International Tea Day: ಇಂದು ಅಂತಾರಾಷ್ಟ್ರೀಯ ಚಹಾ ದಿನ: ಮಸಲಾ ಟೀ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರತಿ ವರ್ಷ ಮೇ 21 ಅನ್ನು ವಿಶ್ವ ಚಹಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಚಹಾದಲ್ಲಿ ಅನೇಕ ಪ್ರಕಾರಗಳಿದ್ದು, ಕೆಲವೊಂದು ಬಾಯಿಗೆ ರುಚಿ ನೀಡುವ ಜತೆಗೆ ಆರೋಗ್ಯ ವೃದ್ಧಿಗೂ ನೆರವಾಗುತ್ತದೆ. ಅದರಲ್ಲೂ ಬಹುತೇಕರು ಇಷ್ಟಪಡುವ ಮಸಾಲ ಚಹಾ ಸೇವನೆಯಿಂದ ದೊರೆಯಿುವ ಆರೋಗ್ಯ ಪ್ರಯೋಜನಗಳು ಯಾವುವು ಎನ್ನುವ ವಿವರ ಇಲ್ಲಿದೆ.

ಚಹಾ.

ನವದೆಹಲಿ: ಮುಂಜಾನೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ರಿಫ್ರೆಶ್ ಸಲುವಾಗಿ ನಿತ್ಯ ಚಹಾ ಸೇವಿಸುವವರು ಅನೇಕರಿದ್ದಾರೆ. ನಿತ್ಯ ಚಹಾ ಕುಡಿಯುತ್ತಲೇ ದಿನ ಆರಂಭಿಸುವ ನಮಗೆ ಇದರಿಂದ ಹೊಸ ಚೈತನ್ಯ ದೊರೆತು ದಿನವಿಡೀ ನಾವು ಲವಲವಿಕೆಯಿಂದ ಕೂಡಿರಲು ಸಹಕಾರಿಯಾಗುತ್ತದೆ. ಪ್ರತೀ ವರ್ಷ ಮೇ 21 ಅನ್ನು ವಿಶ್ವ ಚಹಾ ದಿನ (International Tea Day 2025)ವನ್ನಾಗಿ ಆಚರಿಸಲಾಗುತ್ತದೆ. ಚಹಾದಲ್ಲಿ ಅನೇಕ ಪ್ರಕಾರಗಳಿದ್ದು ಕೆಲವೊಂದು ಬಾಯಿಗೆ ರುಚಿ ನೀಡುವ ಜತೆಗೆ ಆರೋಗ್ಯ ವೃದ್ಧಿಗೂ ನೆರವಾಗುತ್ತದೆ. ಅದರಲ್ಲೂ ಬಹುತೇಕರು ಇಷ್ಟಪಡುವ ಮಸಾಲ ಚಹಾ ದಲ್ಲಿ ಅಡಗಿದೆ ಆರೋಗ್ಯದ ಗುಟ್ಟು.
ಹೃದಯದ ಆರೋಗ್ಯಕ್ಕೆ ಪೂರಕ
ಹಾಲು ಬೆರೆಸದೆ ದಾಲ್ಚಿನ್ನಿಯನ್ನು ಬ್ಲ್ಯಾಕ್ ಟೀ ಜತೆಗೆ ಬೆರೆಸಿ ಕುದಿಸಿ ಸೇವಿಸುವುದರಿಂದ ಹೃದ್ರೋಗ ಸಮಸ್ಯೆ ಬರಲಾರದು. ಈ ತರಹದ ಟೀಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಹೃದಯದ ರಕ್ತನಾಳದ ಆರೋಗ್ಯವನ್ನು ಬೆಂಬಲಿಸಲು ದಾಲ್ಚಿನಿ ಚಹಾ ಸಹಕಾರಿ.
ಉರಿಯೂತದ ಸಮಸ್ಯೆ ನಿವಾರಣೆ
ಬಹುತೇಕರಿಗೆ ಉರಿಯೂತದ ಸಮಸ್ಯೆ ಬಹಳ ಕಾಡುತ್ತದೆ. ಅಂತಹ ಸಂದರ್ಭದಲ್ಲಿ ಮಸಾಲ ಟೀ ಆಯುರ್ವೇದಿಕ್ ಮೆಡಿಸಿನ್‌ನಂತೆ ಕಾರ್ಯ ನಿರ್ವಹಿಸಲಿದೆ. ಇದನ್ನು ನಿಯಮಿತವಾಗಿ ಸೇವಿಸುವು ದರಿಂದ ಸಂಧಿವಾತ, ಉರಿಯೂತದ ಸಮಸ್ಯೆ ನಿವಾರಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ
ಮಸಾಲ ಟೀಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಕಷ್ಟು ಗುಣಾಂಶಗಳಿವೆ. ಶುಂಠಿ, ಲವಂಗ, ದಾಲ್ಚಿನ್ನಿಯಂತಹ ಮಸಾಲ ಬಳಸಿ ಈ ಟೀ ರೆಡಿ ಮಾಡುವ ಕಾರಣ ದೇಹಕ್ಕೆ ಸುಲಭವಾಗಿ ಸೋಂಕು ತಗುಲದಂತೆ ದೇಹದ ರಕ್ಷಣೆ ಮಾಡಲಿದೆ. ಶೀತ, ಜ್ವರ, ಇತರ ಸೋಂಕು ಭಾದಿಸದಂತೆ ದೇಹಕ್ಕೆ ರಕ್ಷಣೆ ಒದಗಿಸುತ್ತದೆ.
ಜೀರ್ಣಕ್ರಿಯೆ ಸುಧಾರಿಸಲು
ಮಸಾಲ ಚಹಾದಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಸಾಕಷ್ಟು ಪೋಷಕಾಂಶಗಳು ಇವೆ. ಶುಂಠಿ, ಏಲಕ್ಕಿ, ಲವಂಗದಲ್ಲಿ ಜೀರ್ಣಕ್ರಿಯೆ ಉತ್ತೇಜಿಸುವ ಅಂಶಗಳಿವೆ. ಹೀಗಾಗಿ ಮಲ ಬದ್ಧತೆ, ಹೊಟ್ಟೆ ಉಬ್ಬುವುದು, ಆ್ಯಸಿಡಿಟಿ ಸೇರಿದಂತೆ ಇತರ ಸಮಸ್ಯೆ ಬರದಂತೆ ತಡೆಹಿಡಿಯುತ್ತದೆ.
ಒತ್ತಡ ನಿವಾರಿಸಲಿದೆ
ದೈಹಿಕ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗೆ ಮಸಾಲ ಚಹಾ ಒಂದು ಉತ್ತಮ ಔಷಧ. ಮಸಾಲ ಚಹಾದಲ್ಲಿ ಕೆಫಿನ್, ಏಲಕ್ಕಿ, ಜಾಯಿ ಕಾಯಿಯಂತಹ ಇತರ ಅಂಶವು ಮನಸ್ಸನ್ನು ಶಾಂತಗೊಳಿಸುತ್ತದೆ. ಜತೆಗ ಆತಂಕ, ಒತ್ತಡದ ಸಮಸ್ಯೆ ನಿವಾರಿಸಿ ಮನಸ್ಸನ್ನು ಹೆಚ್ಚು ಏಕಾಗ್ರತೆಯಿಂದ ಕೂಡಿರುವಂತೆ ಮಾಡುತ್ತದೆ.
ಇದನ್ನು ಓದಿ: Health Tips: ಉಪ್ಪಿನಕಾಯಿ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಲಾಭ
ಬಾಯಿಯ ಆರೋಗ್ಯಕ್ಕೆ ಉಪಯುಕ್ತ
ಮಸಾಲ ಚಹಾದಲ್ಲಿರುವ ಲವಂಗ, ಏಲಕ್ಕಿ ಬಾಯಿಯ ದುರ್ವಾಸನೆ ನಿವಾರಿಸುತ್ತದೆ. ಒಸಡಿನ ರಕ್ತ ಸೋರುವಿಕೆ, ದವಡೆ ಬೀಗುವುದು ಇತ್ಯಾದಿ ಬಾಯಿಯ ಆರೋಗ್ಯ ಸಮಸ್ಯೆಗೆ ಮಸಾಲ ಚಹಾ ಬಹಳ ಉತ್ತಮ. ಇದನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಉಸಿರಾಟ ತಾಜಾತನದಿಂದ ಕೂಡಿರುತ್ತದೆ.
ದೇಹದಲ್ಲಿ ನಂಜು ನಿಯಂತ್ರಕವಾಗಲಿದೆ
ದೇಹದಲ್ಲಿ ನಂಜಿನ ಅಂಶ ಇದ್ದವರು ಮಸಾಲ ಟೀ ಕುಡಿಯುವುದರಿಂದ ಇದರ ನಿಯಂತ್ರಣ ಸಾಧ್ಯವಾಗುತ್ತದೆ. ಹೀಗಾಗಿ ಅಲರ್ಜಿ, ತುರಿಕೆ, ಗುಳ್ಳೆ ನಿವಾರಣೆಯಾಗುತ್ತದೆ. ಹಾಗಾಗಿ ಇದಕ್ಕೂ ಮಸಾಲ ಚಹಾ ಕೂಡ ಸಾಕಷ್ಟು ಸಹಕಾರಿ.