆದ ಇಬ್ಬರ ಬಗ್ಗೆ ಸೆನ್  ಡಿವೈಎಸ್‌ಪಿ ರವಿಕುಮಾರ್ ಮಾಹಿತಿ ನೀಡಿದ್ದು, ಇವರಿಗೆ ಸಿಲಿಂಡರ್ ಯಾರು ಸರಬರಾಜು ಮಾಡುತ್ತಿದ್ದಾರೆ, ಗ್ಯಾಸ್ ಎಜೆಂಟರುಗಳ ಜತೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದಾರಾ? ಅನ್ನೋ ವಿಚಾರಣೆ ನಡೆಯುತ್ತಿದೆ. ಹಾಗೇನಾದರೂ ಆಗಿದ್ದರೆ ಏಜಂಟರ ಮೇಲೂ ಎಫ್‌ಐಆರ್ ಹಾಕಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಗ್ಯಾಸ್ ಸಿಲಿಂಡರ್ ಗಳನ್ನ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಅಕ್ರಮ ವ್ಯಾಪಾರ ಮಾಡಿ ಕೊಳ್ಳುತ್ತಿರುವವರ ಸಂಖ್ಯೆ ಇನ್ನೂ ಇದೆ. ಗೃಹ ಬಳಕೆ ಸಿಲಿಂಡರ್ ಗಳು ಕಾಳಸಂತೆಯಲ್ಲಿ ಮಾರಾಟ ವಾಗುತ್ತಿವೆ ಅಂತವರೆಲ್ಲರನ್ನೂ ಪತ್ತೆ ಮಾಡಿ ಬುದ್ದಿ ಕಲಿಸುವ ಕೆಲಸವನ್ನ ಪೊಲೀಸರು ಮಾಡ ಬೇಕಾಗಿದೆ.