Health Tips: ರಾಗಿ ಅಂಬಲಿ ಕುಡಿಯೋದ್ರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ?
ಬೇಸಿಗೆಯ ಸಮಯದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುವುದು ಆರೋಗ್ಯದ ದೃಷ್ಠಿಯಿಂದ ತುಂಬಾ ಒಳ್ಳೆಯದು.ವಿಶೇಷವಾಗಿ ರಾಗಿ ಸೇವನೆ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಸುತ್ತದೆ. ಹಾಗಿದ್ದಲ್ಲಿ ಈ ಅಂಬಲಿಯನ್ನುತಯಾರಿಸುವುದು ಹೇಗೆ ಮತ್ತು ಇದನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವ ಮಾಹಿತಿ ಇಲ್ಲಿದೆ.


ನವದೆಹಲಿ: ಬಿಸಿಲಿನ ದಾಹಕ್ಕೆ ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಹಲವು ರೀತಿಯ ಪಾನೀಯಗಳನ್ನು ಸೇವಿಸುತ್ತೇವೆ. ಅಂತಹ ಆರೋಗ್ಯಕರ (Health Tips) ಡ್ರಿಂಕ್ ಗಳಲ್ಲಿ ರಾಗಿ ಅಂಬಲಿ ಕೂಡ ಒಂದಾಗಿದೆ. ರಾಗಿ ಅಂಬಲಿ ಒಂದು ಸಾಂಪ್ರದಾಯಿಕ ಪಾನೀಯವಾಗಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಅಗತ್ಯವಾದ ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದ್ದು ಹೆಚ್ಚು ಪೌಷ್ಟಿಕಾಂಶದ ಧಾನ್ಯವಾಗಿದೆ. ಈ ಬೇಸಿಗೆಯ ಸಮಯದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುವುದು ಆರೋಗ್ಯದ ದೃಷ್ಠಿಯಿಂದ ತುಂಬಾ ಒಳ್ಳೆಯದು. ವಿಶೇಷವಾಗಿ ರಾಗಿ ಸೇವನೆ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಸುತ್ತದೆ. ಹಾಗಿದ್ದಲ್ಲಿ ಈ ಅಂಬಲಿಯನ್ನುತಯಾರಿಸುವುದು ಹೇಗೆ ಮತ್ತು ಇದನ್ನು ಕುಡಿ ಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವ ಮಾಹಿತಿ ಇಲ್ಲಿದೆ.
ತೂಕ ಇಳಿಕೆಗೆ ಸಹಕಾರಿ:
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಹೆಚ್ಚು ಪ್ರಯೋಜನ ನೀಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಗಳನ್ನು ಹೊಂದಿರುವುದರಿಂದ ತೂಕ ಇಳಿಕೆಗೆ ಪರಿಣಾಮಕಾರಿ. ಇದರ ಸೇವನೆಯು ದೀರ್ಘಾವಧಿಯ ವರೆಗೆ ನಿಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹಾಗಾಗಿ ಬೊಜ್ಜಿನ ಸಮಸ್ಯೆಯಿಂದ ದೂರವಿರಲು ಮತ್ತು ಬೇಗನೆ ತೂಕವನ್ನು ಇಳಿಸಲು ಪ್ರಯತ್ನ ಪಡುವವರು ದಿನ ನಿತ್ಯ ರಾಗಿ ಅಂಬಲಿ ಮಾಡಿ ಸವಿಯ ಬಹುದಾಗಿದೆ.
ಮಧುಮೇಹಕ್ಕೆ ರಾಮಬಾಣ:
ರಾಗಿ ಸೇವನೆಯಿಂದ ಮಧುಮೇಹದ ಅಪಾಯವನ್ನು ತಗ್ಗಿಸಬಹುದಾಗಿದೆ.. ರಾಗಿಯು ಉತ್ತಮ ಪ್ರಮಾಣದ ಪೌಷ್ಟಿಕ ಆಂಶ ಹೊಂದಿದ್ದು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದ ಲ್ಲಿಡುತ್ತದೆ. ಆದ್ದರಿಂದ ನೀವು ಮಧುಮೇಹ ರೋಗಿಯಾಗಿದ್ದರೆ, ನೀವು ಅದನ್ನು ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಚರ್ಮಕ್ಕೆ ಪ್ರಯೋಜನಕಾರಿ:
ರಾಗಿಯಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿ ಕಂಡುಬರುತ್ತವೆ. ಇದರ ಸೇವನೆಯು ಚರ್ಮದ ಸುಕ್ಕುಗಳನ್ನು ತೆಗೆದುಹಾಕಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಇದಲ್ಲದೆ, ರಾಗಿಯಲ್ಲಿರುವ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಸ್ವತಂತ್ರ ರಾಡಿಕಲ್‌ಗಳ ಪರಿಣಾಮ ಕಡಿಮೆಯಾಗುವುದರಿಂದ, ದೇಹವು ಅನೇಕ ರೀತಿಯ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ.
ಮಕ್ಕಳಿಗೆ ಉತ್ತಮ:
ರಾಗಿ ಅಂಬಲಿ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಿಂದ ಮಕ್ಕಳ ಮೆದುಳು ಸಕ್ರಿಯವಾಗಿ ಇರುವುದಲ್ಲದೆ ಮಕ್ಕಳು ಚುರುಕಿನಿಂದ ಕೆಲಸ ಮಾಡುವಂತೆ ಮಾಡುತ್ತದೆವಿದ್ಯಾಭ್ಯಾಸ ಮಾಡುವ ಮಕ್ಕಳು ಕಲಿಕೆಯಲ್ಲಿಯೂ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಾರೆ.
ರಕ್ತದೊತ್ತಡ ನಿಯಂತ್ರಣ:
ರಾಗಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಇದ್ದು ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ. ಅದರ ಜೊತೆ ರಾಗಿಯಲ್ಲಿ ಪೊಟ್ಯಾಸಿಯಮ್ ಪ್ರಮಾಣ ಅಧಿಕ ಇದ್ದು ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಹೆಚ್ಚು ಸಹಕಾರಿ ಯಾಗಿದೆ.
ಸರಿಯಾದ ನಿದ್ರೆಗೆ ಪ್ರಯೋಜನಕಾರಿ:
ರಾಗಿ ಅಂಬಲಿಯನ್ನ ನಿಯಮಿತವಾಗಿ ಸೇವಿಸಿದರೆ ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆ ಸಮಸ್ಯೆಗಳು ದೂರವಾಗುತ್ತವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಶೇಷವಾಗಿ ಟ್ರಿಪ್ಟೊಫಾನ್ ಮತ್ತು ಅಮೈನೋ ಆಮ್ಲಗಳು ಇರಲಿದ್ದು ರಾತ್ರಿಯ ಸಮಮಯದಲ್ಲಿ ಚೆನ್ನಾಗಿ ನಿದ್ರಿಕರಿಸಲು ಮತ್ತು ವಿಶ್ರಾಂತಿಗೆ ಸಹಾಯ ಮಾಡುತ್ತವೆ.
ಇದನ್ನು ಓದಿ: Health Tips: ರಸಭರಿತ ಮಾವಿನಹಣ್ಣಿನ ಉಪಯೋಗವೇನು?
ತಯಾರಿಸುವುದು ಹೇಗೆ?
ರಾಗಿಯನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಬಳಿಕ ಸ್ವಲ್ಪ ನೀರಿಗೆ ರಾಗಿ ಪುಡಿ ಜೊತೆಗೆ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಇದಕ್ಕೆ ನೀವು ಗೋಡಂಬಿ, ಒಣದ್ರಾಕ್ಷಿ, ಚಿಟಿಕೆ ಖಾರದ ಪುಡಿ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬಹುದು. ಗಂಜಿ ಕುದಿಯುವಾಗ ಒಂದು ಪುದೀನ ಎಲೆ ಕೂಡ ಸೇರಿಸಬಹುದು. ರಾಗಿ ಗಂಜಿ ಸ್ವಲ್ಪ ಬಿಸಿಬಿಸಿ ಇದ್ದಾಗಲೇ ಸವಿಯಿರಿ..