ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Advocate Jiva Self harming: ವಕೀಲೆ ಜೀವಾ ಆತ್ಮಹತ್ಯೆ: ಚಾರ್ಜ್‌ಶೀಟ್‌ ಸಲ್ಲಿಕೆ, ಡಿವೈಎಸ್‌ಪಿಗೆ ಮತ್ತಷ್ಟು ಸಂಕಷ್ಟ

2024ರ ನವೆಂಬರ್ 22ರಂದು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಮನೆಯಲ್ಲಿ ವಕೀಲೆ ಜೀವಾ ಆತ್ಮಹತ್ಯೆ (Advocate Jiva Self Harming) ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ 13 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದರು. ಈ ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೈಕೋರ್ಟ್​ ಸಿಬಿಐ ಎಸ್​​ಪಿ ವಿನಾಯಕ್ ವರ್ಮಾ, ಸಿಸಿಬಿ ಡಿಸಿಪಿ ಅಕ್ಷಯ್ ಮಚೀಂದ್ರ, ಐಎಸ್​​ಡಿ ಎಸ್​​ಪಿ ನಿಶಾ ಜೇಮ್ಸ್ ಒಳಗೊಂಡ ಎಸ್ಐಟಿ ತಂಡ ರಚಿಸಿತ್ತು.

ವಕೀಲೆ ಜೀವಾ ಆತ್ಮಹತ್ಯೆ: ಚಾರ್ಜ್‌ಶೀಟ್‌ ಸಲ್ಲಿಕೆ, ಡಿವೈಎಸ್‌ಪಿಗೆ ಸಂಕಷ್ಟ

ವಕೀಲೆ ಜೀವಾ, ಡಿವೈಎಸ್‌ಪಿ ಕನಕಲಕ್ಷ್ಮಿ

ಹರೀಶ್‌ ಕೇರ ಹರೀಶ್‌ ಕೇರ May 3, 2025 7:58 AM

ಬೆಂಗಳೂರು: ಭೋವಿ ನಿಗಮ ಹಗರಣ (Karnataka Bhovi Development Corporation Scam) ಹಿನ್ನೆಲೆಯಲ್ಲಿ ವಕೀಲೆ ಜೀವಾ (Advocate Jiva) ಆತ್ಮಹತ್ಯೆ (Self harming) ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು 2,300 ಪುಟಗಳ ಚಾರ್ಜ್​​ಶೀಟ್​ (Charge Sheet) ಅನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಎಸ್​ಐಟಿ ತನಿಖೆ ವೇಳೆ ಹಲವು ವಿಚಾರಗಳು ಬಹಿರಂಗಗೊಂಡಿವೆ. ಮೃತ ಜೀವಾಗೆ ಸಿಐಡಿ ಡಿವೈಎಸ್​​ಪಿ ಕನಕಲಕ್ಷ್ಮೀಯವರು ಕಿರುಕುಳ ನೀಡಿದ್ದಾರೆ ಎಂದು ಎಸ್​ಐಟಿ ಸಲ್ಲಿಸಿರುವ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖವಾಗಿದೆ. ತನಿಖೆ ವೇಳೆ ಚಿತ್ರೀಕರಿಸಿದ ವಿಡಿಯೋ, ಎಫ್ಎಸ್ಎಲ್ ವರದಿ ಚಾರ್ಜ್​ಶೀಟ್​ನೊಂದಿಗೆ ಲಗತ್ತಿಸಲಾಗಿದೆ.

2024ರ ನವೆಂಬರ್ 22ರಂದು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಮನೆಯಲ್ಲಿ ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ 13 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದರು. ಈ ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೈಕೋರ್ಟ್​ ಸಿಬಿಐ ಎಸ್​​ಪಿ ವಿನಾಯಕ್ ವರ್ಮಾ, ಸಿಸಿಬಿ ಡಿಸಿಪಿ ಅಕ್ಷಯ್ ಮಚೀಂದ್ರ, ಐಎಸ್​​ಡಿ ಎಸ್​​ಪಿ ನಿಶಾ ಜೇಮ್ಸ್ ಒಳಗೊಂಡ ಎಸ್ಐಟಿ ತಂಡ ರಚಿಸಿತ್ತು.

ಪ್ರಕರಣದ ತನಿಖೆ ನಡೆಸಿ 90 ದಿನದಲ್ಲಿ ಹೈಕೋರ್ಟ್​​ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ವರದಿಯನ್ನು ಪರಿಶೀಲನೆ ನಡೆಸಿ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್ ಸಲ್ಲಿಸಲು ಅನುಮತಿ ನೀಡಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಜೀವಾ ಡೆತ್​ನೋಟ್​​ನಲ್ಲಿ ಮಾಡಿದ್ದ ಬಹುತೇಕ ಆರೋಪಗಳು ಚಾರ್ಚ್​ಶೀಟ್​ ಪ್ರಕಾರ ಸಾಬೀತಾಗಿವೆ.

ತನಿಖೆಗೆ ಸೈಕಾಲಜಿ ನೆರವು

ಎಸ್​ಐಟಿ ಅಧಿಕಾರಿಗಳ ತನಿಖೆಗೆ ನಿಮ್ಹಾನ್ಸ್ ಆಸ್ಪತ್ರೆಯ ಫಾರೆನ್ಸಿಕ್ ಸೈಕಾಲಾಜಿಕಲ್ ಆಟೋಫೇಸಿ (Forensic Psychological Autopsy) ವಿಭಾಗದ ವೈದ್ಯೆ ಡಾ.ರಾಜಕುಮಾರಿ ಮತ್ತು ಅವರ ತಂಡ ಸಾಥ್​ ನೀಡಿದೆ. ಭೋವಿ ನಿಗಮ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾಗ ರೆಕಾರ್ಡ್​ ಮಾಡಿದ್ದ 30 ವಿಡಿಯೋಗಳನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.

ಈ ವಿಡಿಯೋಗಳನ್ನು ವೈದ್ಯರು ಪರಿಶೀಲನೆ ನಡೆಸಿದ್ದು, ವಕೀಲೆ ಜೀವಾ ಖಿನ್ನತೆ, ಕಿರುಕುಳ, ಮೆಂಟಲ್ ಸ್ಟೇಬಲ್ ಬಗ್ಗೆ ಅಧ್ಯಯನ ಮಾಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ಮುಖಭಾವ ಹೇಗಿತ್ತು? ಎಷ್ಟು ಖಿನ್ನತೆಗೆ ಒಳಗಾಗಿದ್ದರು? ಸಿಐಡಿ ವಿಚಾರಣೆಗೆ ಬಂದು ಹೋಗಿದ್ದ ಸಿಸಿಟಿವಿ ವಿಡಿಯೋ, ಜೀವಾ ಬರೆದ ಡೆತ್ ನೋಟ್, ಜೀವಾ ನೀಡಿದ್ದ ವಿಡಿಯೋ ಹೇಳಿಕೆಗಳು ಮತ್ತು ಜೀವಾರ ಸ್ನೇಹಿತರ ಹೇಳಿಕೆ ಹಾಗೂ ಅವರ ಮನೆ ಬಳಿ ಹೀಗೆ ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸಿ ವೈದ್ಯರು ವರದಿ ಸಿದ್ದಪಡಿಸಿ, ಎಸ್​ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.

ಇದನ್ನೂ ಓದಿ: CID Dysp KanakaLakshmi: ವಕೀಲೆ ಜೀವಾ ಆತ್ಮಹತ್ಯೆ: ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ಬಂಧನ