ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಫುಡ್‌ ಪಾಯ್ಸನ್ ಆದರೆ ಚೇತರಿಸಿಕೊಳ್ಳುವುದು ಹೇಗೆ?

ಮಳೆಗಾಲದಲ್ಲಿ ಆಹಾರ ಅಥವಾ ನೀರು ಕಲುಷಿತಗೊಳ್ಳುವ ಸಂದರ್ಭ ಹೆಚ್ಚು. ಇದರಿಂದಾಗಿ ಕೇವಲ ವಿಷಾಹಾರ ಮಾತ್ರವಲ್ಲ, ಕಾಲರಾ, ಆಮಶಂಕೆ, ಟೈಫಾಯ್ಡ್‌, ವೈರಲ್‌ ಹೆಪಟೈಟಿಸ್‌ ಮುಂತಾದ ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ. ಇಂಥ ಪ್ರತಿಯೊಂದು ರೋಗಕ್ಕೂ ಬೇರೆಯದೇ ಚಿಕಿತ್ಸೆ ಬೇಕಾ ಗುತ್ತದೆ ಮತ್ತು ಅದನ್ನು ವೈದ್ಯರೇ ಸೂಚಿಸುತ್ತಾರೆ. ಆದರೆ ಸಾಮಾನ್ಯ ವಿಷಾಹಾರದ ತೊಂದರೆಯಿಂದ, ವಾಂತಿ- ಡಯರಿಯಾದಂಥ ಅವಸ್ಥೆಯಿಂದ ಚೇತರಿಸಿಕೊಳ್ಳುವಾಗ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕೆಲವು ಪಥ್ಯಗಳೂ ಅಗತ್ಯವಾಗುತ್ತವೆ. ಏನದು, ಅವುಗಳಿಂದ ಏನು ಅನುಕೂಲ?

ಫುಡ್‌ ಪಾಯ್ಸನ್ ಆದರೆ ಚೇತರಿಕೆ ಹೇಗೆ?

Profile Pushpa Kumari Jul 12, 2025 7:30 AM

ನವದೆಹಲಿ: ಮಳೆಯ ದಿನಗಳಲ್ಲಿ ಸಂಜೆಯ ಹೊತ್ತು ಏನಾದರೂ ಬಿಸಿಯಾಗಿ, ಖಾರವಾಗಿ ಮೆಲ್ಲಬೇಕೆಂಬ ಬಯಕೆ ತಲೆ ಯೆತ್ತುವುದು ಸಹಜ. ಅದಕ್ಕಾಗಿ ನಮ್ಮಿಷ್ಟದ ಯಾವುದೋ ರೆಸ್ಟೋ ರೆಂಟ್‌ಗೆ ಹೋಗಿ ಬಜ್ಜಿ, ಬೋಂಡಾ ಅಥವಾ ಚಾಟ್‌ಗಳನ್ನು ಸವಿಯುತ್ತೇವೆ. ಈವರೆಗೆ ಎಲ್ಲವೂ ಸರಿಯಿತ್ತು. ಆದರೆ ಮನೆಗೆ ಮರಳಿ ಸ್ವಲ್ಪ ಹೊತ್ತಿಗೇ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ರಾತ್ರಿ ಹೊಟ್ಟೆಯೆಲ್ಲ ತಿರುಗಿದಂತಾಗಿ ವಾಂತಿ, ಬೆಳಗಿನ ಹೊತ್ತಿಗೆ ಡಯರಿಯಾ ಸಹ ಆರಂಭ ವಾಗು ತ್ತದೆ. ವೈದ್ಯರಲ್ಲಿಗೆ ಓಡಿದರೆ, ಇದು ವಿಷಾಹಾರದ ಅಥವಾ ಫುಡ್‌ ಪಾಯ್ಸನ್ (Food Poisoning) ಆದ ಲಕ್ಷಣ ಎನ್ನುತ್ತಾರೆ; ಚಿಕಿತ್ಸೆಯನ್ನೂ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಚೇತರಿಕೆ ಹೇಗೆ?

ಮಳೆಗಾಲದಲ್ಲಿ ಆಹಾರ ಅಥವಾ ನೀರು ಕಲುಷಿತಗೊಳ್ಳುವ ಸಂದರ್ಭ ಹೆಚ್ಚು. ಇದರಿಂದಾಗಿ ಕೇವಲ ವಿಷಾಹಾರ ಮಾತ್ರವಲ್ಲ, ಕಾಲರಾ, ಆಮಶಂಕೆ, ಟೈಫಾಯ್ಡ್‌, ವೈರಲ್‌ ಹೆಪಟೈಟಿಸ್‌ ಮುಂತಾದ ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ. ಇಂಥ ಪ್ರತಿಯೊಂದು ರೋಗ ಕ್ಕೂ ಬೇರೆಯದೇ ಚಿಕಿತ್ಸೆ ಬೇಕಾ ಗುತ್ತದೆ ಮತ್ತು ಅದನ್ನು ವೈದ್ಯರೇ ಸೂಚಿಸುತ್ತಾರೆ. ಆದರೆ ಸಾಮಾನ್ಯ ವಿಷಾಹಾರದ ತೊಂದರೆಯಿಂದ, ವಾಂತಿ- ಡಯರಿಯಾದಂಥ ಅವಸ್ಥೆಯಿಂದ ಚೇತರಿಸಿಕೊಳ್ಳು ವಾಗ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕೆಲವು ಪಥ್ಯಗಳೂ ಅಗತ್ಯವಾಗುತ್ತವೆ. ಏನದು, ಅವುಗಳಿಂದ ಏನು ಅನುಕೂಲ?

ನೀರು: ವಾಂತಿ, ಆಮಶಂಕೆಯಂಥ ಸಂದರ್ಭಗಳಲ್ಲಿ ದೇಹದಲ್ಲಿನ ನೀರಿನಂಶ ಕಡಿಮೆ ಯಾಗುತ್ತದೆ. ಇದನ್ನು ಸರಿಪಡಿಸುವುದಕ್ಕೆ, ನಿರ್ಜಲೀಕರಣ ಆಗದಂತೆ ತಡೆಯುವುದಕ್ಕೆ ಶುದ್ಧ ನೀರು, ಓಆರ್‌ಎಸ್‌, ಎಳನೀರು ಮತ್ತು ತರಕಾರಿ ಬೇಯಿಸಿದ ನೀರಿನಂಥ ಕಟ್ಟುಗಳನ್ನು ಆಗಾಗ ಸೇವಿಸುತ್ತಿರಬೇಕು. ಆದರೆ ಒಂದೇ ಸಮನೆ ಇವುಗಳನ್ನು ಕುಡಿಯಬಾರದು, ಹತ್ತಿಪ್ಪತ್ತು ನಿಮಿಷ ಗಳಿಗೆ ಒಂದೆರಡು ಗುಟುಕು ಗಳಂತೆ ಕುಡಿಯಬೇಕಾಗುತ್ತದೆ.

ಯಾವುದೇ ಕೆಫೇನ್‌ ಬೇಡ: ಸಕ್ಕರೆ ಮತ್ತು ಉಪ್ಪು ಭರಿತ ಜ್ಯೂಸ್‌ಗಳು, ಬಣ್ಣದ ಪಾನೀಯಗಳು ಕಡ್ಡಾಯವಾಗಿ ಬೇಡ. ಇದಕ್ಕಾಗಿ ಪುಡಿ ಮಾದರಿಯಲ್ಲಿರುವ ಎಲೆಕ್ಟ್ರಾಲ್‌ ಅಥವಾ ಓಆರ್‌ ಎಸ್‌ಗಳನ್ನೇ ಬಳಸಿ. ಪ್ಯಾಕ್‌ ಮೇಲಿನ ಸೂಚನೆಯಂತೆ ಅದನ್ನು ನೀರಿಗೆ ಬೆರೆಸಿ ತಯಾರಿಸಿ ಕೊಳ್ಳಿ. ಟೆಟ್ರಾಪ್ಯಾಕ್‌ನಲ್ಲಿರುವ ಓಆರ್‌ಎಸ್‌ಎಲ್‌ನಂಥ ಪೇಯಗಳು ಇಂಥ ಸಂದರ್ಭಗಳಿಗೆ ಸೂಕ್ತವಲ್ಲ.

ಆಹಾರ: ಮೊದಲಿಗೆ ದ್ರವಾಹಾರಗಳಿಂದ ಹೊಟ್ಟೆಗೇನೂ ತೊಂದರೆ ಆಗುತ್ತಿಲ್ಲ ಎಂಬುದು ಖಾತ್ರಿಯಾದ ಮೇಲೆ, ಲಘುವಾದ ಘನ ಆಹಾರಗಳತ್ತ ಹೊರಳಬಹುದು. ಉದಾ, ತರಕಾರಿ ಮತ್ತು ಬೇಳೆಕಟ್ಟಿನ ಮಂದವಾದ ಸೂಪ್‌, ಮೊಸರನ್ನ ಮುಂತಾದ ಮಸಾಲೆಗಳಿಲ್ಲದ ಆಹಾರ ಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿ ನೋಡಿ. ಇದರಿಂದ ಹೊಟ್ಟೆ ಬುಡಮೇಲಾಗದಿದ್ದರೆ, ಮಸಾಲೆಗಳಿಲ್ಲದ ಖಿಚಡಿ, ಜಿಡ್ಡಿಲ್ಲದ ರೋಟಿ ಮುಂತಾದವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸ ಲಾರಂಭಿಸಿ. ಮಸಾಲೆ ಯಿಲ್ಲದಂತೆ ಬೇಯಿಸಿದ ಮೊಟ್ಟೆಯನ್ನೂ ಸ್ವಲ್ಪವಾಗಿಯೇ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಇದನ್ನು ಓದಿ:Health Tips: ಅಂಜೂರ: ಪೋಷಕಾಂಶಗಳ ಆಗರ! ಇದರ ಆರೋಗ್ಯ ಲಾಭಗಳ ಬಗ್ಗೆ ನಮಗೆ ಗೊತ್ತಾ?

ಮುಂದಿನ ಹಂತದಲ್ಲಿ ತಾಜಾ ಹಣ್ಣುಗಳ ಸೇವನೆಯನ್ನು ಪ್ರಾರಂಭಿಸಬಹುದು. ಮೊದಲಿಗೆ, ದಾಳಿಂಬೆ, ಮೂಸಂಬಿ ಮುಂತಾದ ಹುಳಿಯಿಲ್ಲದ ಹಣ್ಣುಗಳಿಂದ ಪ್ರಾರಂಭಿಸಿ. ನಂತರ ಸೇಬು ಹಣ್ಣು, ಬಾಳೆಹಣ್ಣು, ಪಪ್ಪಾಯ ಮುಂತಾದವನ್ನು ಸೇರಿಸಿಕೊಳ್ಳಿ. ಕಿತ್ತಳೆ, ದ್ರಾಕ್ಷಿಯಂಥ ಹುಳಿ ಹಣ್ಣುಗಳನ್ನು ಎಲ್ಲಕ್ಕಿಂತ ಕಡೆಯಲ್ಲಿ ಸೇರಿಸಿಕೊಳ್ಳಿ. ಜೀರ್ಣಾಂಗಗಳು ಸಂಪೂರ್ಣ ಸಹಜ ಸ್ಥಿತಿಗೆ ಬರುವವರೆಗೂ ಹೊರಗಿನ ಆಹಾರಗಳು ಬೇಡವೇಬೇಡ. ಮನೆಯಲ್ಲಿ ಮಾಡಿದ ರುಚಿ-ಶುಚಿಯಾದ, ತಾಜಾ ಆಹಾರವನ್ನೇ ಸೇವಿಸಿ.

ಚೈತನ್ಯ: ಹೊಟ್ಟೆಯ ಸ್ಥಿತಿ ಏರುಪೇರಾದಾಗ ಎಲ್ಲಕ್ಕಿಂತ ಹೆಚ್ಚು ಸೊರಗುವುದು ದೇಹದ ಶಕ್ತಿ ಮತ್ತು ಚೈತನ್ಯ. ಜೀರ್ಣಾಂಗಗಳು ಸುಸ್ಥಿತಿಗೆ ಬರಲು ಶುರುವಾಗುತ್ತಿದ್ದಂತೆ, ಜಡತ್ವ, ಸುಸ್ತುಗಳೆಲ್ಲ ತೊಲಗಿ, ದೇಹದ ಚೈತನ್ಯ ನಿಧಾನಕ್ಕೆ ಮರಳತೊಡಗುತ್ತದೆ. ಒತ್ತಾಯದಿಂದ ನಾಲ್ಕಾರು ತುತ್ತು ಹೊಟ್ಟೆಗೆ ಹೋಗುತ್ತಿದ್ದ ಆಹಾರವು ಕ್ರಮೇಣ ರುಚಿಸಲು ಪ್ರಾರಂಭಿಸುತ್ತದೆ. ಹೊಟ್ಟೆ ಹಸಿಯುತ್ತಿರುವ ಅನುಭವ ಈ ನಿಟ್ಟಿನಲ್ಲಿ ಮಹತ್ವದ್ದು. ಸಣ್ಣದೊಂದು ಊಟ ತಿಂಡಿಯ ನಂತರ ಹೊಟ್ಟೆ ಸಮಸ್ಥಿತಿಯಲ್ಲೇ ಇದೆಯೆಂದರೆ ಜೀರ್ಣಾಂಗಗಳು ಗುಣವಾಗುತ್ತಿವೆ ಎಂಬುದು ಸ್ಪಷ್ಟ.