Anushka Sharma: ಸೈನಿಕರು ನಿಜವಾದ ಹೀರೋಗಳು; ಇನ್ಸ್ಟಾ ಪೋಸ್ಟ್‌ಗೆ ಲೈಕ್ ಮಾಡಿದ ಅನುಷ್ಕಾ
ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇಡೀ ದೇಶ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಮಾಡಿತ್ತು. ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸೈನಿಕರ ಪರವಾಗಿ ಪೋಸ್ಟ್‌ಗಳನ್ನು ಹಾಕಿ ಬೆಂಬಲ ಸೂಚಿಸಿದ್ದರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸೈನ್ಯದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.


ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇಡೀ ದೇಶ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಮಾಡಿತ್ತು. ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸೈನಿಕರ ಪರವಾಗಿ ಪೋಸ್ಟ್‌ಗಳನ್ನು ಹಾಕಿ ಬೆಂಬಲ ಸೂಚಿಸಿದ್ದರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸೈನ್ಯದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುವ ಸೈನಿಕರು ನಿಜವಾದ ಹೀರೋಗಳು ಎಂದು ಅವರು ಹೇಳಿದ್ದಾರೆ. ಈ ಮೂಲಕ ಭಾರತದ ಸೈನ್ಯಕ್ಕೆ ಗೌರವ ಸೂಚಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ನಿಜವಾದ ಹೀರೋಗಳು ಬಾಲಿವುಡ್ ನಟರು ಅಥವಾ ಕ್ರಿಕೆಟಿಗರಲ್ಲ ದೇಶದ ಸೈನಿಕರೆಂಬುದು ತಿಳಿಯುತ್ತಿದೆ ಎಂದು ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಬಾಲಿವುಡ್ ನಟಿ ಹಾಗೂ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿರವರ ಪತ್ನಿ ಅನುಷ್ಕಾ ಅವರು ಲೈಕ್ ಕೊಡುವುದರ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.ಈ ಹಿಂದೆ ಅನುಷ್ಕಾರವರು ಇನ್ಸ್ಟಾಗ್ರಾಂನಲ್ಲಿ "ಇಂತಹ ಸಂದಿಗ್ದ ಪರಿಸ್ಥಿಯಲ್ಲೂ ನಮ್ಮನ್ನು ರಕ್ಷಿಸುತ್ತಿರುವ ಭಾರತೀಯ ಸೇನೆಗೆ ಮತ್ತು ಅವರ ಕುಟುಂಬದ ತ್ಯಾಗಕ್ಕೆ ಸದಾ ವಂದನೆಗಳು ಜೈ ಹಿಂದ್" ಸ್ಟೋರಿ ಹಾಕುವುದರ ಮೂಲಕ ಎಂದು ಗೌರವ ಸೂಚಿಸಿದ್ದರು.
ಅನುಷ್ಕಾ ಶರ್ಮಾರವರು ನಿವೃತ್ತ ಸೇನಾ ಅಧಿಕಾರಿ ಅಜಯ್ ಕುಮಾರ್ ಶರ್ಮಾರವರ ಮಗಳಾಗಿದ್ದು ಅಜಯ್ ಕುಮಾರ್ ಶರ್ಮಾರವರು ಆಪರೇಷನ್ ಬ್ಲೂಸ್ಟಾರ್ ಮತ್ತು ಕಾರ್ಗಿಲ್ ಯುದ್ಧ ಸೇರಿದಂತೆ 1982 ರಿಂದ ಇಲ್ಲಿಯವರೆಗೆ ಬಹುತೇಕ ಯುದ್ಧಗಳಲ್ಲಿ ಪಾಲ್ಗೊಂಡಿದ್ದಾರೆ.1999 ಕಾರ್ಗಿಲ್ ಯುದ್ಧದ ಸಮಯದಲ್ಲಿ ಅನುಷ್ಕಾ ಶರ್ಮಾರವರು 12 ವರ್ಷದವರಾಗಿದ್ದರು 2012 ರಲ್ಲಿ ಖಾಸಗಿ ಸಂಸ್ಥೆಯ ಟಿವಿಯೊಂದಕ್ಕೆ ಸಂದರ್ಶನ ನೀಡಿದ ಅನುಷ್ಕಾ ಶರ್ಮಾರವರು ಕಾರ್ಗಿಲ್ ಯುದ್ಧ ತೀವ್ರವಾಗಿತ್ತು. ಆ ಸಮಯದಲ್ಲಿ ನಾನಿನ್ನೂ ತುಂಬಾ ಚಿಕ್ಕವಳು ನಾನು ಅಮ್ಮ ಜೊತೆಯಾಗಿ ಸುದ್ದಿ ವಾಹಿನಿಗಳ ಮೂಲಕ ಯುದ್ಧದ ಮಾಹಿತಿಯನ್ನು ಪಡೆಯುತ್ತಿದ್ದೆವು.ಯುದ್ಧದ ಸಮಯದಲ್ಲಿ ಹುತಾತ್ಮರಾದ ಸೈನಿಕರ ಸುದ್ದಿ ಕೇಳಿ ಅಮ್ಮ ದುಖಿತರಾಗುತ್ತಿದ್ದರು.ನಾನೊಬ್ಬ ನಟಿಯೆಂದು ಹೇಳಿಕೊಳ್ಳುವ ಮೊದಲು ಸೇನಾ ಅಧಿಕಾರಿಯ ಮಗಳೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಹೇಳಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Fact Check: ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವಾಗ ಪಾಕಿಸ್ತಾನಿಗಳು ವಿಡಿಯೋ ಮಾಡಿದ್ರಾ? ಅಸಲಿ ವಿಚಾರ ಬಯಲು
ಕಾರ್ಯದ ಒತ್ತಡದ ಮದ್ಯೆ ಪ್ರಸ್ತುತ ಅನುಷ್ಕಾ ಶರ್ಮಾರವರು ವಿಶ್ರಾಂತಿಯಲ್ಲಿದ್ದಾರೆ ಕೊನೆಯ ಬಾರಿ ಅನುಷ್ಕಾರವರು 2018 ರಲ್ಲಿ ಶಾರುಖ್ ಖಾನ್ ಮತ್ತುಕತ್ರೀನಾ ಕೈಫ್ ಜೊತೆ ಝೀರೋ ಚಿತ್ರದ ಮೂಲಕ ಕಾಣಿಸಿಕೊಂಡಿದ್ದರು.ಇದನ್ನು ಹೊರತುಪಡಿಸಿ ಅವರು ನಟಿಸಿರುವ ಚಕ್ದಾ ಎಕ್ಸ್ ಪ್ರೆಸ್ ಚಿತ್ರದ ಶೂಟಿಂಗ್ ಮುಗಿದಿದ್ದರೂ ಬಿಡುಗಡೆಯ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ.