RCB vs CSK: ಚೆನ್ನೈ ಎದುರು ಟಾಸ್ ಸೋತ ಆರ್‌ಸಿಬಿ ಮೊದಲ ಬ್ಯಾಟಿಂಗ್!
RCB vs CSK: ಬೆಂಗಳೂರಿನ ಎಂ ಚೆನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 ಟೂರ್ನಿಯ 52ನೇ ಪಂದ್ಯದಲ್ಲಿ (RCB vs CSK) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿ(MS Dhoni) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡುವಂತಾಗಿದೆ.
ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಜಾಶ್ ಹೇಝಲ್‌ವುಡ್ ಬದಲು ದಕ್ಷಿಣ ಆಫ್ರಿಕಾ ವೇಗಿ ಲಂಗಿ ಎನ್‌ಗಿಡಿಗೆ ಅವಕಾಶವನ್ನು ಪಡೆಯಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡಿದ್ದ ಅದೇ ಆಡುವ ಬಳಗವನ್ನು ಆರ್‌ಸಿಬಿ ಉಳಿಸಿಕೊಂಡಿದೆ.
IPL 2025: ಆರ್‌ಸಿಬಿ ಈ ಸಲ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದ ಸುನೀಲ್ ಗವಾಸ್ಕರ್!
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ Xiನಲ್ಲಿಯೂ ಯಾವುದೇ ಬದಲಾವಣೆ ಇಲ್ಲವೆಂದು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಟಾಸ್ ವೇಳೆ ಬಹಿರಂಗಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇಲ್ಲಿಯವರೆಗೂ ಆಡಿದ 10 ಪಂದ್ಯತಗಳಲ್ಲಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಆ ಮೂಲಕ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಆದರೆ, ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ, ಆಡಿದ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.
CSK have won the toss and put us to bat first! 🪙
— Royal Challengers Bengaluru (@RCBTweets) May 3, 2025
Team News! 📋
☝️Change: Lungi 🔄 Hoff! 🙌#PlayBold #ನಮ್ಮRCB #IPL2025 @qatarairways pic.twitter.com/kgthfeMZg9
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮ್ಯಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಳ್
GAME READY! 🦁💪#RCBvCSK #WhistlePodu pic.twitter.com/VzoQco1glI
— Chennai Super Kings (@ChennaiIPL) May 3, 2025
ಚೆನ್ನೈ ಸೂಪರ್ ಕಿಂಗ್ಸ್ : ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ದೀಪಕ್ ಹೂಡ, ಎಂಎಸ್ ಧೋನಿ (ನಾಯಕ, ವಿ.ಕೀ) ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಮತೀಶ ಪತಿರಣ
ಅಗ್ರ ಎರಡು ಸ್ಥಾನಗಳ ಮೇಲೆ ಆರ್‌ಸಿಬಿ ಕಣ್ಣು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ನಾಲ್ಕು ಪಂದ್ಯಗಳು ಇವೆ. ಇವುಗಳ ಪೈಕಿ ಒಂದರಲ್ಲಿ ಗೆದ್ದರೂ ಆರ್‌ಸಿಬಿ ಪ್ಲೇಆಫ್ಸ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಆದರೆ, ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ, ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಲು ಎದುರು ನೋಡುತ್ತಿದೆ. ಆದರೆ, ಸಿಎಸ್‌ಕೆ ಇನ್ನುಳಿದ ಪಂದ್ಯಗಳನ್ನು ಗೆದ್ದು ಗೌರವದೊಂದಿಗೆ ಟೂರ್ನಿಯ ಅಭಿಯಾನವನ್ನು ಮುಗಿಸುವ ಯೋಜನೆಯನ್ನು ಹಾಕಿಕೊಂಡಿದೆ.
🚨 Toss 🚨@ChennaiIPL won the toss and elected to bowl against @RCBTweets in Bengaluru.
— IndianPremierLeague (@IPL) May 3, 2025
Updates ▶ https://t.co/I4Eij3ZNlN#TATAIPL | #RCBvCSK pic.twitter.com/BjuiUUBoDN
ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮ್ಯಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಳ್, ಸುಯಶ್ ಶರ್ಮಾ, ರಸಿಖ್ ದಾರ್ ಸಲಾಂ, ಮನೋಜ್ ಭಾಂಡಗೆ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ವಪ್ನಿಲ್ ಸಿಂಗ್, ಜಾಶ್ ಹೇಝಲ್‌ವುಡ್, ಫಿಲಿಪ್ ಸಾಲ್ಟ್, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್ : ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ದೀಪಕ್ ಹೂಡ, ಎಂಎಸ್ ಧೋನಿ (ನಾಯಕ, ವಿ.ಕೀ) ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಮತೀಶ ಪತಿರಣ, ಶಿವಂ ದುಬೆ, ರವಿಚಂದ್ರನ್ ಅಶ್ವಿನ್, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಶ್ರೇಯಸ್ ಗೋಪಾಲ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಮುಖೇಶ್ ಚೌಧರಿ, ನೇಥನ್ ಎಲ್ಲಿಸ್, ಆಂಡ್ರೆ ಸಿದ್ದಾರ್ಥ್ ಸಿ, ವಂಶ್ ಬೇಡಿ