ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi (Tumkur) News: ನಿಮ್ಮೊಂದಿಗೆ ನಾವಿದ್ದೇವೆ ಎಂದ ಗುಬ್ಬಿ ಕಂದಾಯ ನೌಕರರು : ಜಿಲ್ಲಾಧಿಕಾರಿಗಳ ಅಪಮಾನಕ್ಕೆ ಪ್ರತಿಕ್ರಿಯೆ

ಯಾವುದೇ ಸಾಕ್ಷ್ಯಾಧಾರ ಇಲ್ಲದ ಆರೋಪ ಮಾಡಿದ್ದಲ್ಲದೆ ಉನ್ನತ ಅಧಿಕಾರಿಗಳಿಗೆ ಶಾಲು ಪೇಟೆ ರೇಷ್ಮೆ ಸೀರೆ ನೀಡಿ ನಾಗರೀಕ ಸನ್ಮಾನ ಮಾಡುವುದಾಗಿ ಹೇಳಿರುವ ಪಕ್ಷ ಸಣ್ಣ ನೌಕರರನ್ನು ಬಿಡುವುದಿಲ್ಲ. ಮಾನಸಿಕ ಹಿಂಸೆ ನೀಡಲು ಎಲ್ಲಾ ರೀತಿಯಲ್ಲಿ ಮುಂದಾಗುತ್ತಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ತೀವ್ರ ಹಿಂಸೆ ಇತ್ತೀಚಿಗೆ ಹೆಚ್ಚಾಗಿದೆ. ಆರ್ ಟಿಐ ಕಾರ್ಯಕರ್ತರ ಹೆಸರಿನಲ್ಲಿ ಸಹ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸರ್ಕಾರಿ ನೌಕರರನ್ನು ಉಳಿಸಿ ಕೆಲಸ ಮಾಡಲು ಅನುವು ಮಾಡಬೇಕು

ನಿಮ್ಮೊಂದಿಗೆ ನಾವಿದ್ದೇವೆ ಎಂದ ಗುಬ್ಬಿ ಕಂದಾಯ ನೌಕರರು

Profile Ashok Nayak Jul 11, 2025 6:32 PM

ಗುಬ್ಬಿ: ಜಿಲ್ಲಾಧಿಕಾರಿಗಳಿಗೆ ಭ್ರಷ್ಟಚಾರ ಹೆಸರಿನಲ್ಲಿ ಅಪಮಾನ ಮಾಡಿರುವ ಕೆಆರ್ ಎಸ್ ಪಕ್ಷ ವರ್ತನೆ ಖಂಡನೀಯ. ಜಿಲ್ಲಾಧಿಕಾರಿಗಳ ಪರವಾಗಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಘೋಷಣೆ ಹಾಕಿ ಸರ್ಕಾರಿ ನೌಕರರ ಸಂಘ, ಕಂದಾಯ ನೌಕರರ ಸಂಘ, ಗ್ರಾಮ ಆಡಳಿತಾಧಿಕಾರಿಗಳ ಸಂಘ, ಭೂ ಮಾಪಕರ ಸಂಘ ಹಾಗೂ ಗ್ರಾಮ ಸಹಾಯಕರ ಸಂಘದ ಎಲ್ಲಾ ಸದಸ್ಯರು ಕಪ್ಪು ಪಟ್ಟಿ ಧರಿಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ತಹಶೀಲ್ದಾರ್ ಆರತಿ.ಬಿ ಅವರಿಗೆ ಮನವಿ ಸಲ್ಲಿಸಿ ಮಾತ ನಾಡಿದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುಪ್ರಸಾದ್, ಯಾವುದೇ ಸಾಕ್ಷ್ಯಾಧಾರ ಇಲ್ಲದ ಆರೋಪ ಮಾಡಿದ್ದಲ್ಲದೆ ಉನ್ನತ ಅಧಿಕಾರಿಗಳಿಗೆ ಶಾಲು ಪೇಟೆ ರೇಷ್ಮೆ ಸೀರೆ ನೀಡಿ ನಾಗರೀಕ ಸನ್ಮಾನ ಮಾಡುವುದಾಗಿ ಹೇಳಿರುವ ಪಕ್ಷ ಸಣ್ಣ ನೌಕರರನ್ನು ಬಿಡುವುದಿಲ್ಲ. ಮಾನಸಿಕ ಹಿಂಸೆ ನೀಡಲು ಎಲ್ಲಾ ರೀತಿಯಲ್ಲಿ ಮುಂದಾಗುತ್ತಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ತೀವ್ರ ಹಿಂಸೆ ಇತ್ತೀಚಿಗೆ ಹೆಚ್ಚಾಗಿದೆ. ಆರ್ ಟಿಐ ಕಾರ್ಯಕರ್ತರ ಹೆಸರಿನಲ್ಲಿ ಸಹ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸರ್ಕಾರಿ ನೌಕರರನ್ನು ಉಳಿಸಿ ಕೆಲಸ ಮಾಡಲು ಅನುವು ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Gubbi (Tumkur) News: ಕಾರ್ಯಾಗಾರವು ಪಂಚಾಯತ್ ರಾಜ್ ವ್ಯವಸ್ಥೆ ವಿಚಾರ ತಿಳಿಯಲು ಸೂಕ್ತ ವೇದಿಕೆ : ಶಾಸಕ ಎಸ್.ಆರ್.ಶ್ರೀನಿವಾಸ್

ಕಂದಾಯ ನೌಕರರ ಸಂಘದ ಅಧ್ಯಕ್ಷ ಮೋಹನ್ ಮಾತನಾಡಿ ಮಹಿಳಾ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿ ಪಡಿಸಿ ವಿಡಿಯೋ ಹಿಡಿದು ಫೇಸ್ ಬುಕ್ ಮೂಲಕ ನೇರ ಪ್ರಸಾರ ಮಾಡುವುದು ಸರಿಯಲ್ಲ. ರಾಜ್ಯದ ಹಲವು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಮಹಿಳಾ ಸಿಬ್ಬಂದಿಗಳ ಮೇಲೆ ಇಲ್ಲಸಲ್ಲದ ದೂರು ಹೇಳಿ ವಿಡಿಯೋ ಮಾಡುವುದು ಮಾನಸಿಕ ಹಿಂಸೆ ಆಗಿದೆ ಎಂದು ಮೌಖಿಕ ದೂರು ಈಗಾಗಲೇ ಬಂದಿವೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಜಿಲ್ಲೆಯ ದಂಡಾಧಿಕಾರಿ ಮೇಲೆ ಆರೋಪ ಮಾಡುತ್ತಿರುವುದು ತೀವ್ರ ಆಘಾತ ತಂದಿದೆ. ಮುಂದಿನ ದಿನದಲ್ಲಿ ಬಿ ಮತ್ತು ಸಿ ದರ್ಜೆ ನೌಕರರ ಗತಿ ಹೇಗೆ ಎಂಬ ಆಂತಕ ಎಲ್ಲರಲ್ಲೂ ಮನೆ ಮಾಡಿದೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷೆ ಸುಮತಿ ಮಾತನಾಡಿ ಸಾರ್ವಜನಿಕ ಕೆಲಸ ಮಾಡುವ ಸರ್ಕಾರಿ ನೌಕರರನ್ನು ಸಾರ್ವಜನಿಕವಾಗಿಯೇ ಅಪಮಾನಿಸುವುದು ಎಷ್ಟು ಸರಿ. ಕಾನೂನು ಬದ್ಧ ಕೆಲಸ ಮಾಡುವಾಗ ಕೆಲ ನಿಷ್ಠುರ ಸನ್ನಿವೇಶ ಎದುರಾಗುತ್ತವೆ. ಈ ಸಮಯ ಭ್ರಷ್ಟಚಾರ ಆರೋಪ ಮಾಡುವುದು ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಭೂ ಮಾಪಕರ ಸಂಘದ ಅಧ್ಯಕ್ಷ ನಿಜಗುಣಪ್ಪ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಸೇರಿದಂತೆ ಎಲ್ಲಾ ಸಂಘದ ಪದಾಧಿಕಾರಿಗಳು, ಸದಸ್ಯರು ಕಪ್ಪು ಪಟ್ಟಿ ಧರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.