ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Human Fetus Found: ವಿದ್ಯುತ್ ತಂತಿಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಭ್ರೂಣ ಪತ್ತೆ; ಅಬ್ಬಾ...ಎಂಥಾ ಘೋರ ಘಟನೆ??

ಉತ್ತರ ಪ್ರದೇಶದ ಗೋರಕ್‌ಪುರದ ಕೇಶವಪುರ ವಿದ್ಯುತ್ ಉಪಕೇಂದ್ರದ ಬಳಿ ವಿದ್ಯುತ್ ತಂತಿಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಾನವ ಭ್ರೂಣವೊಂದು ಪತ್ತೆಯಾಗಿದೆ. ಪೊಲೀಸ್ ಅಧಿಕಾರಿಗಳು ಭ್ರೂಣವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಶುರುಮಾಡಿದ್ದಾರೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ವಿದ್ಯುತ್ ತಂತಿಗಳಲ್ಲಿ ನೇತಾಡಿದ ಭ್ರೂಣ!

Profile pavithra May 3, 2025 3:46 PM

ಲಖನೌ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವಿದ್ಯುತ್ ತಂತಿಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಾನವ ಭ್ರೂಣವೊಂದು (Human Fetus Found) ಶುಕ್ರವಾರ (ಮೇ 2) ಪತ್ತೆಯಾಗಿದೆ. ಸಹಜನ್ವಾ ರೈಲ್ವೆ ನಿಲ್ದಾಣದ ಪ್ಲಾಟ್‌ಪಾರ್ಮ್‌ -2 ರ ಹಿಂಭಾಗದ ಕೇಶವಪುರ ವಿದ್ಯುತ್ ಉಪಕೇಂದ್ರದ ಬಳಿ ಭ್ರೂಣವು ನೆಲದಿಂದ ಸುಮಾರು 20 ಅಡಿ ಎತ್ತರದಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭ್ರೂಣವು ತಂತಿಗಳಲ್ಲಿ ಸಿಲುಕಿರುವುದನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಪೊಲೀಸ್ ಅಧಿಕಾರಿಗಳು ಭ್ರೂಣವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ಮಾಹಿತಿ ಕಲೆಹಾಕಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಹತ್ತಿರದ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಭ್ರೂಣವನ್ನು ಹತ್ತಿರದ ರೈಲ್ವೆ ಬದಿಯ ಕಟ್ಟಡದಿಂದ ಎಸೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಇಲ್ಲಿನ ಮನೆಯೊಂದರ ಶೌಚಾಲಯದ ಪೈಪ್‍ನಲ್ಲಿ ಆರು ತಿಂಗಳ ಭ್ರೂಣ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಇಂದಿರಾಪುರಂ ಪೊಲೀಸರು ಸ್ಥಳಕ್ಕೆ ತಲುಪಿ ಮನೆ ಮಾಲೀಕರನ್ನು ಪ್ರಶ್ನಿಸಿ ಪೈಪ್ ಅನ್ನು ಕತ್ತರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಮಾಲೀಕ ಬಹಿರಂಗಪಡಿಸಿದ್ದಾನೆ. ಮನೆಯಲ್ಲಿ ಒಂಬತ್ತು ಬಾಡಿಗೆದಾರರು ವಾಸವಾಗಿದ್ದು, ಅವರೆಲ್ಲರನ್ನೂ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಅದೇ ರೀತಿ ಬೀದಿ ನಾಯಿಮರಿಗಳು ಮಗುವಿನ ತಲೆಬುರುಡೆಯೊಂದಿಗೆ ಆಟವಾಡುತ್ತಿದ್ದ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ ಆಗಿತ್ತು. ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಆಸ್ಪತ್ರೆಯ ಹಾಸ್ಟೆಲ್ ಬಳಿಯಿಂದ ಈ ವಿಡಿಯೊವನ್ನು ಸೆರೆಹಿಡಿಯಲಾಗಿದೆ ಎನ್ನಲಾಗಿತ್ತು. ವಿಡಿಯೊ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ:‌Viral Video: ಪ್ರೇಯಸಿ ಜೊತೆಗಿದ್ದ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು; ವಿಡಿಯೊ ವೈರಲ್

ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಡೀನ್ ನವನೀತ್ ಸಕ್ಸೇನಾ, ತಲೆಬುರುಡೆ ಅಲ್ಲಿಗೆ ಹೇಗೆ ತಲುಪಿತು? ಅದು ಯಾರಿಗೆ ಸೇರಿದ್ದು? ಮತ್ತು ಅದನ್ನು ಹಾಸ್ಟೆಲ್ ಹಿಂಭಾಗದ ಕೊಳದ ಬಳಿ ಎಸೆಯಲಾಗಿದೆಯೇ? ಎಂಬ ಹಲವು ಪ್ರಶ್ನೆಗಳು ಅವರಲ್ಲಿ ಮೂಡಿದ ಕಾರಣ ಈ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಮೇಲ್ನೋಟಕ್ಕೆ ಸ್ವಚ್ಛತೆ ಕೆಲಸ ಮಾಡುವ ಸಿಬ್ಬಂದಿ ತಲೆಬುರುಡೆಯನ್ನು ಹಾಸ್ಟೆಲ್ ಹಿಂಭಾಗದಲ್ಲಿ ಹೂತುಹಾಕಿದ್ದರು ಎಂದು ತಿಳಿದುಬಂದಿತ್ತು. ಇದಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಉದ್ದೇಶಗಳಿಗಾಗಿ ತಲೆಬುರುಡೆಗಳನ್ನು ಸಹ ಬಳಸುತ್ತಾರೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದರು.