ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Final: ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದು 96 ವರ್ಷಗಳ ಹಳೆಯ ದಾಖಲೆ ಮುರಿದ ತೆಂಬಾ ಬವೂಮ!

ಬರೋಬ್ಬರಿ 27 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ. 2023-25ರ ಸಾಲಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಗೆಲುವು ಪಡೆದ ಹರಿಣ ಪಡೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ಚಾಂಪಿಯನ್‌ ಆಗಿ ಸಂಭ್ರಮಿಸಿತು. ಆ ಮೂಲಕ ನಾಯಕ ತೆಂಬಾ ಬವೂಮ 96 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

96 ವರ್ಷಗಳ ಹಳೆಯ ದಾಖಲೆ ಮುರಿದ ತೆಂಬಾ ಬವೂಮ!

ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದು ವಿಶೇಷ ದಾಖಲೆ ಬರೆದ ತೆಂಬಾ ಬವೂಮ.

Profile Ramesh Kote Jun 14, 2025 9:05 PM

ಲಂಡನ್‌: ಆಸ್ಟ್ರೇಲಿಯಾ (AUS) ವಿರುದ್ದ2025ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC Final) ಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಪಡೆದ ದಕ್ಷಿಣ ಆಫ್ರಿಕಾ (SA) ತಂಡ, 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಗೆ ಮುತ್ತಿಟ್ಟಿದೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಹರಿಣ ಪಡೆ, ಏಡೆನ್‌ ಮಾರ್ಕ್ರಮ್‌ ಶತಕ ಹಾಗೂ ತೆಂಬ ಬವೂಮ ಅವರ ಅರ್ಧಶತಕಗಳ ಬಲದಿಂದ ಗೆದ್ದು ಬೀಗಿತು. ಗ್ರೇಮ್‌ ಸ್ಮಿತ್‌, ಎಬಿ ಡಿ ವಿಲಿಯರ್ಸ್‌ ಸೇರಿದಂತೆ ಹಲವು ಘಟಾನುಘಟಿ ನಾಯಕರ ಅಡಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಟ್ರೋಫಿಯನ್ನು ಗೆದ್ದಿರಲಿಲ್ಲ. ಆದರೆ, ತೆಂಬಾ ಬವೂಮ ನಾಯಕತ್ವದಲ್ಲಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ.

ದಕ್ಷಿಣ ಆಫ್ರಿಕಾ ತಂಡದ ಚೇಸಿಂಗ್‌ನಲ್ಲಿ ಏಡೆನ್‌ ಮಾರ್ಕ್ರಮ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶವನ್ನು ತೋರಿದ್ದಾರೆ. ಆಸೀಸ್‌ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಾರ್ಕ್ರಮ್‌, 207 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 136 ರನ್‌ಗಳನ್ನು ಸಿಡಿಸಿದರು ಹಾಗೂ ನಾಯಕ ತೆಂಬಾ ಬವೂಮ (66 ರನ್)‌ ಅವರ ಜೊತೆ 147 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಥಮ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಹರಿಣ ಪಡೆ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿತು. ಇದರ ಶ್ರೇಯ ಏಡೆನ್‌ ಮಾರ್ಕ್ರಮ್‌ ಮತ್ತು ತೆಂಬ ಬವೂಮಗೆ ಸಲ್ಲಬೇಕು. ಅಂದ ಹಾಗೆ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಆಲ್‌ಔಟ್‌ ಆಗಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ 207 ರನ್‌ ಗಳಿಸಿತ್ತು. ಕಗಿಸೊ ರಬಾಡ ಎರಡೂ ಇನಿಂಗ್ಸ್‌ಗಳಿಂದ 9 ವಿಕೆಟ್‌ಗಳನ್ನು ಪಡೆದಿದ್ದರು.

WTC Final: ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದು ವಿಂಡೀಸ್‌ ದಾಖಲೆ ಮುರಿದ ದಕ್ಷಿಣ ಆಫ್ರಿಕಾ!

ಇತಿಹಾಸ ಬರೆದ ತೆಂಬಾ ಬವೂಮ

ದಕ್ಷಿಣ ಆಫ್ರಿಕಾ ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಸೋಲಿಸುವ ಮೂಲಕ ಏಡೆನ್‌ ಮಾರ್ಕ್ರಮ್‌ ನೂತನ ಮೈಲುಗಲ್ಲು ತಲುಪಿದ್ದಾರೆ. ಸೋಲು ಕಾಣದೆ 9 ಟೆಸ್ಟ್‌ ಪಂದ್ಯಗಳನ್ನು ಗೆದ್ದು ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆಯುವ ಮೂಲಕ ತೆಂಬಾ ಬವೂಮ ಅವರು, ಆಸ್ಟ್ರೇಲಿಯಾ ಮಾಜಿ ನಾಯಕ ವಾರ್ವಿಕ್‌ ಆಮ್‌ಸ್ಟ್ರಾಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಇವರು 1920-21ರ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.



ಸೋಲು ಕಾಣದೆ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿ

ತೆಂಬಾ ಬವೂಮ (ದಕ್ಷಿಣ ಆಫ್ರಿಕಾ): 10 ಪಂದ್ಯಗಳಿಂದ 9 ಗೆಲುವು, ಒಂದು ಡ್ರಾ

ವಾರ್ವಿಂಕ್‌ ಆಮ್‌ಸ್ಟ್ರಾಂಗ್‌ (ಆಸ್ಟ್ರೇಲಿಯಾ: 10 ಪಂದ್ಯಗಳಿಂದ 8 ಗೆಲುವು, 2 ಡ್ರಾ

ಬ್ರಿಯಾನ್‌ ಲಾರಾ (ವೆಸ್ಟ್‌ ಇಂಡೀಸ್‌): 7 ಟೆಸ್ಟ್‌ ಪಂದ್ಯಗಳಲ್ಲಿ 6 ರಲ್ಲಿ ಗೆಲುವು, ಒಂದು ಡ್ರಾ

ಚಾರ್ಲ್ರ್ಸ್‌ ಫ್ರೈ (ಇಂಗ್ಲೆಂಡ್‌): 6 ಪಂದ್ಯಗಳಿಂದ 4 ರಲ್ಲಿ ಗೆಲುವು, ಎರಡು ಡ್ರಾ

ಅಜಿಂಕ್ಯಾ ರಹಾನೆ (ಭಾರತ) 6 ಪಂದ್ಯಗಳಿಂದ 4ರಲ್ಲಿ ಗೆಲುವು, ಎರಡು ಡ್ರಾ