ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡಲು ಎಐ ಆಧರಿತ ಉದ್ಯೋಗ ಹುಡುಕಾಟದ ಫೀಚರ್ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್

ತಾವು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದೇವೆ, ಆದರೆ ಯಾವ ಹುದ್ದೆಗಳು ಅಥವಾ ಯಾವ ಉದ್ಯಮಗಳನ್ನು ಹುಡುಕಬೇಕೆಂದು ತಿಳಿಯುವುದಿಲ್ಲ ಎಂದು ಬೆಂಗಳೂರಿ ನಲ್ಲಿರುವ ಮೂರನೇ ಎರಡರಷ್ಟು (ಶೇ.61) ವೃತ್ತಿಪರರು ಹೇಳಿಕೊಳ್ಳುತ್ತಾರೆ ಎಂದು ವಿಶ್ವದ ಅತಿ ದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್‌ನ ಹೊಸ ಸಂಶೋಧನೆ ಬಹಿರಂಗ ಪಡಿಸಿದೆ

ಎಐ ಆಧರಿತ ಉದ್ಯೋಗ ಹುಡುಕಾಟದ ಫೀಚರ್ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್

Profile Ashok Nayak May 21, 2025 6:55 PM

ಬೆಂಗಳೂರು: ತಾವು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದೇವೆ, ಆದರೆ ಯಾವ ಹುದ್ದೆ ಗಳು ಅಥವಾ ಯಾವ ಉದ್ಯಮಗಳನ್ನು ಹುಡುಕಬೇಕೆಂದು ತಿಳಿಯುವುದಿಲ್ಲ ಎಂದು ಬೆಂಗಳೂರಿ ನಲ್ಲಿರುವ ಮೂರನೇ ಎರಡರಷ್ಟು (ಶೇ.61) ವೃತ್ತಿಪರರು ಹೇಳಿಕೊಳ್ಳುತ್ತಾರೆ ಎಂದು ವಿಶ್ವದ ಅತಿ ದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್‌ನ ಹೊಸ ಸಂಶೋಧನೆ ಬಹಿರಂಗ ಪಡಿಸಿದೆ. ಬೆಂಗಳೂ ರಿನ ವೃತ್ತಿಪರರು ಈಗ ವೃತ್ತಿಪರ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಅಗ್ರ ಮೂರು ವಿಧಾನಗಳೆಂದರೆ (#1) ಹೊಸದನ್ನು ಕಲಿಯುವುದು, (#2) ಮುಂದಿನ ಹೆಜ್ಜೆಯನ್ನು ವಿಶ್ವಾಸದಿಂದ ಇಡುವುದು, ಮತ್ತು (#3) ನಿಜವಾಗಿಯೂ ಸರಿಹೊಂದುವ ಒಂದು ಹುದ್ದೆಯನ್ನು ಕಂಡುಕೊಳ್ಳು ವುದು. ಇದರರ್ಥ ಬಹುತೇಕರಿಗೆ ಅಭಿವೃದ್ಧಿ ಹೊಂದುವ ಆಸೆ ಇದ್ದರೂ ಸರಿಯಾದ ಅವಕಾಶವನ್ನು ಕಂಡುಕೊಳ್ಳುವುದು ಹೇಗೆ ಎಂಬುದು ಸವಾಲಾಗಿಯೇ ಉಳಿದಿದೆ.

ಅದಕ್ಕಾಗಿಯೇ ಲಿಂಕ್ಡ್‌ ಇನ್ ಇದೀಗ ಉದ್ಯೋಗ ಹುಡುಕಾಡುತ್ತಿರುವವರಿಗೆ ಅವರಿಗೆ ತುಂಬಾ ಮುಖ್ಯವಾದ ಮತ್ತು ಅವರಿಗೆ ಸರಿಹೊಂದುವ ಸಂಬಂಧಿತ ಹುದ್ದೆಗಳನ್ನು ಕಂಡುಕೊಳ್ಳಲು ಸಹಾಯ ಮಾಡಲು ಹೊಸ ಎಐ ಆಧರಿತ ಉದ್ಯೋಗ ಹುಡುಕಾಟ ಫೀಚರ್ ಅನ್ನು ಪರಿಚಯಿಸಿದೆ. ಪ್ರಸ್ತುತ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಲಭ್ಯವಿರುವ ಈ ಟೂಲ್, ಉದ್ಯೋಗ ಹುಡುಕಾಟ ಗಾರರ ಉದ್ದೇಶ, ಕೌಶಲ್ಯಗಳು ಮತ್ತು ಗುರಿಗಳನ್ನು ಅರ್ಥಮಾಡಿಕೊಳ್ಳಲು ಜನರೇಟಿವ್ ಎಐ ಅನ್ನು ಬಳಸುತ್ತದೆ.

ಇದನ್ನೂ ಓದಿ: IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್‌ ಸಿಇಒ!

ಒಂದು ವೇಳೆ ಅವರಿಗೆ ನಿಖರವಾದ ಹುದ್ದೆಯ ಶೀರ್ಷಿಕೆ ಅಥವಾ ಕೀವರ್ಡ್ ತಿಳಿದಿಲ್ಲದಿದ್ದರೂ, ಅವರು ತಮ್ಮದೇ ಆದ ಮಾತುಗಳಲ್ಲಿ ಈ ಮೂಲಕ ಉದ್ಯೋಗ ಅವಕಾಶಗಳನ್ನು ಹುಡುಕಿಕೊಳ್ಳ ಬಹುದು. ಭಾರತದ ಶೇ.80ರಷ್ಟು ವೃತ್ತಿಪರರು ತಮಗೆ ಸೂಕ್ತವಾದ ಮತ್ತು ತಮ್ಮ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಬೇಕಾದ ಉತ್ತಮ ಟೂಲ್ ಗಳನ್ನು ಬಯಸುತ್ತಿರುವ ಈ ಸಮಯದಲ್ಲಿ ಎಐ ಚಾಲಿತ ಉದ್ಯೋಗ ಹುಡುಕಾಟದ ಟೂಲ್ ಅನ್ನು ಪರಿಚಯಿಸಲಾಗಿದ್ದು, ಇದನ್ನು ಉದ್ಯೋಗ ಹುಡುಕಾಟವನ್ನು ಹೆಚ್ಚು ಸುಲಭವಾಗಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಈ ಮೂಲಕ ಅವರು ಹೆಚ್ಚು ವಿಶ್ವಾಸದೊಂದಿಗೆ ವೃತ್ತಿಜೀವನದಲ್ಲಿ ಮುಂದೆ ಸಾಗಲು ಸಹಾಯ ಮಾಡಲಾಗುತ್ತದೆ.

ಈ ಫೀಚರ್ ನಲ್ಲಿ ಪ್ರೀಮಿಯಂ ಚಂದಾದಾರರು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಇವುಗಳಲ್ಲಿ ಸಂದರ್ಶನ ತಯಾರಿಯಂತಹ ಸನ್ನಿವೇಶ ಆಧಾರಿತ ರೋಲ್ ಪ್ಲೇ ವ್ಯವಸ್ಥೆ ಮತ್ತು ಲಿಂಕ್ಡ್‌ ಇನ್ ಲರ್ನಿಂಗ್‌ ನಲ್ಲಿ ಬೇಡಿಕೆಯಿರುವ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುವ ವೈಯಕ್ತಿಕ ಕಲಿಕಾ ಯೋಜನೆಯಾದ ಮೈ ಕರಿಯರ್ ಜರ್ನಿ ಮುಂತಾದ ವ್ಯವಸ್ಥೆಗಳು ಸೇರಿದೆ. ಜೊತೆಗೆ ಅವರು ನೇಮಕಾತಿ ಒಳನೋಟಗಳನ್ನು ಕೂಡ ವೀಕ್ಷಿಸಬಹುದು. ಈ ಮೂಲಕ ನೇಮಕಾತಿ ಮಾಡುವವರು ಎಷ್ಟು ಸಕ್ರಿಯರಾಗಿದ್ದಾರೆ, ಎಷ್ಟು ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಅವರು ಅರ್ಜಿಗಳನ್ನು ಪರಿಶೀಲಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಬಹುದು. ಈ ವ್ಯವಸ್ಥೆಯು ನೇಮ ಕಾತಿ ಪ್ರಕ್ರಿಯೆಯ ಕುರಿತು ಹೆಚ್ಚಿನ ವಿಸಿಬಿಲಿಟಿ ಒದಗಿಸುತ್ತದೆ.

ಭಾರತದ ಹಿರಿಯ ವ್ಯವಸ್ಥಾಪಕ ಸಂಪಾದಕರು ಮತ್ತು ಲಿಂಕ್ಡ್‌ ಇನ್ ವೃತ್ತಿ ತಜ್ಞೆ ನಿರಾಜಿತಾ ಬ್ಯಾನರ್ಜಿ ಅವರು ಯುವ ವೃತ್ತಿಪರರಿಗೆ ವಿಶಿಷ್ಟವಾಗಿ ಕಾಣಲು ಏನು ಮಾಡಬೇಕೆಂದು ಈ ಕೆಳಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ:

● ನಿಮ್ಮ ಅರ್ಜಿಗಳನ್ನು ಜಾಣತನದಿಂದ ರೂಪಿಸಿ: ಉದ್ಯೋಗ ಹುಡುಕಾಟದ ವಿಷಯದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಬದಲು ಸ್ಮಾರ್ಟ್ ಆಗಿ ಕೆಲಸ ಮಾಡಿ. ಸುಮಾರು 10 ಜನರಲ್ಲಿ ಐದು ಮಂದಿ (ಶೇ.49) ತಾವು ಹಿಂದೆಂದಿಗಿಂತಲೂ ಜಾಸ್ತಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ, ಆದರೆ ಅಲ್ಲಿಂದ ಬಹಳ ಕಡಿಮೆ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ* ಎಂದು ಹೇಳುತ್ತಾರೆ. ಅಲ್ಲದೇ ನೇಮಕಾತಿ ಮಾಡುವವರಿಗೂ ಈ ಪ್ರಕ್ರಿಯೆ ಕ್ರಮೇಣ ಸವಾಲಾಗಿ ಪರಿಣಮಿಸುತ್ತಿದೆ. ಜಾಸ್ತಿ ಅರ್ಜಿ ಸಲ್ಲಿಸುವ ಬದಲು, ಬುದ್ಧಿವಂತಿಕೆಯಿಂದ ಅರ್ಜಿಯನ್ನು ಸಲ್ಲಿಸಿರಿ. ಲಿಂಕ್ಡ್‌ ಇನ್‌ನ ಜಾಬ್ ಮ್ಯಾಚ್ ವ್ಯವಸ್ಥೆ ಯು ನಿಮ್ಮ ಕೌಶಲ್ಯಗಳಿಗೆ ನಿಜವಾಗಿಯೂ ಸರಿಹೊಂದುವ ಹುದ್ದೆಗಳ ಕಡೆಗೆ ಗಮನ ಕೇಂದ್ರೀಕ ರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಅರ್ಹತೆಗಳು ಯಾವುದಾದೇ ಉದ್ಯೋಗದ ಪೋಸ್ಟಿಂಗ್‌ ಗಳಿಗೆ ಎಷ್ಟು ಸರಿಹೊಂದುತ್ತವೆ ಎಂಬುದನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

● ಎಐ ಬಳಸಿ ಆರಾಮಾಗಿರಿ: ಎಐ ತಂತ್ರಜ್ಞಾನವು ಈಗ ಎಲ್ಲಾ ಕಡೆ ಆವರಿಸಿಕೊಂಡಿದೆ ಮತ್ತು ನೀವು ಇದನ್ನು ಹೆಚ್ಚು ಅರ್ಥಮಾಡಿಕೊಂಡಷ್ಟೂ ನಿಮ್ಮ ವೃತ್ತಿಜೀವನದ ಬೆಳವಣಿಗೆಯಲ್ಲಿ ಇದನ್ನು ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ಪ್ರಾಂಪ್ಟ್ ರೈಟಿಂಗ್‌ ನಲ್ಲಿ ತರಬೇತಿ ಪಡೆಯಿರಿ ಅಥವಾ ಜೂನ್ 30 ರವರೆಗೆ ಲಭ್ಯವಿರುವ ಜಾಬ್ ಹಂಟಿಂಗ್ ಫಾರ್ ಕಾಲೇಜ್ ಗ್ರಾಜುಯೇಟ್ಸ್, ಹೌ ಟು ಬೂಸ್ಟ್ ಯುವರ್ ಪ್ರೊಡಕ್ಟಿವಿಟಿ ವಿತ್ ಎಐ ಟೂಲ್ಸ್, ಮತ್ತು ದಿ ಸ್ಟೆಪ್ ಬೈ ಸ್ಟೆಪ್ ಗೈಡ್ ಟು ರಾಕ್ ಯುವರ್ ಜಾಬ್ ಇಂಟರ್ವ್ಯೂ ಎಂಬಂತಹ ಉಚಿತ ಕೋರ್ಸ್‌ ಗಳನ್ನು ಕಲಿಯಿರಿ. ನೀವು ಸ್ವಲ್ಪ ಜ್ಞಾನ ಗಳಿಸಿದರೆ ಮುಂದೆ ಅದರಿಂದ ದೊಡ್ಡ ಫಲಿತಾಂಶಗಳನ್ನು ಪಡೆಯಬಹುದು.

● ಅಳವಡಿಸಿಕೊಳ್ಳುವ ಗುಣವನ್ನು ನಿಮ್ಮ ಹೊಸ ಬೆಸ್ಟ್ ಫ್ರೆಂಡ್ ಆಗಿ ಮಾಡಿಕೊಳ್ಳಿ: ಎಐ ಹೆಚ್ಚು ಹೆಚ್ಚು ಆವರಿಸಿಕೊಳ್ಳುತ್ತಿರುವಂತೆ ಕಂಪನಿಗಳು ಹೊಸ ತಂತ್ರಜ್ಞಾನ ಕಲಿತು ಕಾಲಕ್ಕೆ ತಕ್ಕಂತೆ ಇರುವ ಮತ್ತು ಮಾನವೀಯ ಸ್ಪರ್ಶವನ್ನು ನೀಡಬಲ್ಲ ವೃತ್ತಿಪರರನ್ನು ಹುಡುಕುತ್ತಿವೆ. (ವಿಸೂ: ಈ ವರ್ಷದ ಸ್ಕಿಲ್ಸ್ ಆನ್ ದಿ ರೈಸ್ ಪಟ್ಟಿಯಲ್ಲಿ ಬೇಡಿಕೆಯಲ್ಲಿರುವ ಮಾನವ ಕೌಶಲಗಳನ್ನು ತಿಳಿಯಬಹುದು.)

● ನಿಮ್ಮದೇ ನೆಟ್ ವರ್ಕ್ ಅನ್ನು ರೂಪಿಸಿ: ಹಳೆಯ ವಿದ್ಯಾರ್ಥಿಗಳು, ಹೊಸ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಿಮ್ಮ ನೆಟ್ ವರ್ಕ್ ಅನ್ನು ಬೆಳೆಸಲು ಹಿಂಜರಿಯಬೇಡಿ. ನಿಮ್ಮ ಸಂಪರ್ಕಗಳನ್ನು ಬೆಳೆಸುವುದು ಮತ್ತು ಲಿಂಕ್ಡ್‌ ಇನ್‌ ನಲ್ಲಿ ಪೋಸ್ಟ್‌ ಗಳ ಮೂಲಕ ಸಮಯಕ್ಕೆ ತಕ್ಕಂತೆ ಸಂವಹನ ಮಾಡಿಕೊಳ್ಳುವುದರಿಂದ ಸಂಬಂಧಗಳನ್ನು ಬೆಳೆಸುವುದು, ಜನರ ಗಮನದಲ್ಲಿರುವುದು ಸಾಧ್ಯವಾಗುತ್ತದೆ ಮತ್ತು ಜಾಬ್ ರೆಫರಲ್ ಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಇನ್ ಸೈಡ್ ಜಾಬ್ ಟ್ರ್ಯಾಕಿಂಗ್ ಅವಕಾಶಗಳನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ.

● ಪ್ರಯಾಣ ಅದ್ದೂರಿಯಾಗಿರಲಿ: ಯಶಸ್ಸಿನ ದಾರಿ ಯಾವಾಗಲೂ ನೇರವಾಗಿ ಇರುವುದಿಲ್ಲ. ಅಲ್ಲದೇ ನಿಮಗೆ ಸರಿಯಾದದ್ದನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಹಾಗಾಗಿ ಯಾವುದಾದರೂ ನೆಟ್‌ ವರ್ಕಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ತಪ್ಪಿಸಬೇಡಿ, ಜೊತೆಗೆ ಸೈಡ್ ಪ್ರಾಜೆಕ್ಟ್‌ ಗಳಿಗೆ ಸ್ವಯಂಸೇವಕರಾಗಿ ಕೆಲಸ ಮಾಡಿ, ಮತ್ತು ನಿಮ್ಮ ತಂಡದ ಹೊರಗಿನ ಯಾರೊಂದಿಗಾದರೂ ಒಂದು ಕಾಫಿ ಕುಡಿಯಿರಿ. ಪ್ರಸ್ತುತ ಉದ್ಯೋಗ ಜಗತ್ತಿಗೆ ಪ್ರವೇಶಿ ಸುವ ವೃತ್ತಿಪರರು 15 ವರ್ಷಗಳ ಹಿಂದಿಗಿಂತ ತಮ್ಮ ವೃತ್ತಿಜೀವನದಲ್ಲಿ ಸುಮಾರು 2 ಪಟ್ಟು ಹೆಚ್ಚು ಉದ್ಯೋಗಗಳನ್ನು ಗಳಿಸುವ ಅವಕಾಶ ಹೊಂದಿರುತ್ತಾರೆ, ಆದ್ದರಿಂದ ಸಮಯ ತೆಗೆದುಕೊಳ್ಳಿ, ಹುಡುಕಿ ಮತ್ತು ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಂಡಿರಿ.