ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ED Raid: ಎರಡನೇ ದಿನವೂ ಗೃಹ ಸಚಿವರ ಸಂಸ್ಥೆಗಳ ಮೇಲೆ ಇಡಿ ದಾಳಿ; ಡಾ. ಜಿ ಪರಮೇಶ್ವರ್ ಹೇಳಿದ್ದೇನು?

"ಕಾನೂನು ಗೌರವಿಸೋನು ನಾನು. ಎಲ್ಲ ರೀತಿಯ ಸಹಕಾರವನ್ನು ನಮ್ಮ ಶಿಕ್ಷಣ ಸಂಸ್ಥೆ ನೀಡುತ್ತೆ. ಮುಂದೆ ಏನು ಪ್ರಶ್ನೆಗಳನ್ನು ಕೇಳ್ತಾರೆ ಸಹಕಾರ ಕೊಡ್ತೀವಿ" ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ (G.Parameshwar) ಹೇಳಿದ್ದಾರೆ. ಎರಡನೇ ದಿನವೂ ಇಡಿ ದಾಳಿ, ಪರಿಶೀಲನೆ ಮುಂದುವರಿದಿದೆ.

ಎರಡನೇ ದಿನವೂ ಸಂಸ್ಥೆಗಳ ಮೇಲೆ ಇಡಿ ದಾಳಿ; ಡಾ. ಜಿ ಪರಮೇಶ್ವರ್ ಹೇಳಿದ್ದೇನು?

ಹರೀಶ್‌ ಕೇರ ಹರೀಶ್‌ ಕೇರ May 22, 2025 3:07 PM

ಬೆಂಗಳೂರು: ಗೃಹ ಸಚಿವ ಡಾ. ಜಿ ಪರಮೇಶ್ವರ್ (G.Parameshwar) ಅವರ ಒಡೆತನದ ತುಮಕೂರಿನ ಸಿದ್ದಾರ್ಥ ಕಾಲೇಜಿನ (Siddhartha College) ಮೇಲೆ ಇಡಿ ಅಧಿಕಾರಿಗಳು ನಿನ್ನೆಯಿಂದಲೇ ದಾಳಿ (ED Raid) ನಡೆಸಿದ್ದು, ಪರಿಶೀಲನೆ ಇಂದೂ ಮುಂದುವರಿದಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಗೃಹ ಸಚಿವರು ನಿನ್ನೆ ನಿರಾಕರಿಸಿದ್ದರು. ಇದೀಗ ಇಡಿ ದಾಳಿ ಹಿನ್ನೆಲೆಯಲ್ಲಿ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್​, ತನಿಖೆಗೆ ಎಲ್ಲ ಸಹಕಾರ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ. "ಬಿಜೆಪಿ ನಾಯಕರ ಮೇಲೆ ಯಾಕೆ ದಾಳಿ ಆಗುತ್ತಿಲ್ಲ?" ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗೃಹ ಸಚಿವ ಡಾ ಜಿ ಪರಮೇಶ್ವರ್ ಒಡೆತನದ, ತುಮಕೂರಿನಲ್ಲಿರುವ ಎಸ್ ಎಸ್ ಐಟಿ ಕಾಲೇಜು ಹಾಗೂ ತುಮಕೂರಿನ ಹೆಗ್ಗೆರೆ ಬಳಿಯಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಇಂದು ಹಲವಾರು ಕಾಂಗ್ರೆಸ್​ ನಾಯಕರು ಪರಂ ನಿವಾಸಕ್ಕೆ ದೌಡಾಯಿಸಿದ್ದು, ಪ್ರತ್ಯೇಕ ಸಭೆಗಳನ್ನು ನಡೆಸಿ, ಪರಮೇಶ್ವರ್‌ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

"ನಿನ್ನೆ ಇಡಿ ಅಧಿಕಾರಿಗಳು ನಮ್ಮ ಸಂಸ್ಥೆಯ ಮೂರು ಕಡೆ ಭೇಟಿ ಕೊಟ್ಟಿದ್ದಾರೆ. ಅವರಿಗೆ ಏನು ಸೂಚನೆ ಇದೆಯೋ ಗೊತ್ತಿಲ್ಲ. ನಮ್ಮ ಸಂಸ್ಥೆಯ ಅಕೌಂಟ್ಸ್‌ಗಳನ್ನು ಕೇಳಿದ್ದಾರೆ. ಅವರು ಏನು ಕೇಳ್ತಾರೆ ಆ ಅಕೌಂಟ್ಸ್‌ಗಳನ್ನು ಕೊಡಿ ಅಂತ ನಮ್ಮ ಸಿಬ್ಬಂದಿಗೆ ಹೇಳಿದ್ದೇನೆ. ಇವತ್ತು ಕೂಡ ಪರಿಶೀಲನೆ ಮುಂದುವರೆಸಿದ್ದಾರೆ. ಏನು ಉದ್ದೇಶ ಗೊತ್ತಿಲ್ಲ. ನಾನು ಮೊದಲಿಂದಲೂ ಕಾನೂನಿಗೆ ಗೌರವ ಕೊಡುತ್ತಾ ಬಂದಿದ್ದೇನೆ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ದೊಡ್ಡವರಿಗೊಂದು, ಬಡವರಿಗೊಂದು ಇಲ್ಲ. ಕಾನೂನು ಗೌರವಿಸೋನು ನಾನು. ಎಲ್ಲ ರೀತಿಯ ಸಹಕಾರವನ್ನು ನಮ್ಮ ಶಿಕ್ಷಣ ಸಂಸ್ಥೆ ನೀಡುತ್ತೆ. ಮುಂದೆ ಏನು ಪ್ರಶ್ನೆಗಳನ್ನು ಕೇಳ್ತಾರೆ ಸಹಕಾರ ಕೊಡ್ತೀವಿ" ಎಂದಿದ್ದಾರೆ.

ಈ ಬೆನ್ನಲ್ಲೇ ಕಾಂಗ್ರೆಸ್​​​ ನಾಯಕರು ಪರಮೇಶ್ವರ್​ ನಿವಾಸಕ್ಕೆ ದೌಡಾಯಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್​​, ಚೆಲುವರಾಯಸ್ವಾಮಿ, ಶ್ರೇಯಸ್ ಪಟೇಲ್, ಮಾಜಿ ಸಂಸದ ಚಂದ್ರಪ್ಪ , ಶಾಸಕ ಎ.ಸಿ.ಶ್ರೀನಿವಾಸ್ ಸೇರಿ ಹಲವಾರು ನಾಯಕರು ಪರಮೇಶ್ವರ್​​ ನಿವಾಸಕ್ಕೆ ದೌಡಾಯಿಸಿದ್ದಾರೆ. ಇಡಿ ದಾಳಿಯಿಂದ ಮನನೊಂದ ಪರಮೇಶ್ವರ್​​ಗೆ ನೈತಿಕ ಬಲ ತುಂಬುತ್ತಿದ್ದಾರೆ. ಇಡಿ ದಾಳಿ ಬಗ್ಗೆ ಪರಮೇಶ್ವರ್ ಜೊತೆ ನಾಯಕರು ಚರ್ಚೆ ನಡೆಸಿದ್ದು, ನಿಮ್ಮ ಜೊತೆ ನಾವಿದ್ದೇವೆ. ಇಡೀ ಸರ್ಕಾರ, ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಇದೆ ಎಂದು ಧೈರ್ಯ ಹೇಳಿದ್ದಾರೆ. ಧೃತಿಗೆಡಬೇಡಿ, ಇಂತಹ ಸವಾಲುಗಳನ್ನ ಎದುರಿಸಬೇಕು. ನಿಮ್ಮ ಜೊತೆ ನಾವಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​​ ಮತ್ತು ಸತೀಶ್ ಜಾರಕಿಹೊಳಿ ಧೈರ್ಯ ನೀಡಿದ್ದಾರೆ.

ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಅದು ಚಾರಿಟಬಲ್ ಟ್ರಸ್ಟ್, ಚಾರಿಟಿ ಮಾಡ್ತಾನೆ ಇರ್ತಾರೆ. ಚಾರಿಟಬಲ್ ಟ್ರಸ್ಟ್‌ನಲ್ಲಿ ಬೇಕಾದಷ್ಟು ಚಾರಿಟಿ ಕೊಡ್ತಿದ್ದೇವೆ. ಸಣ್ಣ ಪುಟ್ಟ ಚಾರಿಟಿ ಆಗಿರಬಹುದು. ಮದುವೆ ಮುಂಜಿ ಸ್ಕೂಲ್‌ಗೆ ಸಹಾಯ ಮಾಡಿರಬಹುದು. ಕಾಂಗ್ರೆಸ್‌ನಿಂದ ಇಡೀ ದೇಶದಲ್ಲಿ ಹೋರಾಟ ಮಾಡ್ತೀವಿ. ಸೋನಿಯಾಗಾಂಧಿ ಕೇಸ್‌‌ನಿಂದ ಹಿಡಿದು ಎಲ್ಲದರ ಬಗ್ಗೆ ಹೋರಾಟ ಮಾಡ್ತೀವಿ. ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ನಂತರ ಪರಮೇಶ್ವರ್ ನಿವಾಸಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ನಂತರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಡಾ.ಹೆಚ್.ಸಿ.ಮಹಾದೇವಪ್ಪ ಆಗಮಿಸಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ED Raid: ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ಸಂಸ್ಥೆ ಮೇಲೆ ಇಡಿ ದಾಳಿ