ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Book Release: ಜೂ. 29ಕ್ಕೆ ಅಭಿಷೇಕ್ ಬಿ.ವಿ. ರಚನೆಯ ʼಸಿಂದೂರ: ನಾ ಕಂಡ ಕಾಶ್ಮೀರʼ ಪುಸ್ತಕ ಲೋಕಾರ್ಪಣೆ

Book Release: ಸಾವಣ್ಣ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಪತ್ರಕರ್ತ ಅಭಿಷೇಕ್ ಬಿ. ವಿ. ಅವರ ರಚನೆಯ ʼಸಿಂದೂರ: ನಾ ಕಂಡ ಕಾಶ್ಮೀರʼ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಜೂನ್‌ 29ರಂದು ನಗರದ ಶೇಷಾದ್ರಿಪುರಂ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜೂ. 29ಕ್ಕೆ ʼಸಿಂದೂರ: ನಾ ಕಂಡ ಕಾಶ್ಮೀರʼ ಪುಸ್ತಕ ಲೋಕಾರ್ಪಣೆ

Profile Prabhakara R Jun 25, 2025 4:45 PM

ಬೆಂಗಳೂರು: ಪತ್ರಕರ್ತ ಅಭಿಷೇಕ್ ಬಿ. ವಿ. ಅವರ ರಚನೆಯ ಹಾಗೂ ಸಾವಣ್ಣ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ʼಸಿಂದೂರ: ನಾ ಕಂಡ ಕಾಶ್ಮೀರʼ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು (Book Release) ಜೂನ್‌ 29ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಶೇಷಾದ್ರಿಪುರಂನ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ, ಆರ್ಥಿಕ ತಜ್ಞ ಹಾಗೂ ಲೇಖಕ ರಂಗಸ್ವಾಮಿ ಮೂಕನಹಳ್ಳಿ, ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ ಅವರ ತಂದೆ ಎಂ. ವೆಂಕಟೇಶ್ ಭಾಗವಹಿಸಲಿದ್ದು, ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂಪಾದಕಿ ಶೋಭಾ ಮಳವಳ್ಳಿ, ಕನ್ನಡ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಹಿರಿಯ ಪತ್ರಕರ್ತ, ಲೇಖಕ ಹಾಗೂ ಆರ್ಥಿಕ ತಜ್ಞ ಶರತ್ ಎಂ. ಎಸ್. ಉಪಸ್ಥಿತರಿರಲಿದ್ದಾರೆ.

ವರದಿಗಾರನ ಮೈನವಿರೇಳಿಸುವ ರೋಚಕ ಡೈರಿಯಿದು!

ಆರ್ಥಿಕ ತಜ್ಞ ಹಾಗೂ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಯುದ್ಧ ಎನ್ನುವ ಪದ ಬಹಳ ಶಕ್ತಿಶಾಲಿ. ಅದೇ ಸಮಯದಲ್ಲಿ ಅದು ಭಯವನ್ನು ಸಹ ಹುಟ್ಟಿಸುತ್ತದೆ. ಪೂರ್ಣ ಪ್ರಮಾಣದ ಯುದ್ಧವನ್ನು ಇಂದು ಜಗತ್ತಿನ ಯಾವ ದೇಶವೂ ಭರಿಸುವ ಶಕ್ತಿಯನ್ನು ಹೊಂದಿಲ್ಲ. ಯುದ್ಧ ಅಭಿವೃದ್ಧಿಯ, ಸಿರಿವಂತಿಕೆಯ ಶತ್ರು. ಆದರೂ ಕೆಲವೊಮ್ಮೆ ಕೆಲವು ಸಂಘರ್ಷಗಳು ಅನಿವಾರ್ಯ. ಕೆಲವು ಬಾರಿ ಶಾಂತಿಯಿಂದ ಮತ್ತು ನೆಮ್ಮದಿಯಿಂದ ಬದುಕಲು ಇಂತಹ ಸಂಘರ್ಷಗಳ ಅವಶ್ಯಕತೆ ಇರುತ್ತದೆ. ಭಾರತ ಎಂದಿಗೂ ಕಾಲು ಕೆರೆದು ಜಗಳಕ್ಕೆ ಹೋದ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ.

ಈ ಬಾರಿಯ ಇಂಡೋ ಪಾಕ್‌ ಯುದ್ಧಕ್ಕೂ, ಪಾಕಿಸ್ತಾನ ಕಾರಣ ಎನ್ನುವುದು ಸ್ಪಷ್ಟ. ನಾವು ಅವರ ಉದ್ಧಟತನಕ್ಕೆ ತಕ್ಕ ಉತ್ತರವನ್ನು ನೀಡಿದ್ದೇವೆ. ಇಂತಹ ಘಟನೆಯನ್ನು ಹದಿನೈದು ದಿನಗಳ ಕಾಲ ನೇರವಾಗಿ ನೋಡಿ, ಅನುಭವಿಸಿ ಅದನ್ನು ಅಕ್ಷರಕ್ಕೆ ಇಳಿಸಿದ್ದಾರೆ ಅಭಿಷೇಕ್‌. ಹದಿನೈದು ದಿನದ ಘಟನಾವಳಿಗಳ ಅನುಭವ ಕಥನ, ವರದಿಗಾರನ ಮೈನವಿರೇಳಿಸುವ ರೋಚಕ ಡೈರಿಯಿದು. ಇಲ್ಲಿನ ಬರಹ, ಭಾಷೆ ನೇರವಾಗಿ ಹೃದಯಕ್ಕೆ ನಾಟುತ್ತದೆ. ನಾವೇ ವಾರ್‌ ಫೀಲ್ಡ್ ನಲ್ಲಿದ್ದೇವೆ ಎನ್ನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Book Release: ‘ತತ್ತ್ವಭಾಗವತಮ್’ ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಿದ ರಾಘವೇಶ್ವರ ಭಾರತೀ ಸ್ವಾಮೀಜಿ