Actor Ravi Mohan: ಡಿವೋರ್ಸ್ ಬೆನ್ನಲ್ಲೇ ಸಿಂಗರ್ ಜೊತೆ ತಮಿಳು ನಟ ಡೇಟಿಂಗ್? ಫೋಟೋಸ್ ಫುಲ್ ವೈರಲ್
ನಿರ್ಮಾಪಕ ಇಸಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ನಟ ರವಿ ಮೋಹನ್ ಭಾಗವಹಿಸಿದ್ದು, ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ವದಂತಿ ಕೇಳಿಬಂದಿತ್ತು. ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ತಮಿಳು ನಟ ರವಿ ಮೋಹನ್ ಇತ್ತೀಚೆಗೆ ಒಂದು ಹೈ ಪ್ರೊಫೈಲ್ ಮದುವೆಯಲ್ಲಿ ಕಾಣಿಸಿಕೊಂಡು ಬಹಳ ಸುದ್ದಿಯಾಗುತ್ತಿದ್ದಾರೆ. ಕಳೆದ ವರ್ಷವಷ್ಟೇ ಆರತಿ ಅವರಿಂದ ಡಿವೋರ್ಸ್ ಪಡೆದಿರುವ ಈ ನಟ ಇದೀಗ ಖ್ಯಾತ ಸಿಂಗರ್ ಜೊತೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಇವರಿಬ್ಬರು ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ವದಂತಿಗೆ ಮತ್ತಷ್ಟು ಪುಷ್ಠಿಕೊಡುವಂತಿದೆ ಇವರಿಬ್ಬರ ಫೋಟೋಗಳು.

ಇನ್ನು ರವಿ ಮೋಹನ್ ಜೊತೆಗಿದ್ದ ಗಾಯಕಿಯನ್ನು ಕೆನಿಶಾ ಫ್ರಾನ್ಸಿಸ್ ಎಂದು ಗುರುತಿಸಲಾಗಿದೆ, ಅವರು ಹಲವಾರು ಸಂಗೀತ ಕಚೇರಿಗಳನ್ನು ಆಯೋಜಿಸಿ ಪ್ರಸಿದ್ಧಿ ಗಳಿಸಿರುವ ಕೆನಿಶಾ ಮತ್ತು ರವಿ ಡೇಟ್ ಮಾಡ್ತಿದ್ದಾರೆ ಎಂಬ ವದಂತಿ ನಡುವೆಯೇ ಈ ಜೋಡಿ ಜೊತೆಯಾಗಿ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ವೊಂದರಲ್ಲಿ ರವಿಗೆ ಕೆನಿಶಾ ಪರಿಚಯ ಆಗಿದ್ದರು ಎನ್ನಲಾಗಿದೆ.

ಥನಿ ಒರುವನ್ (2015), ಅದಂಗ ಮಾರು (2018), ಟಿಕ್ ಟಿಕ್ ಟಿಕ್ (2018), ಕೋಮಾಲಿ (2019), ಪೊನ್ನಿಯಿನ್ ಸೆಲ್ವನ್: ಭಾಗ I (2022) ಮತ್ತು ಭಾಗ II (2023), ಇರೈವನ್ (2023) ಮತ್ತು ಸೈರೆನ್ (2024) ನಂತಹ ಹಿಟ್ ತಮಿಳು ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ರವಿ ಮೋಹನ್ ಇತ್ತೀಚೆಗೆ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಕೆನಿಶಾ ಮತ್ತು ರವಿ ಮೋಹನ್ ಇದುವರೆಗೆ ತನ್ನ ಡೇಟಿಂಗ್ ಬಗ್ಗೆ ಬಹಿರಂಗ ಪಡಿಸಿಲ್ಲ. ವದಂತಿಗಳನ್ನು ರವಿ ಮೋಹನ್ ನಿರಾಕರಿಸಿದ್ದರು. ತಮ್ಮಿಬ್ಬರ ಸಂಬಂಧ ಕೇವಲ ವೃತ್ತಿಪರ ಮಾತ್ರ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.

ಆದಾಗ್ಯೂ, ಮದುವೆಯಲ್ಲಿ ಇವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿರುವುದು ಊಹಾಪೋಹಗಳನ್ನು ಮತ್ತೆ ಹುಟ್ಟುಹಾಕಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮತ್ತು ನೆಟ್ಟಿಗರು ಕೆನಿಶಾ ಫ್ರಾನ್ಸಿಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದಾರೆ.