ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮದುವೆ ನಿಲ್ಲಿಸಲು ಬಂದ ತಾಂಡವ್​ನ ಕೆನ್ನೆಗೆ ಬಾರಿಸಿ ಹೊರದಬ್ಬಿದ ರಾಮ್​ದಾಸ್

ಮದುವೆ ನಿಲ್ಲಿಸುವ ತಾಂಡವ್ ಪ್ಲ್ಯಾನ್ ಫ್ಲಾಪ್ ಆಗಿದೆ. ಅತ್ತ ಮೀನಾಕ್ಷಿ-ಕನ್ನಿಕಾ ಸೈಲೆಂಟ್ ಆಗಿ ಏನೋ ಸ್ಕೆಚ್ ಹಾಕುವಂತಿದೆ. ಅವರೇನು ಮಾಡುತ್ತಾರೆ? ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಮದುವೆಗೆ ವೈಷ್ಣವ್ ಬಂದಿದ್ದು ಮುಂದಿನ ಸಂಚಿಕೆಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಮಹಾಲಕ್ಷ್ಮೀ ಕೂಡ ಬರಲಿದ್ದಾರೆ.

ತಾಂಡವ್​ನ ಕೆನ್ನೆಗೆ ಬಾರಿಸಿ ಹೊರದಬ್ಬಿದ ರಾಮ್​ದಾಸ್

Bhagya Lakshmi serial

Profile Vinay Bhat Jul 16, 2025 12:08 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ಭರ್ಜರಿ ಆಗಿ ನಡೆಯುತ್ತಿದೆ. ಎಲ್ಲ ಅಡೆತಡೆ ದಾಟಿ ಭಾಗ್ಯಾ-ಕುಸುಮಾ ಹೇಗಾದರು ಮಾಡಿ ಪೂಜಾ ಮದುವೆ ಮಾಡಿಸಿಯೇ ಬಿಡಬೇಕೆಂದು ಪಣತೊಟ್ಟಿದ್ದಾಳೆ. ಆದರೆ, ಈ ಮದುವೆ ನಿಲ್ಲಿಸಲು ಭಾಗ್ಯ ಮನೆಯವರಿಗೆ ಬರುತ್ತಿರುವ ಸಂಕಷ್ಟ ಒಂದೆರಡಲ್ಲ. ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ, ಭಾಗ್ಯ ಪತಿ ತಾಂಡವ್ ಕೂಡ ಹಾಲ್​ಗೆ ಬಂದು ಮದುವೆ ನಿಲ್ಲಿಸಲು ಮುಂದಾಗಿದ್ದಾನೆ. ಆದರೆ, ತಾಂಡವ್​ಗೆ ರಾಮ್​ದಾಸ್ ಕಾಮತ್ ಸರಿಯಾಗಿ ಪಾಠ ಕಲಿಸಿದ್ದಾರೆ.

ಈ ಮದುವೆ ಅದು ಹೇಗೆ ನಡೆಯುತ್ತೆ ಅಂತ ನಾನೂ ನೋಡ್ತೇನೆ ಎಂದು ನಿಲ್ಲಿಸಲು ತಾಂಡವ್ ಹಾಲ್​ಗೆ ಬಂದಾಗ ಇದನ್ನು ಗಮನಿಸಿದ ಕುಸುಮಾ, ತಾಂಡವ್​ನನ್ನು ಎಳೆದುಕೊಂಡು ಒಂದು ರೂಮ್​ಗೆ ಬಂದು ಹೊರಟು ಹೋಗು ಇಲ್ಲಿಂದ ಎಂದಿದ್ದಾಳೆ. ಇದಕ್ಕೆ ಒಪ್ಪದಾಗ ವೈಷ್ಣವ್ ಜೊತೆ ಸೇರಿ ಕುಸುಮಾ, ಕಟ್ಟಿ ಹಾಕೋಣ ಅದು ಹೇಗೆ ಮದುವೆ ನಿಲ್ಲಿಸುತ್ತಾನೊ ನಾನು ನೋಡ್ತೇನೆ ಎಂದು ತಾಂಡವ್​ನನ್ನು ಕುರ್ಚಿಯಲ್ಲಿ ಬಳ್ಳಿಯಿಂದ ಕಟ್ಟಿ ಹಾಕುತ್ತಾರೆ.

ಆದರೆ, ಭಾಗ್ಯ ಮರುದಿನ ರೂಮ್ ಒಳಗೆ ಬಂದಾಗ ಅಲ್ಲಿ ತಾಂಡವ್​ನನ್ನು ಕಟ್ಟಿ ಹಾಕಿರುವುದು ಕಾಣುತ್ತದೆ. ಅಯ್ಯೋ ನಿಮ್ಮನ್ನ ಯಾರು ಕಟ್ಟಿ ಹಾಕಿದ್ದು ಎಂದು ಭಾಗ್ಯ ಬಳ್ಳಿ ಬಿಚ್ಚಿದ್ದಾಳೆ. ಆಗ ತಾಂಡವ್, ನನ್ನನ್ನೆ ಕಟ್ಟು ಹಾಕೋಕೆ ಹೇಳ್ತೀಯಾ..?. ಇದೆಲ್ಲ ನಿನ್ನದೆ ನಾಟಕ ಅಂತ ಗೊತ್ತು ನನ್ಗೆ.. ಯಾವುದೇ ಕಾರಣಕ್ಕೂ ಈ ಮದುವೆ ಆಗಲು ನಾನು ಬಿಡುವುದಿಲ್ಲ ಎಂದು ತಾಂಡವ್ ಮಂಟಪದ ಕಡೆ ಬಂದು ರಾಮ್​ದಾಸ್ ಬಳಿ ಭಾಗ್ಯ ಸರಿ ಇಲ್ಲ.. ಆಕೆ ನನ್ನ ಲೈಫ್ ಅನ್ನೇ ಹಾಳು ಮಾಡಿದಳು.. ಆಕೆಯಿಂದಲೇ ನಾನು ಇಂದು ಈ ಪರಿಸ್ಥಿತಿಯಲ್ಲಿದ್ದೇನೆ.. ನನ್ನ ಅಪ್ಪ-ಅಮ್ಮನನ್ನು ನನ್ನಿಂದ ದೂರು ಮಾಡಿದ ಮನೆಹಾಳಿ ಆಕೆ.. ಕಿಶನ್ ಜೊತೆ ಪೂಜಾನ ಮದುವೆ ಮಾಡಿಸಿದ್ರೆ ನಿಮ್ಮ ಕುಟುಂಬ ಒಡೆಯೋದು ಗ್ಯಾರೆಂಟಿ ಎಂದು ಹೇಳಿದ್ದಾನೆ.

ಇದನ್ನೆಲ್ಲ ಕೇಳಿದ ರಾಮ್​ದಾಸ್ ಕಾಮತ್, ಭಾಗ್ಯಾಳನ್ನು ಕರೆದಿದ್ದಾಳೆ.. ತಾಂಡವ್ ಹೇಳಿದ್ದನ್ನೆಲ್ಲ ನಾನು ಕೇಳಿಸಿದೆ.. ಈ ಮದುವೆ ನಡೆಯಲು ಸಾಧ್ಯವಿಲ್ಲ.. ಕ್ಯಾನ್ಸಲ್ ಮಾಡೋಣ ಎಂದಿದ್ದಾರೆ. ಇದನ್ನ ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಭಾಗ್ಯ ಹಾಗೂ ಕುಸುಮಾ ರಾಮ್​ದಾಸ್ ಅವರನ್ನು ಎಷ್ಟೇ ಕನ್ವೆನ್ಸ್ ಮಾಡಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಮದುವೆ ಕ್ಯಾನ್ಸನ್ ಎಂದೊಡನೆ ಖುಷಿಯಾದ ತಾಂಡವ್ ಹಾಲ್​ನಲ್ಲಿದ್ದ ಎಲ್ಲರ ಬಳಿ ಹೋಗಿ ಈ ಮದುವೆ ನಿಂತಿದೆ ಮನೆಗೆ ಹೋಗಿ ಎಲ್ಲರೂ ಅಂದಿದ್ದಾನೆ.. ಅಲ್ಲದೆ ಅಡುಗೆ ಮನೆಗೆ ಹೋಗಿ ಅಡುಗೆ ಯಾವುದೂ ಮಾಡೋದು ಬೇಡ ಈ ಮದುವೆ ಕ್ಯಾನ್ಸನ್ ಆಗಿದೆ ಎಂದಿದ್ದಾನೆ.



ಆದರೆ, ಅವರು ಯಾರೂ ಕೂಡ ತಾಂಡವ್ ಹೇಳಿದ ಮಾತಿಗೆ ಕಿಂಚಿತ್ತು ಬೆಲೆ ಕೊಡುವುದಿಲ್ಲ.. ಅವರೆಲ್ಲ ತಮ್ಮ ಕೆಲಸ ಮುಂದುವರೆಸಿದ್ದಾರೆ. ಇದರಿಂದ ಕೋಪಗೊಂಡ ತಾಂಡವ್, ಪುನಃ ರಾಮ್​ದಾಸ್ ಬಳಿ ಬಂದು ಈ ಮದುವೆ ನಿಂತಿದೆ ಅಂತ್ರ ಹೇಳಿದ್ರೆ ಯಾರೂ ನಂಬುತ್ತಿಲ್ಲ ಎಂದಿದ್ದಾನೆ. ಆಗ ರಾಮ್​ದಾಸ್, ಈಗ ಗೊತ್ತಾಯಿತಾ?, ನಿನ್ನ ಮಾತನ್ನ ಅವರೇ ನಂಬುತ್ತಿಲ್ಲ.. ಇನ್ನು ನಾನು ನಂಬಬೇಕಾ?, ನಿನ್ನ ಮಾತು ಕೇಳಿ ಈ ಮದುವೆ ನಾನು ಕ್ಯಾನ್ಸಲ್ ಮಾಡಬೇಕಾ.. ಭಾಗ್ಯ ಎಷ್ಟು ಒಳ್ಳೆಯ ಗುಣದವಳು ಅಂತ ನಿನಗಿಂತ ಚೆನ್ನಾಗಿ ನನಗೆ ಗೊತ್ತು ಎಂದು ತಾಂಡವ್​ನ ಕೆನ್ನೆಗೆ ಬಾರಿಸಿದ್ದಾರೆ.

ಅಷ್ಟೇ ಅಲ್ಲದೆ ಸೆಕ್ಯುರಿಟಿ ಅವರನ್ನ ಕರೆದು ತಾಂಡವ್​ನನ್ನು ಎಳೆದುಕೊಂಡು ಹೋಗಿ ಹೊರದಬ್ಬಿದ್ದಾರೆ. ಆದರೆ, ಈ ವಿಚಾರ ಯಾವುದು ಆದೀಶ್ವರ್​ಗೆ ತಿಳಿದಿಲ್ಲ.. ಸದ್ಯ ಮದುವೆ ನಿಲ್ಲಿಸುವ ತಾಂಡವ್ ಪ್ಲ್ಯಾನ್ ಫ್ಲಾಪ್ ಆಗಿದೆ. ಅತ್ತ ಮೀನಾಕ್ಷಿ-ಕನ್ನಿಕಾ ಸೈಲೆಂಟ್ ಆಗಿ ಏನೋ ಸ್ಕೆಚ್ ಹಾಕುವಂತಿದೆ. ಅವರೇನು ಮಾಡುತ್ತಾರೆ? ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಮದುವೆಗೆ ವೈಷ್ಣವ್ ಬಂದಿದ್ದು ಮುಂದಿನ ಸಂಚಿಕೆಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಮಹಾಲಕ್ಷ್ಮೀ ಕೂಡ ಬರಲಿದ್ದಾರೆ.

Kiran Raj: ಕರ್ಣ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ಕಿರಣ್ ರಾಜ್ ಬ್ಯುಸಿ