ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam attack: ಪಹಲ್ಗಾಮ್ ದಾಳಿಗೆ ಪಾಕ್‌ ಸೇನೆಯ ಕೊಳಕು ರಾಜಕೀಯ ಕಾರಣ; ಬಾಬರ್‌ ಅಜಂ ಪೋಸ್ಟ್‌ ವೈರಲ್‌

ಬಾಬರ್‌ ಅಜಂ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 'ಪೆಹಲ್ಗಾಮ್‌ ದಾಳಿಗೂ ಪಾಕ್‌ ಕ್ರಿಕೆಟಿಗರಿಗೂ ಯಾವುದೇ ಸಂಬಂಧವಿಲ್ಲ. ಎಲ್ಲದಕ್ಕೂ ಕಾರಣ ಪಾಕ್‌ ಸೇನೆಯ ಕೊಳಕು ರಾಜಕೀಯ' ಎಂದು ಬಾಬರ್‌ ಬರೆದುಕೊಂಡಿದ್ದರು. ಆದರೆ ಇದನ್ನು ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಬಾಬರ್‌ ಹೆಸರಿನ ನಕಲಿ ಖಾತೆಯಿಂದ ಈ ಪೋಸ್ಟ್‌ ಮಾಡಿರುವುದು ಬೆಳಕಿಗೆ ಬಂದಿದೆ.

ಪಾಕ್‌ ಸೇನೆಯ ವಿರುದ್ಧ ಬಾಬರ್‌ ಅಜಂ ಟೀಕೆ?; ಪೋಸ್ಟ್‌ನ ಅಸಲಿಯತ್ತು ಇಲ್ಲಿದೆ

Profile Abhilash BC May 3, 2025 1:18 PM

ಕರಾಚಿ: ಪಹಲ್ಗಾಮ್ ಉಗ್ರರ ದಾಳಿ(Pahalgam attack)ಯನ್ನು ಖಂಡಿಸಿ ಪಾಕಿಸ್ತಾನ ಕ್ರಿಕೆಟಿಗ ಬಾಬರ್‌ ಅಜಂ(Babar Azam) ತನ್ನದೇ ದೇಶದ ಸೇನೆಯನ್ನು(Babar Azam Slam Pakistan Army) ಟೀಕಿಸಿದ್ದಾರೆ ಎಂಬ ಸುದ್ದಿಯೊಂದು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಮಾತ್ರವಲ್ಲದೆ ಭಾರತದಲ್ಲಿಯೂ ಕಾಡ್ಗಿಚ್ಚಿನಂತೆ ಹರಡಿದೆ. ಹೌದು, ಬಾಬರ್‌ ಅಜಂ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 'ಪೆಹಲ್ಗಾಮ್‌ ದಾಳಿಗೂ ಪಾಕ್‌ ಕ್ರಿಕೆಟಿಗರಿಗೂ ಯಾವುದೇ ಸಂಬಂಧವಿಲ್ಲ. ಎಲ್ಲದಕ್ಕೂ ಕಾರಣ ಪಾಕ್‌ ಸೇನೆಯ ಕೊಳಕು ರಾಜಕೀಯ' ಎಂದು ಬಾಬರ್‌ ಬರೆದುಕೊಂಡಿದ್ದರು. ಆದರೆ ಇದನ್ನು ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಬಾಬರ್‌ ಹೆಸರಿನ ನಕಲಿ ಖಾತೆಯಿಂದ ಈ ಪೋಸ್ಟ್‌ ಮಾಡಿರುವುದು ಬೆಳಕಿಗೆ ಬಂದಿದೆ.

ಬಾಬರ್‌ ಹೆಸರಿನ ನಕಲಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಾಬರ್‌ ಅವರ ಹಲವು ಫೋಟೊ ಮತ್ತು ಕ್ರಿಕೆಟ್‌ ಸಂಬಂಧಿತ ವಿಡಿಯೊಗಳು ಇದ್ದ ಕಾರಣ ಆರಂಭದಲ್ಲಿ ಈ ಪೋಸ್ಟ್‌ ಅನ್ನು ಬಾಬರ್‌ ಅವರೇ ಮಾಡಿದ್ದಾರೆ ಎಂದು ಎಲ್ಲರು ಎಲ್ಲರೂ ಅಚ್ಚರಿಪಟ್ಟಿದ್ದರು. 'ಮೆನ್ಸ್‌ ಕ್ರಿಕೆಟ್‌' ಎನ್ನುವ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆ ಬಾಬರ್ ಅವರ ಈ ಇನ್‌ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್ ಶಾಟ್ ಹಂಚಿಕೊಂಡಿತ್ತು. ಆದರೆ ಇದು ನಕಲಿ ಖಾತೆ ಎನ್ನುವುದು ತಿಳಿದುಬಂದ ಬಳಿಕ ತನ್ನ ಖಾತೆಯಿಂದ ಈ ಪೋಸ್ಟ್‌ ಡಿಲೀಡ್‌ ಮಾಡಿದೆ.

ಪೋಸ್ಟ್‌ನಲ್ಲಿ ಏನಿದೆ?

"ಒಬ್ಬ ಕ್ರಿಕೆಟಿಗನಾಗಿ, ನಾನು ಯಾವಾಗಲೂ ಭಾರತದಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಮತ್ತು ಭಾರತವನ್ನು ನನ್ನ ಎರಡನೇ ಮನೆ ಎಂದು ಪರಿಗಣಿಸಿದ್ದೇನೆ. ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿರುವುದು ದುರದೃಷ್ಟಕರ. ಪಹಲ್ಗಾಮ್ ದಾಳಿಯಲ್ಲಿ ಕ್ರಿಕೆಟಿಗರು ಭಾಗಿಯಾಗಿಲ್ಲ ಎಂದು ನಾನು ಸಂಪೂರ್ಣವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ. ಈ ದಾಳಿ ಪಾಕಿಸ್ತಾನ ಸೇನೆಯ ಕೊಳಕು ಕೃತ್ಯದ ಪರಿಣಾಮವಾಗಿದೆ. ನಾನು ಹೆಸರು ಹೇಳುವುದಿಲ್ಲ ಆದರೆ ಪಾಕಿಸ್ತಾನದಲ್ಲಿ ನಿಜವಾಗಿಯೂ ಯಾರು ಅಧಿಕಾರ ಹೊಂದಿದ್ದಾರೆ ಮತ್ತು ಭಯೋತ್ಪಾದನೆಯನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನ ಸೇನೆಯ ಕೃತ್ಯಗಳು ಅಮಾಯಕ ಪಾಕಿಸ್ತಾನಿಗಳನ್ನು ನೋಯಿಸುತ್ತಿವೆ. ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ನಿಲ್ಲಿಸಿ. ಪಾಕಿಸ್ತಾನ ಜಿಂದಾಬಾದ್" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.



ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಸೇರಿ ಎಲ್ಲ ಕ್ರಿಕೆಟಿಗರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಕೇಂದ್ರ ಸರ್ಕಾರವು ಒಟ್ಟಾರೆಯಾಗಿ 63 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಡಾನ್, ಜಿಯೋ ನ್ಯೂಸ್, ಬೋಲ್ ನ್ಯೂಸ್ ಮತ್ತು ಸಮಾ ಟಿವಿಯಂತಹ ಮಾಧ್ಯಮಗಳು, ಪತ್ರಕರ್ತೆ ಅಸ್ಮಾ ಶಿರಾಜಿ ಮತ್ತು ಡಿಜಿಟಲ್ ಶೋ 'ದಿ ಪಾಕಿಸ್ತಾನ್ ಎಕ್ಸ್‌ಪೀರಿಯೆನ್ಸ್' ನಂತಹ ಜನಪ್ರಿಯ ಚಾನೆಲ್‌ಗಳು ಸೇರಿವೆ.

ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರೈಸಿ ಎಲೈಟ್‌ ಪಟ್ಟಿ ಸೇರಿದ ಬಟ್ಲರ್‌