ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ಇನ್ನು ಮುಂದೆ ನಮ್ಮ ಮೆಟ್ರೋ ಟಿಕೆಟ್ ಈ ಐದು ಆ್ಯಪ್‌ಗಳಲ್ಲೂ ಲಭ್ಯ

Namma Metro: ಪ್ರಸ್ತುತ ವಾಟ್ಸ್​ಆ್ಯಪ್​ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ರ್ಯಾಪಿಡೋ ಹಾಗೂ ನಮ್ಮ ಯಾತ್ರಿ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟಿಕೆಟ್​ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್​​ಸಿಎಲ್ ಈ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಮ್ಮ ಮೆಟ್ರೋ ಟಿಕೆಟ್ ಈ ಐದು ಆ್ಯಪ್‌ಗಳಲ್ಲೂ ಲಭ್ಯ

ಹರೀಶ್‌ ಕೇರ ಹರೀಶ್‌ ಕೇರ Jun 26, 2025 8:23 AM

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ (BMRCL) ಸಿಹಿ ಸುದ್ದಿ ನೀಡಿದೆ. ಇನ್ನು ಮೆಟ್ರೋ ಪ್ರಯಾಣಿಕರು ಐದು ಖಾಸಗಿ ಆ್ಯಪ್​​ಗಳ ಮೂಲಕವೂ ಟಿಕೆಟ್ ಖರೀದಿ ಮಾಡಿ ಸಂಚಾರ ಮಾಡಬಹುದು. ಎಂಟು ಲಕ್ಷ ಮೆಟ್ರೋ ಪ್ರಯಾಣಿಕರು, ಐದು ಆ್ಯಪ್​​ಗಳ ಮೂಲಕ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಇದರಿಂದ, ಟಿಕೆಟ್​​ಗಾಗಿ ಇನ್ನು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಮೆಟ್ರೋ ಈಗ ಒಎನ್​​ಡಿಸಿ (open network for digital commerce) ಫ್ಲಾಟ್ ಫಾರಂಗೆ ಬಂದಿರುವುದರಿಂದ ಇದು ಸಾಧ್ಯವಾಗಿದೆ.

ಯಾವೆಲ್ಲ ಆ್ಯಪ್​ಗಳಲ್ಲಿ ಸಿಗಲಿದೆ ಮೆಟ್ರೋ ಟಿಕೆಟ್?

ಪ್ರಯಾಣಿಕರು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್ ಸೇರಿದಂತೆ ಒಟ್ಟು 5 ಆ್ಯಪ್​​ಗಳ ಮೂಲಕ ಖರೀದಿಸಲು ಅವಕಾಶ ನೀಡಲಾಗಿದೆ. ಈ ಆ್ಯಪ್​ಗಳಲ್ಲಿ ಇದೀಗ ನಮ್ಮ ಮೆಟ್ರೋ ಟಿಕೆಟ್ ಬುಕ್ ಮಾಡಿದರೆ, ಶೇ 20-30 ರಷ್ಟು ಡಿಸ್ಕೌಂಟ್ ಆಫರ್ ಕೂಡ ನೀಡುತ್ತಿವೆ.

ಪ್ರಸ್ತುತ ವಾಟ್ಸ್​ಆ್ಯಪ್​ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ರ್ಯಾಪಿಡೋ ಹಾಗೂ ನಮ್ಮ ಯಾತ್ರಿ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟಿಕೆಟ್​ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್​​ಸಿಎಲ್ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಟಿಕೆಟ್ ಪಡೆಯಲು ಸರದಿಯಲ್ಲಿ ನಿಂತು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಪ್ರಯಾಣಿಕರಿಗೆ ಒಎನ್​​ಡಿಸಿಯಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: Namma Metro: ದಾಖಲೆ ಬರೆದ ನಮ್ಮ ಮೆಟ್ರೋ, ಒಂದೇ ದಿನದಲ್ಲಿ 9.66 ಲಕ್ಷ ಜನ ಪ್ರಯಾಣ