ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi (Tumkur) News: ಅರ್ಥ ಪಡೆದ ಜೆಡಿಎಸ್ ಮುಖಂಡ ನಾಗರಾಜು ಹುಟ್ಟುಹಬ್ಬ: ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಯಶಸ್ವಿ

ಕೇವಲ ಚುನಾವಣೆಗೆ ನಾನು ಬಂದಿಲ್ಲ. ತಾಲ್ಲೂಕಿನ ರೈತನ ಮಗನಾಗಿ ಈ ಜನರಿಗಾಗಿ ದುಡಿಯಲು ಬಂದಿದ್ದೇನೆ. ಹೇಮಾವತಿ ಹೋರಾಟ ನಮ್ಮ ಮೊದಲ ಯಶಸ್ವಿ ಹೋರಾಟ. ಎನ್ ಡಿಎ ಮೈತ್ರಿ ಇಲ್ಲಿ ವಿರೋಧ ಪಕ್ಷವಾಗಿ ಜವಾಬ್ದಾರಿ ಕೆಲಸ ನಡೆಸಿದೆ. ನೀರಿಗಾಗಿ ನಿರಂತರ ಹೋರಾಟ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ

ಅರ್ಥ ಪಡೆದ ಜೆಡಿಎಸ್ ಮುಖಂಡ ನಾಗರಾಜು ಹುಟ್ಟುಹಬ್ಬ

Profile Ashok Nayak Jul 10, 2025 5:34 PM

ಗುಬ್ಬಿ: ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಅವರ 50 ನೇ ವರ್ಷದ ಹುಟ್ಟುಹಬ್ಬ ಆಚರಣೆ ಹಿನ್ನಲೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಅರ್ಥ ತಂದುಕೊಟ್ಟಿತು.

ಪಟ್ಟಣದ ಬಂಗ್ಲೋಪಾಳ್ಯ ಶಾಲಾ ಮೈದಾನದಲ್ಲಿ ಆಯೋಜನೆ ಮಾಡಿದ್ದ ಆರೋಗ್ಯ ಶಿಬಿರ ಬೆಳಿಗ್ಗೆಯಿಂದ ಸಾವಿರಾರು ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿದರು. 40 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ಶಿಬಿರವನ್ನು ಅರ್ಥಪೂರ್ಣಗೊಳಿಸಿದರು.

ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದ ಬಿ.ಎಸ್.ನಾಗ ರಾಜು ದೊಡ್ಡ ಕೇಕ್ ಕತ್ತರಿಸಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷದಲ್ಲೇ ಜನರ ಪ್ರೀತಿ ಗಳಿಸಿದ್ದೇನೆ. ಜೆಡಿಎಸ್ ಅಭ್ಯರ್ಥಿಯಾಗಿ 43 ಸಾವಿರ ಮತ ಪಡೆದ ನಾನು ನಂಬರ್ ಗೇಮ್ ನಲ್ಲಿ ಸೋತಿದ್ದರೂ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದಕ್ಕೆ ಇಂದಿನ ಕಾರ್ಯಕ್ರಮದಲ್ಲಿ ನೆರೆದ ಸಾವಿರಾರು ಜನರೇ ಸಾಕ್ಷಿ ಎಂದರು.

ಇದನ್ನೂ ಓದಿ: Gubbi (Tumkur) News: ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ: ಹೇಮಾವತಿ ಹೋರಾಟ ಸಮಿತಿಯ ನಿರ್ಣಯ

ಕೇವಲ ಚುನಾವಣೆಗೆ ನಾನು ಬಂದಿಲ್ಲ. ತಾಲ್ಲೂಕಿನ ರೈತನ ಮಗನಾಗಿ ಈ ಜನರಿಗಾಗಿ ದುಡಿಯಲು ಬಂದಿದ್ದೇನೆ. ಹೇಮಾವತಿ ಹೋರಾಟ ನಮ್ಮ ಮೊದಲ ಯಶಸ್ವಿ ಹೋರಾಟ. ಎನ್ ಡಿಎ ಮೈತ್ರಿ ಇಲ್ಲಿ ವಿರೋಧ ಪಕ್ಷವಾಗಿ ಜವಾಬ್ದಾರಿ ಕೆಲಸ ನಡೆಸಿದೆ. ನೀರಿಗಾಗಿ ನಿರಂತರ ಹೋರಾಟ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ ಎಂದ ಅವರು ದಿಲೀಪ್ ಅವರು ಸಹ ನಮ್ಮೊಂದಿಗೆ ಮೈತ್ರಿ ನಾಯಕರಾಗಿ ಜೊತೆಗಿದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಭ್ರಷ್ಟಾಚಾರ ವಿರುದ್ಧ ಸಹ ಹೊರಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

gubbi 1

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ನಾಗರಾಜು ಮತ್ತು ನಾನು ಒಗ್ಗೂಡಿ ಎನ್ ಡಿಎ ಮೂಲಕ ಒಂದು ಶಕ್ತಿಯಾಗಿ ತಾಲ್ಲೂಕಿನಲ್ಲಿ ವಿರೋಧ ಪಕ್ಷವಾಗಿ ಹೊರಹೊಮ್ಮುವ ಮೂಲಕ ಅಸಮರ್ಥ ಕೆಲಸಗಳ ವಿರುದ್ಧ ನಿಂತು ಜನಪರ ಕೆಲಸ ಮಾಡುತ್ತೇವೆ. ಚುನಾವಣೆಯಲ್ಲಿ ನಮ್ಮಿಬ್ಬರಿಗೂ ಆಶೀರ್ವಾದ ಸಿಗಲಿಲ್ಲ . ಆದರೂ ವಿರೋಧ ಪಕ್ಷವಾಗಿ ಒಟ್ಟಿಗೆ ಜನಪರ ನಿಲ್ಲುತ್ತೇವೆ. ಮೊದಲ ಹೋರಾಟ ಹೇಮಾವತಿ ಕೆನಾಲ್ ನಿಲ್ಲಿಸುವಲ್ಲಿ ಗೆದ್ದಿದ್ದೇವೆ. ಆದರೆ ಸಂಪೂರ್ಣ ಕಾಮಗಾರಿ ರದ್ದು ಮಾಡಲು ಹೋರಾಟ ನಡೆಸಲೇ ಬೇಕು ಎಂದ ಅವರು ನಾಗರಾಜು ಅವರಿಗೆ ದೇವರು ಆರೋಗ್ಯ ಕೊಟ್ಟು ಹೋರಾಟದ ಶಕ್ತಿ ಹೆಚ್ಚಲಿ ಎಂದು ಆಶಿಸಿದರು.

ಮುಖಂಡ ಎಂ.ಜಿ.ಶಿವಲಿಂಗಯ್ಯ ಮಾತನಾಡಿ ದಿಲೀಪ್ ಮತ್ತು ನಾಗರಾಜು ಅವರಿಗೆ ಬಂದ ಒಟ್ಟು ಮತಗಳು ಒಂದು ಲಕ್ಷ. ಈ ಮತಗಳು ಮುಂದಿನ ಚುನಾವಣೆಯಲ್ಲಿ ಒಗ್ಗೂಡಿ ಬರಲಿದೆ. 40 ಸಾವಿರ ಅಂತರದ ಗೆಲುವು ಎನ್ ಡಿಎ ಅಭ್ಯರ್ಥಿಯದ್ದಾಗಲಿದೆ. ಇದು ಐತಿಹಾಸಿಕ ಗೆಲುವು ಆಗಲಿದೆ ಎಂದರು.

ಜೆಡಿಎಸ್ ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ ಹಾಗೂ ಯೋಜನಂದ ಕುಮಾರ್ ಮಾತನಾಡಿ ನಾಗರಾಜು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ನಂತರ ಅಭಿಮಾನಿಗಳು ಬೃಹತ್ ಹೂವಿನಹಾರ ಹಾಕಿ, ಕಂಬಳಿ ಹೊದಿಸಿ ಕುರಿ ಮರಿಯನ್ನು ಕೊಡುಗೆ ಯಾಗಿ ನೀಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಮುಖಂಡರಾದ ಸಿದ್ದಗಂಗಮ್ಮ, ಜಿ.ಡಿ.ಸುರೇಶಗೌಡ, ಕೆ.ಬಿ.ಕೃಷ್ಣಪ್ಪ, ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪ ಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ಮುಖಂಡರಾದ ಡಿ.ರಘು, ಜಿ.ಎಂ.ಶಿವಾನಂದ, ರುದ್ರೇಶ್, ಚಂದು, ವೆಂಕಟೇಶ್, ಗುಬ್ಬಿಹಟ್ಟಿ ಮಹಾಲಿಂಗಯ್ಯ ಇತರರು ಇದ್ದರು.