Viral Video: ಇಲ್ಲಿ ಪ್ರಾಣಿಗಳ ಪೃಷ್ಠ ಮೂಸಿ ನೋಡಬಹುದಂತೆ; ಈ ವಿಚಿತ್ರ ಮ್ಯೂಸಿಯಂ ಇರುವುದು ಎಲ್ಲಿ ಗೊತ್ತಾ...? ವಿಡಿಯೊ ನೋಡಿ
ಜಪಾನ್‌ನಲ್ಲಿರುವ ಕೋಬ್‌ನ ಅಟೋವಾ ಅಕ್ವೇರಿಯಂ ಪ್ರಾಣಿಗಳ ಪೃಷ್ಠದ ವಾಸನೆಯನ್ನು ಮೂಸಿ ನೋಡಲು ಅವಕಾಶ ನೀಡುತ್ತದೆಯಂತೆ. ಆದರೆ ಇಲ್ಲಿ ನಿಜವಾದ ಪ್ರಾಣಿಗಳ ಪೃಷ್ಠಗಳನ್ನು ಮೂಸಿ ನೋಡಲು ಅಲ್ಲ... ಫೋಟೊದಲ್ಲಿ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.


ಟೊಕಿಯೊ: ಪ್ರಾಣಿಗಳು ಮಲವಿಸರ್ಜನೆ ಮಾಡಿದಾಗ ಅದರ ವಾಸನೆಗೆ ಯಾರು ಅಲ್ಲಿ ನಿಲ್ಲಲೂ ಇಷ್ಟಪಡುವುದಿಲ್ಲ. ಅಂತಹದರಲ್ಲಿ ಜಪಾನಿನಲ್ಲಿ ಪ್ರಾಣಿಗಳ ಪೃಷ್ಠದ ವಾಸನೆಯನ್ನು ಮೂಸಿ ನೋಡಲು ಅವಕಾಶ ನೀಡುತ್ತದೆಯಂತೆ. ಕೇಳಿದರೆ ಇದು ವಿಚಿತ್ರವೆನಿಸಬಹುದು! ಆದರೆ ಜಪಾನ್‌ನ ಮ್ಯೂಸಿಯಂನ ಈ ನಡೆ ಜನರ ಹುಬ್ಬೇರುವಂತೆ ಮಾಡಿದೆ. ಈ ಮ್ಯೂಸಿಯಂ( museum)ಗೆ ಭೇಟಿ ನೀಡುವವರಿಗೆ ಪ್ರಾಣಿಗಳ ಪೃಷ್ಠದ ವಾಸನೆಯನ್ನು ಮೂಸಿ ನೋಡಲು ಅವಕಾಶ ನೀಡುತ್ತದೆಯಂತೆ.ಛೀ...ಇದೆಂಥಾ ಅಸಹ್ಯವೆಂದು ಮೂಗು ಮುರಿಯಬೇಡಿ! ಯಾಕೆಂದರೆ ನಿಜವಾದ ಪ್ರಾಣಿಗಳ ಪೃಷ್ಠಗಳನ್ನು ಮೂಸುವುದು ಅಲ್ಲವಂತೆ.ಚಿತ್ರದಲ್ಲಿರುವ ಪ್ರಾಣಿಗಳ ಪೃಷ್ಠದ ವಾಸನೆಯನ್ನು ನೋಡುವುದಂತೆ! ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಮಹಿಳೆಯೊಬ್ಬಳು ಪೆಂಗ್ವಿನ್ ಮತ್ತು ಹುಲಿ ಸೇರಿದಂತೆ ಇತರ ಪ್ರಾಣಿಗಳ ಪೃಷ್ಠದ ವಾಸನೆಯನ್ನು ಅನುಭವಿಸಿರುವುದು ಸೆರೆಯಾಗಿದೆ. ಜಪಾನ್‌ನಲ್ಲಿರುವ ಕೋಬ್‌ನ ಅಟೋವಾ ಅಕ್ವೇರಿಯಂಗೆ ಭೇಟಿ ನೀಡುವವರು ಪ್ರಾಣಿಯ ಪೃಷ್ಠವನ್ನು ಮೂಸಿ ನೋಡಬಹುದಂತೆ.
ವಿಡಿಯೊ ನೋಡಿ...
ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡ ಈ ವಿಡಿಯೊ ವೈರಲ್ ಆಗಿದ್ದು, 2.5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅರಳು ಹುರಿದಂತೆ ʼಶಿವ ತಾಂಡವ ಸ್ತೋತ್ರ ಪಠಿಸಿದ ಪುಟ್ಟ ಹುಡುಗಿ- ವಿಡಿಯೊ ನೋಡಿ ನೆಟ್ಟಿಗರು ಫುಲ್ ಶಾಕ್!
ಒಬ್ಬರು ಕಾಮೆಂಟ್ ಮಾಡಿ "ರುಚಿ ನೋಡುವ ವಿಭಾಗವಿದೆಯೇ?" ಎಂದು ತಮಾಷೆಯಾಗಿ ಕೇಳಿದ್ದಾರೆ. “ನನ್ನ ನಾಯಿಗೆ ಇದು ಇಷ್ಟವಾಗುತ್ತಿತ್ತು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.“ನಾನು ಕೂಡ ಈ ಮ್ಯೂಸಿಯಂಗೆ ಭೇಟಿ ನೀಡಲು ಇಷ್ಟಪಡುತ್ತೇನೆ!" ಎಂದು ಕಾಮೆಂಟ್ ಮಾಡಿದ್ದಾರೆ.