Operation Sindoor: ಗಡಿಯಲ್ಲಿ ಮುದುವರಿದ ಪಾಕ್ ಗುಂಡಿನ ದಾಳಿ, ಭಾರತೀಯ ಯೋಧ ಹುತಾತ್ಮ
Operation Sindoor: ಪಾಕಿಸ್ತಾನಿ ಕಡೆಯವರು ಕರ್ನಾ, ಪೂಂಚ್ ಪ್ರದೇಶದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮಧ್ಯರಾತ್ರಿಯ ನಂತರ ಶೆಲ್ ಮತ್ತು ಮೋರ್ಟಾರ್‌ಗಳನ್ನು ಹಾರಿಸಿದರು. ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದವು.

ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನ (pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ (India) 'ಆಪರೇಷನ್ ಸಿಂದೂರ್' (Operation sindoor) ನಡೆಸಿದ ನಂತರ, ಸತತ ಎರಡನೇ ದಿನವಾದ ಗುರುವಾರವೂ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ಪ್ರದೇಶದಲ್ಲಿ ಗಡಿಯಾಚೆಯಿಂದ ಶೆಲ್ ದಾಳಿ ನಡೆಸಿದೆ. ಪೂಂಚ್ ವಲಯದಲ್ಲಿ ಪಾಕಿಸ್ತಾನಿ ಶೆಲ್ ದಾಳಿಯ ಸಮಯದಲ್ಲಿ 5 ಫೀಲ್ಡ್ ರೆಜಿಮೆಂಟ್‌ನ ಭಾರತೀಯ ಯೋಧ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಎಂಬವರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.
ಪಾಕಿಸ್ತಾನಿ ಕಡೆಯವರು ಕರ್ನಾ, ಪೂಂಚ್ ಪ್ರದೇಶದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮಧ್ಯರಾತ್ರಿಯ ನಂತರ ಶೆಲ್ ಮತ್ತು ಮೋರ್ಟಾರ್‌ಗಳನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದವು. ಭಾರತದ 'ಆಪರೇಷನ್ ಸಿಂದೂರ್' ನಂತರ ಪಾಕಿಸ್ತಾನಿ ಪಡೆಗಳು ಶೆಲ್ ದಾಳಿ ನಡೆಸಿದ ನಂತರ ಕರ್ನಾದಲ್ಲಿ ಹೆಚ್ಚಿನ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ತೆರಳಿದರು. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಗಳು ಬಂದಿಲ್ಲ.
ಬುಧವಾರ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಗುರಿಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಪಾಕಿಸ್ತಾನಿ ಪಡೆಗಳು ಕುಪ್ವಾರಾದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಶೆಲ್ ದಾಳಿ ಆರಂಭಿಸಿದವು. ಅಧಿಕಾರಿಗಳ ಪ್ರಕಾರ, ಭಾರತೀಯ ಸೇನೆಯು ಶೆಲ್ ದಾಳಿಗೆ ಸಮಾನವಾಗಿ ಪ್ರತಿಕ್ರಿಯಿಸಿತು.
ಏಪ್ರಿಲ್ 22ರಂದು ಜೆ & ಕೆ ಯ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಪ್ರಮುಖ ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭಾರತದ ಆಪರೇಷನ್ ಸಿಂದೂರ್ ನಡೆದಿತ್ತು. ಇದರಲ್ಲಿ 70 ಭಯೋತ್ಪಾದಕರು ಹತರಾಗಿದ್ದರು. 24 ನಿಮಿಷಗಳಲ್ಲಿ, ಭಾರತೀಯ ಪಡೆಗಳು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಿದ್ದವು.
ಇದನ್ನೂ ಓದಿ: Operation of Sindoor: 'ಆಪರೇಷನ್ ಸಿಂಧೂರ್’: ಗುರುವಾರ ಸರ್ವಪಕ್ಷ ಸಭೆ ಕರೆದ ಸರ್ಕಾರ