ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಸಲ್ಮಾನ್‌ ಖಾನ್‌ ಜೀವಕ್ಕೆ ಅಪಾಯ; ಏಕಾ ಏಕಿ ನಟನ ಮನೆಗೆ ನುಗ್ಗಿದ ವ್ಯಕ್ತಿ !

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ (Salman Khan) ಆಗಾಗ ಜೀವ ಬೆದರಿಕೆಗಳು ಬರುತ್ತಲಿರುತ್ತದೆ. ಇದೀಗ ಓರ್ವ ಪುರುಷ ಹಾಗೂ ಓರ್ವ ಮಹಿಳೆ ನಟನ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಮಂಗಳವಾರ ಮತ್ತು ಬುಧವಾರ ಬಾಂದ್ರಾ (ಪಶ್ಚಿಮ) ದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಪ್ರತ್ಯೇಕವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಕಾ ಏಕಿ ಸಲ್ಮಾನ್‌ ಖಾನ್‌ ಮನೆಗೆ ನುಗ್ಗಿದ ವ್ಯಕ್ತಿ !

Profile Vishakha Bhat May 22, 2025 4:12 PM

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ (Salman Khan) ಆಗಾಗ ಜೀವ ಬೆದರಿಕೆಗಳು ಬರುತ್ತಲಿರುತ್ತದೆ. ಇದೀಗ ಓರ್ವ ಪುರುಷ ಹಾಗೂ ಓರ್ವ ಮಹಿಳೆ ನಟನ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಮಂಗಳವಾರ ಮತ್ತು ಬುಧವಾರ ಬಾಂದ್ರಾ (ಪಶ್ಚಿಮ) ದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಪ್ರತ್ಯೇಕವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿಯನ್ನು ಜಿತೇಂದ್ರ ಕುಮಾರ್ ಸಿಂಗ್ (23) ಎಂದು ಗುರುತಿಸಿಲಾಗಿದ್ದು, ಮಹಿಳೆಯ ವಿವರಗಳು ತಿಳಿದು ಬಂದಿಲ್ಲ.ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡುವ ಸಲುವಾಗಿ ಅಪಾರ್ಟ್​ಮೆಂಟ್​ಗೆ ನುಗ್ಗಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಸದ್ಯಕ್ಕೆ ಬಾಂದ್ರಾ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆ ಬಳಿಕ ಸಲ್ಮಾನ್ ಖಾನ್ ಮನೆ ಬಳಿ ಭದ್ರತೆ ಹೆಚ್ಚಿಸಲಾಗಿದೆ.

ಮೇ 20ರ ಸಂಜೆ 7.15ರ ಸುಮಾರಿಗೆ ಈ ಘಟನೆ ನಡೆದಿದೆ. ಜೀತೇಂದ್ರ ಕುಮಾರ್‌ ಛತ್ತಿಸ್​ಗಡ ಮೂಲದವನು ಎಂದು ತಿಳಿದು ಬಂದಿದೆ. ಆತನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆತ ಈ ರೀತಿ ನಡೆದುಕೊಂಡಿದ್ದರ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಘಟನೆ ನಡೆದ ನಂತರ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ.

ಸಲ್ಮಾನ್‌ ಖಾನ್‌ ಅವರಿಗೆ ಈ ಹಿಂದೆ ಹಲವು ಬಾರಿ ಜೀವ ಬೆದರಿಕೆ ಬಂದಿದೆ. 1998 ರಲ್ಲಿ ಹಮ್‌ ಸಾಥ್‌ ಸಾಥ್‌ ಹೇ ಚಿತ್ರದ ಸಂದರ್ಭದಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪವನ್ನು ಸಲ್ಮಾನ್‌ ಖಾನ್‌ ಎದುರಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಗ್ಯಾಂಗ್‌ ಸಲ್ಮಾನ್‌ ಮೇಲೆ ಹಲವು ಬಾರಿ ಕೊಲೆ ಪ್ರಯತ್ನವನ್ನು ಮಾಡಿದೆ. ಏಪ್ರಿಲ್ 2024 ರಲ್ಲಿ, ಮುಂಬೈನ ಬಾಂದ್ರಾ ಪ್ರದೇಶದ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡು ಹಾರಿಸಲಾಯಿತು. ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹಿಂದೆ ಕೈವಾಡವಿದೆ ಎಂದು ತಿಳಿದು ಬಂದಿತ್ತು. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಫೇಸ್‌ಬುಕ್ ಪೋಸ್ಟ್ ಮೂಲಕ ಗುಂಡಿನ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ.

ಈ ಸುದ್ದಿಯನ್ನೂ ಓದಿ: AR Murugadoss: ಸಲ್ಮಾನ್‌-ರಶ್ಮಿಕಾ ನಟನೆಯ ʼಸಿಕಂದರ್‌ʼ ರಿಮೇಕ್‌ ಚಿತ್ರವ? ನಿರ್ದೇಶಕ ಎ.ಆರ್‌.ಮುರುಗದಾಸ್‌ ಹೇಳಿದ್ದೇನು?

ಬೆಳಿಗ್ಗೆ 4.55 ರ ಸುಮಾರಿಗೆ, ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ಬಾಲ್ಕನಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಅಂಗರಕ್ಷರು ತಿಳಿಸಿದ್ದರು. ಇದಾದ ಬಳಿಕ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಬಳಿ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಸಲ್ಮಾನ್‌ ಖಾನ್‌ ಅವರ ಆತ್ಮೀಯ ಹಾಗೂ ಎನ್‌ಸಿಪಿ ಮಾಜಿ ಸಚಿವ ಬಾಬಾ ಸಿದ್ಧಕಿ ಅವರನ್ನು ಗುಂಡುಕ್ಕಿ ಕೊಲ್ಲಲಾಗಿತ್ತು. ಈ ಕೃತ್ಯವನ್ನು ತಾವೇ ಮಾಡಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿದೆ.