ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ತಾವು ಎದುರಿಸಿದ ಅತ್ಯುತ್ತಮ ಬೌಲರ್‌ ಹೆಸರಿಸಿದ ಬ್ರಿಯಾನ್‌ ಲಾರಾ!

ಕ್ರಿಕೆಟ್‌ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ಕೂಡ ಒಬ್ಬರು. ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದ್ದಾರೆ. ಆದರೆ, ಅವರು ತಮ್ಮ ವೃತ್ತಿ ಜೀವನದಲ್ಲಿ ತಾವು ಆಡದ ಶ್ರೇಷ್ಠ ಬೌಲರ್‌ ಯಾರೆಂದು ಬಹಿರಂಗಪಡಿಸಿದ್ದಾರೆ.

ತಾವು ಎದುರಿಸಿದ ಅತ್ಯುತ್ತಮ ಬೌಲರ್‌ ಅನ್ನು ಆರಿಸಿದ ಬ್ರಿಯಾನ್‌ ಲಾರಾ!

ತಾವು ಎದುರಿಸಿದ ಅತ್ಯುತ್ತಮ ಬೌಲರ್‌ ಹೆಸರಿಸಿದ ಬ್ರಿಯಾನ್‌ ಲಾರಾ.

Profile Ramesh Kote Jul 16, 2025 8:13 PM

ನವದೆಹಲಿ: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ವೆಸ್ಟ್‌ ಇಂಡೀಸ್‌ (West Indies) ದಿಗ್ಗಜ ಬ್ರಿಯಾನ್‌ ಲಾರಾ (Brian Lara) ಕೂಡ ಒಬ್ಬರು. ಇವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ತೋರಿದ್ದಾರೆ ಹಾಗೂ ಹಲವು ದಿಗ್ಗಜ ಬೌಲರ್‌ಗಳನ್ನು ಎದುರಿಸಿದ್ದಾರೆ. ಇದೀಗ ಅವರು ತಮ್ಮ ವೃತ್ತಿ ಜೀವನದಲ್ಲಿ ತಾವು ಎದುರಿಸಿದ ಶ್ರೇಷ್ಠ ಬೌಲರ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ಸ್ಪಿನ್‌ ದಿಗ್ಗಜ, ದಿವಂಗತ ಶೇನ್‌ ವಾರ್ನ್‌ (Shane Warne) ಅವರನ್ನು ಬ್ರಿಯಾನ್‌ ಲಾರಾ ಆರಿಸಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗವಹಿಸಿದ್ದ ಬ್ರಿಯಾನ್‌ ಲಾರಾ ಈ ಮಾಹಿತಿಯನ್ನು ರಿವೀಲ್‌ ಮಾಡಿದ್ದಾರೆ.

ಬ್ರಿಯಾನ್‌ ಲಾರಾ ಕೂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ ಆಗಿದ್ದರು. ವಿಶ್ವದ ಶ್ರೇಷ್ಠ ಬೌಲರ್‌ಗಳು ಕೂಡ ಈ ಮಾತನ್ನು ರಿವೀಲ್‌ ಮಾಡಿದ್ದರು. ಒಮ್ಮೆ ಬ್ರಿಯಾನ್‌ ಲಾರಾ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವೊಂದರಲ್ಲಿ 400 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ದೀರ್ಘಾವಧಿ ಸ್ವರೂಪದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಈಗಲೂ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.

IND vs ENG: ʻತುಂಬಾ ನಿರಾಶೆಯಾಯಿತುʼ-ಭಾರತ ತಂಡವನ್ನು ಟೀಕಿಸಿದ ಸೌರವ್‌ ಗಂಗೂಲಿ!

ಸ್ಟಿಕ್‌ ಟು ಕ್ರಿಕೆಟ್‌ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಬ್ರಿಯಾನ್‌ ಲಾರಾಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಂತೆ ತಾವು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯುತ್ತಮ ಬೌಲರ್‌ ಯಾರೆಂದು ಕೇಳಲಾಯಿತು. ಅದಕ್ಕೆ ಅವರು ಶೇನ್‌ ವಾರ್ನ್‌ ಜೊತೆಗೆ ಶ್ರೀಲಂಕಾ ದಿಗ್ಗಜ ಮುತ್ತಯ್ಯ ಮುರಳಿಧರನ್‌ ಅವರ ಹೆಸರನ್ನು ಕೂಡ ತೆಗೆದುಕೊಂಡರು. ತಮ್ಮ ಮೇಲೆ ಮುರಳಿಧರನ್‌ ಒತ್ತಡ ಹಾಕುತ್ತಿದ್ದರು, ಆದರೆ ಶೇನ್‌ ವಾರ್ನ್‌ ಮ್ಯಾಜಿಕ್‌ ಎಸೆತಗಳನ್ನು ಹಾಕುತ್ತಿದ್ದರು ಎಂದು ಹೇಳಿದ್ದಾರೆ.

"ಶೇನ್‌ ವಾರ್ನ್‌ ಅತ್ಯುತ್ತಮ ಬೌಲರ್‌. ಮುತ್ತಯ್ಯ ಮುರಳಿಧರನ್‌ ವಿರುದ್ಧ ಬ್ಯಾಟ್‌ ಮಾಡಲು ಹೋದಾಗಲೆಲ್ಲಾ ನಾನು ಗಲಿಬಲಿಯಾಗುತ್ತಿದ್ದೆ. ಮುರಳಿ ಎದುರು ಮೊದಲ ಅರ್ಧಗಂಟೆ ನಾನು ಗೊಂದಲಕ್ಕೆ ಒಳಗಾಗುತ್ತಿದ್ದೆ. ಶೇನ್‌ ವಾರ್ನ್‌ಗಿಂತ ಮುರಳಿ ಜಾಸ್ತಿ ಒತ್ತಡ ಹಾಕುತ್ತಿದ್ದರು. ಶೇನ್‌ ವಾರ್ನ್‌ ಎದುರು ಆಡಲು ಹೋದಾಗ ಅವರು ಪ್ರತೀ ಸಲ ಸ್ಟಂಪ್ಸ್‌ ಮಧ್ಯೆಕ್ಕೆ ಚೆಂಡನ್ನು ಹಾಕುತ್ತಿದ್ದರು. ನಂತರ ಅವರು ಮಧ್ಯಾಹ್ನ 2 ಗಣಂಟೆ ಹಾಗೂ 3 ಗಂಟೆಯ ಸಮಯದಲ್ಲಿ ಅವರು ಮ್ಯಾಜಿಕಲ್‌ ಬಾಲ್‌ಗಳು ಅಥವಾ ಸ್ಪೆಲ್‌ಗಳನ್ನು ಹಾಕುತ್ತಿದ್ದರು," ಎಂದು ಬ್ರಿಯಾನ್‌ ಲಾರಾ ತಿಳಿಸಿದ್ದಾರೆ.

IND vs ENG: ಕರುಣ್‌ ನಾಯರ್‌ ಔಟ್‌, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

ಬ್ರಿಯಾನ್‌ ಲಾರಾ ಅವರು 16 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. ಅವರು 131 ಟೆಸ್ಟ್‌ ಪಂದ್ಯಗಳಿಂದ 52.9ರ ಸರಾಸರಿಯಲ್ಲಿ 11953 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು 34 ಶತಕಗಳು ಹಾಗೂ 48 ಅರ್ಧಶತಕಗಳನ್ನು ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಆಡಿದ 299 ಏಕದಿನ ಪಂದ್ಯಗಳಿಂದ 10405 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 40.5ರ ಸರಾಸರಿಯಲ್ಲಿ 19 ಶತಕಗಳನ್ನು ಬಾರಿಸಿದ್ದಾರೆ.

ಇನ್ನು ಶೇನ್‌ ವಾರ್ನ್‌ ದಾಖಲೆಗಳ ಬಗ್ಗೆ ಹೇಳುವುದಾದರೆ, ಅವರು ತಮ್ಮ ಟೆಸ್ಟ್‌ ವೃತ್ತಿ ಜೇವನದಲ್ಲಿ 709 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾ ಸ್ಪಿನ್‌ ದಿಗ್ಗಜ 2022ರಲ್ಲಿ ನಿಧನರಾಗಿದ್ದರು.