Star Cannes Fashion: ಡ್ರೆಪ್ಡ್ ಸ್ಕರ್ಟ್ ಕೇಪ್ ಸೆಟ್ ಡಿಸೈನರ್ವೇರ್ನಲ್ಲಿ ನಟಿ ಪ್ರಣೀತಾ ಕಾನ್ಸ್ ಲುಕ್
Star Cannes Fashion: ಪಾಸ್ಟೆಲ್ ಶೇಡ್ನ ಡ್ರೆಪ್ಡ್ ಸ್ಕರ್ಟ್ ಕೇಪ್ ಸೆಟ್ ಡಿಸೈನರ್ವೇರ್ನಲ್ಲಿ ಸ್ಯಾಂಡಲ್ವುಡ್ ನಟಿ ಪ್ರಣೀತಾ ಸುಭಾಷ್ ಕಾನ್ಸ್ ಬೀಚ್ ಸೈಡ್ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಇಂಡೋ-ವೆಸ್ಟರ್ನ್ ಶೈಲಿಯ ಈ ಔಟ್ಫಿಟ್ ವಿಶೇಷತೆಯೇನು? ಈ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಪ್ರಣೀತಾ ಸುಭಾಷ್, ಬಹುಭಾಷಾ ತಾರೆ.


ಬಹುಭಾಷಾ ತಾರೆ ಪ್ರಣೀತಾ ಸುಭಾಷ್ ಪಾಸ್ಟೆಲ್ ಶೇಡ್ನ ಡ್ರೆಪ್ಡ್ ಸ್ಕರ್ಟ್ ಕೇಪ್ ಸೆಟ್ ಡಿಸೈನರ್ವೇರ್ನಲ್ಲಿ, ಕಾನ್ಸ್ ಬೀಚ್ ಸೈಡ್ ಸ್ಟ್ರೀಟ್ನಲ್ಲಿ, ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಡಿಸೈನರ್ವೇರ್ನಲ್ಲಿನ ಫೋಟೋಗಳನ್ನು ಖುದ್ದು ಅವರೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಪ್ರಣೀತಾ ಪಾಸ್ಟೆಲ್ ಶೇಡ್ ಡಿಸೈನರ್ವೇರ್
ಮೂಲತಃ ದಿಲ್ಲಿ ಮೂಲದ ಬ್ರಾಂಡ್ವೊಂದರ ಡಿಸೈನರ್ವೇರ್ ಧರಿಸಿರುವ ಪ್ರಣೀತಾ, ಈ ಬಾರಿ ಇಂಡೋ-ವೆಸ್ಟರ್ನ್ ಎಥ್ನಿಕ್ವೇರ್ಗೆ ಸೈ ಎಂದಿದ್ದಾರೆ. ಅವರ ಈ ಲುಕ್ ಬೀಚ್ಸೈಡ್ ಸ್ಟ್ರೀಟ್ಗಳಲ್ಲಿ ಅನಾವರಣಗೊಂಡಿದೆ. ಇದೇ ಲುಕ್ನಲ್ಲಿ ಕಾನ್ಸ್ ಸಿನಿಮಾ ಚರ್ಚೆಯಲ್ಲೂ ಭಾಗವಹಿಸಿದ್ದಾರೆ.

ಇದ್ಯಾವ ಬಗೆಯ ಡ್ರೆಪ್ಡ್ ಸ್ಕರ್ಟ್ ಕೇಪ್ ಸೆಟ್?
ನಟಿ ಪ್ರಣೀತಾ ಸುಭಾಷ್ ಧರಿಸಿರುವ ಈ ಔಟ್ಫಿಟ್ ನೋಡಲು ತಕ್ಷಣಕ್ಕೆ ಧೋತಿಯಂತೆ ಕಾಣಿಸುತ್ತದೆ. ಆದರೆ, ಇದು ಅದೇ ಲುಕ್ ನೀಡುವ ಡ್ರೇಪ್ಡ್ ಸ್ಕರ್ಟ್ ಆಗಿದೆ. ಸಾಟಿನ್ ಫ್ಯಾಬ್ರಿಕ್ನ ಈ ಸ್ಕರ್ಟ್ಗೆ ಅದೇ ವರ್ಣದ ಲೇಸ್ ಮೆಟೀರಿಯಲ್ನಲ್ಲಿ ಸಿದ್ಧಪಡಿಸಿರುವ, ಸೆಮಿ ಆಫ್ ಶೋಲ್ಡರ್ ಬ್ಲೌಸ್ ಲುಕ್ ನೀಡುವ ಕಾರ್ಸೆಟ್ ಮ್ಯಾಚ್ ಮಾಡಲಾಗಿದೆ. ಈ ಔಟ್ಫಿಟ್ಗೆ ಮೇಲುಡುಗೆಯಂತೆ ಶೀರ್ ಫ್ಯಾಬ್ರಿಕ್ನ ಫ್ಲೋರ್ ಲೆಂತ್ ಕೇಪ್ ಧರಿಸಿದ್ದಾರೆ. ಇಡೀ ಡಿಸೈನರ್ವೇರ್ ಸೆಲ್ಫ್ ಕಲರ್ನಲ್ಲಿರುವುದು ಅವರ ಸುಕೋಮಲ ಸ್ಕಿನ್ ಟೋನ್ಗೆ ಹೊಂದಿಕೊಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಪರ್ಫೆಕ್ಟ್ ಇಂಡೋ-ವೆಸ್ಟರ್ನ್ ಲುಕ್ಗೆ ಸಾಥ್ ನೀಡಿದ್ದು, ಪಾಸ್ಟೆಲ್ ಪ್ರಿಯರನ್ನು ಸೆಳೆದಿದೆ ಎನ್ನಬಹುದು.

ಸಿಂಪಲ್ ಸ್ಟೈಲಿಂಗ್
ಪ್ರಣೀತಾರ ಈ ಲುಕ್ ತೀರಾ ಸಿಂಪಲ್ ಸ್ಟೈಲಿಂಗ್ ಹೊಂದಿದೆ ಎನ್ನಬಹುದು. ಇದಕ್ಕಾಗಿ ಅವರು ಹೆಚ್ಚೇನೂ ಖರ್ಚು ಮಾಡಿಲ್ಲ! ತಿಳಿಯಾದ ಮೇಕಪ್ ಜತೆಗೆ ಬಿಗ್ ರಿಂಗ್ಲೇಟ್ಸ್ನ ಫ್ರೀ ಹೇರ್ಸ್ಟೈಲ್ ನ್ಯಾಚುರಲ್ ಲುಕ್ ನೀಡಿದೆ. ಜತೆಗೆ ಸೆಲೆಬ್ರೆಟಿ ಲುಕ್ಗೂ ಸಾಥ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಒಟ್ಟಾರೆ, ಈ ಸೀಸನ್ನ ಟ್ರೆಂಡಿ ಕಾಮನ್ ಔಟ್ಫಿಟ್ ಲಿಸ್ಟ್ಗೆ ಸೇರಿರುವ ಈ ಪಾಸ್ಟೆಲ್ ಶೇಡ್ ಡಿಸೈನರ್ ಪ್ರಿಯರನ್ನು ಸೆಳೆದಿದೆ. ಸಿಂಪಲ್ ಹಾಗೂ ಎಲಿಗೆಂಟ್ ಫ್ಯಾಷನ್ನನ್ನು ಪ್ರತಿಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.