Shehbaz Sharif: ತುರ್ತು ಸಭೆಯಲ್ಲಿ ಪಾಕ್ ಪ್ರಧಾನಿ ಆಕ್ರೋಶ; ಭಾರತದ ಮೇಲೆ ದಾಳಿ ನಡೆಸಲು ಸೇನೆಗೆ ಸೂಚನೆ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಮಂಗಳವಾರ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಭಾರತದ ಆಪರೇಶನ್ ಸಿಂಧೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತುರ್ತು ಸಭೆ ನಡೆಸಿದ್ದಾರೆ.


ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಮಂಗಳವಾರ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ (Operation Sindoor) ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಭಾರತದ ಆಪರೇಶನ್ ಸಿಂಧೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif)ನ ತುರ್ತು ಸಭೆ ನಡೆಸಿದ್ದಾರೆ. ಉಗ್ರರ ಕ್ಯಾಂಪ್ ಮೇಲೆ ಭಾರತ ನಡೆಸಿದ ದಾಳಿಯನ್ನು ಪಾಕಿಸ್ತಾನ ಯುದ್ಧ ಕೃತ್ಯ ಎಂದಿದೆ. ಇಷ್ಟೇ ಅಲ್ಲ ಭಾರತದ ಈ ದಾಳಿಗೆ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಪಾಕ್ ಪ್ರಧಾನಿ ಪತ್ರಿಕಾಗೋಷ್ಠಿ ನಡೆಸಿ ಭಾರತದ ದಾಳಿಯನ್ನು ಅಪ್ರಚೋದಿತ ಹಾಗೂ ಹೇಯ ಕೃತ್ಯ ಎಂದು ಅವರು ಕರೆದಿದ್ದಾರೆ. ಇಷ್ಟೇ ಅಲ್ಲ ಭಾರತದ ಈ ದಾಳಿಗೆ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಹಬಾಜ್ ಷರೀಫ್ ಹೇಳಿದ್ದಾರೆ. ಭಾರತ ಉಗ್ರರ ಕ್ಯಾಂಪ್ ಎಂದು ನಾಗರೀಕರ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನ ನೆಲದ ಮೇಲೆ ಭಾರತ ನಡೆಸಿದ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ ಎಂದಿದ್ದಾರೆ. ತುರ್ತು ಸಭೆಯಲ್ಲಿ ಭಾರತ ವಿರುದ್ಧ ಕೆಂಡಾಮಂಡಲವಾದ ಪ್ರಧಾನಿ ಷರೀಫ್, ಉಗ್ರರೇ ಇಲ್ಲದ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದೆ ಎಂದಿದೆ. ಉಗ್ರರ ಕ್ಯಾಂಪ್ ಮೇಲೆ ಭಾರತ ದಾಳಿ ಮಾಡಿದೆ ಅನ್ನೋ ವಾದವನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಎಪ್ರಿಲ್ 22ರಂದು ನಡೆದ ಘಟನೆ ಕುರಿತು ತಟಸ್ಥರ ತನಿಖೆಗೆ ಪಾಕಿಸ್ತಾನ ಒತ್ತಾಯಿಸಿದೆ. ಆದರೆ ಭಾರತ ಇದ್ಯಾವುದನ್ನು ಪರಿಗಣಿಸದೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ.
ಭಾರತದ ದಾಳಿಯಿಂದ ಪಾಕಿಸ್ತಾನ ಆಕ್ರೋಶಗೊಂಡಿದೆ. ಅಮಾಯಕರ ಮೇಲೆ ನಡೆಸಿದ ದಾಳಿಯನ್ನು ಇಡೀ ಪಾಕಿಸ್ತಾನ ಖಂಡಿಸಿದೆ. ಪಾಕ್ ನೆಲವನ್ನು ರಕ್ಷಿಸಲ ಪಾಕಿಸ್ತಾನ ಸೇನೆ ಸಜ್ಜಾಗಿದೆ. ಭಾರತಕ್ಕೆ ಅದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಷರೀಫ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ಭಾರತ ಕಾರ್ಯಾಚರಣೆ ನಿಲ್ಲಿಸಿದರೆ, ನಾವೂ ಸೇನೆ ಹಿಂತೆಗೆದುಕೊಳ್ಳಲು ಸಿದ್ಧ; ಪಾಕಿಸ್ತಾನ ರಕ್ಷಣಾ ಸಚಿವ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿ, ಭಯೋತ್ಪಾದಕ ದಾಳಿಯ ಸುಮಾರು ಹದಿನೈದು ದಿನಗಳ ನಂತರ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ಶಿಬಿರಗಳ ಮೇಲೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಭಯೋತ್ಪಾದಕ ನೆಲೆಯ ದಾಳಿ ಮಾಡಿದ ಪರಿಣಾಮ 100 ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ.