Hania Amir: ಭಾರತದಲ್ಲಿ ಬ್ಯಾನ್ ಆದರೂ ಇಳಿಯದ ಪಾಕ್ ನಟಿಯರ ಸೊಕ್ಕು; ಉಗ್ರರ ಮೇಲಿನ ದಾಳಿ ಹೇಡಿ ಕೃತ್ಯ ಎಂದ ಲಾಲಿವುಡ್
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವಾಗ ಭಾರತ ಮಂಗಳವಾರ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಉಗ್ರರು ಮೃತಪಟ್ಟಿದ್ದಾರೆ. ಸದ್ಯ ಈ ಘಟನೆಯನ್ನು ಪಾಕಿಸ್ತಾನದ ಸಿನಿಮಾ ತಾರೆಯರು ಖಂಡಿಸಿದ್ದಾರೆ.


ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವಾಗ ಭಾರತ ಮಂಗಳವಾರ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಉಗ್ರರು ಮೃತಪಟ್ಟಿದ್ದಾರೆ. ಸದ್ಯ ಈ ಘಟನೆಯನ್ನು ಪಾಕಿಸ್ತಾನದ ಸಿನಿಮಾ ತಾರೆಯರು ಖಂಡಿಸಿದ್ದಾರೆ. ಫವಾದ್ ಖಾನ್, ಹಾನಿಯಾ ಅಮೀರ್, (Hania Aamir) ಮಹೀರಾ ಖಾನ್ ಸೇರಿದಂತೆ ಹಲವರು ಭಾರತದ ವಿರುದ್ಧ ಕಿಡಿ ಕಾರಿದ್ದಾರೆ. ಉಗ್ರರನ್ನು ಹತ್ಯೆ ಮಾಡಿರುವುದಕ್ಕೆ ಪಾಕಿಸ್ತಾನದ ಲಾಲಿವುಡ್ ಶೋಕ ವ್ಯಕ್ತಪಡಿಸಿದೆ. ಪಾಕಿಸ್ತಾನದ ನಟ ಫವಾದ್ ಖಾನ್ ದಾಳಿ ಬಲಿಯಾದವರಿಗಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನಿ ನಟ ನಟಿಯರಿಗೆ ನಿಷೇಧ ಹೇರಲಾಗಿತ್ತು. ಪಾಕಿಸ್ತಾನದ ನಟ ಫವಾದ್ ಖಾನ್ ದಾಳಿ ಬಲಿಯಾದವರಿಗಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಗಳಿಗೆ ನೋವನ್ನುಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಫವಾದ್ ಹೇಳಿದ್ದಾರೆ.
ಇನ್ನು ಪಾಕ್ ನಟಿ ಮಹಿರಾ ಖಾನ್ ಲೇಖಕಿ ಫಾತಿಮಾ ಭುಟ್ಟೋ ಅವರ ಟ್ವೀಟ್ ಶೇರ್ ಮಾಡಿದ್ದಾರೆ. ಹೇಡಿತನ!!! ಅಲ್ಲಾಹನು ನಮ್ಮ ದೇಶವನ್ನು ರಕ್ಷಿಸಲಿ, ಉತ್ತಮ ಪ್ರಜ್ಞೆ ಮೇಲುಗೈ ಸಾಧಿಸಲಿ ಎಂದು ಬರೆಯಲಾಗಿದೆ. ನಟಿ ಹಾನಿಯಾ ಅಮಿರ್ ಕೂಡ ಭಾರತ ಹೇಡಿತನದ ಕೃತ್ಯ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವಾರು ಪಾಕ್ ನಟ ನಟಿಯರು ಈ ದಾಳಿಯನ್ನು ಖಂಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Hania Aamir: ಪಾಕ್ ನಟಿಯರಿಗೆ ಶಾಕ್; ಹಾನಿಯಾ ಅಮೀರ್, ಮಹಿರಾ ಖಾನ್ ಸೇರಿ ಹಲವರ ಇನ್ಸ್ಟಾಗ್ರಾಮ್ ಅಕೌಂಟ್ ಬ್ಯಾನ್!
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಪಾಕ್ ನಟಿಯರಾದ ಮಹಿರಾ ಖಾನ್, ಹನಿಯಾ ಆಮಿರ್ (Hania Amir) ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಿದೆ. ಭಾರತ ಸರ್ಕಾರವು ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್ ಮತ್ತು ಜಿಯೋ ನ್ಯೂಸ್‌ನಂತಹ ಪ್ರಮುಖ ಮಾಧ್ಯಮಗಳು ಸೇರಿದಂತೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದ ನಂತರ ಇದು ಬಂದಿದೆ.