ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B. Saroja Devi: ಸರೋಜಾ ದೇವಿಯವರನ್ನು ತುಂಬಾ ಕಾಡಿದ ಆ ನೋವು ಯಾವುದು ಗೊತ್ತೇ?

ಕನ್ನಡದ ಹಿರಿಯ ನಟಿ (film actress) ಸರೋಜಾ ದೇವಿ (B. Saroja Devi) ಅವರ ಬದುಕಿನಲ್ಲೂ ಹೀಗೆಯೇ ಆಗಿತ್ತು. ಇದರಿಂದ ಅವರು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾದವು. ಮರಳಿ ಚಿತ್ರರಂಗಕ್ಕೆ (Film Industry) ಬರುವುದು ಅವರಿಗೆ ಕಷ್ಟವಾಗಿತ್ತು. ಮರಳಿ ಬಂದ ಮೇಲೆಯೂ ಅವರಿಗೆ ಮೊದಲಿನಂತೆ ಕೆಲಸ ಮಾಡುವ ಹುಮ್ಮಸ್ಸು ಇರಲಿ. ಹೀಗಾಗಿ ಹೊಸ ಪ್ರಾಜೆಕ್ಟ್ ಗಳನ್ನು ಒಪ್ಪದೇ ಬಾಕಿ ಇದ್ದ ಪ್ರಾಜೆಕ್ಟ್ ಗಳನ್ನು ಮಾತ್ರ ಮಾಡಿ ಮುಗಿಸಿದರು.

ಸರೋಜಾ ದೇವಿಗೆ ತುಂಬಾ ಕಾಡಿತ್ತು ಆ ನೋವು..

ಬೆಂಗಳೂರು: ಚೆನ್ನಾಗಿ ಬದುಕು ಸಾಗುತ್ತಿದೆ ಎಂದಾಗ ಬರಸಿಡಿಲಿನಂತೆ ನೋವುಗಳು ಕೆಲವೊಮ್ಮೆ ಸಾಲು ಸಾಲಾಗಿ ಬರುತ್ತದೆ. ಅದರಿಂದ ಚೇತರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕನ್ನಡದ ಹಿರಿಯ ನಟಿ (film actress) ಸರೋಜಾ ದೇವಿ (B. Saroja Devi) ಅವರ ಬದುಕಿನಲ್ಲೂ ಹೀಗೆಯೇ ಆಗಿತ್ತು. ಇದರಿಂದ ಅವರು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾದವು. ಮರಳಿ ಚಿತ್ರರಂಗಕ್ಕೆ (Film Industry) ಬರುವುದು ಅವರಿಗೆ ಕಷ್ಟವಾಗಿತ್ತು. ಮರಳಿ ಬಂದ ಮೇಲೆಯೂ ಅವರಿಗೆ ಮೊದಲಿನಂತೆ ಕೆಲಸ ಮಾಡುವ ಹುಮ್ಮಸ್ಸು ಇರಲಿ. ಹೀಗಾಗಿ ಹೊಸ ಪ್ರಾಜೆಕ್ಟ್ ಗಳನ್ನು ಒಪ್ಪದೇ ಬಾಕಿ ಇದ್ದ ಪ್ರಾಜೆಕ್ಟ್ ಗಳನ್ನು ಮಾತ್ರ ಮಾಡಿ ಮುಗಿಸಿದರು.

ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುವ ಹಿರಿಯ ನಟಿ ಬಿ. ಸರೋಜಾದೇವಿ 87ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಹೆಸರು ಮಾಡಿದ್ದ ಸರೋಜಾ ದೇವಿ, ಮೊದಲ ಮಹಿಳಾ ಸೂಪರ್​ ಸ್ಟಾರ್​ ಎನ್ನುವ ಬಿರುದನ್ನೂ ಗಳಿಸಿದ್ದರು. ಚಿತ್ರೋದ್ಯಮದಲ್ಲಿ ಸಾಕಷ್ಟು ಯಶಸ್ಸು ಕಂಡರೂ ತಮ್ಮ ವಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದರು. ಇದರಿಂದ ಹೊರಬರುವುದು ಅವರಿಗೆ ತುಂಬಾ ಕಷ್ಟವಾಗಿತ್ತು.

saroja devei

1967ರ ಮಾರ್ಚ್​​ 1ರಂದು ಎಂಜಿನಿಯರ್ ಶ್ರೀಹರ್ಷ ಎಂಬವರನ್ನು ವಿವಾಹವಾಗಿದ್ದ ಬಿ.ಸರೋಜಾದೇವಿ ಅವರಿಗೆ ಮದುವೆಯಾದ 19ನೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡರು. ಮದುವೆಯಾದ ಪ್ರಾರಂಭದಲ್ಲಿ ಹಣಕಾಸಿನ ತೊಂದರೆ ಎದುರಿಸಿದ ಸರೋಜಾ ದೇವಿಗೆ ಸಹಾಯ ಮಾಡಿದ್ದು ಶ್ರೀಹರ್ಷ. ಸರೋಜಾದೇವಿಯವರ ಹಣಕಾಸು ವ್ಯವಹಾರವನ್ನು ಭಾರತ್ ಎಲೆಕ್ಟ್ರಾನಿಕ್ಸ್​ನಲ್ಲಿ ಎಂಜಿನಿಯರ್ ಆಗಿದ್ದ ಶ್ರೀಹರ್ಷ ಅವರೇ ನೋಡಿಕೊಳ್ಳುತ್ತಿದ್ದರು.

ಗಂಡನ ನಿಧನಕ್ಕೂ ಮೊದಲೇ ಸರೋಜಾ ದೇವಿ 'ಲೇಡಿಸ್​ ಹಾಸ್ಟೆಲ್​' ಚಿತ್ರಕ್ಕೆ ಸಹಿ ಹಾಕಿದ್ದರು. ಆದರೆ ಪತಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿದರು. 1986ರಲ್ಲಿ ಶ್ರೀಹರ್ಷ ಅವರು ಇಹಲೋಕ ತ್ಯಜಿಸಿದ್ದು, ಇದರ ದುಃಖದಿಂದ ಹೊರಬರಲು ಸರೋಜಾ ದೇವಿ ಅವರಿಗೆ ತುಂಬಾ ವರ್ಷಗಳೇ ಬೇಕಾದವು. ಸುಮಾರು ಒಂದು ವರ್ಷಗಳ ಕಾಲ ಅವರು ಕೆಮರಾದ ಮುಂದೆ ಬರಲಿಲ್ಲ.

ಪತಿ ಹಾಗೂ ಕುಟುಂಬಸ್ಥರನ್ನು ಅತಿಯಾಗಿ ಹೆಚ್ಚಿಕೊಂಡಿದ್ದ ಸರೋಜಾ ದೇವಿ ಪತಿಯ ನಿಧನದ ಬಳಿಕ ಚಿತ್ರೋದ್ಯಮದ ಯಾರನ್ನೂ ಭೇಟಿ ಮಾಡಲಿಲ್ಲ. ಮೊದಲೇ ಒಪ್ಪಂದ ಮಾಡಿಕೊಂಡ ಸಿನಿಮಾಗಳನ್ನು ಪೂರ್ಣಗೊಳಿಸಲು ಅನಿವಾರ್ಯವಾಗಿ 1987ರಲ್ಲಿ ಚಿತ್ರೀಕರಣಕ್ಕೆ ಮರಳಿದರು. ಆದರೆ ಅವರು ಮತ್ತೆ ಹೊಸ ಸಿನಿಮಾಗಳಿಗೆ ಸಹಿ ಮಾಡಲಿಲ್ಲ.

ಪತಿಯ ಅಗಲಿಕೆಯ ನೋವು ಮರೆಯುವಷ್ಟರಲ್ಲೇ ತಾಯಿ ರುದ್ರಮ್ಮ ಅವರನ್ನು ಕಳೆದುಕೊಂಡ ಸರೋಜಾ ದೇವಿ ಅವರಿಗೆ ಪತಿಯೊಂದಿಗೆ ತಾಯಿಯ ನೆರಳು ಇಲ್ಲದಂತಾಯಿತು.

ಬೈರಪ್ಪ ಗೌಡ ಮತ್ತು ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಸರೋಜಾದೇವಿ ಜನಿಸಿದ್ದರು. ಸರೋಜಾ ದೇವಿ ಅವರನ್ನು ಯಾರಿಗಾದರೂ ದತ್ತು ನೀಡುವಂತೆ ಅವರ ತಾತ ಒತ್ತಾಯಿಸಿದ್ದರೂ ರುದ್ರಮ್ಮ ಹಠ ಮಾಡಿ ಮಗಳನ್ನು ಉಳಿಸಿಕೊಂಡಿದ್ದರು.

ತಾಯಿಯನ್ನು ಕಳೆದುಕೊಂಡ ಬಳಿಕ ಸರೋಜಾ ದೇವಿ ಒಂಟಿಯಾದರು. ಸರೋಜಾ ದೇವಿ ಹಾಗೂ ಹರ್ಷ ದಂಪತಿಗೆ ಮೂವರು ಮಕ್ಕಳು. ಹರ್ಷ ಇಂದಿರಾ ಹಾಗೂ ಹರ್ಷ ಗೌತಮ್ ಇಬ್ಬರು ಅವರ ಮಕ್ಕಳಾಗಿದ್ದು, ಭುವನೇಶ್ವರಿ ಎಂಬ ಮಗುವನ್ನು ಅವರು ದತ್ತು ಪಡೆದಿದ್ದರು. ಆದರೆ ಈ ಮಗು ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿತ್ತು. ಈ ಮಗಳ ನೆನಪಿಗಾಗಿ ಸರೋಜಾ ದೇವಿ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ‘ಭುವನೇಶ್ವರಿ ಪ್ರಶಸ್ತಿ’ ನೀಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: B. Saroja Devi: ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ ನಿಧನ; 200 ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದ್ದ ಅಭಿನಯ ಸರಸ್ವತಿ

ಪತಿ, ತಾಯಿ, ಮಗಳ ಸಾವಿನಿಂದ ನೊಂದಿದ್ದ ಸರೋಜಾ ದೇವಿ ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ನಿರ್ಮಾಪಕರು ಹಾಗೂ ಕೆಲವು ನಿರ್ದೇಶಕರ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗಕ್ಕೆ ವಾಪಸ್ ಆದರು. 2019ರಲ್ಲಿ ಅವರು ಕೊನೆಯದಾಗಿ ನಟ ಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಕಾಣಿಸಿಕೊಂಡರು.