ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಝೀ ಕನ್ನಡದ ಸರಿಗಮಪ ಅಂತಿಮ ಸುತ್ತಿನ ಸ್ಪರ್ಧೆ ಜೂನ್‌ 5ರಂದು ಝೀ5 ನಲ್ಲಿ ನೇರ ಪ್ರಸಾರ

ಝೀ ಕನ್ನಡದ (ZEE Kannada) ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಸ ರಿ ಗ ಮ ಪ – ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿ ಲಕ್ಷಾಂತರ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿರುವ ಹೆಗ್ಗಳಿಕೆಯ ಈ ಕಾರ್ಯಕ್ರಮವು ಈಗ ಡಿಜಿಟಲ್‌ ಲೋಕದಲ್ಲೊಂದು ದಾಪುಗಾಲು ಹಾಕುತ್ತಿದೆ

ಝೀ ಕನ್ನಡದ ಸರಿಗಮಪ: ಜೂನ್‌ 5ರಂದು ಝೀ5 ನಲ್ಲಿ ನೇರ ಪ್ರಸಾರ

Profile Ashok Nayak May 27, 2025 6:12 PM

ಬೆಂಗಳೂರು: ಅಂತರ್ಜಾಲದಲ್ಲಿ ವಿಡಿಯೊಗಳನ್ನು ನೇರ ಪ್ರಸಾರ ಮಾಡುವ ಹಾಗೂ ಬಹುಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ದೇಶದ ಅತಿದೊಡ್ಡ, ಸ್ವದೇಶಿ ಡಿಜಿಟಲ್‌ ವೇದಿಕೆಯಾಗಿರುವ ಝೀ5 (ZEE5), ಜನಪ್ರಿಯ ವಾಹಿನಿ ಝೀ ಕನ್ನಡದ (ZEE Kannada) ಅತ್ಯಂತ ಜನಪ್ರಿಯ ಸಂಗೀತ ಕಾರ್ಯಕ್ರಮವಾಗಿರುವ ಸ ರಿ ಗ ಮ ಪ-ದ ಜೂನ್‌ 5ರಂದು ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಯನ್ನು (ಗ್ರ್ಯಾಂಡ್‌ ಫಿನಾಲೆ) ನೇರ ಪ್ರಸಾರ ಮಾಡಲಿದೆ. ಅಪಾರ ಸಂಖ್ಯೆಯಲ್ಲಿ ಸಂಗೀತ ಪ್ರಿಯ ಪ್ರೇಕ್ಷಕರನ್ನು ಆಕರ್ಷಿಸಿ ಮನರಂಜಿಸಲಿರುವ ಈ ಅಭೂತಪೂರ್ವ ಅವಿಸ್ಮರಣೀಯ ಕಾರ್ಯಕ್ರಮವು ಝೀ5 ವೇದಿಕೆಯ ಇತಿಹಾಸದಲ್ಲಿನ ಅತ್ಯಂತ ಮಹತ್ವಾಕಾಂಕ್ಷೆಯ ನೇರ ಪ್ರಸಾರ ಕಾರ್ಯಕ್ರಮ ಗಳಲ್ಲಿ ಒಂದಾಗಿರಲಿದೆ. ಡಿಜಿಟಲ್ ಲೋಕದಲ್ಲಿ ಈ ಬಗೆಯ ನೇರ ಪ್ರಸಾರದ ಮೊದಲ ಕಾರ್ಯಕ್ರಮವೂ ಇದಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ರೋಚಕ ಕಾರ್ಯಕ್ರಮ ಗಳ ನೇರ ಪ್ರಸಾರಕ್ಕೆ ಇದು ಮುನ್ನುಡಿ ಬರೆಯಲಿದೆ.

ಝೀ ಕನ್ನಡದ (ZEE Kannada) ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಸ ರಿ ಗ ಮ ಪ – ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿ ಲಕ್ಷಾಂತರ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿರುವ ಹೆಗ್ಗಳಿಕೆಯ ಈ ಕಾರ್ಯಕ್ರಮವು ಈಗ ಡಿಜಿಟಲ್‌ ಲೋಕದಲ್ಲೊಂದು ದಾಪುಗಾಲು ಹಾಕುತ್ತಿದೆ. ಟೆಲಿವಿಷನ್‌ನಲ್ಲಿ ಪ್ರಸಾರ ವಾಗುವ ಮುಂಚೆಯೇ ಝೀ5 (ZEE5) ನಲ್ಲಿ ಪ್ರಸಾರವಾಗಲಿದೆ. ತನ್ನೆಲ್ಲ ಚಂದಾದಾರರಿಗೆ ಈ ಜನಪ್ರಿಯ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಮುಂಚಿತವಾಗಿಯೇ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸಲಿದೆ. ಈ ಉಪಕ್ರಮವು ಡಿಜಿಟಲ್ ಮನರಂಜನೆಗೆ ಪ್ರಮುಖ ತಾಣವನ್ನಾಗಿ ಝೀ5 ವೇದಿಕೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

ಇದನ್ನೂ ಓದಿ: IPL 2025: ಫೈನಲ್‌ ತಲುಪಬಲ್ಲ ಎರಡು ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ!

ವೀಕ್ಷಕರು, ಸಂಗೀತ ಪ್ರಿಯರು ಈ ತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವು ದನ್ನು ಉತ್ತೇಜಿಸಲು ಝೀ5 (ZEE5), ಈ ಋತುವಿನ "ಅತ್ಯಂತ ಜನಪ್ರಿಯ ಗಾಯಕ"ನ ಆಯ್ಕೆ ಅವಕಾಶವನ್ನೂ ಸಹ ಒದಗಿಸಲಿದೆ. ಮೇ 14 ರಿಂದ ಆರಂಭವಾಗಿರುವ ಮತದಾ ನದ ಆಯ್ಕೆ ಪ್ರಕ್ರಿಯೆ ಜೂನ್‌ 5 ರಂದು ನಡೆಯಲಿರುವ ಗ್ರ್ಯಾಂಡ್‌ ಫಿನಾಲೆಯ 2 ದಿನ ಮೊದಲು ಕೊನೆಗೊಳ್ಳಲಿದೆ.

ವೀಕ್ಷಕರು ʼಜನಪ್ರಿಯ ಗಾಯಕʼ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ. ಚಂದಾದಾರರು ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳಿಗೆ ಮತ ಚಲಾಯಿಸಲು ಝೀ5 ಆ್ಯಪ್‌ (ZEE5 app) ಗೆ ಲಾಗಿನ್ ಆಗಬಹುದು. ಇದರಲ್ಲಿ ಭಾಗವಹಿಸುವವರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಒಬ್ಬ ಅದೃಷ್ಟಶಾಲಿ ಮತದಾರನು "ಅತ್ಯಂತ ನೆಚ್ಚಿನ ಮತದಾರ" ಅಭಿವಾದನಕ್ಕೂ ಪಾತ್ರವಾಗಬಹುದು. ಅಪರೂಪದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಪಡೆಯಬಹುದು.

ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿರುವ ಈ ಅಂತಿಮ ಸುತ್ತಿನಲ್ಲಿ ಕನ್ನಡ ಸಂಗೀತ ಲೋಕದ ದಂತಕಥೆಗಳಾಗಿರುವ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಸಂಗೀತದ ಬಗೆಗಿನ ಅವರ ಅಪಾರ ಪರಿಣತಿ ಮತ್ತು ವರ್ಚಸ್ಸಿನ ವ್ಯಕ್ತಿತ್ವವು ಅಸಂಖ್ಯಾತ ಮಹತ್ವಾ ಕಾಂಕ್ಷಿ ಗಾಯಕರನ್ನು ಕೈಹಿಡಿದು ಮುನ್ನಡೆಸಿದೆ. ಅವರ ಉಪಸ್ಥಿತಿಯು ಈ ಕಾರ್ಯಕ್ರಮದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದು, ಸಂಗೀತ ಪ್ರಿಯರನ್ನು ನಿರಂತರವಾಗಿ ಚುಂಬಕದಂತೆ ಸೆಳೆಯುತ್ತಲೇ ಇದೆ.

ಝೀ5 ಮತ್ತು ಝೀ ಕನ್ನಡದ ವಹಿವಾಟು ಮುಖ್ಯಸ್ಥ ದೀಪಕ್ ಶ್ರೀರಾಮುಲು ಅವರು ಪ್ರತಿಕ್ರಿಯಿಸಿ, "ಝೀ5 ನಲ್ಲಿ ಪ್ರಸಾರವಾಗುವ ಪ್ರಾದೇಶಿಕ ಭಾಷೆಗಳಲ್ಲಿನ ಕಾರ್ಯಕ್ರಮಗಳು ನಮ್ಮ ವಹಿವಾಟು ಬೆಳವಣಿಗೆಯ ಹಾಗೂ ಹೆಚ್ಚೆಚ್ಚು ವೀಕ್ಷಕರನ್ನು ತಲುಪುವುದರ ಪ್ರಮುಖ ಆಧಾರಸ್ತಂಭವಾಗಿ ಮುಂದುವರೆದಿದೆ. ಸಮುದಾಯಗಳನ್ನು ಸಂಪರ್ಕಿಸುವಲ್ಲಿ ಸಂಗೀತವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಝೀ ಕನ್ನಡದ ಸರಿಗಮಪ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯ ಸಂಭ್ರಮಾಚರಣೆ ಯಾಗಿದೆ. ಕರುನಾಡಿನ ಈ ಸಾಂಸ್ಕೃತಿಕ ಸಂಭ್ರಮವನ್ನು ವಿಶ್ವದಾದ್ಯಂತದ ಪ್ರೇಕ್ಷಕರಿಗೆ ನೇರ ಪ್ರಸಾರ ಮಾಡಲು ನಾವು ಹೆಮ್ಮೆಪಡುತ್ತೇವೆ.

ಝೀ5 ನಲ್ಲಿ ಮೊದಲ ಬಾರಿಗೆ ಡಿಜಿಟಲ್‌ ನೇರ ಪ್ರಸಾರದೊಂದಿಗೆ ನಾವು ಪ್ರಾದೇಶಿಕ ಭಾಷೆಗಳಲ್ಲಿನ ಮನರಂಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದು ಹಿಂದೆಂದಿಗಿಂತಲೂ ಹೆಚ್ಚು ತನ್ಮಯಗೊಳಿಸುವ, ಪರಸ್ಪರ ಸಂವಹನದ ಮತ್ತು ಈ ಮೊದಲಿಗಿಂತ ಹೆಚ್ಚು ಸುಲಭವಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸದವಕಾಶ ಒದಗಿಸಲಿದೆ. ಡಿಜಿಟಲ್ ಲೋಕದಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ನೇರವಾಗಿ ಇದೇ ಮೊದಲ ಬಾರಿಗೆ ನೇರವಾಗಿ ಪ್ರಸಾರ ಮಾಡಲಾಗುತ್ತಿದೆ.

ಟೆಲಿವಿಷನ್‌ ಕಾರ್ಯಕ್ರಮಗಳ ವೀಕ್ಷಕರು ಪ್ರಾದೇಶಿಕ ಸಂಸ್ಕೃತಿ ಮತ್ತು ಸಂಗೀತದ ಜೊತೆ ಯಾವ ಬಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ನಾವು ಮರು ವ್ಯಾಖ್ಯಾನಿಸುವು ದನ್ನು ಮುಂದುವರಿಸುವುದರಿಂದ ಇದು ಭವಿಷ್ಯದಲ್ಲಿ ಅನೇಕ ಇಂತಹ ಹಲವಾರು ರೋಚಕ ಅವಕಾಶಗಳಿಗೆ ಭೂಮಿಕೆ ಸಿದ್ಧಪಡಿಸಲಿದೆʼ ಎಂದು ಹೇಳಿದ್ದಾರೆ.

ಪ್ರಚಾರ ಅಭಿಯಾನದ ಭಾಗವಾಗಿ ಬಳಕೆದಾರರು ಝೀ5 ಆ್ಯಪ್‌ ( ZEE5 App) ಬಳಸಲು ಕೇವಲ ₹ 99ಕ್ಕೆ ಚಂದಾದಾರರಾಗಲು ಉತ್ತೇಜಿಸಲಾಗುತ್ತಿದೆ. ಈ ಮೂಲಕ ವಿಶೇಷ ಸೌಲಭ್ಯ ಪಡೆಯುವ ಹಾಗೂ ಆಕರ್ಷಕ ಪುರಷ್ಕಾರ ಪಡೆಯುವ ಅವಕಾಶ ಪಡೆಯಲಿದ್ದಾರೆ. ಈ ಮೂಲಕ ಈ ಸಂಭ್ರಮಾಚರಣೆ ಇನ್ನಷ್ಟು ಲಾಭದಾಯಕವಾಗಿರಲಿದೆ.

ಜೂನ್‌ 5ರಂದು ರಂದು ಝೀ5 (ZEE5) ನಲ್ಲಿ ಮಾತ್ರ ಪ್ರಸಾರವಾಗಲಿರುವ ಕಾರ್ಯಕ್ರಮ ದಲ್ಲಿ ಪ್ರತಿಭೆ, ಸಂಸ್ಕೃತಿ ಮತ್ತು ಸಮುದಾಯದ ಸುಮಧುರ ಸಂಭ್ರಮಾಚರಣೆಗೆ ನಮ್ಮೊಂದಿಗೆ ಜೊತೆಯಾಗಿರಲು ಮರೆಯಬೇಡಿ.

ಇದು ಡಿಜಿಟಲ್ ಕ್ಷೇತ್ರದಲ್ಲಿನ ಈ ಬಗೆಯ ಮೊದಲ ಉಪಕ್ರಮವಾಗಿದ್ದು, ಝೀ5 (ZEE5) ಗೆ ಚಂದಾದಾರರಾಗುವುದರಿಂದ ನಾಡಿನ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಪ್ರವೇಶ ದೊರೆಯುವುದರ ಜೊತೆಗೆ ವೀಕ್ಷಕರಿಗೆ ಹಲವಾರು ಅತ್ಯಾಕರ್ಷಕ ಬಹುಮಾನ ಗಳನ್ನು ಗೆಲ್ಲುವ ಅವಕಾಶವನ್ನೂ ಒದಗಿಸಲಿದೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಲಿಂಕ್ಡ್‌ಇನ್‌ ಮತ್ತು ಎಕ್ಸ್‌ನಲ್ಲಿ ZEE5 ಅನುಸರಿಸಿ.