ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pakistan Conflict: ಭಾರತ- ಪಾಕ್ ನಡುವೆ ಸಂಬಂಧ ಸುಧಾರಣೆಗೆ ಇರಾನ್ ಮಧ್ಯಸ್ಥಿಕೆ

ಒಂದು ವರ್ಷದ ಹಿಂದೆ ಇರಾನ್ ಮತ್ತು ಪಾಕಿಸ್ತಾನ ಪರಸ್ಪರ ಗಡಿಯಾಚೆಗೆ ವೈಮಾನಿಕ ದಾಳಿಗಳನ್ನು ನಡೆಸಿದ್ದವು. ಆದರೆ ಈಗ, ಪಾಕ್ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ತೆಹ್ರಾನ್‌ಗೆ ಭೇಟಿ ನೀಡಿ ಇರಾನ್ ನಾಯಕತ್ವವನ್ನು ಭೇಟಿಯಾದ ಬೆನ್ನಲ್ಲೇ, ಎರಡೂ ರಾಷ್ಟ್ರಗಳು ಭಿನ್ನಾಭಿಪ್ರಾಯಗಳನ್ನು ಮರೆತು ಸಂಬಂಧ ಸುಧಾರಿಸಿಕೊಳ್ಳುತ್ತಿವೆ.

ಭಾರತ- ಪಾಕ್ ನಡುವೆ ಸಂಬಂಧ ಸುಧಾರಣೆಗೆ ಇರಾನ್ ಮಧ್ಯಸ್ಥಿಕೆ

ಪಾಕ್ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ - ಇರಾನ್ ನಾಯಕ

Profile Sushmitha Jain May 27, 2025 1:55 PM

ನವದೆಹಲಿ: ಒಂದು ವರ್ಷದ ಹಿಂದೆ ಇರಾನ್ (Iran) ಮತ್ತು ಪಾಕಿಸ್ತಾನ (Pakistan) ಪರಸ್ಪರ ಗಡಿಯಾಚೆಗೆ ವೈಮಾನಿಕ ದಾಳಿಗಳನ್ನು ನಡೆಸಿದ್ದವು. ಆದರೆ ಈಗ, ಪಾಕ್ ಪ್ರಧಾನಮಂತ್ರಿ(Pakistan Prime Minister) ಶೆಹಬಾಜ್ ಶರೀಫ್ (Shehbaz Sharif) ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ (Asim Munir) ಟೆಹ್ರಾನ್‌ಗೆ ಭೇಟಿ ನೀಡಿ ಇರಾನ್ ಅಧ್ಯಕ್ಷನನ್ನು ಭೇಟಿಯಾದ ಬೆನ್ನಲ್ಲೇ, ಎರಡೂ ರಾಷ್ಟ್ರಗಳು ಭಿನ್ನಾಭಿಪ್ರಾಯಗಳನ್ನು ಮರೆತು ಸಂಬಂಧ ಸುಧಾರಿಸಿಕೊಳ್ಳುತ್ತಿವೆ.

ಗಾಜಾ ಒಗ್ಗಟ್ಟಿನ ಕಾರಣ

ಅಕ್ಟೋಬರ್ 2023ರಲ್ಲಿ ಹಮಾಸ್ ದಾಳಿಗಳಿಗೆ ಇಸ್ರೇಲ್‌ ತೀವ್ರ ಪ್ರತಿದಾಳಿ ನಡೆಸಿದ ಪರಿಣಾಮ ಗಾಜಾ ಧ್ವಂಸಗೊಂಡಿದೆ. ಈ ವಿಷಯವೇ ಇರಾನ್ ಮತ್ತು ಪಾಕ್‌ನನ್ನು ಒಗ್ಗೂಡಿಸಿದೆ. ದಿ ಟೆಹ್ರಾನ್ ಟೈಮ್ಸ್ ವರದಿಯಂತೆ, ಇರಾನ್ ನಾಯಕ ಆಯತೊಲ್ಲಾ ಸೆಯ್ಯದ್ ಅಲಿ ಖಾಮೆನಿ, “ಪಾಕಿಸ್ತಾನವು ಪಶ್ಚಿಮ ದೇಶಗಳ ಒತ್ತಡದ ಹೊರತಾಗಿಯೂ ಇಸ್ರೇಲ್‌ ಜೊತೆ ಕೈ ಜೋಡಿಸಿಲ್ಲ. ಅಲ್ಲದೇ ಪ್ಯಾಲೆಸ್ಟೈನ್‌ಗೆ ದ್ರೋಹ ಬಗೆಯಲಿಲ್ಲ” ಎಂದು ಶ್ಲಾಘಿಸಿದ್ದಾರೆ. “ಗಾಜಾದ ಸ್ಥಿತಿ ಯುರೋಪ್ ಮತ್ತು ಅಮೆರಿಕದ ಜನರನ್ನು ಸರ್ಕಾರಗಳ ವಿರುದ್ಧ ಪ್ರತಿಭಟಿಸುವಂತೆ ಮಾಡಿದೆ. ಆದರೆ, ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಇಸ್ರೇಲ್‌ಗೆ ಬೆಂಬಲ ನೀಡುತ್ತಿವೆ” ಎಂದು ಅವರು ಶರೀಫ್ ಜೊತೆಗಿನ ಭೇಟಿಯಲ್ಲಿ ತಿಳಿಸಿದರು. ದಿ ಡಾನ್ ವರದಿಯಂತೆ, ಶರೀಫ್, “ಗಾಜಾದ ಜನರಿಗೆ ಶಾಶ್ವತ ಕದನ ವಿರಾಮ ಒದಗಿಸಲು ಅಂತಾರಾಷ್ಟ್ರೀಯ ಸಮುದಾಯ ಒತ್ತಾಯಿಸಬೇಕು. ಪಾಕ್ ಇರಾನ್‌ನೊಂದಿಗೆ ಶಾಂತಿ, ಪ್ರಗತಿಗಾಗಿ ನಿಲ್ಲುತ್ತದೆ” ಎಂದಿದ್ದಾರೆ.

ಪಾಕ್‌ನ ಕಾಶ್ಮೀರ ಒತ್ತಾಯಕ್ಕೆ ಇರಾನ್‌ನ ಪ್ರತಿಕ್ರಿಯೆ

ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಇರಾನ್‌ನ ಸಕಾರಾತ್ಮಕ ಪಾತ್ರವನ್ನು ಶರೀಫ್ ಶ್ಲಾಘಿಸಿದರು. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ, “ಕಾಶ್ಮೀರ, ನೀರಿನ ಹಂಚಿಕೆ, ವ್ಯಾಪಾರ ಮತ್ತು ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಶಾಂತಿಯ ಮಾತುಕತೆಗೆ ಸಿದ್ಧರಿದ್ದೇವೆ” ಎಂದು ಶರೀಫ್ ಹೇಳಿದರು. “ಭಾರತ-ಪಾಕ್ ಸಂಘರ್ಷ ಕೊನೆಗೊಂಡಿರುವುದಕ್ಕೆ ಸಂತೋಷವಿದೆ, ವಿವಾದಗಳು ಮಾತುಕತೆಯಿಂದ ಬಗೆಹರಿಯಲಿ,” ಎಂದು ಖಾಮೆನಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Pakistan Spy: ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಅರೆಸ್ಟ್‌

ಇರಾನ್-ಪಾಕ್ ಸಂಬಂಧ ಸುಧಾರಣೆ

ಕಳೆದ ವರ್ಷ ಇರಾನ್, ಪಾಕ್‌ನ ಬಲೂಚಿಸ್ತಾನದಲ್ಲಿ ಜೈಶ್ ಅಲ್-ಅದ್ಲ್ ಗುಂಪಿನ ವಿರುದ್ಧ ದಾಳಿ ನಡೆಸಿತ್ತು. ಪ್ರತಿಯಾಗಿ ಪಾಕ್, ಇರಾನ್‌ನಲ್ಲಿ ಬಲೂಚ್ ಲಿಬರೇಶನ್ ಫ್ರಂಟ್ ವಿರುದ್ಧ ದಾಳಿ ಮಾಡಿತ್ತು. ಈಗ ಶರೀಫ್‌ ಅವರ ತೆಹ್ರಾನ್ ಭೇಟಿಯು ಒಡಕು ಸರಿಪಡಿಸುವ ಸಂಕೇತವಾಗಿದೆ. “ಇರಾನ್-ಪಾಕ್ ಸಂಬಂಧ ಯಾವಾಗಲೂ ಸೌಹಾರ್ದಯುತವಾಗಿದೆ” ಎಂದು ಖಾಮೆನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಭಾರತ-ಇರಾನ್ ಸಂಬಂಧ ಸಮತೋಲನ

ಮೇ 9, 2025ರಂದು, ಭಾರತ-ಪಾಕ್ ಸಂಘರ್ಷ ಚಾಲ್ತಿಯಲ್ಲಿದ್ದಾಗ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರನ್ನು 20ನೇ ಭಾರತ-ಇರಾನ್ ಜಂಟಿ ಆಯೋಗದ ಸಭೆಗೆ ಆತಿಥ್ಯ ವಹಿಸಿತು. ಎಸ್. ಜೈಶಂಕರ್ ಜೊತೆಗಿನ 20ನೇ ಭಾರತ-ಇರಾನ್ ಜಂಟಿ ಆಯೋಗದಲ್ಲಿ, ಭಯೋತ್ಪಾದನೆಯ ವಿರುದ್ಧ ಸಹಕಾರವನ್ನು ಒತ್ತಾಯಿಸಲಾಯಿತು. ಜೈಶಂಕರ್ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದರು. ಭಾರತ, ಪಾಕ್‌ನೊಂದಿಗಿನ ವಿವಾದವು ದ್ವಿಪಕ್ಷೀಯ ವಿಷಯವೆಂದು ಸ್ಪಷ್ಟಪಡಿಸಿದ್ದು, ಮಧ್ಯಸ್ಥಿಕೆಗೆ ಅವಕಾಶವಿಲ್ಲವೆಂದು ತಿಳಿಸಿದೆ.