Cotton Sarees Trend: ಬಿಸಿಲಿಗೆ ಪರ್ಫೆಕ್ಟ್ ಲುಕ್ ನೀಡುವ ಮೃದುವಾದ ಕಾಟನ್ ಸೀರೆಗಳು
ಒಂದೆರಡು ಮಳೆ ಬಂದರೂ ಅರುವುದಿಲ್ಲ ಬಿಸಿಲಿನ ಧಗೆ. ಈ ನಡುವೆ ಸಾಲುಸಾಲು ಮದುವೆ, ಗೃಹ ಪ್ರವೇಶ.. ಹೀಗೆ ಶುಭ ಸಮಾರಂಭಗಳು. ಈ ನಡುವೆ ಜರಿತಾರಿ ಸೀರೆಗಳನ್ನು ಮೂಲೆಯಲ್ಲಿರಿಸಿ ಕಾಟನ್ ಸೀರೆಯನ್ನು ಹೊದ್ದುಕೊಳ್ಳಬೇಕು ಎನ್ನುವ ಆಸೆಯಾದರೆ ಸಿನಿ ತಾರೆಯರು ಪ್ರಯತ್ನಿಸಿರುವ ಈ ಸೀರೆಗಳನ್ನು ಟ್ರೈ ಮಾಡಿ ನೋಡಬಹುದು. ಅದಕ್ಕಾಗಿ ನಿಮ್ಮ ವಾರ್ಡ್ ರೋಬ್ ಅನ್ನು ಮೊದಲು ಸ್ವಲ್ಪ ಖಾಲಿ ಮಾಡಿಕೊಳ್ಳಬೇಕಾಗುತ್ತದೆ.



ಪುಷ್ಪಾ 2 ಚಿತ್ರದಲ್ಲಿ ಕಿಸಿಕ್.. ಹಾಡಿಗೆ ಹೆಜ್ಜೆ ಹಾಕಿ ಮೋಡಿ ಮಾಡಿರುವ ಶ್ರೀಲೀಲಾ ಅವರಿಂದ ಹಿಡಿದು ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣವರೆಗೆ ಎಲ್ಲರೂ ಬೇಸಿಗೆಯಲ್ಲಿ ತಣ್ಣನೆ ಇರಿಸುವ ಕಾಟನ್ ಸೀರೆಗಳನ್ನುಟ್ಟು ತಮ್ಮ ವಯ್ಯಾರವನ್ನು ತೋರಿಸಿದ್ದಾರೆ. ಬೇಸಗೆಯಲ್ಲಿ ಪರಿಪೂರ್ಣ ಲುಕ್ ಕೊಡಲು ಈ ಮೂಲಕ ನಮ್ಮನ್ನು ತಣ್ಣಗೆ ಇರಿಸಿಕೊಳ್ಳಲು ಸಹಾಯ ಮಾಡುವ ಸೀರೆಗಳ ಟ್ರೆಂಡ್ ಇಲ್ಲಿದೆ.

ದಕ್ಷಿಣ ಭಾರತದ ಸಿನಿ ತಾರೆಯರಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್, ಶೋಭಿತಾ ಧೂಲಿಪಾಲ.. ಇವರೆಲ್ಲರೂ ಹತ್ತಿ ಸೀರೆಗಳನ್ನುಟ್ಟು ಬೇಸಿಗೆಯ ಬಿಸಿಲನ್ನು ಹೇಗೆ ಸೋಲಿಸಬಹುದು ಎಂಬುದನ್ನು ಸ್ವತಃ ತೋರಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಮಿಂಚಲು ಅದ್ಬುತ ಲುಕ್ ನೀಡುವ ಈ ಸೀರೆಗಳು ಎಲ್ಲರನ್ನೂ ಮೋಡಿ ಮಾಡಬಲ್ಲದು.

ಸಾಯಿ ಪಲ್ಲವಿ ಅವರಂತೆ ಸರಳ ಲುಕ್ ನೀಡಲು ಅಥವಾ ಶ್ರೀಲೀಲಾ ಅವರಂತೆ ಅತ್ಯಾಕರ್ಷಕವಾದ ಸೊಬಗನ್ನು ಹತ್ತಿ ಸೀರೆಗಳನ್ನು ಉಟ್ಟು ತೋರಿಸಬಹುದು. ಬೇಸಿಗೆಯ ಬಿಸಿಲಲ್ಲೂ ನಿಮ್ಮ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುವ ಈ ಸೀರೆಗಳಲ್ಲಿ ಹೂವಿನ ಚಿತ್ತಾರಗಳು, ಜರಿಯ ಮೆರುಗು, ಬಣ್ಣದ ಅದ್ಬುತ ಮಿಶ್ರಣಗಳನ್ನು ಕಾಣಬಹುದು.

ಹಳದಿ ಹೂವಿನ ಮುದ್ರಣವಿರುವ ಸೀರೆಯಲ್ಲಿ ಕಂಗೊಳಿಸಿದ ಶ್ರೀಲೀಲಾ ಅದಕ್ಕೆ ತಕ್ಕುದಾದ ಬ್ಲೌಸ್ ಮತ್ತು ಅತಿ ಕಡಿಮೆ ಜುವೆಲ್ಲರಿಗಳೊಂದಿಗೆ ಪರಿಪೂರ್ಣ ಲುಕ್ ನೀಡಿದ್ದಾರೆ. ಈ ಲುಕ್ ಅನ್ನು ಹೆಚ್ಚಿಸಲು ಅತೀ ಕಡಿಮೆ ಮೇಕಪ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಚಿತ್ರವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ಬೆಡಗಿ ರಶ್ಮಿಕಾ ಮಂದಣ್ಣ ಪ್ಯಾಸ್ಟಲ್ ಕಾಟನ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ನೀಲಿ, ಕಿತ್ತಳೆ ಬಣ್ಣದ ಈ ಹತ್ತಿ ಸೀರೆಯನ್ನುಟ್ಟು ಮೋಡಿ ಮಾಡಿರುವ ಇವರು ಸಿಂಪಲ್ ಆಗಿ ಜುವೆಲ್ಲರಿ ಹಾಕಿಕೊಂಡಿದ್ದಾರೆ. ಬೇಸಗೆಯಲ್ಲಿ ಸಣ್ಣಸಣ್ಣ ಕಾರ್ಯಕ್ರಗಳಿಗೆ ಇದು ಪರಿಪೂರ್ಣ ಲುಕ್ ನೀಡಬಲ್ಲದು.

ಯಾವುದೇ ಕಾರ್ಯಕ್ರಮವಿರಲಿ ಸರಳವಾಗಿ ಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಕೋಟಾ ಸೀರೆಯಲ್ಲಿ ಈ ಬೇಸಗೆಯಲ್ಲಿ ಮಿಂಚಿದ್ದಾರೆ. ಮೃದುವಾದ ನೀಲಿ ಬಣ್ಣದ ಕೋಟಾ ಹತ್ತಿ ಸೀರೆ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಕ್ಯಾಶುಯಲ್ ಮತ್ತು ಹಬ್ಬ ಎರಡಕ್ಕೂ ಸೂಕ್ತವಾದ ಸೀರೆಯಾಗಿದೆ.

ತನ್ನ ಎತ್ತರದ ನಿಲುವು, ದಿಟ್ಟ ನೋಟದಿಂದ ಮೋಡಿ ಮಾಡುವ ಶೋಭಿತಾ ಧೂಲಿಪಾಲ ಬಿಳಿ ಹತ್ತಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೆಂಪು ಪ್ಯಾಟಿ ಬಾರ್ಡರ್ ಹೊಂದಿರುವ ಈ ಸೀರೆ ಯಾವುದೇ ಕಾರ್ಯಕ್ರಮಕ್ಕೂ ಗ್ರ್ಯಾಂಡ್ ಲುಕ್ ನೀಡಬಲ್ಲದು. ಇದು ನಿಮ್ಮ ವಾರ್ಡ್ರೋಬ್ಗೆ ಸೇರಿಸಲೇಬೇಕಾದ ಸೀರೆ.

ಇನ್ನು ಪ್ರಿಯಾಂಕಾ ಮೋಹನ್ ಅವರು ಹ್ಯೂಡ್ ಪ್ರಿಂಟೆಡ್ ಸೀರೆಯಿಂದ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಸೀರೆಗೆ ತಕ್ಕುದಾಗಿ ಅವರು ಡ್ರಾಪ್ ಕಿವಿಯೋಲೆ ಮತ್ತು ಕನಿಷ್ಠ ಮೇಕಪ್ ಮಾಡಿ ಮಿಂಚಿದ್ದಾರೆ. ಉದ್ದ ಕೈ ಬ್ಲೌಸ್ ಈ ಸೀರೆಗೆ ಪರಿಪೂರ್ಣ ಲುಕ್ ನೀಡಿದೆ.

ನಟಿ ಕೀರ್ತಿ ಸುರೇಶ್ ಚಿನ್ನದ ಬಣ್ಣದ ಜಾರಿತರಿ ಬಿಳಿ ಸೀರೆಯನ್ನು ಉಟ್ಟು ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಹಳದಿ ಬಣ್ಣದ ಬ್ಲೌಸ್ ಧರಿಸಿ, ದೊಡ್ಡ ಕಿವಿಯೋಲೆಗಳನ್ನು ಹಾಕಿದ್ದಾರೆ. ಸಿಂಪಲ್ ಮತ್ತು ಟ್ರೆಡಿಷನಲ್ ಲುಕ್ ಕೊಡುವ ಈ ಸೀರೆ ಯಾವುದೇ ಕಾರ್ಯಕ್ರಮಕ್ಕೂ ಸೈ ಎನಿಸುವುದರಲ್ಲಿ ಸಂದೇಹವಿಲ್ಲ.